ಹಾವೇರಿ | ಎಸ್ಐಆರ್ ಪಟ್ಟಿ ತಿರಸ್ಕರಿಸಿ, 2025ರ ಮತಪಟ್ಟಿ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ

Date:

“ಪ್ರಸಕ್ತ ಎಸ್ಐಆರ್ ಪಟ್ಟಿ ತಿರಸ್ಕರಿಸಿ, 2025ರ ಮತಪಟ್ಟಿಯನ್ನು ಪರಿಷ್ಕರಿಸಿ ಸ್ಥಳೀಯ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿಸಬೇಕು” ಎಂದು ಮುಖಂಡರು ಮನವಿ ಮಾಡಿದರು.

- Advertisement -

ಹಾವೇರಿ ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ಉಪ ತಹಶೀಲ್ದಾರರ ಮೂಲಕ ಗೌರವಾನ್ವಿತ ರಾಷ್ಟ್ರಪತಿದ್ರೌಪದಿ ಮುರ್ಮು ಅವರಿಗೆ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯುಪಿ ಚುನಾವಣೆ: ಆಡಳಿತ ಯಂತ್ರ, ಜಾತಿ ಸಮೀಕರಣ ಮತ್ತು...

2027ರ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯಲ್ಲಿನ ಲಿಂಗ ಅಂತರ, ಜಾತಿ ಸಮೀಕರಣ ಹಾಗೂ ಮೈತ್ರಿ ಪಕ್ಷಗಳ ಸೀಟು ಹಂಚಿಕೆಯ ಚೌಕಾಸಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ...

ಯುಪಿ ಚುನಾವಣೆ | ಯುದ್ಧಕ್ಕೆ ಮೊದಲೇ ಉಡುಗಿ ಹೋಯಿತೇ...

ಉತ್ತರ ಪ್ರದೇಶದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಿ ದೇಶದ ರಾಜಕಾರಣದಲ್ಲೇ ಸಂಚಲನ ಮೂಡಿಸಿತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಮೈತ್ರಿ. ಆದರೀಗ, 2027ರ ಉತ್ತರ ಪ್ರದೇಶ ವಿಧಾನಸಭಾ...

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ,...

ಮನವಿ ಸಲ್ಲಿಸಿದ ನಂತರ ಮುಖಂಡ ಬಸವರಾಜ ಪೂಜಾರ ಮಾತನಾಡಿ, “ಚುನಾವಣಾ ಆಯೋಗವು ತನ್ನ ಹದ್ದುಮೀರಿ ನಡೆದುಕೊಂಡು ಸರ್ವೋಚ್ಚ ನ್ಯಾಯಲದ ಕಟಕಟೆಯಲ್ಲಿ ಬಹಳ ಕೆಟ್ಟದಾಗಿ ಸಿಕ್ಕಿಹಾಕಿಕೊಂಡಿರುವುದು ಮಾತ್ರವಲ್ಲದೆ, ಪರೋಕ್ಷ ರೀತಿಯಲ್ಲಿ ತನ್ನ ಪ್ರಕ್ರಿಯೆ ದೋಷಪೂರಿತವಾದುದೆಂದು ಒಪ್ಪಿಕೊಂಡಿದೆ” ಎಂದು ಹೇಳಿದರು.

“ನವೆಂಬರ್ 6 ರಂದು ಇನ್ನೂ ಎಸ್ಐಆರ್ ಮುಂದುವರಿಯುತ್ತಿರುವ 7 ಹೊಸ ಕಾರ್ಯಸೂಚಿಯನ್ನು ಕಳಿಸಿ ಡಿಲೀಟ್ ಆದವರ ಪಟ್ಟಿಯನ್ನು ಪ್ರತಿ ಬೂತಿನಲ್ಲಿ ಪ್ರಕಟಿಸಿ, ಪ್ರತಿ ಮನೆಗೆ ಮಾಹಿತಿ ನೀಡಿ, ತಪ್ಪಾಗಿ ಡಿಲೀಟ್ ಮಾಡಲ್ಪಟ್ಟವರಿಂದ ಫಾರಂ 6ಅನ್ನು ತುಂಬಿಸಿಕೊಳ್ಳದೆ. ಮತ್ತೊಮ್ಮೆ ಎನ್ಯುಮುರೇಷನ್ ಫಾರಂ ಅನ್ನೇ ಕೊಟ್ಟು ಹಳೆ ಎಪಿಕ್ ಐಡಿಯಲ್ಲೇ ತೆಗೆದುಕೊಳ್ಳಿ, ಒಂದು ವೇಳೆ ಅವರು ಬೇರೆ ಕಡೆಗೆ ಶಿಫ್ಟ್ ಆಗಿದ್ದರೆ ಅವರಿಂದಲೂ ಎನ್ಯುಮುರೇಷನ್ ಫಾರಂ ಮತ್ತು ಹೊಸ ವಿಳಾಸದ ವಿವರ ಪಡೆದು ಅವರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಿ ಎಂದು ಹೇಳಿದೆ ಎಂದರು.

