ಜಮ್ಮು ಕಾಶ್ಮೀರದ ರಜೌರಿ ಎನ್ಕೌಂಟರ್ನಲ್ಲಿ ಹುತಾತ್ಮನಾದ ಯೋಧನೋರ್ವನ ತಾಯಿಗೆ ಉತ್ತರ ಪ್ರದೇಶದ ಸಚಿವರು ಮತ್ತು ಬಿಜೆಪಿ ನಾಯಕರು ಪರಿಹಾರ ಚೆಕ್ ನೀಡುವ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ ಶಾಸಕ ಜಿ ಎಸ್ ಧರ್ಮೇಶ್ ಅವರು, ಎನ್ಕೌಂಟರ್ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಗುಪ್ತಾ ಅವರ ತಾಯಿಗೆ ಆಗ್ರಾ ನಿವಾಸದಲ್ಲಿ ಚೆಕ್ ಹಸ್ತಾಂತರಿಸುವಾಗ ಅವರ ತಾಯಿಯೊಂದಿಗೆ ತಮ್ಮ ಫೋಟೋ ತೆಗೆಸಿಕೊಂಡಿದ್ದಾರೆ.
Captain Shubham Gupta died in the line of duty in an encounter in Rajouri sector. His mortal remains are yet arrive at his residence in Agra. This is UP minister Yogendra Upadhyay, in a photo op, trying to handover cheque to the inconsolable mother of deceased Captain Gupta. pic.twitter.com/46cLBhggur
— Piyush Rai (@Benarasiyaa) November 24, 2023
ದುಃಖತಪ್ತ ಗುಪ್ತಾ ಅವರ ತಾಯಿ, “ಇದನ್ನು ಸಾರ್ವಜನಿಕ ಪ್ರದರ್ಶನ ಮಾಡಬೇಡಿ” ಎಂದು ದಯನೀಯವಾಗಿ ಕೇಳಿಕೊಂಡರೂ ಕೂಡ ಬಿಜೆಪಿಯ ಸಚಿವ ಅದನ್ನು ಲೆಕ್ಕಿಸದೇ ಫೋಟೋಗೆ ಪೋಸ್ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
While one UP minister tried to force the grieving mother of Captain Shubham Gupta in a photo-op, last rites of paratrooper commando Sachin Laur killed in the line of duty in Rajouri was kept on hold for more than an hour for another UP minister to arrive at the cremation spot. pic.twitter.com/0YC4INHJ14
— Piyush Rai (@Benarasiyaa) November 25, 2023
ವಿಡಿಯೋದಲ್ಲಿ, ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ ಶಾಸಕ ಜಿಎಸ್ ಧರ್ಮೇಶ್ ಅವರು ಹುತಾತ್ಮ ಯೋಧ ಕ್ಯಾಪ್ಟನ್ ಗುಪ್ತಾ ಅವರ ತಾಯಿಗೆ ಪರಿಹಾರ ಚೆಕ್ ಹಸ್ತಾಂತರಿಸುವುದು ಮತ್ತು ಫೋಟೋ ತೆಗೆಸಿಕೊಳ್ಳುವುದು ಕಂಡು ಬಂದಿದೆ. ಈ ವೇಳೆ ಗದ್ಗದಿತಳಾದ ತಾಯಿ, ತನ್ನ ಕೈಗಳನ್ನು ಹಿಂದಕ್ಕೆ ಎಳೆದು, “ಇದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬೇಡಿ. ನನ್ನ ಮಗನನ್ನು ವಾಪಸ್ ಕೊಡಿ, ನನಗೆ ಇದೆಲ್ಲ ಬೇಡ” ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಬಿಜೆಪಿ ನಾಯಕರು ಅದನ್ನು ಕೇಳಿಯೂ ಕೇಳಿಸಿಕೊಳ್ಳದ ರೀತಿ ವಿಡಿಯೋವನ್ನು ಮಾಡಿದ್ದಾರೆ. ಫೋಟೋವನ್ನು ತೆಗೆಸಿಕೊಂಡಿದ್ದಾರೆ.
गिद्ध pic.twitter.com/rLuxaXSXhr
— Congress (@INCIndia) November 24, 2023
ಈ ಘಟನೆಯ ವಿಡಿಯೋವನ್ನು ವಿಪಕ್ಷ ನಾಯಕರು ಹಂಚಿಕೊಂಡಿದ್ದು, ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ನೆಟ್ಟಿಗರು ಕೂಡ ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ‘ಎಕ್ಸ್’ನಲ್ಲಿ ವಿಡಿಯೊವನ್ನು ಹಂಚಿಕೊಂಡು, ‘ರಣಹದ್ದುಗಳು’ ಎಂದು ಬರೆದುಕೊಂಡಿದೆ.
ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ವಿಡಿಯೋವನ್ನು ಹಂಚಿಕೊಳ್ಳುತ್ತಾ, “ಇದು ನಾಚಿಕೆಗೇಡು. ತಾಯಿ ತನ್ನ ಮಗನ ಶವಕ್ಕಾಗಿ ಕಾಯುತ್ತಿರುವಾಗ, ಪ್ರಚಾರ ಉದ್ದೇಶಗಳಿಗಾಗಿ ಫೋಟೋ ತೆಗೆಯಲು ಸಚಿವರು ಹೆಚ್ಚು ಆಸಕ್ತಿ ವಹಿಸಿದ್ದರು” ಎಂದು ಹೇಳಿದ್ದಾರೆ.
The B in BJP should stand for Besharm and P for Publicity.
Captain Shubham Gupta made the ultimate sacrifice in the line of duty during an encounter in the Rajouri sector. His mother is grieving and eagerly awaiting her son’s mortal remains. In the midst of her inconsolable… pic.twitter.com/IXUX0a3Iu1
— Raghav Chadha (@raghav_chadha) November 24, 2023
ಶಿವಸೇನೆ ಉದ್ಧವ್ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ವಿಡಿಯೋ ಹಂಚಿಕೊಂಡು, ‘ಇದು ನಾಚಿಕೆಗೇಡು’ ಎಂದು ಬರೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎರಡು ದಿನಗಳ ಎನ್ಕೌಂಟರ್ನಲ್ಲಿ ಐವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಅದರಲ್ಲಿ ಕ್ಯಾಪ್ಟನ್ ಶುಭಂ ಗುಪ್ತಾ ಕೂಡ ಒಬ್ಬರು.
Amidst controversy over a BJP minister Yogendra Upadhyay doing photo-op with the mother of a deceased Indian Army captain Shubham Gupta despite the inconsolable mother’s plea to refrain from turning her grief into a spectacle by handover a cheque. The Minister has now come up… pic.twitter.com/UmpENUpmEg
— Mohammed Zubair (@zoo_bear) November 25, 2023
ಇವರ ಜೊತೆಗೆ ಕರ್ನಾಟಕದ ಸೈನಿಕ ಕ್ಯಾಪ್ಟನ್ ಎಂವಿ ಪ್ರಾಂಜಲ್, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ತ್ ಮತ್ತು ಪ್ಯಾರಾಟ್ರೂಪರ್ ಸಚಿನ್ ಲಾರ್ ಅವರು ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಇತರ ಸೇನಾ ಸಿಬ್ಬಂದಿಯಾಗಿದ್ದಾರೆ.