ರಾಹುಲ್‌ಗೆ ನನ್ನ ಬಂಗಲೆ ಬಿಟ್ಟುಕೊಡುವೆ: ಮಲ್ಲಿಕಾರ್ಜುನ ಖರ್ಗೆ

Date:

  • ಬಂಗಲೆ ತೆರವುಗೊಳಿಸಲು ಮಾರ್ಚ್ 27ರಂದು ರಾಹುಲ್ ಗಾಂಧಿಗೆ ನೋಟಿಸ್
  • ಏಪ್ರಿಲ್ 22ರೊಳಗೆ ತುಘಲಕ್ ಬೀದಿಯ ಅಧಿಕೃತ ಬಂಗಲೆ ತೆರವಿಗೆ ಸೂಚನೆ

ಸಂಸದರ ಅಧಿಕೃತ ನಿವಾಸವನ್ನು ತೆರವುಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಂಸತ್ತು ನೀಡಿರುವ ನೋಟಿಸ್‌ಗೆ ಮಂಗಳವಾರ (ಮಾರ್ಚ್ 28) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, “ರಾಹುಲ್ ಗಾಂಧಿ ಅವರಿಗೆ ನನ್ನ ಅಧಿಕೃತ ನಿವಾಸಗಳಲ್ಲಿ ಒಂದನ್ನು ಬಿಟ್ಟುಕೊಡುತ್ತೇನೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸಂಸತ್ತು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ನಂತರ ದೆಹಲಿಯಲ್ಲಿ ಸಂಸತ್ತು ಸದಸ್ಯರಿಗೆ ನೀಡಲಾದ ಅಧಿಕೃತ ಬಂಗಲೆಯನ್ನು ತೆರವುಗೊಳಿಸುವಂತೆ ರಾಹುಲ್ ಗಾಂಧಿ ಅವರಿಗೆ ಸೋಮವಾರ (ಮಾರ್ಚ್ 27) ಸಂಸತ್ತು ನೋಟಿಸ್ ನೀಡಿದೆ.

“ರಾಹುಲ್ ಗಾಂಧಿ ಅವರನ್ನು ದುರ್ಬಲಗೊಳಿಸಲು ಅವರು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಅವರು ಸಂಸದರಿಗೆ ನೀಡಲಾದ ಅಧಿಕೃತ ಬಂಗಲೆಯನ್ನು ತೊರೆದರೆ ತಮ್ಮ ತಾಯಿಯೊಂದಿಗೆ ವಾಸಿಸಬಹುದು. ಇಲ್ಲವೇ ಅವರು ನನ್ನ ಬಳಿ ಬಂದರೆ ಅವರಿಗಾಗಿ ನನ್ನ ಅಧಿಕೃತ ನಿವಾಸಗಳಲ್ಲಿ ಒಂದನ್ನು ತೆರವುಗೊಳಿಸುತ್ತೇನೆ” ಎಂದು ದೆಹಲಿಯಲ್ಲಿ ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.

“ರಾಹುಲ್ ಗಾಂಧಿ ಅವರನ್ನು ಬೆದರಿಸುವ ಮತ್ತು ಅವಮಾನಿಸುವ ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ. ಇದು ಸೂಕ್ತ ಮಾರ್ಗವಲ್ಲ. ಕೆಲವೊಮ್ಮೆ ನಾವು ಮೂರು-ನಾಲ್ಕು ತಿಂಗಳು ಬಂಗಲೆ ಇಲ್ಲದೆ ಇದ್ದೇವೆ. ನನಗೆ ಆರು ತಿಂಗಳ ನಂತರ ಬಂಗಲೆ ದೊರೆತಿತ್ತು. ಆಡಳಿತದ ಜನರು ಇತರರನ್ನು ಅವಮಾನಿಸಲು ಹೀಗೆ ಮಾಡುತ್ತಾರೆ” ಎಂದು ಖರ್ಗೆ ಕುಟುಕಿದರು.

