ನೆಹರೂ ಬಗ್ಗೆ ಬಿಜೆಪಿ-ಆರ್‌ಎಸ್‌ಎಸ್‌ಗೆ ಯಾಕಿಷ್ಟು ದ್ವೇಷ?

Date:

Advertisements
ಆರ್‌ಎಸ್‌ಎಸ್‌ಅನ್ನು ಮೊದಲ ಬಾರಿಗೆ ಬ್ಯಾನ್ ಮಾಡಿದವರು ನೆಹರೂ. ಹಿಂದು ಕಾನೂನುಗಳಲ್ಲಿ ಸುಧಾರಣೆ ತಂದವರು ನೆಹರೂ. ‘ಭಾರತಕ್ಕೆ ಅಪಾಯವಿರುವುದು ಕಮ್ಯುನಿಸಂನಿಂದ ಅಲ್ಲ, ಬಲಪಂಥೀಯ ಕೋಮುವಾದದಿಂದ’ ಎಂದಿದ್ದವರು ನೆಹರೂ. 

ಜವಹರಾಲ್ ಲಾಲ್ ನೆಹರು – ಭಾರತದ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಮೊದಲ ಪ್ರಧಾನಿ ಹಾಗೂ ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರದ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿಯಾಗಿದ್ದವರು. ಭಾರತಕ್ಕೆ ಜವಹರಲಾಲ್ ನೆಹರೂ ಅವರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಅವರು 3,259 ದಿನ ಜೈಲು ವಾಸ ಅನುಭವಿಸಿದ್ದವರು. ಆದರೆ, ಅವರ ವಿರುದ್ಧ ಆರ್ ಎಸ್ ಎಸ್ ಮತ್ತು ಬಿಜೆಪಿ ಪಟಾಲಂ ನಿರಂತರವಾಗಿ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ನೆಹರೂ ಅವರನ್ನು ಖಳನಾಯಕನನ್ನಾಗಿ ಬಿಂಬಿಸುತ್ತಿದೆ. ನೆಹರೂ ಎಂದರೆ, ದ್ವೇಷ ಕಾರುವಂತಹ ರೀತಿಯಲ್ಲಿ ಇತಿಹಾಸವನ್ನೇ ಬದಲಿಸಲು ಯತ್ನಿಸುತ್ತಿದೆ.

ಹಾಗೆ ನೋಡಿದರೆ, ನೆಹರೂ ಅವರ ಬಗ್ಗೆ ಮಾತನಾಡುವ ನೈತಿಕತೇ ಬಿಜೆಪಿ ನಾಯಕರಿಗಿಲ್ಲ. ಹೀಗಿರುವಾಗ, ನೆಹರೂ ವಿರುದ್ಧ ನಿರಂತರವಾಗಿ ದ್ವೇಷ ಪೂರಿತ ಸುಳ್ಳುಗಳ ಹೂರಣವನ್ನೇ ಬಿಜೆಪಿ ಐಟಿ ಸೆಲ್ ಸೃಷ್ಟಿಸುತ್ತಿದೆ. ನೆಹರು ಕುರಿತು ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನವರೆಗೆ ಬಿಜೆಪಿಗರು ಹೇಳುವ ಯಾವುದೇ ಹೇಳಿಕೆಗಳಿಗೆ ಪುರಾವೆಗಳಿಲ್ಲ. ಸುಳ್ಳಿನ ಕಾರ್ಖಾನೆಯಲ್ಲಿ ಸುಳ್ಳನ್ನು ಉತ್ಪಾದಿಸಿ, ಅದನ್ನೇ ಸತ್ಯವೆಂದು ಆರ್‌ಎಸ್‌ಎಸ್‌, ಬಿಜೆಪಿ ಹರಿಬಿಡುತ್ತಿದೆ. ಜನರ ನಡುವೆ ಹರಡುತ್ತಿದೆ.

