ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19 ಸೀಟು ಹಾಗೂ ನೆತನ್ಯಾಹು ಭವಿಷ್ಯ…

Date:

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು ತೂಗುಸೇತುವೆಗೆ ತಳ್ಳಿರುವ ಅರಬ್-ಪ್ಯಾಲೆಸ್ಟೀನಿಯನ್ನರೇ ಮುಂದಿನ ಇಸ್ರೇಲ್‌ ರಾಜಕೀಯದ ‘ಕಿಂಗ್‌ಮೇಕರ್‌’ಗಳಾಗಿ ಹೊರಹೊಮ್ಮಿದ್ದಾರೆ. ದಶಕಗಳ ಬಳಿಕ ಮತದಾನದಲ್ಲಿ ಈ ಭಾರೀ ಬದಲಾವಣೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣವೂ ಇದೆ!

- Advertisement -

ಇಸ್ರೇಲ್‌ನ ರಾಜಕೀಯ ಮತ್ತು ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರಬ್-ಪ್ಯಾಲೆಸ್ಟೀನಿಯನ್ ನಾಗರಿಕರು ದಾಖಲೆಯ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ. 21ರಷ್ಟಿರುವ ಈ ಸಮುದಾಯದ ಮತದಾನದ ಪ್ರಮಾಣವು ಈ ಬಾರಿ ಶೇ. 80ರ ಸಮೀಪಕ್ಕೆ ಏರಿದ್ದು, ಇದು ಇಸ್ರೇಲ್ ಚುನಾವಣಾ ಇತಿಹಾಸದಲ್ಲೇ ಅಭೂತಪೂರ್ವ ಬೆಳವಣಿಗೆಯಾಗಿದೆ. ಈ ಭಾರೀ ಜಾಗೃತಿಯ ಪರಿಣಾಮವಾಗಿ, ಅರಬ್ ನೇತೃತ್ವದ ‘ಜಾಯಿಂಟ್ ಲಿಸ್ಟ್’ (11) ಮತ್ತು ‘ರಾ’ಆಮ್’ (8) ಪಕ್ಷಗಳು ಒಟ್ಟಾಗಿ ಸಂಸತ್ತಿನಲ್ಲಿ ಬರೋಬ್ಬರಿ 19 ಸ್ಥಾನಗಳನ್ನು ಗೆದ್ದಿವೆ. ಈ ಹಿಂದೆ 2020ರ ಚುನಾವಣೆಯಲ್ಲಿ ಅರಬ್ ಪಕ್ಷಗಳು ಒಟ್ಟು 15 ಸ್ಥಾನಗಳನ್ನು ಗೆದ್ದಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ದಶಕಗಳಿಂದ ಇಸ್ರೇಲ್ ಚುನಾವಣೆಗಳಿಂದ ದೂರವೇ ಉಳಿಯುತ್ತಿದ್ದ , ರಾಜಕೀಯವಾಗಿ ಅಂಚಿಗೆ ತಳ್ಳಲ್ಪಟ್ಟಿದ್ದ ಈ ಸಮುದಾಯ, ಈ ಮಟ್ಟಿಗೆ ಅಭೂತಪೂರ್ವವಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಕಾರಣವೇನು? ಈ ದಿಢೀರ್ ಬದಲಾವಣೆಯ ಹಿಂದಿರುವ ಅಸಲಿ ಪ್ರೇರಣೆ ಏನಿರಬಹುದು ಎಂಬುದನ್ನು ನೋಡುವುದಾದರೆ,

