ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಘಡ, ಮಿಝೋರಾಂ, ರಾಜಸ್ಥಾನ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಪೈಕಿ ಇಂದು ತೆಲಂಗಾಣದಲ್ಲಿ ಅಂತಿಮ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 11ರವರೆಗೆ ನಡೆದ ಮತದಾನ ಪ್ರಕ್ರಿಯೆಯ ಪೈಕಿ ಶೇ.27ರಷ್ಟು ಮತದಾನ ನಡೆದಿರುವುದಾಗಿ ವರದಿಯಾಗಿದೆ.
ತೆಲಂಗಾಣದ 119 ಸ್ಥಾನಗಳ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 2,290 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 3.26 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ.
ಚುನಾವಣಾ ಆಯೋಗವು 35,655 ಮತಗಟ್ಟೆಗಳಲ್ಲಿ 1.85 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದ್ದು, 22,000 ‘ಮೈಕ್ರೋ ಅಬ್ಸರ್ವರ್’ಗಳು ಸಂಪೂರ್ಣ ಮತದಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
బీఆర్ఎస్ వర్కింగ్ ప్రెసిడెంట్, మంత్రి @KTRBRS హైదరాబాద్, బంజారాహిల్స్ లోని నందినగర్ జీహెచ్ఎంసి కమ్యూనిటీ హాల్ లో ఏర్పాటు చేసిన పోలింగ్ బూత్ లో తన ఓటు హక్కును వినియోగించుకున్నారు.
కేటీఆర్ సతీమణి శైలిమ గారు కూడా అదే పోలింగ్ బూత్ లో తన ఓటు వినియోగించుకున్నారు.… pic.twitter.com/6hh6vFzae2
— BRS Party (@BRSparty) November 30, 2023
ತೆಲಂಗಾಣದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಒಟ್ಟು 45,000 ಸಿಬ್ಬಂದಿ, ಇತರ ಇಲಾಖೆಗಳ 3,000 ಸಿಬ್ಬಂದಿ, ತೆಲಂಗಾಣ ರಾಜ್ಯ ವಿಶೇಷ ಪೊಲೀಸ್ (ಟಿಎಸ್‌ಎಸ್‌ಪಿ) 50 ಕಂಪನಿಗಳು ಮತ್ತು ಕೇಂದ್ರ ಅರೆಸೇನಾ ಪಡೆಗಳ 375 ಕಂಪನಿಗಳನ್ನು ನಿಯೋಜಿಸಲಾಗಿದೆ. ನೆರೆಯ ರಾಜ್ಯಗಳ 23,500 ಗೃಹರಕ್ಷಕರೂ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿಕಾಸ್ ರಾಜ್ ತಿಳಿಸಿದ್ದಾರೆ. ಮಾವೋವಾದಿ ಪೀಡಿತ ಜಿಲ್ಲೆಗಳ 13 ಕ್ಷೇತ್ರಗಳಲ್ಲಿ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡ, ಮಿಝೋರಾಂಗಳಲ್ಲಿ ಈಗಾಗಲೇ ನ.7ರಿಂದ ನವೆಂಬರ್ 25ರ ಒಳಗೆ ಮತದಾನ ಮುಕ್ತಾಯವಾಗಿದೆ.
ತೆಲಂಗಾಣದಲ್ಲಿ ಸದ್ಯ ಕೆ ಸಿ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷ ಅಧಿಕಾರದಲ್ಲಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೂರನೇ ಬಾರಿ ಅಧಿಕಾರಕ್ಕೇರಲಿದೆ. ಆದರೆ ಈ ಬಾರಿ ಕೆಸಿಆರ್‌ಗೆ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
#WATCH | Actor Allu Arjun in queue to cast his vote in Telangana Assembly elections, in Hyderabad’s Jubilee Hills area pic.twitter.com/M6t4rgjTZ2
— ANI (@ANI) November 30, 2023
ತೆಲುಗು ಚಿತ್ರರಂಗದ ಪ್ರಮುಖರಿಂದ ಮತದಾನ
ತೆಲುಗು ಚಿತ್ರರಂಗದ ಖ್ಯಾತ ನಟರಾದ ಅಲ್ಲೂ ಅರ್ಜುನ್, ಜೂನಿಯರ್ ಎನ್‌ಟಿಆರ್ ಹಾಗೂ ಚಿರಂಜೀವಿ, ನಾಗಚೈತನ್ಯ ಹೈದರಾಬಾದ್‌ನಲ್ಲಿ ತಮ್ಮ ಕುಟುಂಬಗಳೊಂದಿಗೆ ಬಂದು ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಲ್ಲದೇ, ಪ್ರತಿಯೊಬ್ಬರೂ ಕೂಡ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆ ನೀಡಿದ್ದಾರೆ.