ಚುನಾವಣಾ ಆಯೋಗ ನಡೆಸುತ್ತಿರುವ ಅಕ್ರಮ ರೀತಿಯ ಮತದಾರರ ಪಟ್ಟಿಯ ಪರಿಷ್ಕರಣೆಗೆ ಕೊನೆ ಹಾಡಲು ಹಾಗೂ ತಪ್ಪಿತಸ್ಥ ಚುನಾವಣಾ ಆಯೋಗದ ಮೇಲೆ ಕ್ರಮ ಕೈಗೊಳ್ಳಬೇಕೆಂದು SIR ವಿರೋಧಿ ಜಾತ್ಯಾತೀತ ಪಕ್ಷ, ಪ್ರಗತಿಪರ ಸಂಘಟನೆಗಳಿಂದ ಚಿಕ್ಕಮಗಳೂರು ನಗರದ ಅಝದ್ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಯಿತು.

‘ಸಂವಿಧಾನ ದಿನ’ವಾದ ಇಂದು ಜನತೆಯಾದ ನಾವು ದೇಶದ ಪ್ರಮುಖರಾದ ತಮ್ಮ ಮುಂದೆ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾದ ಮನವಿಯನ್ನು ಮುಂದಿಡುತ್ತಿದ್ದೇವೆ. ಕೇಂದ್ರ ಚುನಾವಣಾ ಆಯೋಗ ತನ್ನ ಹದ್ದುಮೀರಿ ನಡೆದುಕೊಂಡು ಸರ್ವೋಚ್ಛನ್ಯಾಯಲದ ಕಟಕಟೆಯಲ್ಲಿ ಬಹಳ ಕೆಟ್ಟದಾಗಿ ಸಿಕ್ಕಿ ಹಾಕಿಕೊಂಡಿರುವುದು ಮಾತ್ರವಲ್ಲದೆ, ಪರೋಕ್ಷ ರೀತಿಯಲ್ಲಿ ತನ್ನ ಪ್ರಕ್ರಿಯೆ ದೋಷಪೂರಿತವಾದುದು ಎಂದು ಒಪ್ಪಿಕೊಂಡಿದೆ. ನವೆಂಬರ್ 6 ರಂದು ಇನ್ನೂ SIR ಮುಂದುವರಿಯುತ್ತಿರುವ 7 ಹೊಸ ಕಾರ್ಯಸೂಚಿಯನ್ನು ಕಳಿಸಿ ಡಿಲೀಟ್ ಆದವರ ಪಟ್ಟಿಯನ್ನು ಪ್ರತಿ ಬೂತಿನಲ್ಲಿ ಪ್ರಕಟಿಸಿ, ಪ್ರತಿ ಮನೆಗೆ ಮಾಹಿತಿ ನೀಡಿ, ತಪ್ಪಾಗಿ ಡಿಲೀಟ್ ಮಾಡಲ್ಪಟ್ಟವರಿಂದ ಫಾರಂ 6ಅನ್ನು ತುಂಬಿಸಿಕೊಳ್ಳದೆ ಮತ್ತೊಮ್ಮೆ ಎನ್ಯುಮುರೇಷನ್ ಫಾರಂ ಅನ್ನೇ ಕೊಟ್ಟು ಹಳೆ ಎಪಿಕ್ ಐಡಿಯಲ್ಲೇ ತೆಗೆದುಕೊಳ್ಳಿ ಒಂದು ವೇಳೆ ಅವರು ಬೇರೆ ಕಡೆಗೆ ಶಿಫ್ಟ್ ಆಗಿದ್ದರೆ ಅವರಿಂದಲೂ ಎನ್ಯುಮುರೇಷನ್ ಫಾರಂ ಮತ್ತು ಹೊಸ ವಿಳಾಸದ ವಿವರ ಪಡೆದು ಅವರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಿ ಎಂದು ಹೇಳಿದೆ. ಅಲ್ಲದೆ SIR ಮುಗಿದಿರುವ ರಾಜ್ಯಗಳಲ್ಲಿ SSR ನಡೆಸಲು ಆದೇಶಿಸಿದೆ. ಇದರ “SIR ಪ್ರಕ್ರಿಯೆಯಿಂದ ತಪ್ಪಾಗಿ ಡಿಲೀಟ್ ಆಗಿದ್ದಾರೆ, “ಈಗಾಗಲೇ ನೊಂದಾಯಿತರಾಗಿದ್ದ ಮತದಾರರಿಂದ ಮತ್ತೆ ಫಾರಂ ತುಂಬಿಸಿಕೊಂಡಿದ್ದು ತಪ್ಪು, “ಮನೆ ಶಿಫ್ಟ್ ಮಾಡಿಕೊಂಡವರನ್ನು ಡಿಲೀಟ್ ಮಾಡಿದ್ದು ತಪ್ಪು” ಎಂದು ಚುನಾವಣಾ ಆಯೋಗ ತಪ್ರೊಪ್ಪಿಗೆ ಮಾಡಿಕೊಂಡಿದೆ ಎಂದು ಸಂಘಟನೆಯ ಮುಖಂಡ ಗೌಸ್ ಮೋಹಿಯುದ್ದಿನ್ ತಿಳಿಸಿದರು.