ಇಸ್ರೇಲ್‌ನ ನಾಗರಿಕರಾಗಿದ್ದರೂ ಸಹ, ಅರಬ್-ಪ್ಯಾಲೆಸ್ಟೀನಿಯರನ್ನು ಸ್ವಂತ ದೇಶದಲ್ಲೇ ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿತ್ತು. ಈ ಹತಾಶೆ, ಆಕ್ರೋಶದಿಂದಾಗಿ ದಶಕಗಳಿಂದ ಚುನಾವಣಾ ಪ್ರಕ್ರಿಯೆಗಳಿಂದ ಅವರು ವಿಮುಖರಾಗಿದ್ದರು. ಮತಹಾಕಿದರೂ ತಮ್ಮ ಬದುಕಿನಲ್ಲಿ ಅಥವಾ ಸರ್ಕಾರದ ನೀತಿಗಳಲ್ಲಿ ಯಾವುದೇ ಬದಲಾವಣಾಗುವಿಲ್ಲ ಎಂಬ ಮತದಾರರ ಉದಾಸೀನತೆ ವ್ಯಾಪಕವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ನೆತನ್ಯಾಹು ನೇತೃತ್ವದ ಕಟ್ಟಾ ಬಲಪಂಥೀಯ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ತಾರತಮ್ಯಗಳು, ಗಾಜಾ ಮೇಲಿನ ನಿರಂತರ ಭೀಕರ ದಾಳಿಗಳು, ನಾಗರಿಕರನ್ನು ಪ್ರಾಣಿಗಳಂತೆ ನಡೆಸಿಕೊಂಡ ದಮನಕಾರಿ ನೀತಿಗಳು, ದ್ವೇಶದ ರಾಜಕಾರಣ ಮತ್ತು ಸಮಾಜದಲ್ಲಿ ಹೆಚ್ಚಿದ ಅಸುರಕ್ಷತೆ ಅವರಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಿತು. “ನಾವು ಚುನಾವಣೆಯನ್ನು ಬಹಿಷ್ಕರಿಸಿದರೆ, ನಮ್ಮ ಹಕ್ಕುಗಳನ್ನು ಕಸಿಯುವ ಬಲಪಂಥೀಯ ಶಕ್ತಿಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ. ನಮ್ಮ ಅಸ್ತಿತ್ವ ಮತ್ತು ಜೀವ ರಕ್ಷಣೆಗಾಗಿ ನಾವ ಧ್ವನಿ ಎತ್ತಬೇಕು” ಎಂಬ ದೃಢ ನಿರ್ಧಾರಕ್ಕೆ ಈ ಸಮುದಾಯ ಬಂದಿದ್ದೇ ಈ ಅಭೂತಪೂರ್ವ ಬ್ಯಾಲಟ್ ಕ್ರಾಂತಿಗೆ ಮುಖ್ಯ ಪ್ರೇರಣೆಯಾಯಿತು ಎಂಬುದನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ.

ಇಸ್ರೇಲ್‌ನಲ್ಲಿ ಅಧಿಕಾರ ಹಿಡಿದಿದ್ದ ತೀವ್ರ ಬಲಪಂಥೀಯ ಸರ್ಕಾರದ ನೀತಿಗಳು ಅರಬ್ ಸಮುದಾಯದ ಅಸ್ತಿತ್ವವನ್ನೇ ಅಲ್ಲಾಡಿಸುತ್ತಿದ್ದವು. ವಿಶೇಷವಾಗಿ 2018ರಲ್ಲಿ ಅಂಗೀಕರಿಸಲ್ಪಟ್ಟ ವಿವಾದಾತ್ಮಕ ‘ರಾಷ್ಟ್ರ-ರಾಜ್ಯ ಕಾಯ್ದೆ’ಯ ಪ್ರಕಾರ, ಇಸ್ರೇಲ್ ಅನ್ನು ಕೇವಲ “ಯಹೂದಿಗಳ ರಾಷ್ಟ್ರ” ಎಂದು ಪ್ರಕಟಿಸಲಾಯಿತು ಮತ್ತು ದಶಕಗಳಿಂದ ಅಧಿಕೃತ ಭಾಷೆಯಾಗಿದ್ದ ‘ಅರೇಬಿಕ್’ನ ಸ್ಥಾನಮಾನವನ್ನು ಕುಗ್ಗಿಸಲಾಯಿತು. ಬೆನ್-ಗ್ವಿರ್ ಮತ್ತು ಸ್ಮೊಟ್ರಿಚ್‌ರಂತಹ ಉಗ್ರ ನಾಯಕರ ಆಡಳಿತವು ಅರಬ್ ನಾಗರಿಕರ ಮೇಲಿನ ದ್ವೇಷ ಭಾಷಣಗಳನ್ನು ಹೆಚ್ಚಿಸಿತು. ಈ ಸಾಂಸ್ಥಿಕ ತಾರತಮ್ಯವನ್ನು ಕಾನೂನಾತ್ಮಕವಾಗಿ ಎದುರಿಸಲು ಸಂಸತ್ತಿನಲ್ಲಿ ಬಲವಾದ ಅರಬ್ ಪ್ರತಿನಿಧಿಗಳು ಇರುವುದು ಅತ್ಯಗತ್ಯ ಎಂದು ಜನ ಅರಿತುಕೊಂಡರು.

