ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಮತ್ತೊಂದು ಆಘಾತಕಾರಿ ಮತ್ತು ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಸುಮಾರು 37 ಮಂದಿ ಜೀವಂತ ವ್ಯಕ್ತಿಗಳ ಹೆಸರಿನಲ್ಲಿ ‘ನಾವು ಸತ್ತಿದ್ದೇವೆ. ನಮ್ಮ ಹೆಸರನ್ನು ಮತಪಟ್ಟಿಯಿಂದ ಅಳಿಸಿಹಾಕಿ’ ಎಂದು. ಮಾತ್ರವಲ್ಲದೆ, ಸುಮಾರು 334 ಜೋಡಿಗಳ (668 ಮಂದಿ) ಹೆಸರಿನಲ್ಲಿ ಪರಸ್ಪರರ ವಿರುದ್ಧ ಸತ್ತಿದ್ದಾರೆಂದು ಘೋಷಿಸಿ, ಅವರ ಹೆಸರು ಡಿಲೀಟ್ ಮಾಡಲು ಫಾರ್ಮ್-7 ಸಲ್ಲಿಸಲಾಗಿದೆ. ಇದು, ಚುನಾವಣಾ ಆಯೋಗದ ದೋಷಪೂರಿತ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ.
ಮ್ಯಾಂಡೇಟ್ ಅನಾಲಿಟಿಕ್ಸ್ ಅಂಡ್ ಕನ್ಸಲ್ಟಿಂಗ್ (MAC Insights) ದತ್ತಾಂಶದ ಆಧಾರದ ‘ದಿ ಹಿಂದು’ ಪತ್ರಿಕೆಯು ನಡೆಸಿರುವ ಗಂಭೀರ ವಿಶ್ಲೇಷಣೆಯಲ್ಲಿ ಆಯೋಗದ ಈ ಕೃತ್ಯ ಬೆಳಕಿಗೆ ಬಂದಿದೆ. ‘ತಮ್ಮದೇ ಹೆಸರಿನಲ್ಲಿ ತಾವು ಸತ್ತಿದ್ದೇವೆಂದೂ ಮತ್ತು ತಮ್ಮ ಹೆಸರನ್ನು ಅಳಿಸುವಂತೆ ಫಾರ್ಮ್-7 ಸಲ್ಲಿಸಿದ್ದೇವೆ’ ಎಂಬುದು ತಮಗೇ ಗೊತ್ತಿಲ್ಲವೆಂದು ಯಾರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತೋ ಆ ಮತದಾರರು ಹೇಳಿದ್ದಾರೆ. ‘ನಾವು ಸತ್ತಿದ್ದೇವೆಂದು ನಾವೇ ಅರ್ಜಿಸಲ್ಲಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ. ಅಂದರೆ, ದುಷ್ಟರಗುಂಪು ಉದ್ದೇಶಪೂರ್ವಕವಾಗಿ, ಆ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಕ್ರಮವಾಗಿ ಅಳಿಸಿಹಾಕಲು ಸಂಚುರೂಪಿಸಿದೆ ಎಂಬುದು ಬಯಲಾಗಿದೆ.
ಅಂತೆಯೇ, ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಟ್ಟು 334 ಜೋಡಿಗಳು ಅಂದರೆ 668 ಜನರು ಪರಸ್ಪರರ ವಿರುದ್ಧವೇ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿ, ತಾವು ಸತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅಂದರೆ ಒಬ್ಬ ವ್ಯಕ್ತಿಯು ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ಅರ್ಜಿ ಸಲ್ಲಿಸಿದರೆ, ಕೆಲವೇ ದಿನಗಳಲ್ಲಿ ಆ ಮತ್ತೊಬ್ಬ ವ್ಯಕ್ತಿಯು ಮೊದಲ ವ್ಯಕ್ತಿ ಮೃತಪಟ್ಟಿರುವುದಾಗಿ ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ. ಈ ವಿಚಿತ್ರ ಪ್ರಕರಣಗಳಲ್ಲಿ ಬೆಳಗಾವಿ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಅಂದರೆ 160 ಪ್ರಕರಣಗಳು ವರದಿಯಾಗಿದ್ದರೆ, ಕಲಬುರಗಿಯಲ್ಲಿ 80 ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ರಾಯಬಾಗ ಮತ್ತು ನಿಪ್ಪಾಣಿ ಕ್ಷೇತ್ರಗಳಲ್ಲಿ ಗಂಗೂಬಾಯಿ ವಡ್ಡರ್ ಮತ್ತು ರುಕ್ಮಿಣಿ ವಡ್ಡರ್, ಹಾಗೆಯೇ ಪ್ರಭಾಕರ್ ರಂಗ ಮಲಗೆ ಮತ್ತು ಮಲನ್ ಮಲಗೆ ಮುಂತಾದವರು ಪರಸ್ಪರರು ಸತ್ತಿರುವುದಾಗಿ ಫಾರ್ಮ್ ಸಲ್ಲಿಸಿರುವುದು ದಾಖಲೆಗಳಿಂದ ದೃಢಪಟ್ಟಿದೆ.
