ಮಾನವ ಕಳ್ಳಸಾಗಣೆ ವಿರುದ್ಧ ಸೆಣಸಲು ಜಾಗೃತಿಯೇ ಅಸ್ತ್ರ!

Date:

ILO ವರದಿಯ ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ಐದು ಕೋಟಿಗೂ ಹೆಚ್ಚು ಜನರು ಆಧುನಿಕ ದಾಸ್ಯ ಮತ್ತು ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಅತಿಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಗಂಭೀರ ಸಂಗತಿ.

- Advertisement -

ಮನುಷ್ಯರನ್ನ ಬಲವಂತ, ಮೋಸ, ಬೆದರಿಕೆಯಿಂದ ಅಥವಾ ಅವರ ಆರ್ಥಿಕ-ಸಾಮಾಜಿಕ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಶೋಷಣೆಗೆ ಒಳಪಡಿಸುವ ಸಂಘಟಿತ ಅಪರಾಧ ಕೃತ್ಯವೇ ಮಾನವ ಕಳ್ಳಸಾಗಾಣೆ. ಪ್ರತಿ ವರ್ಷ ಜನವರಿ 11ರಂದು ಆಚರಿಸಲಾಗುವ ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನವು, ಪ್ರಪಂಚದಾದ್ಯಂತ ಮಾನವ ಜೀವನ, ಕುಟುಂಬ ಮತ್ತು ಸಮುದಾಯಗಳ ಮೇಲೆ ಶಾಶ್ವತ ಹಾನಿಯುಂಟು ಮಾಡುವ ಅಪರಾಧದ ಬಗ್ಗೆ ಬೆಳಕು ಚೆಲ್ಲುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಉದ್ಯೋಗ, ಉತ್ತಮ ಜೀವನ, ಮದುವೆಗಳಂತಹ ಆಮಿಷ ಒಡ್ಡಿ ಅಮಾಯಕರನ್ನು ಊರು ಬಿಡಿಸಿ ದೂರಕ್ಕೆ ಕರೆದೊಯ್ದು, ಬಳಿಕ ಲೈಂಗಿಕ ಶೋಷಣೆ, ಬಲವಂತದ ಕೆಲಸ, ದಾಸ್ಯ, ಭಿಕ್ಷಾಟನೆ ಅಥವಾ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಬಲಿಪಶುಗಳಿಗೆ ತಮ್ಮ ಸ್ಥಿತಿಯಿಂದ ಹೊರಬರಲು ಅವಕಾಶವಿಲ್ಲದೆಯೇ ಭಯ ಮತ್ತು ಹಿಂಸೆಯಿಂದಲೇ ಕಾಲ ತಳ್ಳುವ ಪರಿಸ್ಥಿತಿ ಇರುತ್ತದೆ.

ಮಾನವ ಕಳ್ಳಸಾಗಣೆ ಎಂದರೆ ವ್ಯಕ್ತಿಗಳನ್ನು ದೇಶಗಳ ಗಡಿ ದಾಟಿಸಿ ಕರೆದೊಯ್ಯಲೇಬೇಕು ಎಂಬ ನಿಯಮವಿಲ್ಲ. ವ್ಯಕ್ತಿಯ ಚಲನೆಯೇ ಮಾನವ ಕಳ್ಳಸಾಗಣೆಯ ಪ್ರಮುಖ ಅಂಶ. ಇದು ದೇಶದ ಒಳಗೆ ಅಥವಾ ಒಂದು ಸಮುದಾಯದೊಳಗೂ ಸಂಭವಿಸಬಹುದು.

ಜನರು ಮಾನವ ಕಳ್ಳಸಾಗಣೆಗೆ ಹೇಗೆ ಒಳಗಾಗುತ್ತಾರೆ?
ವ್ಯಕ್ತಿಯೊಬ್ಬ ಕಳ್ಳಸಾಗಣೆಗೆ ಬಲಿಯಾಗಲು ಹಲವು ಕಾರಣಗಳಿರುತ್ತವೆ. ಕೆಲವರು ಅಪಹರಣಕ್ಕೊಳಗಾಗಬಹುದು ಅಥವಾ ಜೀವ ಬೆದರಿಕೆಗೆ ಒಳಗಾಗಬಹುದು. ಕೆಲವರು ದೌರ್ಜನ್ಯದಿಂದ ಅಥವಾ ಬಡತನದಿಂದ ಪಾರಾಗಲು ಯತ್ನಿಸುವ ಸಂದರ್ಭದಲ್ಲಿ ಈ ಜಾಲಗಳಿಗೆ ಸಿಲುಕಬಹುದು. ಕೆಲವರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು, ತಮ್ಮ ಕುಟುಂಬವನ್ನು ಪೋಷಿಸಿಕೊಳ್ಳಲು ಉತ್ತಮ ಅವಕಾಶಗಳ ಹುಡುಕಾಟದಲ್ಲಿರುವಾಗ ಈ ಮೋಸದ ಜಾಲಕ್ಕೆ ಬಲಿಯಾಗುತ್ತಾರೆ.