ಅರಬ್ ಪ್ರಬಲ ಪ್ರದೇಶಗಳಲ್ಲಿ ಸಂಘಟಿತ ಅಪರಾಧ ಕೃತ್ಯಗಳು, ಗ್ಯಾಂಗ್‌ವಾರ್‌ಗಳು, ಹಫ್ತಾ ವಸೂಲಿ ಹಾಗೂ ರಕ್ತಸಿಕ್ತ ಕೊಲೆಗಳು ದಿನದಿಂದ ದಿನಕ್ಕೆ ನಿಯಂತ್ರಣ ಮೀರಿ ಬೆಳೆಯುತ್ತಿದ್ದರೂ, ಇಸ್ರೇಲ್ ಪೊಲೀಸ್ ವ್ಯವಸ್ಥೆ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು ಎಂಬ ತೀವ್ರ ಆಕ್ರೋಶ ಸಾರ್ವಜನಿಕರಲ್ಲಿ ಮನೆಮಾಡಿತ್ತು. ಯಹೂದಿ ನಗರಗಳಿಗೆ ನೀಡಲಾಗುವ ಅತ್ಯುನ್ನತ ಭದ್ರತೆ ಹಾಗೂ ತನಿಖಾ ಆಸಕ್ತಿಯು ಅರಬ್ ಪ್ರದೇಶಗಳಿಗೆ ಸಿಗುತ್ತಿಲ್ಲ, ಇಸ್ರೇಲ್ ಆಡಳಿತದ ಕಣ್ಣಿನಲ್ಲಿ ತಮ್ಮ ಜೀವಕ್ಕೆ ಯಾವುದೇ ಮೌಲ್ಯ ಇಲ್ಲದಂತಾಗಿದೆ ಎಂಬ ಸಾಂಸ್ಥಿಕ ತಾರತಮ್ಯ ನಾಗರಿಕರನ್ನು ತೀವ್ರವಾಗಿ ಕೆರಳಿಸಿತ್ತು. ಇಸ್ರೇಲ್‌ನ ಇತರ ಯಹೂದಿ ಭಾಗಗಳಿಗೆ ಹೋಲಿಸಿದರೆ ಅರಬ್ ನಗರಗಳು ಮತ್ತು ಹಳ್ಳಿಗಳು ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನಗರಾಭಿವೃದ್ಧಿ ಯೋಜನೆಗಳಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಅರಬ್ ನಾಗರಿಕರಿಗೆ ಹೊಸ ಮನೆಗಳನ್ನು ನಿರ್ಮಿಸಲು ಸೂಕ್ತ ಪರ್ಮಿಟ್‌ಗಳನ್ನು ನೀಡದಿರುವುದು ಮತ್ತು “ಅಕ್ರಮ ನಿರ್ಮಾಣ” ಎಂಬ ನೆಪವೊಡ್ಡಿ ದಶಕಗಳಿಂದ ವಾಸಿಸುತ್ತಿದ್ದ ಮನೆಗಳನ್ನು ಕೆಡವಿಹಾಕುವ ಸರ್ಕಾರದ ಹಠಾತ್ ಕ್ರಮಗಳು ಜನರನ್ನು ರೊಚ್ಚಿಗೇಳಿಸಿದವು. ರಾಷ್ಟ್ರೀಯ ಬಜೆಟ್‌ನಲ್ಲಿ ತಮ್ಮ ಸಮುದಾಯಕ್ಕೆ ನ್ಯಾಯಯುತ ಅನುದಾನ ಪಡೆಯಲು ಮತ್ತು ವಸತಿ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನೆಸ್ಸೆಟ್‌ನಲ್ಲಿ ಭಾಗವಹಿಸುವುದೊಂದೇ ದಾರಿಯಾಗಿ ಕಂಡಿತ್ತು.

