ದೆಹಲಿಯಲ್ಲಿ ಶನಿವಾರ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು, ಯುವಕ-ಯುವತಿಯರ ಮೇಲೆ ನಡೆದ ಪೊಲೀಸ್ ದಬ್ಬಾಳಿಕೆ ಮತ್ತು ಹಿಂಸಾಚಾರವನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. “ಅಮಿತ್ ಶಾ ಅವರ ನೇತೃತ್ವದ ದೆಹಲಿ ಪೊಲೀಸರು ಯುವಜನರ ವಿರುದ್ಧ ದೌರ್ಜನ್ಯಕ್ಕಿಳಿದಿದ್ದಾರೆ. ಯುವಕ-ಯುವತಿಯರ ಮೇಲೆ ಹಿಂಸಾಚಾರ ಎಸೆಗಲು ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರಿಗೆ ದೆಹಲಿ ಪೊಲೀಸರು ಮುಕ್ತ ಅವಕಾಶ ಮತ್ತು ಬೆಂಬಲ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಯುವತಿಯೊಬ್ಬರ ಮೇಲೆ ಸಂಘಪರಿವಾರದ ಗೂಂಡಾಗಳು ಹಲ್ಲೆ ನಡೆಸುತ್ತಿರುವ ಚಿತ್ರವೊಂದರನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ದಮನಕಾರಿ ನೀತಿಗಳು ಎಷ್ಟೇ ಹೆಚ್ಚಾದರೂ, ದೇಶದ ಯುವಜನತೆ ಮತ್ತು ಜೆನ್-ಜಿ ಜನರ ಆಕ್ರೋಶ ಮತ್ತಷ್ಟು ಉಲ್ಬಣಗೊಳ್ಳಲಿದೆ” ಎಂದು ಎಚ್ಚರಿಸಿದ್ದಾರೆ.
“ಸರ್ಕಾರದ ಈ ಕೃತ್ಯಗಳಿಗೆ ಯುವಜನರು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಹಿಂದೆ ಸರಿಯುವುದಿಲ್ಲ. ಸರ್ಕಾರದ ಈ ದಬ್ಬಾಳಿಕೆಯನ್ನು ವಿರೋಧಿಸಿ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ಸೋಮವಾರ (ಅ.12), ಕಾಂಗ್ರೆಸ್ ಮತ್ತು ಇಡೀ ‘ಇಂಡಿಯಾ’ ಮೈತ್ರಿಕೂಟ ಹಾಗೂ ದೇಶದ ಯುವಜನರು ದೊಡ್ಡ ಸಂಖ್ಯೆಯಲ್ಲಿ ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ” ಎಂದು ಘೋಷಿಸಿದ್ದಾರೆ.
“ದೇಶಾದ್ಯಂತ ಈ ಧ್ವನಿ ಎಂದಿಗಿಂತಲೂ ಜೋರಾಗಿ ಮೊಳಗಲಿದೆ” ಎಂದು ಅವರು ತಿಳಿಸಿದ್ದಾರೆ.
अमित शाह की दिल्ली पुलिस खुद तो गुंडागर्दी पर उतर ही आई – RSS-BJP के असली गुंडों को भी महिलाओं और युवाओं पर हिंसा करने की खुली छूट और बढ़ावा दे रही है। जैसा मैंने कहा था, Mogambo Modi और उसकी सरकार जितना दबाएगी, Gen Z और छात्रों का गुस्सा उतना ही बढ़ेगा। सोमवार, 12 अक्टूबर को कांग्रेस, पूरा INDIA गठबंधन और देश के युवा बड़ी संख्या में एक बार फिर सड़कों पर उतरेंगे। और इस बार भी आवाज़ पूरे देश में गूंजेगी – पहले से कहीं ज़्यादा। @AmitShah, जितनी पुलिस लानी है, 10 हज़ार, 20 हज़ार, 40 हज़ार, ले आइए। BJP-RSS के जितने गुंडे बुलाने हैं, बुला लीजिए। हम डरने वाले नहीं हैं। पीछे हटने वाले नहीं हैं। ये लड़ाई अब रुकने वाली नहीं है! सोमवार को हम मुख्य न्यायाधीश से भी मिलेंगे और मांग करेंगे कि जब दिल्ली की सड़कों पर संविधान को तार-तार किया जा रहा है और लोकतंत्र को कुचला जा रहा है, तब कानून के संरक्षक आंखों पर पट्टी डाल कर नहीं बैठ सकते। संविधान की धज्जियां उड़ेंगी और हम चुप बैठेंगे? ऐसा हरगिज़ नहीं होगा। जवाबदेही तय करवाकर रहेंगे!
— Rahul Gandhi (@RahulGandhi) October 10, 2026
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, “ನಿಮಗೆ ಬೇಕಾದಷ್ಟು ಪೊಲೀಸರನ್ನು ಕರೆಸಿ – 10 ಸಾವಿರ, 20 ಸಾವಿರ ಅಥವಾ 40 ಸಾವಿರ, ಹಾಗೆಯೇ ಬಿಜೆಪಿಯ ಎಷ್ಟೆಷ್ಟು ಗೂಂಡಾಗಳನ್ನು ಕರೆಯಬೇಕೋ ಕರೆಯಿರಿ, ನಾವು ಯಾವುದಕ್ಕೂ ಜಗ್ಗುವುದಿಲ್ಲ” ಎಂದು ಸವಾಲು ಹಾಕಿದ್ದಾರೆ.
ಇದಲ್ಲದೆ, “ದೆಹಲಿ ಬೀದಿಗಳಲ್ಲಿ ಸಂವಿಧಾನವನ್ನು ಹೀಗೆ ಬಹಿರಂಗವಾಗಿ ಹರಿದುಹಾಕಲಾಗುತ್ತಿದ್ದರೆ, ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದ್ದರೆ, ಕಾನೂನಿನ ರಕ್ಷಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಸೋಮವಾರದಂದು ‘ಇಂಡಿಯಾ’ ಮೈತ್ರಿಕೂಟದ ನಾಯಕರು ದೇಶದ ಮುಖ್ಯ ನ್ಯಾಯಮೂತಿದಳನ್ನು (CJI) ಭೇಟಿ ಮಾಡಲಿದ್ದಾರೆ. ಸಂವಿಧಾನದ ಧ್ವಜಸ್ತಂಭ ಮುರಿದ, ಯುವಜನರ ಮೇಲಿನ ಕ್ರೌರ್ಯಕ್ಕೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯನ್ನು ಖಂಡಿತವಾಗಿ ನಿಗದಿಪಡಿಸುತ್ತೇವೆ” ಎಚ್ಚರಿಕೆ ನೀಡಿದ್ದಾರೆ.