ನೆಹರೂ ಒಬ್ಬ ಸ್ತ್ರೀ ಲಂಪಟ, ಹಿಂದೂ ವಿರೋಧಿ, ಅವರೊಬ್ಬ ಮುಸಲ್ಮಾನ್, ಪ್ರಧಾನಿ ಆಗಬೇಕೆಂಬ ಇನ್ನೊಬ್ಬರ ಆಸೆಗೆ ತಣ್ಣೀರು ಎರಚಿದವರು – ಇಂತಹ ಹತ್ತು ಹಲವಾರು ಹಸೀ ಸುಳ್ಳು ಸುದ್ದಿಗಳನ್ನು ಬಿಜೆಪಿ-ಆರ್‌ಎಸ್‌ಎಸ್‌ನ ಹಿಂದುತ್ವವಾದಿ ಪಾಳಯ ಹರಿಬಿಡಲಾಗುತ್ತಿದೆ. ಅಷ್ಟೇ ಅಲ್ಲದೇ, ಜನರಿಗೆ ಮಾಹಿತಿ ನೀಡುವ ವಿಕಿಪೀಡಿಯಾದಲ್ಲಿಯೂ ಕೂಡ ನೆಹರೂ ಅವರ ಬಗ್ಗೆ ನೆಗೆಟಿವ್ ಮಾಹಿತಿಯನ್ನು ಹಂಚಲಾಗಿದೆ.

Advertisements

1952ರ ಚುನಾವಣೆಯಿಂದಲೂ ಹಿಂದುತ್ವ ಶಕ್ತಿಗಳಿಗೆ ನೆಹರೂ ಅವರನ್ನು ಕಂಡರೆ ಸಹಿಸಲಾಗುತ್ತಿಲ್ಲ. ‘ಜವಹರಲಾಲ್ ನೆಹರೂ ಬದಲಿಗೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ದೇಶದ ಪ್ರಧಾನಿಯಾಗಿದ್ದರೇ, ಕಾಶ್ಮೀರದಲ್ಲಿ ಪಾಕಿಸ್ತಾನವು ದುಷ್ಕ್ರತ್ಯ ಮತ್ತು ಭಾರತ ವಿರೋಧಿ ಚಟುವಟಿಕೆಗಳನ್ನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸ್ವಾತಂತ್ರ್ಯದ ನಂತರ ಪಾಕಿಸ್ತಾನ ಇಂತಹ ಧೋರಣೆ ತಳೆಯಲು ನೆಹರೂ ಅವರ ‘ದುರ್ಬಲ’ ಕಾಶ್ಮೀರ ನೀತಿಯೇ ಕಾರಣ. ನೆಹರೂ ಸಮಯಕ್ಕೆ ಸರಿಯಾಗಿ ಕಾಶ್ಮೀರಕ್ಕೆ ಸೈನ್ಯವನ್ನು ಕಳುಹಿಸಿದ್ದರೆ, ಪಾಕಿಸ್ತಾನ ಕಾಶ್ಮೀರದ ಭಾಗವನ್ನು ವಶಪಡಿಸಿಕೊಳ್ಳುತ್ತಿರಲಿಲ್ಲ’ ಎಂದು ಬಿಜೆಪಿ ಗಂಭೀರ ಆರೋಪ ಮಾಡುತ್ತಿದೆ. ಸುಳ್ಳು ಪ್ರಚಾರ ಮಾಡುತ್ತಿದೆ. ಆದರೆ, ವಾಸ್ತವ ಬೇರೆಯೇ ಇದೆ. ‘ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದವರು ಸರ್ದಾರ್ ಪಟೇಲ್. ಕಾಶ್ಮೀರವನ್ನು ಭಾರತದ ಭಾಗವಾಗಿಯೇ ಉಳಿಸಿದವರು ನೆಹರೂ!’ ಎಂದು ಮಾಜಿ ಸಚಿವ ಸೈಫುದ್ದೀನ್ ಸೋಝ್ ಹೇಳಿಕೆ ನೀಡಿದ್ದಾರೆ.

ಇನ್ನೊಂದು ಸುಳ್ಳು, ಡಾ.ಅಂಬೇಡ್ಕರ್ ಅವರನ್ನು ನೆಹರೂ ಅವರ ಕಾಂಗ್ರೆಸ್ ಸೋಲಿಸಿತು ಎಂದು ಬಿಜೆಪಿಗರು ಹೇಳುತ್ತಾರೆ. ಆದರೆ, ಇದನ್ನು ಅಲ್ಲಗಳೆಯುವ ಕಾಂಗ್ರೆಸ್‌, ‘ಅಂಬೇಡ್ಕರ್ ಅವರ ಸೇವೆಯನ್ನು ಗುರುತಿಸಿ ಅವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡವರು ನೆಹರು. ಜನರ ದಾರಿ ತಪ್ಪಿಸುವುದನ್ನು ಮೊದಲು ನಿಲ್ಲಿಸಿ. ದೇಶಕ್ಕಾಗಿ ಮೋದಿ ಅಥವಾ ಶಾ ಜೈಲಿಗೆ ಹೋಗಿದ್ದಾರೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