ಹಿಂದಿನ ಚುನಾವಣೆಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಜಾತ್ಯತೀತ, ಇಸ್ಲಾಮಿಕ್, ಸೋಷಿಯಲಿಸ್ಟ್ ಹಾಗೂ ಕಮ್ಯುನಿಸ್ಟ್ ನಿಲುವುಗಳ ಆಧಾರದಲ್ಲಿ ಅರಬ್ ಪಕ್ಷಗಳು ಚದುರಿ ಸ್ಪರ್ಧಿಸುತ್ತಿದ್ದವು. ಈ ಅಂತರಿಕ ಭಿನ್ನಾಭಿಪ್ರಾಯಗಳು ಮತಗಳ ಭಾರಿ ವಿಭಜನೆಗೆ ಕಾರಣವಾಗಿ, ಸಂಸತ್ತಿನಲ್ಲಿ ಅರಬ್ ಸಮುದಾಯದ ಶಕ್ತಿಯನ್ನೇ ಕ್ಷೀಣಗೊಳಿಸಿದ್ದವು. ಆದರೆ ಈ ಬಾರಿಯ ನಿರ್ಣಾಯಕ ಚುನಾವಣೆಯಲ್ಲಿ ತಮ್ಮ ಸೈದ್ಧಾಂತಿಕ ವ್ಯತ್ಯಾಸಗಳನ್ನು ಸಂಪೂರ್ಣವಾಗಿ ಬದಿಗಿಟ್ಟ ಅರಬ್ ನಾಯಕರು, ‘ಜಾಯಿಂಟ್ ಲಿಸ್ಟ್’ (Joint List) ಹಾಗೂ ‘ರಾ’ಆಮ್’ (Ra’am) ಒಕ್ಕೂಟಗಳ ವೇದಿಕೆಯಡಿಯಲ್ಲಿ ಐತಿಹಾಸಿಕವಾಗಿ ಒಂದಾದರು. ಈ ಮೈತ್ರಿಯು ಅರಬ್ ಮತದಾರರಲ್ಲಿ ಹೊಸ ಆಶಾಭಾವನೆ ಮತ್ತು ಭರವಸೆಯನ್ನು ಮೂಡಿಸಿತು.