ಆದರೆ, ಇವರೆಲ್ಲರೂ ‘ತಾವು ಯಾವುದೇ ಅರ್ಜಿ ಸಲ್ಲಿಸಿಲ್ಲ. ನಮ್ಮ ಹೆಸರಿನಲ್ಲಿ ಯಾರೋ ನಕಲಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ ಕುಸಿಯುತ್ತಿರುವ ವಿಶ್ವಾಸಾರ್ಹತೆ
ಇನ್ನು, ಮಾಗಡಿ, ಸಂಡೂರು ಮತ್ತು ಬ್ಯಾಟರಾಯನಪುರ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುಂಚೆಯೇ ಅಂದರೆ ಜೂನ್ 30ಕ್ಕೂ ಮೊದಲೇ ಹೆಚ್ಚಿನ ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬ್ಯಾಟರಾಯನಪುರದಲ್ಲಿ ಸುಧಾ ಕೆ.ಎನ್. ಎಂಬುವವರ ಹೆಸರು ಫಾರ್ಮ್-7 ಸಲ್ಲಿಸಿದವರ ಹೆಸರಿನಲ್ಲೂ ಮತ್ತು ಅಳಿಸಲ್ಪಡುವವರ ಹೆಸರಿನಲ್ಲೂ ಏಕಕಾಲಕ್ಕೆ ನಮೂದಾಗಿರುವುದು ಅಚ್ಚರಿ ಮೂಡಿಸಿದೆ.
ಈ ಎಲ್ಲ ಪ್ರಮಾದಗಳಿಗೆ ಸಾಫ್ಟ್‌ವೇರ್ ದೋಷಗಳು ಕಾರಣವೆಂದು ಹಿರಿಯ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದೆರೆ, ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಈ ಬಗ್ಗೆ ಯಾವುದೇ ಸ್ಪಷ್ಟತೆಯೇ ಇಲ್ಲ. ಇದು ಚುನಾವಣಾ ಆಡಳಿತದ ಲೋಪಗಳನ್ನು ಎತ್ತಿ ತೋರಿಸುತ್ತದೆ.
ಚುನಾವಣಾ ಆಯೋಗದ ಈ ದೋಷಪೂರಿತ ಮತ್ತು ಅವೈಜ್ಞಾನಿಕ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. “ಇದು ಸಂಪೂರ್ಣವಾಗಿ ‘ಗ್ಯಾನು’ (ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್) ಅವರ ವ್ಯವಸ್ಥಿತ ‘ಮತ ಕಳ್ಳತನ’ದ ಆಟವಾಗಿದೆ. ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನೇ ವ್ಯವಸ್ಥಿತವಾಗಿ ಮತ ಕಳ್ಳತನ ನಡೆಯುವ ರೀತಿಯಲ್ಲೇ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ಯಾನು ಒಟ್ಟಾಗಿ ಈ ಸಂಚನ್ನು ನಡೆಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕನ ಮತದಾನದ ಮೂಲಭೂತ ಹಕ್ಕನ್ನೇ ಗುರಿಯಾಗಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
"मैं मर गया हूं, मेरा नाम वोटर लिस्ट से काट दो" • कर्नाटक में SIR के बीच ऐसे 37 लोग मिले हैं, जो खुद को मृत बताकर अपना नाम वोटर लिस्ट से कटवा रहे हैं। • खास बात है कि इन 37 लोगों को भी पता नहीं कि वो Form-7 भरकर खुद का नाम कटवा रहे हैं। • इतना ही नहीं – 334 जोड़े एक दूसरे को मृत बताकर वोटर लिस्ट से नाम कटवा रहे हैं। • मतलब एक व्यक्ति दूसरे को मरा बताकर फॉर्म भर रहा है, फिर वही दूसरा व्यक्ति पहले वाले को मरा हुआ बताकर फॉर्म भर रहा है। ये है ज्ञानू का ‘वोट चोरी’ का खेल… SIR की पूरी प्रक्रिया ही इस तरह डिजाइन की गई, जिससे वोट चोरी की जा सके। पूरी प्लानिंग मोदी और ज्ञानू ने मिलकर की है और निशाने पर आपका वोट का अधिकार है। मोदी और ज्ञानू मिलकर देश में लोकतंत्र खत्म करने में लगे हैं, लेकिन इनके मंसूबे कामयाब नहीं होंगे। देश की जनता सब जान चुकी है, अब हिसाब देने का टाइम आ गया है।
— Congress (@INCIndia) October 19, 2026
“ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಂತ್ಯಗೊಳಿಸಲು ಮೋದಿ ಮತ್ತು ಗ್ಯಾನು ಜೋಡಿಯು ಒಟ್ಟಾಗಿ ಕೆಲಸ ಮಾಡುತ್ತಿದೆ. ಆದರೆ, ಅವರ ಯಾವುದೇ ದುರುದ್ದೇಶದ ಪ್ರಯತ್ನಗಳು ಯಶಸ್ವಿಯಾಗಲು ಬಿಡುವುದಿಲ್ಲ. ದೇಶದ ಜನತೆಗೆ ಎಲ್ಲವೂ ಈಗಾಗಲೇ ತಿಳಿದಿದ್ದು, ಈ ಎಲ್ಲ ಅಕ್ರಮಗಳಿಗೆ ತಕ್ಕ ಪಾಠ ಕಲಿಸಲು ಮತ್ತು ಲೆಕ್ಕ ಚುಕ್ತಾ ಮಾಡಲು ಸಕಾಲ ಸನ್ನಿಹಿತವಾಗಿದೆ” ಎಂದು ಕಾಂಗ್ರೆಸ್ ಹೇಳಿದೆ.