ನೆಹರೂ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಯೊಂದು ಹೀಗಿದೆ: “ಜವಾಹರ್ ಎಂಬುದು ಅರಬ್ಬಿ ಪದ. ಹೀಗಿದ್ದಾಗ ಕಾಶ್ಮೀರ ಬ್ರಾಹ್ಮಣನೊಬ್ಬ ತನ್ನ ಮಗನಿಗೆ ಅರಬ್ಬಿ ಹೆಸರನ್ನು ಹೇಗಿಡಬಲ್ಲ? ನೆಹರೂ ಅವರ ತಾತನ ಹೆಸರು ಗಿಯಾಜುದ್ದೀನ್ ಗಾಜಿ. ಈ ಗಿಯಾಜುದ್ದೀನ್ ಮುಘಲರ ಕೋತವಾಲರಾಗಿದ್ದರು. ಮುಂದೆ ಅವರು ತಮ್ಮ ಹೆಸರನ್ನು ಗಂಗಾಧರ ನೆಹರೂ ಅಂತ ಬದಲಿಸಿಕೊಂಡುಬಿಟ್ಟರು” ಹೀಗೆ ಸುಳ್ಳಿನ ಸಾಲೂ ಮುಂದುವರೆಯುತ್ತದೆ… ಆದರೆ, ನೆಹರು ಕಾಶ್ಮೀರಿ ಪಂಡಿತರ ಕುಟುಂಬದಲ್ಲಿ ಜನಿಸಿದವರು ಎಂಬುದೇ ಸತ್ಯ.

ಇನ್ನು, ಜವಾಹರಲಾಲ್ ನೆಹರೂ ಅವರೇ ಸ್ವತಃ ತಾವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲವೆಂದು ಹೇಳಿಕೊಂಡಿದ್ದಾರೆ ಎಂಬ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಆದರೆ, ಆ ವಿಡಿಯೋವನ್ನು ಎಡಿಟ್ ಮಾಡಲಾಗಿತ್ತು. ನೆಹರೂ ಅವರ ಮೂಲ ಸಂದರ್ಶನದ ತುಣುಕನ್ನು ತಮಗೆ ಬೇಕಾದಂತೆ ಬಿಜೆಪಿ ಐಟಿ ಸೆಲ್ ಎಡಿಟ್ ಮಾಡಿ, ತಪ್ಪು ಮಾಹಿತಿಯನ್ನ ಹರಿಬಿಟ್ಟಿತ್ತು.

ಇನ್ನೊಂದು ಹಸಿ ಸುಳ್ಳು ಎಂದರೆ, ನೆಹರೂ ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಫೋಟೋವೊಂದನ್ನ ‘ಐ ಸಪೋರ್ಟ್ ದೋವಲ್’ ಎಂಬ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಸುಳ್ಳು ನಿಜಕ್ಕೂ ನಗು ತರಿಸುತ್ತೆ. ಏಕೆಂದರೆ, ಹಿಂದುತ್ವವನ್ನ, ಆರ್‌ಎಸ್‌ಎಸ್‌ – ಹಿಂದೂ ಮಹಾಸಭಾವನ್ನ, ಬಲಪಂಥಿಯವಾದವನ್ನ ನೆಹರು ತೀವೃವಾಗಿ ವಿರೋಧಿಸಿದ್ದರು. ಹೀಗಿರುವಾಗ ಅವರು ಆರ್‌ಎಸ್‌ಎಸ್‌ನ ಸಭೆಯೊಂದರಲ್ಲಿ ಭಾಗವಹಿಸುವುದಕ್ಕೆ ಹೇಗೆ ಸಾಧ್ಯ?

ಇನ್ನು ನೆಹರೂ ಅವರನ್ನು ಹೆಣ್ಣುಬಾಕ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಿದೆ. ನೆಹರು ಅವರು ತಮ್ಮ ಸಹೋದರಿ ಮತ್ತು ಸೊಸೆಯೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೇರಿದಂತೆ ಹಲವರು, ‘ನೆಹರೂ ಒಬ್ಬ ಸ್ರೀಲೋಲ’ ಎಂದು ಬಿಂಬಿಸಿದೆ. ಆದರೆ, ಆ ಚಿತ್ರದಲ್ಲಿದ್ದದ್ದು, ನೆಹರು ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಹಾಗೂ ವಿಜಯಲಕ್ಷ್ಮಿ ಅವರ ಮಗಳು ನಯನತಾರಾ ಸೆಹಗಲ್.