ದೆಹಲಿಯ ತುಘಲಕ್ ಬೀದಿಯಲ್ಲಿರುವ ಅಧಿಕೃತ ಬಂಗಲೆಯನ್ನು ಗರಿಷ್ಠ ಒಂದು ತಿಂಗಳು ಅಥವಾ ಏಪ್ರಿಲ್ 22ರೊಳಗೆ ತೆರವುಗೊಳಿಸುವಂತೆ ಲೋಕಸಭೆ ಕಾರ್ಯಾಲಯ ರಾಹುಲ್ ಗಾಂಧಿ ಅವರಿಗೆ ಸೋಮವಾರ ನೋಟಿಸ್ ನೀಡಿದೆ.
“12ನೇ ಸಂಖ್ಯೆಯ ಬಂಗಲೆಯ ವಾಸ್ತವ್ಯವನ್ನು ಏಪ್ರಿಲ್ 23ರಿಂದ ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ” ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ವಾಸ್ತವ್ಯದ ಅವಧಿ ವಿಸ್ತರಿಸುವಂತೆ ರಾಹುಲ್ ಗಾಂಧಿ ಅವರು ವಸತಿ ಸಮಿತಿಗೆ ಮನವಿ ಸಲ್ಲಿಸಬಹುದು. ಇದನ್ನು ಸಮಿತಿ ಪರಿಗಣಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.

ರಾಹುಲ್‌ ಅವರ ಅನರ್ಹತೆಯ ನಂತರ ಸಂಸತ್ತು ನೀಡಿರುವ ಅಧಿಕೃತ ಬಂಗಲೆ ತೆರವುಗೊಳಿಸುವಂತೆ ಲೋಕಸಭೆ ಕಾರ್ಯಾಲಯ ರಾಹುಲ್‌ ಅವರಿಗೆ ನೋಟಿಸ್‌ ನೀಡಿತ್ತು.

ರಾಹುಲ್‌ ಗಾಂಧಿ ಅವರಿಗೆ ‘ಮೋದಿ ಉಪನಾಮ’ ಕುರಿತ ಟೀಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸೂರತ್‌ ನ್ಯಾಯಾಲಯ ಮಾರ್ಚ್‌ 23ರಂದು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಇದರ ಬೆನ್ನಲ್ಲೆ ಮಾರ್ಚ್ 24ರಂದು ರಾಹುಲ್‌ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅಮಾನತುಗೊಳಿಸಿ ಲೋಕಸಭೆ ಕಾರ್ಯಾಲಯ ಅಧಿಸೂಚನೆ ಹೊರಡಿಸಿತ್ತು. ರಾಹುಲ್ ಅವರು ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿದ್ದರು.

2019ರ ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ಸಮಾವೇಶದ ವೇಳೆ ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಸ್ಕಿ ಮೊದಲಾದ ಭ್ರಷ್ಟರನ್ನು ಉಲ್ಲೇಖಿಸಿ, “ಎಲ್ಲ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಹೆಸರು ಏಕಿರುತ್ತದೆ?” ಎಂದು ರಾಹುಲ್ ವ್ಯಂಗ್ಯವಾಡಿದ್ದರು. ಇದನ್ನು ಖಂಡಿಸಿ ಸೂರತ್‌ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ರಾಹುಲ್ ಅವರ ವಿರುದ್ಧ ಅಪರಾಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಭಾಲ್ಕಿ ಕ್ಷೇತ್ರದ ಕಳೆದ 70 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಮೂರು ಅವಧಿ...

ಧಾರವಾಡ ಲೋಕಸಭಾ ಕ್ಷೇತ್ರ | ಪ್ರಲ್ಹಾದ್‌ ಜೋಶಿ ಬದಲು ಹೊಸ ಮುಖಕ್ಕೆ ಮನ್ನಣೆ ನೀಡಲು ಲಿಂಗಾಯತರ ಒತ್ತಾಯ

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 13 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್‌...

ಆಗಸ್ಟ್‌ 1 ರಂದು ಗೃಹಜ್ಯೋತಿ, ಆಗಸ್ಟ್‌ 17-18 ರಂದು ಗೃಹಲಕ್ಷ್ಮಿ ಯೋಜನೆ ಜಾರಿ : ಸಿಎಂ ಸಿದ್ದರಾಮಯ್ಯ

ಯೋಜನೆಗಳ ಅನುಷ್ಠಾನ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ...

ಜೂನ್ 10ರಂದು ಕ್ಷೇತ್ರದ ಜನರಿಗೆ ಕೃತಜ್ಞತಾ ಸಭೆ ಆಯೋಜಿಸಿದ ಸಿಎಂ

ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮುಂದಾದ ಸಿದ್ದರಾಮಯ್ಯ ವರುಣ ಕ್ಷೇತ್ರ ವ್ಯಾಪ್ತಿಯ...