“ಎಸ್ಐಆರ್ ಮುಗಿದಿರುವ ರಾಜ್ಯಗಳಲ್ಲಿ ಎಸ್ಎಸ್ಆರ್ ನಡೆಸಲು ಆದೇಶಿಸಿದೆ. ಇದರ ಎಸ್ಐಆರ್ ಪ್ರಕ್ರಿಯೆಯಿಂದ ತಪ್ಪಾಗಿ ಡಿಲೀಟ್ ಆಗಿದ್ದಾರೆ, “ಈಗಾಗಲೇ ನೊಂದಾಯಿತರಾಗಿದ್ದ ಮತದಾರರಿಂದ ಮತ್ತೆ ಫಾರಂ 6 ಅನ್ನು ತುಂಬಿಸಿಕೊಂಡಿದ್ದು ತಪ್ಪು: “ಮನೆ ಶಿಫ್ಟ್ ಮಾಡಿಕೊಂಡವರನ್ನು ಡಿಲೀಟ್ ಮಾಡಿದ್ದು ತಪ್ಪು” ಎಂದು ಚುನಾವಣಾ ಆಯೋಗ ತಪ್ಪೋಪ್ಪಿಗೆ ಮಾಡಿಕೊಂಡಿದೆ. ಕೋರ್ಟಿನಲ್ಲಿ ಅನೇಕ ವಿಚಾರಗಳ ಕುರಿತು ವಿಚಾರಣೆ ನಡೆಯುತ್ತಿದೆ. ಇನ್ನೂ ಹೆಚ್ಚೆಚ್ಚು ಅಕ್ರಮಗಳನ್ನು ಅದು ಒಪ್ಪಿಕೊಳ್ಳಲೇಬೇಕಾಗುತ್ತದೆ” ಎಂದು ಹೇಳಿದರು.

“ಕರ್ನಾಟಕದಲ್ಲಿ ಅಂತಿಮ ಎಂದು ಪ್ರಕಟಗೊಂಡಿರುವ ಎಸ್ಐಆರ್ ಪಟ್ಟಿ ತರ್ಕಹೀನವಾಗಿದೆ ಮತ್ತು ಅನೇಕ ದೋಷಗಳಿಂದ ಕೂಡಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 18 ವರ್ಷ ದಾಟಿರುವ ವಯಸ್ಕರ ಜನಸಂಖ್ಯೆ 5.2 ಕೋಟಿ. ಹೀಗಿರುವಾಗ ಮತದಾರರ ಪಟ್ಟಿಯಲ್ಲಿ 4.5 ಕೋಟಿ ಜನರು ಮಾತ್ರ ಉಳಿಯಲು ಹೇಗೆ ಸಾಧ್ಯ? ಉಳಿದ 70 ಲಕ್ಷ ಜನರು ಏಕೆ ಮತದಾರರ ಪಟ್ಟಿಯಲ್ಲಿ ಇಲ್ಲ? ಬೆಂಗಳೂರು ವೇಗಗತಿಯಲ್ಲಿ ಬೆಳೆಯುತ್ತಿರುವಾಗ ಮತದಾರರ ಪಟ್ಟಿಯಲ್ಲಿ ಅರ್ಧಕ್ಕರ್ಧ ಜನರು ಕಣ್ಮರೆಯಾಗಲು ಹೇಗೆ ಸಾಧ್ಯ? ಮತ ಕಾವಲು ಸಮಿತಿ” ಪರಿಶೋಧನೆ ನಡೆಸಿದ ಎಲ್ಲಾ 73 ಬೂತ್ ಗಳಲ್ಲೂ ತಪ್ಪಾಗಿ ಡಿಲೀಟ್ ಆದ ನೂರಾರು ಉದಾಹರಣೆಗಳು ಸಿಕ್ಕಿರುವಾಗ ಇಡೀ ರಾಜ್ಯದ 54 ಸಾವಿರ ಬೂತುಗಳಲ್ಲಿ ಡಿಲೀಟ್ ಆದ ಎಷ್ಟು ಜನ ಇರಬಹುದು? ಉದಾಹರಣೆಗೆ ಬಹುಭಾಷಾ ನಟರಾದ ಪ್ರಕಾಶ್ ರಾಜ್ ರೀತಿ ತಪ್ಪಾದ ಕಾರಣಕ್ಕೆ ಡಿಲೀಟ್ ಮಾಡಲ್ಪಟ್ಟ ಜೀವಂತ ಉದಾಹರಣೆ ಕಣ್ಣ ಮುಂದೆಯೇ ಇದ್ದರೂ ಅವರನ್ನು ಸಕ್ರಮ ರೀತಿಯಲ್ಲಿ ನೊಂದಾಯಿಸಿಕೊಳ್ಳದೆ, ಇಂತಹವರನ್ನು ಆಯೋಗವು ಹೊರಗಿಟ್ಟು ಏತಕ್ಕೆ ಹಟ ಸಾಧಿಸುತ್ತಿದೆ? ಈ ಯಾವ ಪ್ರಶ್ನೆಗಳಿಗೂ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ” ಎಂದರು.