ಕೋರ್ಟಿನಲ್ಲಿ ಅನೇಕ ವಿಚಾರಗಳ ಕುರಿತು ವಿಚಾರಣೆ ನಡೆಯುತ್ತಿದೆ. ಇನ್ನೂ ಹೆಚ್ಚೆಚ್ಚು ಅಕ್ರಮಗಳನ್ನು ಅದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕರ್ನಾಟಕದಲ್ಲಿ ಅಂತಿಮ ಎಂದು ಪ್ರಕಟಗೊಂಡಿರುವ SIR ಪಟ್ಟಿ ತರ್ಕಹೀನವಾಗಿದೆ ಮತ್ತು ಅನೇಕ ದೋಷಗಳಿಂದ ಕೂಡಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 18 ವರ್ಷ ದಾಟಿರುವ ವಯಸ್ಕರ ಜನಸಂಖ್ಯೆ 5.2 ಕೋಟಿ ಹೀಗಿರುವಾಗ ಮತದಾರರ ಪಟ್ಟಿಯಲ್ಲಿ 4.5 ಕೋಟಿ ಜನರು ಮಾತ್ರ ಉಳಿಯಲು ಹೇಗೆ ಸಾಧ? ಉಳಿದ 70 ಲಕ್ಷ ಜನರು ಏಕೆ ಮತದಾರರ ಪಟ್ಟಿಯಲ್ಲಿ ಇಲ್ಲ? ಬೆಂಗಳೂರು ವೇಗಗತಿಯಲ್ಲಿ ಬೆಳೆಯುತ್ತಿರುವಾಗ ಮತದಾರರ ಪಟ್ಟಿಯಲ್ಲಿ ಅರ್ಧಕ್ಕರ್ಧ ಜನರು ಕಣ್ಮರೆಯಾಗಲು ಹೇಗಾದರೂ ಸಾಧ್ಯ? ಈ ಯಾವುದಕ್ಕೂ ಕೇಂದ್ರ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ.
SIR ಅಂತಿಮ ಪಟ್ಟಿಯಲ್ಲಿಯೂ ಸರಿಯಾದ ವಿಳಾಸವೇ ಇಲ್ಲದ 20 ಲಕ್ಷ ಎಂಟ್ರಿಗಳನ್ನು ನಮ್ಮ ಡಾಟಾ ತಂಡ ಪತ್ತೆ ಹಚ್ಚಿದೆ. 30 ಕ್ಕಿಂತ ಕಡಿಮೆ ವಯಸ್ಸಿನ ಎಳೆಯ ಮತದಾರರ ಪೈಕಿ ಶೇ.25 ಭಾಗ ನೊಂದಾವಣಿಯಾಗದೆ ಹೊರಗುಳಿದಿದ್ದಾರೆ ಎಂದು ಬಿಕ್ಷಂ ಗುಜ್ಜ ಅವರ ಅಧ್ಯಯನ ಹೇಳುತ್ತಿದೆ. ಬೆಂಗಳೂರಿನಲ್ಲಿ 1.2 ಲಕ್ಷ ಹೊಸ ಮತದಾರರನ್ನು ನೊಂದಾವಣಿ ಮಾಡಿಕೊಂಡಿರುವುದರ ಕುರಿತು ಮೂಲ ಮಾಹಿತಿಯೇ ಲಭ್ಯವಿಲ್ಲ ಎಂದು ‘ದಿ ಹಿಂದು’ ವರದಿ ಮಾಡಿದೆ. ಇಡೀ ಭಾರತದಲ್ಲೇ ಅತಿಹೆಚ್ಚಿನ ಡಿಲೀಷನ್ ಕರ್ನಾಟಕದಲ್ಲಿ ಆಗಿದೆ. ಒಟ್ಟಿನಲ್ಲಿ SIR ದೋಷಗಳು ಕಣ್ಣಿಗೆ ರಾಚುವಂತಿವೆ.
ಈ ಅಕ್ರಮ ಪ್ರಕ್ರಿಯೆ ಕರ್ನಾಟಕದ ಮತದಾರರ ಪಟ್ಟಿಯನ್ನು ಮಾತ್ರವಲ್ಲ ಇಡೀ ದೇಶದ ಮತದಾರರ ಪಟ್ಟಿಯನ್ನು ವಿಕೃತಗೊಳಿಸಿದೆ. ಚುನಾವಣಾ ಆಯೋಗ ತನ್ನ ಹದ್ದುಮೀರಿ ನಡೆದುಕೊಂಡಿರುವುದು ಬಯಲಾಗಿದೆ. ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ದೇಶವ್ಯಾಪಿ ಹತ್ತಕ್ಕೂ ಹೆಚ್ಚು ಕೋಟಿ ಮತದಾರರು ಮತಪಟ್ಟಿಯಿಂದ ಹೊರದಬ್ಬಲ್ಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 37 ಲಕ್ಷ ಜನ ಅಪೀಲ್ ಸಲ್ಲಿಸಿದ್ದರೂ ಅವರ ಮತದಾನದ ಹಕ್ಕನ್ನು ನಿರಾಕರಿಸಿ ಚುನಾವಣೆ ನಡೆಸಲಾಗಿದೆ. SIR ಆದ ನಂತರ ಪ್ರತಿ ಚುನಾವಣೆಯ ಫಲಾನುಭವಿ ಬಿಜೆಪಿ ಪಕ್ಷ ಆಗಿರುವುದನ್ನೂ ತಾವು ಗಮನಿಸಬೇಕಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.
1. ಚುನಾವಣಾ ಆಯೋಗದ ಮೇಲೆ ಜನತೆಯಾದ ನಮಗೆ ಸಂಪೂರ್ಣ ವಿಶ್ವಾಸಹೋಗಿದೆ. ಇದರ ಕಾರ್ಯವೈಖರಿ ಜಾತಾಂತ್ರಿಕವಾಗಿಲ್ಲ ಪಾರದರ್ಶಕವಾಗಿಲ್ಲ ಉತ್ತರದಾಯಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಾವು ನಿಮ್ಮಲ್ಲಿ =ಳಿಕೊಳ್ಳುವುದೆಂದರೆ.
2. SIR ಪ್ರಕ್ರಿಯೆಯನ್ನು ಮತ್ತು ಅದರ ಮೂಲಕ ಅಂತಿಮಗೊಳಿಸಲಾದ ಮತದಾರರ ಪಟ್ಟಿಯನ್ನು ರದ್ದುಗೊಳಿಸಲು ತಾವು ಆದೇಶಿಸಬೇಕು.
3. ಇದಕ್ಕೆ ನೇರ ಹೊಣೆಗಾರರಾದ ಗ್ಯಾನೇಶ್ ಕುಮಾರ್ ಮತ್ತು ಇತರೆ ಚುನಾವಣಾ ಆಯುಕ್ತರು
ಇದನ್ನು ಓದಿದ್ದೀರಾ?ಚಿಕ್ಕಮಗಳೂರು | ನ. 29ಕ್ಕೆ ಬಂಜಾರ ಗುರುಪೀಠ ಹೊಸ ಆಡಳಿತ ಮಂಡಳಿ ರಚನೆಗೆ ಪದಗ್ರಹಣ ಕಾರ್ಯಕ್ರಮ; ಅಧ್ಯಕ್ಷ ಜಿ.ಆರ್ ಮಂಜುನಾಥನಾಯಕ
ಈ ಸಂದರ್ಭದಲ್ಲಿ ಗೌಸ್ ಮೋಹಿಯುದ್ದಿನ್, ಆಶಾ, ಮುನೀರ್, ಯುಸೋಫಾಜಿ, ಸುನೀಲ್, ಸಂದೀಪ್, ರಾಧಾ ಸುಂದ್ರೇಶ್, ಮುನ್ನ, ದಲಿತ, ರೈತ, ಕಾರ್ಮಿಕ, ಮಹಿಳಾ ಸಂಘಟನೆಯವರು ಉಪಸ್ಥಿತರಿದ್ದರು.



