ನಂದಿನಿ ಮೊಸರಿನ ಪೊಟ್ಟಣದಲ್ಲಿ ಹಿಂದಿ ಪದ ಬಳಸಲು ಆದೇಶ : ಕರ್ನಾಟಕ, ತಮಿಳುನಾಡಿನಲ್ಲಿ ಆಕ್ರೋಶ

Date:

  • ಇತ್ತೀಚಿಗಷ್ಟೆ ಮೊಸರಿನ ಬದಲು ದಹಿ ಬಳಸಲು ಆದೇಶ ನೀಡಿದ್ದ ಎಫ್ಎಸ್ಎಸ್ಎಐ
  • ಆದೇಶಕ್ಕೆ ಕರ್ನಾಟಕ ಹೋರಾಟಗಾರರು ಹಾಗೂ ತಮಿಳುನಾಡು ಸಿಎಂ ಖಂಡನೆ

ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಮೊಸರಿನ ಪೊಟ್ಟಣದ ಮೇಲೆ ‘ದಹಿ’ ಎಂದು ಹಿಂದಿ ಪದ ಬಳಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಆದೇಶ ನೀಡಿರುವುದಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಕೂಡ ಕೆಎಂಎಫ್‌ಗೆ ನೀಡಿರುವ ಆದೇಶವನ್ನು ಖಂಡಿಸಿದ್ದು, ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕೆಎಂಎಫ್ ಅಧಿಕಾರಿಗಳನ್ನು ಭೇಟಿ ಮಾಡಿರುವ ಹಲವು ಕನ್ನಡಪರ ಸಂಘಟನೆಗಳು, ಕರ್ನಾಟಕ ಹಾಲು ಒಕ್ಕೂಟವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆದೇಶವನ್ನು ಪಾಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವಿಜ್ಞಾನ ಮತ್ತು ಗುಣಮಟ್ಟದ ಜಂಟಿ ನಿರ್ದೇಶಕರು ಹೊರಡಿಸಿದ ಪತ್ರದಲ್ಲಿ, “ದಹಿ ಉತ್ಪನ್ನಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸುವ ಸಂದರ್ಭದಲ್ಲಿ, ದಹಿ ಪದ ಮುಖ್ಯವಾಗಿರಬೇಕು. ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರುಗಳಾದ ಮೊಸರು, ತೈರ್, ಪೆರುಗು ಮುಂತಾದ ಸಮಾನ ಹೆಸರುಗಳನ್ನು ಆವರಣದಲ್ಲಿ ಬಳಸಬೇಕು” ಎಂದು ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ವಿವಾದಾತ್ಮಕ ಪೂತನಿ ಹೇಳಿಕೆ; ರಾಜಕೀಯ ಕೆಸರೆರಚಾಟಕ್ಕೆ ಮಹಿಳೆಯರು ಗುರಿ

ಈ ಆದೇಶದ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಪ್ರಾಧಿಕಾರವು ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶ ಮಾಡಿದೆ. ಇಂದು ದಹಿ, ನಾಳೆ ನಂದಿನಿ ದೂದ್, ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರವಾಗಿದೆ. ಮೆಟ್ರೋ ಹಿಂದಿ ಹೇರಿಕೆ ತಡೆದ ಹಾಗೆ ನಂದಿನಿ ಮೇಲಿನ ಹಿಂದಿ ಹೇರಿಕೆ ತಡೆಯಬೇಕಿದೆ. ನಂದಿನಿ ಮೊಸರಿನ ಪೊಟ್ಟಣದ ಮೇಲೆ ದಹಿ ಎಂದು ಹಿಂದಿಯಲ್ಲಿ ಮುದ್ರಣವಾಗಿ ಬಂದರೆ ಸಾವಿರಾರು ಜನ ಕನ್ನಡಿಗರು ಕನ್ನಡ ಶಾಲುಗಳೊಂದಿಗೆ ಕೆಎಂಎಫ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೇ. ನಾವು ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲ” ಎಂದು ತಿಳಿಸಿದ್ದಾರೆ.

ಆದೇಶವನ್ನು ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಹಿಂದಿ ಹೇರಿಕೆಯ ನಾಚಿಕೆಗೇಡುತನದ ಒತ್ತಾಯಗಳು ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುವ, ಮೊಸರು ಪೊಟ್ಟಣಕ್ಕೂ ಹಿಂದಿಯಲ್ಲಿ ಲೇಬಲ್ ಮಾಡಲು ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸುವುದನ್ನು ಈ ಆದೇಶ ಖಚಿತಪಡಿಸುತ್ತದೆ” ಎಂದು ಟೀಕಿಸಿದ್ದಾರೆ.

ತಮಿಳುನಾಡಿನ ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್‌ ಎಂ ನಾಸರ್ ಸುದ್ದಿಗಾರರೊಂದಿಗೆ ಮಾತನಾಡಿ, “ಎಫ್‌ಎಸ್‌ಎಸ್‌ಎಐನ ಸೂಚನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ ಮತ್ತು ನಮ್ಮ ಮೊಸರು ಪೊಟ್ಟಣಗಳಲ್ಲಿ ಮೊಸರು ಪದದ ತಮಿಳು ಸಮಾನವಾದ ಥೈರ್ ಎಂದು ಲೇಬಲ್ ಮಾಡುವುದನ್ನು ಮುಂದುವರಿಸಲಾಗುವುದು” ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಸ್ತಿಪಟುಗಳ ಹೋರಾಟ | ಮೋದಿಗೆ 2 ವರ್ಷದ ಹಿಂದೆಯೇ ಗೊತ್ತಿತ್ತು ಬ್ರಿಜ್‌ ಭೂಷಣ್‌ ಹಕೀಕತ್ತು

ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೆಹಲಿಯ...

ಮೂರು ವರ್ಷಗಳ ನಂತರ ಮೆಹಬೂಬಾ ಮುಫ್ತಿಗೆ ಪಾಸ್‌ಪೋರ್ಟ್‌ ನೀಡಿಕೆ

ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದ ಮೆಹಬೂಬಾ ಮುಫ್ತಿ ಜಮ್ಮು- ಕಾಶ್ಮೀರ ಹೈಕೋರ್ಟ್‌ನಲ್ಲಿ ಮೆಹಬೂಬಾ...

ರೈತರಿಂದ ಖರೀದಿಸುವ ಹಾಲಿನ ನಿಗದಿ ದರ ಕಡಿತ ಮಾಡಬೇಡಿ; ಸಿಎಂ ಸೂಚನೆ

ಬಮೂಲ್ ದರ ಕಡಿತ ಮಾಡಿದೆ ಎಂಬ ವರದಿ ಹಿನ್ನೆಲೆ ಸಿಎಂ ಸೂಚನೆ ಹಾಲು...

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...