“ಎಸ್ಐಆರ್ ಅನ್ನು ದೇಶದ ಎಲ್ಲಾ ನಾಗರೀಕ ಸಂಘಟನೆಗಳು ಸಾರಾಸಗಟು ತಿರಸ್ಕರಿಸಿವೆ. ಈಗ ‘ಎಸ್ಐಆರ್ ವಿರುದ್ಧ ಜನತೆ’ ಎಂಬ ಅಖಿಲ ಭಾರತ ಮಟ್ಟದ ವೇದಿಕೆ ರೂಪಿಸಿಕೊಂಡು ‘ಗ್ಯಾನೇಶ್ ಕುಮಾರ್ ರಾಜಿನಾಮೆಗಾಗಿ ಮತ್ತು ಎಸ್ಐಆರ್ ರದ್ದತಿಗಾಗಿ ನಿರಂತರ ಆಂದೋಲನಕ್ಕೆ ಇಳಿದಿವೆ. ಬಿಜೆಪಿ ಹೊರತುಪಡಿಸಿದಂತೆ ಮಿಕ್ಕೆಲ್ಲಾ ಪಕ್ಷಗಳು ಎಸ್ಐಆರ್ ಅನ್ನು ತಿರಸ್ಕರಿಸಿವೆ. ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಹೊರಗೂ ಮತ್ತು ಓಳಗೂ ಈ ಹೋರಾಟ ಮತ್ತಷ್ಟು ಬಿಸಿ ಏರಲಿದೆ” ಎಂದರು.

“ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು 2025ರ ಮತಪಟ್ಟಿಯನ್ನು ಸಾರ್ವಜನಿಕ ಪರಿಶೀಲನೆಯ ಮೂಲಕ ಪರಿಷ್ಕರಿಸಿ ಸ್ಥಳೀಯ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಹಾಗೂ ಎಸ್ಐಆರ್ ರದ್ದುಪಡಿಸಲು ಸೂಕ್ತ ಕ್ರಮವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಡಿವೈಎಫ್ಐ ಅಖಿಲ ಭಾರತ ಕೆಂದ್ರ ಸಮಿತಿ ಸದಸ್ಯ ಬಸವರಾಜ ಪೂಜಾರ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ ನಗವತ, ರೈತ ಸಂಘದ ಶಹರ ಘಟಕದ ಅಧ್ಯಕ್ಷ ಸುರೇಶ ಛಲವಾದಿ, ಅಲೆಮಾರಿ ಸಂಘಟನೆ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಬಹುಜನ ಸಮಾಜವಾದಿ ಪಕ್ಷದ ಮುಖಂಡ ಎಂ.ಕೆ ಮಕಬುಲ್, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರ ಸೇರಿದಂತೆ ಇತರರು ಇದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ |ಯುವಜನರು ರಂಗಭೂಮಿಯಿಂದ ದೂರವಾಗುತ್ತಿರುವುದು ವಿಷಾದನೀಯ: ರಜನಿ ಗರುಡ

ಕನ್ನಡ ಭಾಷೆಯ ಘನತೆಯನ್ನು ಎತ್ತಿಹಿಡಿಯುವಲ್ಲಿ ರಂಗಭೂಮಿಯ ಕೊಡುಗೆ ಮಹತ್ವದ್ದಾಗಿದೆ. ಕನ್ನಡ ಕಟ್ಟುವ...

ಬೆಳಗಾವಿ |ಬೇಸಿಗೆಯ ನೀರಿನ ಸಂಕಷ್ಟ ಎದುರಿಸಲು ಮುನ್ನೆಚ್ಚರಿಕೆ: ಕೃಷ್ಣಾ ತೀರದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಹೆಚ್ಚಳ

ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕೃಷ್ಣಾ ನದಿ...

ವಿಜಯಪುರ |ಬೇಸಿಗೆಯ ನೀರಿನ ಸಮಸ್ಯೆ ತಡೆಗೆ ಈಗಿನಿಂದಲೇ ಮುಂಜಾಗ್ರತೆ ;ಮೇಯರ್ ಕರಡಿ

ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ನದಿಗಳು ಹಾಗೂ ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು,...

ವಿಜಯಪುರ |ಇತಿಹಾಸದ ಸ್ಮಾರಕಗಳ ಸಂರಕ್ಷಣೆಗೆ ಟಾಂಗಾ ಜಾಥಾ: ವಿಶ್ವ ಪಾರಂಪರಿಕ ಸಪ್ತಾಹ ಆಚರಣೆ

ವಿಶ್ವ ಪರಂಪರೆಯ ಮಹತ್ವ ಸಾರುವ ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಸ್ವಚ್ಛತೆ...