ವಿವಾದಾತ್ಮಕ ಪೂತನಿ ಹೇಳಿಕೆ; ರಾಜಕೀಯ ಕೆಸರೆರಚಾಟಕ್ಕೆ ಮಹಿಳೆಯರು ಗುರಿ

Date:

  • ದೇಶಾದ್ಯಂತ ಹಲವು ಕಡೆಗಳಲ್ಲಿ ಮಹಿಳಾ ನಾಯಕಿಯರ ವಿರುದ್ಧ ‘ರಾಕ್ಷಸಿ’ ಪದ ಬಳಕೆ
  • ಮಹಿಳೆಯರನ್ನೇ ಗುರಿ ಮಾಡಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ರಾಜಕೀಯ ನಾಯಕರು

ಇತ್ತೀಚಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಕೆಸರೆರಚಾಟಕ್ಕೆ ಮಹಿಳೆಯರನ್ನು ಕೆಟ್ಟ ಪದಗಳಲ್ಲಿ ನಿಂದಿಸುವುದನ್ನೇ ಪ್ರಮುಖ ಗುರಿ ಮಾಡಿಕೊಂಡಿದ್ದಾರೆ. ಅದರಲ್ಲಂತೂ ‘ಪೂತನಿ’ ಎಂಬ ಪದವು ರಾಜಕೀಯ ಮುಖಂಡರಿಂದ ಅವ್ಯಾಹತವಾಗಿ ಬಳಕೆಯಾಗುತ್ತಿದೆ.

ಮಹಿಳಾ ಸಿಪಿಎಂ ನಾಯಕಿಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾನುವಾರ ತ್ರಿಶೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುರೇಂದ್ರನ್ ಅವರು, “ಸಿಪಿಐ(ಎಂ) ಮಹಿಳಾ ನಾಯಕಿಯರು ಜನರನ್ನು ಲೂಟಿ ಮಾಡಿ ದಪ್ಪವಾಗಿದ್ದಾರೆ” ಎಂದು ಹೇಳಿದ್ದರು. ಅವರು ನಾಯಕಿಯರನ್ನು ಹಿಂದೂ ಪುರಾಣಗಳಲ್ಲಿನ ‘ಪೂತನಿ‘ ಎಂಬ ರಾಕ್ಷಸಿಗೆ ಹೋಲಿಸಿದ್ದಾರೆ. ಹಿಂದೂ ಧರ್ಮಿಕ ಪೂರಾಣದ ಪ್ರಕಾರ ಪೂತನಿ ಎಂದರೆ ಒಬ್ಬ ರಾಕ್ಷಸಿ. ಆಕೆ ಶಿಶು ಶ್ರೀಕೃಷ್ಣನಿಂದ ಕೊಲ್ಲಲ್ಪಟ್ಟಿದ್ದಳು.

ಈ ಹೇಳಿಕೆಯ ವಿರುದ್ಧ ಮಂಗಳವಾರ (ಮಾರ್ಚ್‌ 28) ಸಿಪಿಐ(ಎಂ) ನಾಯಕಿ ಸಿ ಎಸ್ ಸುಜಾತಾ ಅವರು ದೂರು ದಾಖಲಿಸಿದ ನಂತರ, ಪೊಲೀಸರು ಸುರೇಂದ್ರನ್ ವಿರುದ್ಧ ಭಾರತ ದಂಡ ಸಂಹಿತೆ ಸೆಕ್ಷನ್ 354 ಎ (ಮಹಿಳೆಯರ ವಿರುದ್ಧ ಲೈಂಗಿಕ ಹೇಳಿಕೆ ನೀಡುವುದು) ಮತ್ತು 509 (ಸನ್ನೆ ಅಥವಾ ಪದಗಳಿಂದ ಮಹಿಳೆಯರನ್ನು ಅವಮಾನಿಸುವುದು)ರಡಿ ಪ್ರಕರಣ ದಾಖಲಿಸಿದ್ದಾರೆ.

ಕೆ ಸುರೇಂದ್ರನ್‌ ಅವರ ಹೇಳಿಕೆಯ ಬಗ್ಗೆ ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷದ ನಾಯಕರು ಒಕ್ಕೊರಲಿನಿಂದ ಖಂಡಿಸಿದ್ದಾರೆ.

2019ರ ಆರೂರ್ ಉಪಚುನಾವಣೆಯ ಪ್ರಚಾರದ ಸಮಯದಲ್ಲಿ ಕೇರಳದಲ್ಲಿ ಮಹಿಳಾ ನಾಯಕಿಯರನ್ನು ಕೆಣಕುವಂತೆ ಪೂತನಿ ಎಂಬ ಪದವನ್ನು ಬಳಸಿರುವುದು ಕಂಡುಬಂದಿದೆ. ಆ ಸಮಯದಲ್ಲಿ ಸಿಪಿಐ(ಎಂ) ನಾಯಕ ಮತ್ತು ಆಗಿನ ರಾಜ್ಯ ಸಚಿವ ಜಿ ಸುಧಾಕರನ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಾನಿಮೋಲ್ ಉಸ್ಮಾನ್ ಅವರನ್ನು ‘ಪೂತನಿ’ ಎಂದು ಕರೆದಿದ್ದರು. ಅದೇ ಸಂದರ್ಭದಲ್ಲಿ ಉಸ್ಮಾನ್ ಮತ್ತು ಅವರ ಸಹೋದ್ಯೋಗಿಗಳು ಉಪವಾಸ ಸತ್ಯಾಗ್ರಹ ನಡೆಸಿ ಸುಧಾಕರನ್ ವಿರುದ್ಧ ‘ಸ್ತ್ರೀಯರನ್ನು ಅವಮಾನಿಸಿದ’ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದರು.

