ಉತ್ತರ ಪ್ರದೇಶ ರಾಜ್ಯಕ್ಕೆ ರಾಯ್ ಬರೇಲಿಯು ಈ ಹಿಂದೆ ಸೈದ್ಧಾಂತಿಕ ಮತ್ತು ರಾಜಕೀಯ ಕೇಂದ್ರವಾಗಿತ್ತು. ಈಗ, ಮತ್ತೊಮ್ಮೆ ಕ್ಷೇತ್ರವು ದೇಶಕ್ಕೆ ಪ್ರಗತಿ ಮತ್ತು ಅಭಿವೃದ್ಧಿಯ ಹಾದಿಯನ್ನು ತೋರಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಜೊತೆಗಿನ ಮಾತಕತೆಯ ವಿಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು ರಾಯ್‌ಬರೇಲಿಯಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ.
“ಭಾರತದ ಪ್ರಗತಿಯಲ್ಲಿ ರಾಯ್ ಬರೇಲಿ ಪ್ರಮುಖ ಪಾತ್ರ ಹೊಂದಿದೆ. ದೇಶಕ್ಕೆ ಮಾರ್ಗದರ್ಶನ ನೀಡುವಲ್ಲಿ ರಾಯ್ ಬರೇಲಿಯು ಹಲವು ವರ್ಷಗಳಿಂದ ಉತ್ತರ ಪ್ರದೇಶದ ರಾಜಕೀಯ ಮತ್ತು ಸೈದ್ಧಾಂತಿಕ ಕೇಂದ್ರವಾಗಿದೆ. ರಾಯ್ ಬರೇಲಿಯು ಸ್ವಾತಂತ್ರ್ಯ ಹೋರಾಟದ ಇತಿಹಾಸ ಹೊಂದಿದೆ” ಎಂದು ಹೇಳಿದ್ದಾರೆ.
“ಇಂದು, ರಾಯ್ ಬರೇಲಿಯ ಪಾತ್ರವು ಮೊದಲು ಉತ್ತರ ಪ್ರದೇಶದ ಪ್ರಗತಿ ಮತ್ತು ಅಭಿವೃದ್ಧಿಯ ಹಾದಿಯನ್ನು ತೋರಿಸಬೇಕು. ನಂತರ ಉತ್ತರ ಪ್ರದೇಶವು ಮತ್ತೊಮ್ಮೆ ಭಾರತಕ್ಕೆ ಪ್ರಗತಿ ಮತ್ತು ಅಭಿವೃದ್ಧಿಯ ಹಾದಿಯನ್ನು ತೋರಿಸಬೇಕು” ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, “ನೀವು (ಬಿಜೆಪಿ) ರಾಜಕೀಯ ಮಾಡುವಾಗ, ನೀವು ನಿಮ್ಮ ಕುಟುಂಬವನ್ನು ಗೌರವಿಸದಿದ್ದರೆ, ಕುಟುಂಬದಲ್ಲಿ ನಿಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಕುಟುಂಬದ ಹೊರಗಿನ ಸಂಬಂಧಗಳನ್ನು ಸಹ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ, ನಿಮ್ಮ ದೈನಂದಿನ ಜೀವನದಲ್ಲಿ ನೀವು ಸುಳ್ಳು ಹೇಳಿದರೆ, ನೀವು ರಾಜಕೀಯದಲ್ಲಿಯೂ ಸುಳ್ಳು ಹೇಳುತ್ತೀರಿ” ಎಂದಿದ್ದಾರೆ.
रायबरेली जाते वक्त मैं और प्रियंका कुछ देर के लिए बचपन की गलियों से भी होकर गुज़रे।
बहुत सी खट्टी-मीठी यादें हैं, दादी का ज्ञान, पापा की पसंदीदा जलेबियां, प्रियंका के बनाए केक, ऐसा लगता है जैसे सब कल की ही बात हो।
बचपन से हमारा राजनीति से गहरा रिश्ता रहा है, पर राजनीति कभी… pic.twitter.com/fOdCMyFN5V
— Rahul Gandhi (@RahulGandhi) May 18, 2024
“ಜನರು ತಮ್ಮ ಮತವನ್ನು ಅಸ್ತ್ರವಾಗಿ ಬಳಸಿಕೊಂಡು ತಮ್ಮ ಜೀವನ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಮತ ಹಾಕಬೇಕು” ಎಂದು ಮತದಾರರಲ್ಲಿ ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ.