ಈ ದಿನ ಸಂಪಾದಕೀಯ | ಪ್ಲಾನ್ ಬಿ ಬಗೆಗಿನ ಮಾತು ಮತ್ತು ನಾಯಕನ ಹಿಂದಿನ ನಾಯಕ

Date:

ಹತ್ತು ವರ್ಷಗಳ ಕಾಲ ಮೋದಿಯನ್ನು ಮೆರೆಯಲು ಬಿಟ್ಟ ಅಮಿತ್ ಶಾ, ಬಿಜೆಪಿಯನ್ನು ಸಂಪದ್ಭರಿತ ಪಕ್ಷವನ್ನಾಗಿ ಮಾಡಿದ್ದಾರೆ. ಅದಾನಿ-ಅಂಬಾನಿಗಳೆಂಬ ಕಾರ್ಪೊರೇಟ್ ಕುಳಗಳನ್ನು ಅಕ್ಕ-ಪಕ್ಕ ನಿಲ್ಲಿಸಿಕೊಂಡು ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ 40 ವರ್ಷಗಳ ಕಾಲ ನಾಯಕನ ಹಿಂದೆ ನಿಂತಿದ್ದ ನಾಯಕ ಈಗ ಮುನ್ನೆಲೆಗೆ ಬರುತ್ತಿದ್ದಾರೆ.

ಎನ್‌ಡಿಟಿವಿ ಸಂದರ್ಶನದಲ್ಲಿ ಗೃಹ ಮಂತ್ರಿ ಅಮಿತ್ ಶಾ, ‘ಪ್ಲಾನ್ ಬಿ ಬಗ್ಗೆ ನಾವು ಯೋಚಿಸಿಲ್ಲ. 272 ಸರಳ ಬಹುಮತ ಬರುವುದರಲ್ಲಿ ಅನುಮಾನವಿಲ್ಲ. ಬರದಿದ್ದರೆ, ನೋಡೋಣ’ ಎಂದಿದ್ದಾರೆ.

- Advertisement -

ಚುನಾವಣೆ ಆರಂಭವಾದ ದಿನದಿಂದಲೂ ಚಾರ್ ಸವ್ ಪಾರ್ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದ ಮೋದಿ ಮತ್ತು ಅಮಿತ್ ಶಾ, ಈಗ ಇದ್ದಕ್ಕಿದ್ದಂತೆ ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆಂದರೆ, ವಾಸ್ತವಸ್ಥಿತಿ ಅರಿವಿಗೆ ಬಂದಿದೆ, ಅಧಿಕಾರ ಕೈ ತಪ್ಪುವ ಸೂಚನೆ ಸಿಕ್ಕಿದೆ ಎಂದೇ ಅರ್ಥ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದಕ್ಕೆ ಪೂರಕವಾಗಿ ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್, ‘ಗೃಹ ಸಚಿವ ಅಮಿತ್ ಶಾಗೆ ಭವಿಷ್ಯದಲ್ಲಿ ಪ್ರಧಾನಿ ಸ್ಥಾನಕ್ಕೆ ಏರಲು ಪ್ರಧಾನಿ ನರೇಂದ್ರ ಮೋದಿ ಮಾರ್ಗವನ್ನು ತೆರವುಗೊಳಿಸುತ್ತಿದ್ದಾರೆ, ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ’ ಎಂದಿರುವುದು ಭವಿಷ್ಯವನ್ನು ಕಣ್ಮುಂದೆ ತಂದು ನಿಲ್ಲಿಸಿ, ಮೋಶಾಗಳಿಗೆ ಗರಬಡಿಸಿದೆ.

ಇದರಿಂದ ಇನ್ನಷ್ಟು ವಿಚಲಿತರಾಗಿರುವ ಮೋದಿ ಮತ್ತು ಅಮಿತ್ ಶಾ- ಮುಸ್ಲಿಮರು, ಮಂಗಳಸೂತ್ರ, ಮೀಸಲಾತಿ, ಆಸ್ತಿ ಹಂಚಿಕೆ, ರಾಮಮಂದಿರಕ್ಕೆ ಬುಲ್ಡೋಜರ್, ದೇವಾಲಯಗಳ ಚಿನ್ನದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಬಿಜೆಪಿಯ ಬಂಡವಾಳ ಬಯಲಾಗುತ್ತದೆ. ಹತ್ತು ವರ್ಷಗಳ ಆಡಳಿತ, ಅಭಿವೃದ್ಧಿ ಮತ್ತು ಪ್ರಣಾಳಿಕೆಯ ಬಗ್ಗೆ ಮಾತನಾಡದ ಪ್ರಧಾನಿ ಮೋದಿಯವರು, ಎಷ್ಟೂಂತ ಸುಳ್ಳುಗಳನ್ನು ಹೇಳುತ್ತಾರೆ? ದೇಶದ ಜನ ಎಷ್ಟು ದಿನ ಸಹಿಸಿಕೊಳ್ಳುತ್ತಾರೆ?

ನಾಲ್ಕನೇ ಹಂತದ ಮತದಾನದ ನಂತರ ಮೋದಿ ಮತ್ತು ಅಮಿತ್ ಶಾಗೆ ವಾಸ್ತವಸ್ಥಿತಿ ಅರಿವಾಗತೊಡಗಿದೆ. ಹಾಗಾಗಿಯೇ ಅಮಿತ್ ಶಾ ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆ. ನಾಯಕನ ಹಿಂದೆ ನಿಂತಿರುವ ನಾಯಕ ಮುನ್ನೆಲೆಗೆ ಬರುತ್ತಿದ್ದಾನೆ.

ಭಾರತೀಯ ಜನತಾ ಪಕ್ಷದ ಹಿಂದೆ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘವಿದೆ ಎನ್ನುವುದು ಜನಜನಿತ. ಸಂಘದ ಸಹವಾಸಕ್ಕೆ ಬಿದ್ದ, ಚೆಡ್ಡಿ ತೊಡುವ ಕಾಲದಲ್ಲಿಯೇ ಒಂದಾದ ಮೋದಿ ಮತ್ತು ಅಮಿತ್ ಶಾರ ಗೆಳೆತನಕ್ಕೆ ಈಗ 40 ವರ್ಷ. ಈ ಸುದೀರ್ಘ ಸಹವಾಸ ಸಂಘದ ಶಾಖೆಗಳಲ್ಲಿ ಸೇವೆ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಲಿಲ್ಲ. ರಾಜಕಾರಣಕ್ಕೆ ಮೆಟ್ಟಿಲಾಯಿತು, ಅಧಿಕಾರದ ಸ್ಥಾನಗಳನ್ನು ಕರುಣಿಸಿತು. ಪ್ರಚಾರ, ಪ್ರಭಾವಳಿಗಳನ್ನು ಸೃಷ್ಟಿಸಿ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನಾಗಿಸಿತು. ಇಡೀ ದೇಶವೇ ಈ ಇಬ್ಬರ ಕೈವಶವಾಯಿತು.

1982ರಲ್ಲಿ, ಆರೆಸೆಸ್ ಶಾಖಾ ಸರ್ಕಲ್‌ನಲ್ಲಿ ನರೇಂದ್ರ ಮೋದಿಯನ್ನು ಮೊದಲ ಬಾರಿಗೆ ಭೇಟಿಯಾದ ಅಮಿತ್ ಶಾ, ಆತ್ಮೀಯರಾದರು. 1986ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ ಯುವಮೋರ್ಚಾದ ಕಟ್ಟಾಳುಗಳಾದರು. 1991ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರ ಪರ ಪ್ರಚಾರಕಾರ್ಯದಲ್ಲಿ ತೊಡಗಿ, ನಾಯಕರ ಕಣ್ಣಿಗೆ ಬಿದ್ದರು. 1995ರಲ್ಲಿ ಗುಜರಾತಿನಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಪಂಚಾಯ್ತಿ, ಸಹಕಾರ, ಕ್ರೀಡಾ ಕ್ಷೇತಗಳಲ್ಲಿ ನೆಲೆಯೂರಿದ್ದ ಬಲಾಢ್ಯ ಪಟೇಲ್, ಗದೇರಿಯ, ಕ್ಷತ್ರಿಯ ಸಮುದಾಯಗಳನ್ನು ಹೊರದಬ್ಬಿದರು. ಕೇವಲ ಎರಡು ವರ್ಷಗಳ ಅವಧಿಯಲ್ಲಿ, 1997ರಲ್ಲಿ ಗುಜರಾತನ್ನು ಕೈವಶ ಮಾಡಿಕೊಂಡರು. 2001ರಲ್ಲಿ ಕೇಶುಭಾಯ್ ಪಟೇಲರನ್ನು ಕೆಳಗಿಳಿಸಿ ಮೋದಿ ಮುಖ್ಯಮಂತ್ರಿಯಾದರು. ಮೋದಿಯನ್ನು ಮುಖ್ಯಮಂತ್ರಿಯಾಗಿಸುವಲ್ಲಿ ಅಮಿತ್ ಶಾರ ಅವಿರತ ಶ್ರಮವಿತ್ತು. ಅದಕ್ಕೆ ಪ್ರತಿಯಾಗಿ ಮೋದಿಯವರು, 2002ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆದ್ದ 33ರ ವಯಸ್ಸಿನ ಅಮಿತ್ ಶಾಗೆ, 12 ಖಾತೆಗಳ ಜವಾಬ್ದಾರಿ ವಹಿಸಿದ್ದು ಸಾಲದೆಂದು, ಗುಜರಾತಿನ ಗೃಹ ಖಾತೆಯನ್ನೂ ದಯಪಾಲಿಸಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು? 

1964ರಲ್ಲಿ ಮುಂಬೈನ ಮಧ್ಯಮವರ್ಗದ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಅಮಿತ್ ಶಾ, ಗುಜರಾತಿ ಬನಿಯಾ-ಜೈನ್ ಸಮುದಾಯಕ್ಕೆ ಸೇರಿದವರು. ಬಯೋಕೆಮಿಸ್ಟ್ರಿ ಪದವೀಧರರು. ಕೆಲ ಕಾಲ ಶೇರ್ ಬ್ರೋಕರ್ ಆಗಿದ್ದರು. ಅಪ್ಪನ ಪಿವಿಸಿ ಪೈಪ್ ವ್ಯವಹಾರದಲ್ಲೂ ಕೈಯಾಡಿಸಿದ್ದರು. ಇಂತಹ ಹಿನ್ನೆಲೆಯಿಂದ ಬಂದ ಅಮಿತ್ ಶಾ, ರಾಜಕಾರಣಕ್ಕೆ ಅಡಿ ಇಡುತ್ತಿದ್ದಂತೆ, ಹಣ ಹರಿದಾಡುವ ಸಹಕಾರ, ಕ್ರೀಡೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳನ್ನು ಕಬ್ಜಾ ಮಾಡಿಕೊಂಡರು. ಶಾಸಕರಾಗಿ ಗೆದ್ದಾಗ ಗುಜರಾತನ್ನೇ ಆಟದ ಮೈದಾನವನ್ನಾಗಿಸಿಕೊಂಡರು.

ಆನಂತರದ 10 ವರ್ಷಗಳಲ್ಲಿ ಗುಜರಾತಿನಲ್ಲಿ ಮೋದಿ ಮತ್ತು ಅಮಿತ್ ಶಾ ಮಾಡಿದ ಅವಾಂತರಗಳು, ನರಮೇಧಗಳು, ಹತ್ಯಾಕಾಂಡಗಳು ದೇಶವನ್ನು ತಲ್ಲಣಗೊಳಿಸಿದವು. ಪ್ರಪಂಚದಾದ್ಯಂತ ಸುದ್ದಿಯಾಗಿ ಪ್ರಜಾಪ್ರಭುತ್ವವನ್ನು ಅಣಕಿಸಿದವು. ವಾಜಪೇಯಿ ರಾಜಧರ್ಮ ಪಾಲಿಸಿ ಎಂದು ಬುದ್ಧಿವಾದ ಹೇಳಿದ್ದೂ ಆಯಿತು. ಆದರೆ ಈ ಇಬ್ಬರನ್ನು ಪೊರೆದ, ಪೋಷಿಸಿದ ಆರೆಸೆಸ್‌ಗೆ, ಇವರಿಬ್ಬರು ದೇಶದ ಪ್ರಧಾನಿ ಮತ್ತು ಗೃಹಮಂತ್ರಿಯ ಕುರ್ಚಿಯಲ್ಲಿ ಕೂರುವ ಆಸೆ ಇತ್ತು. ಅದು ನೆರವೇರಿ, ಅದಕ್ಕೂ ಈಗ ಹತ್ತು ವರ್ಷಗಳಾಯಿತು.

ಹತ್ತು ವರ್ಷಗಳ ಕಾಲ ಮೋದಿಯನ್ನು ಮೆರೆಯಲು ಬಿಟ್ಟ ಅಮಿತ್ ಶಾ, ಬಿಜೆಪಿಯನ್ನು ಸಂಪದ್ಭರಿತ ಪಕ್ಷವನ್ನಾಗಿ ಮಾಡಿದ್ದಾರೆ. ಅದಾನಿ–ಅಂಬಾನಿಗಳೆಂಬ ಕಾರ್ಪೊರೇಟ್ ಕುಳಗಳನ್ನು ಅಕ್ಕ-ಪಕ್ಕ ನಿಲ್ಲಿಸಿಕೊಂಡು ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಪ್ಲಾನ್ ಬಿ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ 40 ವರ್ಷಗಳ ಕಾಲ ನಾಯಕನ ಹಿಂದೆ ನಿಂತಿದ್ದ ನಾಯಕ ಈಗ ಮುನ್ನೆಲೆಗೆ ಬರುತ್ತಿದ್ದಾರೆ.

ರಾಜಕಾರಣದಲ್ಲಿ ನುರಿತ ಕಸುಬುದಾರ ಎಂದೇ ಕುಖ್ಯಾತಿ ಗಳಿಸಿರುವ ಅಮಿತ್ ಶಾರನ್ನು ಮಾರಿಕೊಂಡ ಮಾಧ್ಯಮಗಳು ಮಾಸ್ಟರ್ ಮೈಂಡ್, ಚಾಣಕ್ಯ, ಟ್ರಬಲ್ ಶೂಟರ್ ಎಂದು ಹಾಡಿ ಹೊಗಳುತ್ತಿವೆ. ಈ ತಂತ್ರ-ಕುತಂತ್ರಗಳೇ ಮೋದಿಯವರನ್ನು ಕೆಳಗಿಳಿಸಿ, ಅಮಿತ್ ಶಾರನ್ನು ಮೇಲೆ ಕೂರಿಸುವ ಕೆಲಸ ಮಾಡುತ್ತವೆಯೇ? ಕೇಜ್ರಿವಾಲ್ ಮಾತು ನಿಜವಾಗುತ್ತದೆಯೇ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...