ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಎಲ್ಲ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳ ಪೈಕಿ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮತ್ತು ಮಹುವಾ ಮೊಯಿತ್ರಾ ಸೇರಿದಂತೆ ಹಲವರಿಗೆ ಟಿಕೆಟ್ ನೀಡಿದೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಬಹರಂಪುರದಿಂದ ತೃಣಮೂಲದ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿದ್ದು, ಪ್ರಸ್ತುತ ಕಾಂಗ್ರೆಸ್‌ನ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಅವರು ಸ್ಪರ್ಧಿಸುತ್ತಿದ್ದಾರೆ.
TMC announces the names of 42 candidates for Lok Sabha elections.
Former cricketer Yusuf Pathan and party leader Mahua Moitra among the candidates. pic.twitter.com/vfmb7alfbx
— ANI (@ANI) March 10, 2024
ಬಹರಂಪುರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಹೆಸರಿಸದಿದ್ದರೂ, ಅಧೀರ್ ರಂಜನ್ ಚೌಧರಿ ಅವರು ಲೋಕಸಭೆಯಲ್ಲಿ ಐದು ಬಾರಿ ಪ್ರತಿನಿಧಿಸಿರುವ ಸ್ಥಾನದಿಂದ ಮರು ಸ್ಪರ್ಧೆಯನ್ನು ಬಯಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಬಂಗಾಳದ ಎಲ್ಲ 42 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಂತೆ ಪಠಾಣ್ ಇಂದು ತೃಣಮೂಲಕ್ಕೆ ಸೇರ್ಪಡೆಗೊಂಡರು.
ಶಕ್ತಿ ಪ್ರದರ್ಶಿಸಿದ ದೀದಿ
Smt. @MamataOfficial‘s arrival has ignited the spirit of the massive crowd that has gathered at Brigade Ground for #JonogorjonSabha.
A sea of people eagerly await, ready to listen to her, draw inspiration from her words, and, under her leadership, take a collective pledge to… pic.twitter.com/JyPMZdLyqQ
— All India Trinamool Congress (@AITCofficial) March 10, 2024
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಈ ಮಹಾ ಸಮಾವೇಶದ ಮೂಲಕ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