ಜೂನ್ 2015ರಲ್ಲಿ, ಬಿಹಾರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಬಿಜೆಪಿ ಸಂಸದ ಅಶ್ವಿನಿ ಕುಮಾರ್ ಚೌಬೆ ಅವರು ಆಗಿನ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ‘ಪೂತನಿ’ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ‘ಗಿಣಿ’ ಎಂದು ಅವಮಾನಿಸಿದ್ದರು.

ಈ ಸುದ್ದಿ ಓದಿದ್ದೀರಾ? ದೇಶದಲ್ಲಿಯೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನದ ಅವಕಾಶ

ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ “ತಾವು ‘ಪೂತನಿ’ಯಿಂದ ವಿಷ ಸೇವಿಸಿ ಸಾಯುತ್ತೇವೆ ಎಂದು ತಿಳಿಯದೆ ಗಾಂಧಿ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ” ಎಂದು ಚೌಬೆ ಹೇಳಿದ್ದರು.

ಈ ಹೇಳಿಕೆಗೆ ಸಂಬಂಧಿಸಿದಂತೆ ಬಿಹಾರದ ಬಕ್ಸಾರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಶ್ವಿನಿ ಕುಮಾರ್ ಚೌಬೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

2019 ಫೆಬ್ರವರಿ 7ರಂದು, ತೃಣಮೂಲ ಕಾಂಗ್ರೆಸ್ ನಾಯಕ ದಿನೇಶ್ ತ್ರಿವೇದಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು, “ಹೊಸ ಯುಗದ ಝಾನ್ಸಿ ರಾಣಿ” ಎಂದು ಹೇಳಿಕೆ ನೀಡಿದ್ದರು.

ಒಂದು ದಿನದ ನಂತರ ಈ ಹೇಳಿಕೆಯ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, “ಬಹುಶಃ ಇದು ಝಾನ್ಸಿ ರಾಣಿಯವರ ಬಗ್ಗೆ ನಿಂದನೀಯ ಹೇಳಿಕೆ. ಮಮತಾ ಬ್ಯಾನರ್ಜಿ ‘ಪೂತನಿ’ ಆಗಿರಬಹುದು, ಆಕೆ ಇಡೀ ಪಶ್ಚಿಮ ಬಂಗಾಳವನ್ನು ನಾಶಮಾಡಿದಳು. ಆಕೆ ಉತ್ತರ ಕೊರಿಯಾದ ಕಿಂಗ್ ಜೊಂಗ್ ಉನ್ ಆಗಬಹುದು, ತನ್ನ ವಿರುದ್ಧ ಮಾತನಾಡುವವರನ್ನು ಕೊಲ್ಲಬಲ್ಲಳು” ಎಂದು ಅವಮಾನಕಾರಿಯಾಗಿ ಮಾತನಾಡಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಲಿತರ ನ್ಯಾಯಯುತ ಬೇಡಿಕೆಗಳ ಅನುಷ್ಠಾನಕ್ಕೆ ‍ಸರ್ಕಾರ ಬದ್ಧ, ನಿಮ್ಮ ಋಣ ತೀರಿಸುತ್ತೇವೆ: ಡಿಕೆ ಶಿವಕುಮಾರ್

ಅಂಬೇಡ್ಕರ್ ಅಂದರೆ ಶಕ್ತಿ-ಸ್ವಾಭಿಮಾನ ಅವರು ನೀಡಿರುವ ಸಂವಿಧಾನ ಶಕ್ತಿಯನ್ನು ಉಳಿಸಿಕೊಂಡು ಹೋಗಬೇಕಿದೆ....

ನಮ್ಮಲ್ಲಿನ ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿಗೆ ಸೋಲು: ಸ್ವಪಕ್ಷಿಯರ ವಿರುದ್ಧ ಸಿ ಟಿ ರವಿ ಕಿಡಿ

ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ ಹೊಂದಾಣಿಕೆ ರಾಜಕಾರಣದಿಂದಲೇ ಬಿಜೆಪಿಗೆ ಸೋಲಾಗಿದೆ ಪಕ್ಷದೊಳಗಿನ...

ಥಾಣೆ ಹತ್ಯೆ ಪ್ರಕರಣ | ಎಚ್‌ಐವಿ ಸೋಂಕಿತನಾಗಿದ್ದ ಹಂತಕ; ಮಹಿಳೆಯದು ಆತ್ಮಹತ್ಯೆ ಎಂದು ಹೇಳಿಕೆ!

ದೆಹಲಿಯ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ರೀತಿಯಲ್ಲಿಯೇ ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳೆಯೊಬ್ಬರನ್ನು...

ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ: ಸಿಎಂ ಸಿದ್ದರಾಮಯ್ಯ

ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್ ಎಸ್ ಎಸ್ ನವರು ಸಂವಿಧಾನ ವಿರೋಧಿಗಳು ಟೌನ್‌ಹಾಲ್...