image 22 6

ನೆಹರೂ ಅವರು ‘ನಾನು ಶಿಕ್ಷಣದಿಂದ ಇಂಗ್ಲಿಷ್, ಸಂಸ್ಕೃತಿಯಿಂದ ಮುಸ್ಲಿಂ ಮತ್ತು ಕೇವಲ ಆಕಸ್ಮಿಕವಾಗಿ ಹಿಂದೂ’ ಎಂದು ಹೇಳಿಕೊಂಡಿದ್ದಾರೆ ಎಂದೂ ರಿಪಬ್ಲಿಕ್ ಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಮತ್ತು ರಾಷ್ಟ್ರೀಯ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ಜವಾಹರಲಾಲ್ ನೆಹರು ಹೇಳಿಲ್ಲ. ಅದೊಂದು ಸುಳ್ಳು. ಆ ಸುಳ್ಳನ್ನು ಮೊದಲಿಗೆ ಹೆಣೆದವರು ಹಿಂದೂ ಮಹಾಸಭಾ ನಾಯಕ ಎನ್ ಬಿ ಖರೆ. 1959ರಲ್ಲಿ ಈ ಬಗ್ಗೆ ಸುಳ್ಳು ಹೇಳಿದ್ದ ಖರೆ, ‘ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ’ ಎಂದು ಹೇಳಿದ್ದರು. ಆದರೆ, ನೆಹರೂ ಅವರ ಆತ್ಮಕಥೆಯಲ್ಲಿ ಈ ಹೇಳಿಕೆ ಎಲ್ಲಿಯೂ ಇಲ್ಲ.

1962ರ ಚೀನಾದೊಂದಿಗಿನ ಯುದ್ಧದಲ್ಲಿ ಭಾರತವು ವಿಫಲವಾದ ನಂತರ ಜನಸಮೂಹದಿಂದ ಜವಾಹರಲಾಲ್ ನೆಹರು ಅವರನ್ನು ಥಳಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಜವಾಹರಲಾಲ್ ನೆಹರು ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ, ಅದು ಸುಳ್ಳು ಎಂಬುದನ್ನು ಆಲ್ಟ್ ನ್ಯೂಸ್ ಕಂಡು ಹಿಡಿದಿದೆ. ಈ ಚಿತ್ರಗಳು 1962ರಲ್ಲಿ ಚೀನಾ-ಭಾರತ ನಡುವಿನ ಯುದ್ಧಕ್ಕಿಂತ ಮೊದಲು ತೆಗೆದದ್ದು. ಆ ಚಿತ್ರದಲ್ಲಿರುವುದು ನೆಹರೂ ಅಲ್ಲ. ಆ ಚಿತ್ರಗಳಿಗೂ ನೆಹರೂಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಆಲ್ಟ್‌ ನ್ಯೂಸ್‌ ಕಂಡುಹಿಡಿದಿದೆ.

ನೆಹರು ಸುಭಾಸ್ ಚಂದ್ರ ಬೋಸ್ ಅವರನ್ನು ‘ಯುದ್ಧ ಅಪರಾಧಿ’ ಎಂದು ಕರೆದಿದ್ದರು ಎಂದು ನೆಹರೂ ವಿರೋಧಿಗಳು ಸಾಮಾಜಿಕ ಮಾಧ್ಯಮದಲ್ಲಿ ಪತ್ರವೊಂದನ್ನು  ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಆ ಪತ್ರ ನೆಹರೂ ಅವರು 1945ರ ಡಿಸೆಂಬರ್ 27ರಂದು ಆಗಿನ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಅವರಿಗೆ ಬರೆದ ಪತ್ರವೆಂದು ವಾದಿಸುತ್ತಿದ್ದಾರೆ.

ಸತ್ಯವೆಂದರೆ, ಈ ಪತ್ರವನ್ನು ನೆಹರೂ ಬರೆದಿಲ್ಲ. ಆದರೆ, ಪ್ರಮುಖ ವಿಚಾರವೆಂದರೆ, 1945ರ ಆಗಸ್ಟ್ನಲ್ಲಿ ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸಾವನ್ನಪ್ಪಿದ್ದರು. ನೆಹರೂ ಅವರ ಸ್ಟೆನೋಗ್ರಾಫರ್ ಆಗಿದ್ದ ಶ್ಯಾಮಲಾಲ್ ಜೈನ್ ಅವರು ಬೋಸ್ ಅವರ ನಿಗೂಡ ನಾಪತ್ತೆ ಪ್ರಕರಣಕ್ಕೆ ಸಾಕ್ಷ್ಯಗಳಲ್ಲಿ ಈ ಪತ್ರ ನೀಡಿದ್ದರು. 1945ರ ಡಿಸೆಂಬರ್‌ನಲ್ಲಿ ನೆಹರೂ ಹೇಳಿದ್ದಾರೆಂದು ಜೈನ್ ಪ್ರತಿಪಾದಿಸಿದ್ದರು. ಆದರೆ, ಆ ಪತ್ರವನ್ನು ನೆಹರೂ ಬರೆದಿಲ್ಲ ಎಂಬುದನ್ನು ಆಲ್ಟ್ ನ್ಯೂನ್ ಪತ್ತೆ ಹಚ್ಚಿದೆ.

ಇನ್ನು ನೆಹರೂ ಮುಸ್ಲಿಂ ಎಂಬ ಸುಳ್ಳು ಸುದ್ದಿಯನ್ನ ಹರಿಬಿಟ್ಟಿದ್ದಾರೆ. ನೆಹರೂ ಅವರು ಜಾಗತಿಕವಾಗಿದ್ದರು, ಭಾರತೀಯರು. ಹಿಂದೂ ಸಂಸ್ಕೃತಿಯನ್ನು ಅರ್ಥಮಾಡಿಕೊಂಡವರು. ಆದರೆ, ಜಾತ್ಯತೀತರ. ವೇದಗಳನ್ನು ತಿಳಿದಿದ್ದರು ಆದರೆ, ಧಾರ್ಮಿಕರಲ್ಲ, ಸಂಪ್ರದಾಯಗಳ ಬಗ್ಗೆ ಸಭ್ಯರು ಆದರೆ, ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮೀಸಲಿದ್ದವರು.

ಈ ವರದಿ ಓದಿದ್ದೀರಾ?: ಟಿಪ್ಪು ಹಿಂದು ವಿರೋಧಿನಾ?

ಇದೆಷ್ಟೇ ಅಲ್ಲ, ನೆಹರು ಅವರು ಬಗ್ಗೆ ಹೇಳೋಕೆ ಆಗದೇ ಇರುವಷ್ಟು ಸುಳ್ಳು ಸುದ್ದಿಗಳನ್ನ ಈ ಬಿಜೆಪಿ-ಆರ್‌ಎಸ್‌ಎಸ್‌ ಹಬ್ಬಿಸುತ್ತಿದೆ. ನೆಹರೂ ಅವರ ನಿಲುವು ಅನೇಕ ಭಾಗಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ನೆಹರೂ ಅವರ ಮರಣದ ನಂತರ, ದಿ ಎಕನಾಮಿಸ್ಟ್ ‘ನೆಹರೂ ಇಲ್ಲದ ಜಗತ್ತು’ ಎಂಬ ಶೀರ್ಷಿಕೆಯ ಕವರ್ ಸ್ಟೋರಿಯನ್ನು ಮಾಡಿತ್ತು. ನ್ಯೂಯಾರ್ಕ್ ಟೈಮ್ಸ್ ನೆಹರೂ ಅವರನ್ನು ‘ಆಧುನಿಕ ಭಾರತದ ನಿರ್ಮಾತೃ’ ಎಂದು ಕರೆದಿದೆ. ಆದರೆ, ಹಿಂದು ಮಹಾಸಭಾ-ಆರ್‌ಎಸ್‌ಎಸ್‌ ಮಾತ್ರ ನೆಹರೂ ಅವರನ್ನು ಅವರ ಮರಣಾನಂತರವೂ ದ್ವೇಷಿಸುತ್ತಿದೆ.

ಅಷ್ಟಕ್ಕೂ ನೆಹರೂ ಮೇಲೆ ಬಿಜೆಪಿಗರಿಗೆ ಮತ್ತು ಆರ್‌ಎಸ್‌ಎಸ್‌ಗೆ ಯಾಕಿಷ್ಟು ದ್ವೇಷ? ರಾಜಸ್ಥಾನದಲ್ಲಿ ಶಾಲಾ ಪಠ್ಯಪುಸ್ತಕದ ಇತಿಹಾಸದ ಪುಟಗಳಿಂದಲೂ ಜವಾಹರಲಾಲ್ ನೆಹರೂ ಅವರ ಹೆಸರನ್ನು ಅಳಿಸಲಾಗಿದೆ. ದೇಶದ ಮೊದಲ ಪ್ರಧಾನಿ ಯಾರು ಎಂಬುದರ ಬಗ್ಗೆ ಪುಸ್ತಕದಲ್ಲಿ ಯಾವುದೇ ಉಲ್ಲೇಖವಿಲ್ಲವಂತೆ ತೆಗೆದುಹಾಕಿದೆ. ಅವರ ಕೊಡುಗೆಯನ್ನು ಮರೆಮಾಚಿ, ಇತಿಹಾಸವನ್ನು ತಿರುಚಿ ಸುಳ್ಳು ವದಂತಿಗಳನ್ನು ಹಬ್ಬಿಸಿ ಮಸಿ ಬಳಿಯುವ ಹೇಯಕೃತ್ಯವನ್ನು ಸಂಘಪರಿವಾರ ಮಾಡುತ್ತಲೇ ಇದೆ.

ಬಿಜೆಪಿ, ಆರ್‌ಎಸ್‌ಎಸ್‌ಗೆ ನೆಹರೂ ಮೇಲೆ 50ರ ದಶಕದಿಂದಲೂ ಸಿಟ್ಟಿದೆ. ಅದಕ್ಕೆ ಕಾರಣ, ನೆಹರೂ ಅವರು ಹಿಂದೂ ಮಹಾಸಭಾ-ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬಲವಾಗಿ ವಿರೋಧಿಸಿದವರು. ಅಷ್ಟೇ ಅಲ್ಲ, ‘ಭಾರತಕ್ಕೆ ಅಪಾಯವಿರುವುದು ಕಮ್ಯುನಿಸಂನಿಂದ ಅಲ್ಲ, ಬಲಪಂಥೀಯ ಕೋಮುವಾದದಿಂದ’ ಎಂದಿದ್ದವರು. ಗಾಂಧಿ ಹತ್ಯೆಯ ನಂತರ ಗೃಹಸಚಿವ ಪಟೇಲರ ಸಲಹೆಯಂತೆ ಆರೆಸ್ಸೆಸ್ಸನ್ನು ನೆಹರೂ ನಿಷೇಧಿಸಿದ್ದರು. 1950ರಲ್ಲಿ ಹಿಂದೂ ಕಾನೂನು ಸುಧಾರಣೆಯನ್ನು ಜಾರಿಗೆ ತಂದ, ಕೋಮುವಾದವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು.

ಆರ್‌ಎಸ್‌ಎಸ್‌ಅನ್ನು ಮೊದಲ ಬಾರಿಗೆ ಬ್ಯಾನ್ ಮಾಡಿದವರು ನೆಹರೂ. ಹಿಂದು ಕಾನೂನುಗಳಲ್ಲಿ ಸುಧಾರಣೆ ತಂದವರು ನೆಹರೂ. ಆ ಕಾರಣಕ್ಕಾಗಿಯೇ ಸಂಘಪರಿವಾರ ನೆಹರೂ ಅವರನ್ನು ದ್ವೇಷಿಸುತ್ತದೆ. ಬರೀ ಕಪೋಕಲ್ಪಿತ ಹೇಳಿಕೆಗಳನ್ನ ನೀಡುತ್ತಿದ್ದ ಫ್ಯಾಸಿಸ್ಟ್ ಶಕ್ತಿಗಳು ನೆಹರೂ ಸ್ಮಾರಕದ ಮೇಲೆಯೂ ಮುಗಿಬಿದ್ದಿವೆ. ವೈಜ್ಞಾನಿಕ ಚಿಂತನೆ ಹಾಗೂ ವೈಚಾರಿಕ ಮನೋಭಾವವನ್ನು ಭಾರತೀಯರು ಬೆಳೆಸಿಕೊಳ್ಳಲು ಆಗ್ರಹಿಸುತ್ತಿದ್ದ ಮಹಾನ್ ಚಿಂತಕ ನೆಹರೂ ಬರೀ ಕಾಂಗ್ರೆಸ್ಸಿನ ಆಸ್ತಿಯಲ್ಲ. ದೇಶದ ಆಸ್ತಿ. ರಾಷ್ಟ್ರೀಯತೆ ಮತ್ತು ಬಹುತ್ವದ ಅನನ್ಯತೆಯೇ ಭಾರತದ ಜೀವಾಳ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X