12h

ಸಾಲ ಪಡೆದು ಬಂಧನವಾಗುವ ಸ್ಥಿತಿ
ಸಾಲವನ್ನು ಮಾನವ ಕಳ್ಳಸಾಗಣೆಯಲ್ಲೊಂದು ಪ್ರಮುಖ ಬಲೆಯಾಗಿ ಬಳಸಲಾಗುತ್ತದೆ. ಸಾಲಬಂಧನ (Debt Bondage) ಅನೇಕ ಅಸಹಾಯಕ ಜನರಿಗೆ ಇಂದಿಗೂ ಗಂಭೀರ ಸಮಸ್ಯೆಯಾಗಿದೆ. ಜನ ಬಡತನ ಅಥವಾ ಕೆಲ ಮಾನಸಿಕ ಹಿಂಸೆಗಳಿಂದ ತಪ್ಪಿಸಿಕೊಳ್ಳಲು ಕೈಗೆಟುಕುವ ಸುಲಭೋಪಾಯದ ಮೊರೆ ಹೋಗುತ್ತಾರೆ. ಅಸ್ಥಿರ ಉದ್ಯೋಗದ ಆಫರ್‌ಗಳನ್ನು ಒಪ್ಪಿಕೊಳ್ಳುತ್ತಾರೆ. ಅಪಾಯಕಾರಿ ವಲಸೆ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇದಕ್ಕಾಗಿ ಅವರು ಮುಂಗಡವಾಗಿ ತಮ್ಮದೇ ಕಳ್ಳಸಾಗಣೆದಾರರಿಂದ ಸಾಲ ಪಡೆಯುತ್ತಾರೆ.

ಗಮ್ಯಸ್ಥಾನ ತಲುಪಿದ ಬಳಿಕ, ಭರವಸೆ ನೀಡಿದ ಕೆಲಸವೇ ಇಲ್ಲದಿರುವುದು ಅಥವಾ ಕೆಲಸದ ಪರಿಸ್ಥಿತಿಗಳು ಸಂಪೂರ್ಣ ಭಿನ್ನವಾಗಿರುವುದು ಗೊತ್ತಾಗುತ್ತದೆ. ಅಷ್ಟೊತ್ತಿಗಾಗಲೇ ಅವರು ಸಂಪೂರ್ಣವಾಗಿ ಕಳ್ಳಸಾಗಣೆದಾರರ ಮೇಲೆ ಅವಲಂಬಿತರಾಗಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಬಲಿಪಶುಗಳ ಗುರುತಿನ ದಾಖಲೆಗಳನ್ನು ಕಸಿದುಕೊಳ್ಳಲಾಗುತ್ತದೆ. ಸಾಲ ತೀರಿಸುವವರೆಗೆ ಬಲವಂತವಾಗಿ ಕೆಲಸ ಮಾಡಿಸುವ ಮೂಲಕ ಅವರ ಜೀವನದ ಮೇಲೆ ನೂರರಷ್ಟು ಹಿಡಿತ ಸಾಧಿಸಿರುತ್ತಾರೆ ಮಾನವ ಕಳ್ಳರು.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯ ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ಐದು ಕೋಟಿಗೂ ಹೆಚ್ಚು ಜನರು ಆಧುನಿಕ ದಾಸ್ಯ ಮತ್ತು ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಅತಿಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಗಂಭೀರ ಸಂಗತಿ. ಉತ್ತಮ ಉದ್ಯೋಗ, ಶಿಕ್ಷಣ, ಮದುವೆ ಅಥವಾ ವಿಲಾಸೀ ಜೀವನದ ಆಮಿಷ ನೀಡಿ ಅನೇಕರು ಈ ಜಾಲಗಳಿಗೆ ಸಿಲುಕುತ್ತಾರೆ.

ಭಾರತದಲ್ಲಿಯೂ ಮಾನವ ಕಳ್ಳಸಾಗಣೆ ಒಂದು ದೊಡ್ಡ ಸಾಮಾಜಿಕ ಕಂಟಕವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಗಳು ಪ್ರತಿವರ್ಷ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗುತ್ತಿರುವುದನ್ನು ಸೂಚಿಸುತ್ತಲೇ ಇವೆ. ಈ ಕಾಣೆಯಾದವರಲ್ಲಿ ಗಣನೀಯ ಸಂಖ್ಯೆಯವರು ಮಾನವ ಕಳ್ಳಸಾಗಣೆ ಜಾಲಗಳಿಗೆ ಬಲಿಯಾಗುತ್ತಿರುವ ಶಂಕೆ ಇದೆ. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ, ಲಿಂಗ ಅಸಮಾನತೆ ಮತ್ತು ವಲಸೆ ಜೀವನ ಈ ಅಪರಾಧಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿವೆ. ಕರ್ನಾಟಕದಲ್ಲೂ ಮಾನವ ಕಳ್ಳಸಾಗಣೆ ಪ್ರಕರಣಗಳು ಕಂಡುಬರುತ್ತಿವೆ. ವಿಶೇಷವಾಗಿ ವಲಸೆ ಕಾರ್ಮಿಕರು, ಬಾಲಕಿಯರು, ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮಹಿಳೆಯರು ಹೆಚ್ಚಿನ ಅಪಾಯದಲ್ಲಿದ್ದಾರೆ. ಮಹಾನಗರಗಳಲ್ಲಷ್ಟೇ ಅಲ್ಲದೆ, ಗಡಿ ಜಿಲ್ಲೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಜಾಲಗಳು ಸಕ್ರಿಯವಾಗಿರುವುದು ಅಧಿಕಾರಿಗಳಿಗೂ ತಿಳಿದ ಸಂಗತಿಯೇ. ಆದರೆ ಮಾಡುವುದೇನು?

ಲಭ್ಯವಿರುವ ಮಾಹಿತಿ ಪ್ರಕಾರ, ಮಾನವ ಕಳ್ಳಸಾಗಣೆಗೆ ಒಳಗಾದವರಲ್ಲಿ ಶೇ.50ರಷ್ಟು ಜನರನ್ನು ಲೈಂಗಿಕ ಶೋಷಣೆಗೆ ಒಳಪಡಿಸಲಾಗಿದ್ದು, ಶೇ.38ರಷ್ಟು ಜನರನ್ನು ಬಲವಂತದ ಕಾರ್ಮಿಕ ಕೆಲಸಗಳಿಗೆ ಬಳಸಲಾಗುತ್ತಿದೆ. ಲೈಂಗಿಕ ಶೋಷಣೆಗೆ ಒಳಗಾಗುವವರಲ್ಲಿ ಶೇ.67ರಷ್ಟು ಮಹಿಳೆಯರೇ ಇದ್ದಾರೆ, ಇದು ಈ ಅಪರಾಧದಲ್ಲಿ ಮಹಿಳೆಯರು ಹೆಚ್ಚು ಅಸುರಕ್ಷಿತರಾಗಿದ್ದಾರೆ ಎಂಬ ಅಂಶವನ್ನು ಹೊರಗಿಡುತ್ತದೆ. ಇನ್ನೊಂದೆಡೆ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ತನಿಖೆಗೊಳಗಾದ ಅಥವಾ ಬಂಧಿತರಾದವರಲ್ಲಿ ಶೇ.67ರಷ್ಟು ಪುರುಷರಿದ್ದು, ಶೇ.33ರಷ್ಟು ಮಹಿಳೆಯರಿದ್ದಾರೆ. ಇನ್ನು ಕಳ್ಳಸಾಗಣೆಗೆ ಒಳಗಾದವರಲ್ಲಿ ಶೇ.46ರಷ್ಟು ಮಹಿಳೆಯರು, ಶೇ.34ರಷ್ಟು ಮಕ್ಕಳು ಮತ್ತು ಶೇ.20ರಷ್ಟು ಪುರುಷರಿದ್ದಾರೆ. ಈ ಅಂಕಿಅಂಶಗಳು ಮಾನವ ಕಳ್ಳಸಾಗಣೆಯ ಭೂತ ಮಹಿಳೆಯರು, ಪುರುಷರು, ಮಕ್ಕಳು ಯಾರನ್ನೂ ಬಿಟ್ಟಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

image 2026 01 11T180432.885

ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಲು ಭಾರತದಲ್ಲಿ ಹಲವು ಕಾನೂನುಗಳು ಜಾರಿಯಲ್ಲಿವೆ. ಭಾರತೀಯ ದಂಡ ಸಂಹಿತೆ 370 ಮತ್ತು 370(ಎ) ಕಲಂಗಳು ಮಾನವ ಕಳ್ಳಸಾಗಣೆಯನ್ನು ಗಂಭೀರ ಅಪರಾಧವೆಂದು ಪರಿಗಣಿಸುತ್ತವೆ. ಮಕ್ಕಳ ರಕ್ಷಣೆಗೆ ಪೋಕ್ಸೊ ಕಾಯ್ದೆ, ಬಂಧಿತ ಕಾರ್ಮಿಕ ವ್ಯವಸ್ಥೆ (ರದ್ದತಿ) ಕಾಯ್ದೆ ಸೇರಿದಂತೆ ವಿವಿಧ ಕಾನೂನು ಚೌಕಟ್ಟುಗಳಿವೆ. ಆದರೂ, ಸಮಸ್ಯೆ ಸಮಸ್ಯೆಯಾಗೇ ಉಳಿದಿದೆ. ಮೇಲಾಗಿ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಕಾನೂನುಗಳ ಪರಿಣಾಮಕಾರಿ ಅನುಷ್ಠಾನವಿಲ್ಲದಿರುವುದು.

ಭಯ, ಸಾಮಾಜಿಕ ತಿರಸ್ಕಾರದ ಭೀತಿ, ಆರ್ಥಿಕ ಅವಲಂಬನೆ ಮತ್ತು ವ್ಯವಸ್ಥೆಯ ಮೇಲಿನ ಅಪನಂಬಿಕೆಯಿಂದ ಬಹುತೇಕ ಬಲಿಪಶುಗಳು ದೂರು ನೀಡಲು ಮುಂದೆ ಬರುವುದಿಲ್ಲ. ಈ ಕಾರಣದಿಂದ ಎಷ್ಟೋ ಪ್ರಕರಣಗಳು ದಾಖಲೆಗೂ ಸಿಗದೇ ಹೋಗುತ್ತವೆ. ಅನೇಕ ಸಂದರ್ಭಗಳಲ್ಲಿ ಕಳ್ಳಸಾಗಣೆದಾರರು ಬಲಿಪಶುಗಳಿಗೆ ಶಾರೀರಿಕ ಹಿಂಸೆ, ಜೀವ ಬೆದರಿಕೆ ಅಥವಾ ಕುಟುಂಬಕ್ಕೆ ಹಾನಿ ಮಾಡುವ ಎಚ್ಚರಿಕೆ ನೀಡಿರುತ್ತಾರೆ. ಇದರಿಂದ ಬಲಿಪಶುಗಳು ದೂರು ನೀಡಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬ ಭೀತಿಯಲ್ಲಿ ಹಿಂದೆ ಸರಿದುಬಿಡುತ್ತಾರೆ.

ಸಾಮಾಜಿಕ ಅಪಮಾನವೂ ದೊಡ್ಡ ಅಡ್ಡಿಯಾಗಿದೆ. ವಿಶೇಷವಾಗಿ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ಅಥವಾ ಬಾಲಕಿಯರು ಸಮಾಜದಿಂದ ತಿರಸ್ಕಾರ, ದೂಷಣೆ ಹಾಗೂ ಅಪಮಾನಕ್ಕೆ ಒಳಗಾಗುವ ಭಯದಿಂದ ಮೌನವಾಗಿರುತ್ತಾರೆ. ʼನಮ್ಮ ಮಾತು ಯಾರೂ ನಂಬುವುದಿಲ್ಲʼ ಎಂತಲೋ ʼದೂರು ನೀಡಿದರೆ ಜೀವನವೇ ನಾಶವಾಗುತ್ತದೇನೋʼ ಎಂತಲೋ ಚಿಂತಿಸಿ ಕೊನೆ ಸವಾಲುಗಳ ಜೊತೆಗೆ ಮೌನವಾಗಿ ಬದುಕುವುದನ್ನು ರೂಢಿಸಿಕೊಳ್ಳುತ್ತಾರೆ.

ಕಳ್ಳಸಾಗಣೆ ಜಾಲಗಳಿಂದ ಹೊರಬಂದರೂ ಬದುಕು ನಡೆಸಲು ಬೇರೆ ಆದಾಯದ ಮೂಲ ಇಲ್ಲದ ಕಾರಣ ಅನೇಕರು ಶೋಷಕರ ಮೇಲೆಯೇ ಅವಲಂಬಿತರಾಗಿರುತ್ತಾರೆ. ಕುಟುಂಬವನ್ನು ಪೋಷಿಸಬೇಕಾದ ಹೊಣೆಗಾರಿಕೆ, ಸಾಲಬಂಧನ ಮತ್ತು ಉದ್ಯೋಗದ ಕೊರತೆ ಅವರು ದೂರು ನೀಡದಂತೆ ತಡೆಯುತ್ತದೆ. ಜೊತೆಗೆ, ಪೊಲೀಸ್ ವ್ಯವಸ್ಥೆ, ನ್ಯಾಯಾಲಯ ಮತ್ತು ಆಡಳಿತದ ಮೇಲೆ ಇರುವ ನಂಬಿಕೆ ಕೊರತೆ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ದೂರು ನೀಡಿದರೆ ನ್ಯಾಯ ಸಿಗುತ್ತದೆಯೇ, ತನಿಖೆ ಸರಿಯಾಗಿ ನಡೆಯುತ್ತದೆಯೇ, ಅಥವಾ ಮತ್ತೆ ಅದೇ ಶೋಷಕರ ಕೈಗೆ ಬೀಳುತ್ತೇವೆಯೇ ಎಂಬ ಅನುಮಾನ ಬಲಿಪಶುಗಳನ್ನು ಕಾಡುತ್ತದೆ. ಈ ಎಲ್ಲ ಕಾರಣಗಳಿಂದ ಅನೇಕ ಪ್ರಕರಣಗಳು ಬೆಳಕಿಗೆ ಬರದೇ ಉಳಿಯುತ್ತವೆ. ಪರಿಣಾಮವಾಗಿ, ಮಾನವ ಕಳ್ಳಸಾಗಣೆ ಎಂಬ ಅಪರಾಧದ ನಿಜವಾದ ವ್ಯಾಪ್ತಿ ದಾಖಲೆಗಳಲ್ಲಿ ಕಾಣುವುದಕ್ಕಿಂತ ಬಹಳ ದೊಡ್ಡದಾಗಿಯೇ ಉಳಿಯುತ್ತದೆ.

ಇದನ್ನೂ ಓದಿ: ವೈದ್ಯಕೀಯ ವಿಜ್ಞಾನ ಪ್ರಯೋಗಕ್ಕೆ ಇಲಿಗಳೇ ಬೇಕು, ಯಾಕೆ?

ಮಾನವ ಕಳ್ಳಸಾಗಣೆ ವಿರುದ್ಧ ಜವಾಬ್ದಾರಿಯುತ ನಾಗರಿಕರಾಗಿ ನಾವು…

  1. ಮಾನವ ಕಳ್ಳಸಾಗಣೆ ಏನು, ಅದು ಹೇಗೆ ನಡೆಯುತ್ತದೆ ಎಂಬ ಬಗ್ಗೆ ಸ್ವತಃ ನಾವು ತಿಳಿದುಕೊಂಡು ಇತರರಿಗೂ ಅರಿವು ಮೂಡಿಸಬೇಕಿದೆ.
  2. ಬಾಲಕಾರ್ಮಿಕರು, ಬಲವಂತದ ಕೆಲಸ, ಶೋಷಣೆಗೆ ಒಳಗಾದವರ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ಗಮನಿಸಿ, ನಮ್ಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮಕೈಗೊಳ್ಳಬೇಕಿದೆ.
  3. ಮಾನವ ಕಳ್ಳಸಾಗಣೆಯ ಶಂಕೆ ಇದ್ದರೆ ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಅಥವಾ ಸಂಬಂಧಿತ ಸಹಾಯವಾಣಿ ಕೇಂದ್ರಗಳಿಗೆ ತಕ್ಷಣ ಮಾಹಿತಿ ನೀಡಬೇಕಿದೆ.
  4. ವಿದೇಶ ಅಥವಾ ದೂರದ ಊರಿಗೆ ಉದ್ಯೋಗ, ಮದುವೆ, ಹೆಚ್ಚಿನ ಸಂಬಳದ ಆಮಿಷ ನೀಡುವ ಅಜ್ಞಾತ ವ್ಯಕ್ತಿಗಳ ಬಗ್ಗೆ ಸದಾ ಎಚ್ಚರವಾಗಿರಬೇಕಿದೆ.
  5. ಗುರುತಿನ ಚೀಟಿ, ಪಾಸ್‌ಪೋರ್ಟ್, ಇತರೆ ದಾಖಲೆಗಳನ್ನು ಯಾರಿಗೂ ಒಪ್ಪಿಸಬಾರದು ಎಂಬ ಅರಿವನ್ನು ನಮ್ಮವರಿಗೂ ನೀಡಬೇಕಿದೆ.
  6. ಬಲಿಪಶುಗಳನ್ನು ತಪ್ಪಿತಸ್ಥರಂತೆ ನೋಡುವ ಮನೋಭಾವವನ್ನು ತಿರಸ್ಕರಿಸಿ, ಅವರಿಗೆ ಮಾನವೀಯ ಬೆಂಬಲ ನೀಡಬೇಕಿದೆ.
  7. ಗ್ರಾಮ ಸಭೆ, ಶಾಲೆ, ಕಾಲೇಜು, ಸಂಘ–ಸಂಸ್ಥೆಗಳಲ್ಲಿ ಮಾನವ ಕಳ್ಳಸಾಗಣೆ ಕುರಿತು ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಅಥವಾ ಅಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ.
  8. ಮಕ್ಕಳನ್ನು ಕೆಲಸಕ್ಕೆ ಬಳಸುವವರನ್ನು ಉತ್ತೇಜಿಸದೆ, ಅಂತಹ ಘಟನೆಗಳನ್ನು ತಕ್ಷಣ ವರದಿ ಮಾಡಬೇಕಿದೆ.
  9. ಮಾನವ ಕಳ್ಳಸಾಗಣೆ ವಿರುದ್ಧ ಕೆಲಸ ಮಾಡುವ ಸರಕಾರೇತರ ಸಂಘಟನೆಗಳು ಮತ್ತು ಜಾಗೃತಿ ಅಭಿಯಾನಗಳಿಗೆ ಬೆಂಬಲ ನೀಡಬೇಕಿದೆ.
  10. “ಇದಕ್ಕೂ ನನಗೂ ಸಂಬಂಧವಿಲ್ಲ, ಇದು ನನಗ್ಯಾಕೆ” ಎಂಬ ಮನೋಭಾವ ಬಿಟ್ಟು ಧ್ವನಿ ಎತ್ತಬೇಕಿದೆ.

ಭಯ, ಮೌನ ಮತ್ತು ನಿರ್ಲಕ್ಷ್ಯ ಇರುವವರೆಗೂ ಈ ಅಪರಾಧ ಜೀವಂತವಾಗಿರುತ್ತದೆ. ಸರ್ಕಾರ ಮತ್ತು ಕಾನೂನು ವ್ಯವಸ್ಥೆಯ ಪಾತ್ರ ಮಹತ್ವದ್ದಾದರೂ, ಸಮಾಜದ ಎಚ್ಚರಿಕೆ ಮತ್ತು ನಾಗರಿಕರ ಹೊಣೆಗಾರಿಕೆ ಇಲ್ಲದೆ ಈ ಸಮಸ್ಯೆಗೆ ಪೂರ್ಣ ಪರಿಹಾರ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಜಾಗೃತರಾಗುವ ಮೂಲಕ, ಅನುಮಾನಾಸ್ಪದ ಘಟನೆಗಳನ್ನು ಪ್ರಶ್ನಿಸುವ ಮೂಲಕ ಮತ್ತು ಪೀಡಿತರನ್ನು ಮಾನವೀಯ ದೃಷ್ಟಿಯಿಂದ ನೋಡುವ ಮೂಲಕವೇ ಮಾನವ ಕಳ್ಳಸಾಗಣೆ ವಿರುದ್ಧ ನಿಜವಾದ ಹೋರಾಟ ಸಾಧ್ಯ. ಮಾನವ ಗೌರವವನ್ನು ರಕ್ಷಿಸುವ ಈ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಅಮೂಲ್ಯವಾಗಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...