ಪ್ರಧಾನಿ ನೆತನ್ಯಾಹು ನೇತೃತ್ವದಲ್ಲಿ ಗಾಜಾ ಹಾಗೂ ವೆಸ್ಟ್ ಬ್ಯಾಂಕ್ ಭಾಗಗಳಲ್ಲಿ ನಡೆಸಲಾದ ಸುದೀರ್ಘ ಭೀಕರ ಮಿಲಿಟರಿ ಕಾರ್ಯಾಚರಣೆಗಳು, ಸಾಲು ಸಾಲು ಅಮಾಯಕ ಪ್ಯಾಲೆಸ್ಟೀನಿಯನ್ನರ ಹತ್ಯೆ, ಲೆಕ್ಕಕ್ಕೇ ಸಿಗದಷ್ಟು ಲಕ್ಷಾಂತರ ಸಾವು ನೋವುಗಳು ಮತ್ತು ಸೃಷ್ಟಿಯಾದ ಮಾನವೀಯ ಬಿಕ್ಕಟ್ಟು ಇಸ್ರೇಲ್‌ನಲ್ಲಿರುವ ಅರಬ್-ಪ್ಯಾಲೆಸ್ಟೀನಿಯನ್ ನಾಗರಿಕರನ್ನು ಆಳವಾಗಿ ಚುಚ್ಚಿತ್ತು. ಗಡಿಯಾಚೆಗೆ ರಕ್ತಸಂಬಂಧಿಗಳ ಮೇಲೆ ನಡೆದ ಹಿಂಸಾಚಾರ ಮತ್ತು ಇಡೀ ಪ್ರದೇಶವನ್ನು ತೀವ್ರ ದ್ವೇಷದ ವಾತಾವರಣಕ್ಕೆ ತಳ್ಳಿದ ನೆತನ್ಯಾಹುರವರ ದಮನಕಾರಿ ಆಡಳಿತಕ್ಕೆ ಸಂಪೂರ್ಣ ಮುಕ್ತಿ ಹಾಡಲೇಬೇಕೆಂಬ ನಿರ್ಧರಿಸಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ಇಸ್ರೇಲ್‌ನ 120 ಸದಸ್ಯರ ನೆಸ್ಸೆಟ್‌ನಲ್ಲಿ 19 ಸೀಟುಗಳನ್ನು ಗೆಲ್ಲುವುದೆಂದರೆ ಸಾಮಾನ್ಯ ವಿಷಯವಲ್ಲ. ಇದು ದೇಶದ ಪ್ರಮುಖ ಮೈತ್ರಿಕೂಟಗಳ ರಚನೆಗೆ ಗೇಮ್-ಚೇಂಜರ್ ಆಗಿ ಹೊರಹೊಮ್ಮಿದೆ. ಯಹೂದಿ ಬಲಪಂಥೀಯ ಮತ್ತು ಎಡಪಂಥೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇರುವಾಗ, 19 ಸೀಟುಗಳನ್ನು ಹೊಂದಿರುವ ಅರಬ್ ಬ್ಲಾಕ್ ಯಾವುದೇ ಸರ್ಕಾರ ರಚನೆಯಲ್ಲಿ ನಿರ್ಣಾಯಕ ‘ಕಿಂಗ್‌ಮೇಕರ್’ ಪಾತ್ರ ವಹಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಒಂದು ವೇಳೆ ಪ್ರಮುಖ ಯಹೂದಿ ಪಕ್ಷಗಳು ಸೇರಿ ಸರ್ಕಾರ ರಚಿಸಿದರೂ, ಅರಬ್ ಮೈತ್ರಿಕೂಟವು ಸಂಸತ್ತಿನ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮುವ ಭಾರಿ ಅವಕಾಶವನ್ನು ಹೊಂದಿದೆ. ಇದು ಅರಬ್ ನಾಯಕರಿಗೆ ಭದ್ರತಾ ಮಂಡಳಿ ಸಭೆಗಳ ಮಾಹಿತಿಯೂ ಸೇರಿದಂತೆ ಸರ್ಕಾರದ ಉನ್ನತ ಹಂತದ ನಿರ್ಧಾರಗಳನ್ನು ಪ್ರಶ್ನಿಸುವ ಅಧಿಕಾರ ನೀಡಲಿದೆ. ಇಷ್ಟು ದಿನ ಇಸ್ರೇಲ್ ಇತಿಹಾಸದಲ್ಲಿ ನಾಮಕಾವಸ್ಥೆಗೆ ಇದ್ದ ಅರಬ್ ಜನಪ್ರತಿನಿಧಿಗಳಿಗೆ, ಈ 19 ಸೀಟುಗಳ ಬಲ ಸಾಮಾಜಿಕ ಮನ್ನಣೆ ತಂದುಕೊಟ್ಟಿದೆ. ಇನ್ನುಮುಂದೆ ಯಾವುದೇ ಸರ್ಕಾರ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಟಿಸಿದೆ.

ಚುನಾವಣಾ ಫಲಿತಾಂಶದ ನಂತರ ಇಸ್ರೇಲ್ ಸಂಸತ್ತು ತೀವ್ರ ರಾಜಕೀಯ ಗೊಂದಲ ಮತ್ತು ಬಿಕ್ಕಟ್ಟಿಗೆ ಸಿಲುಕಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕಾರದಲ್ಲೇ ಉಳಿದಿದ್ದರೂ ಅವರ ಬಳಿ ಸ್ಪಷ್ಟ ಸಂಖ್ಯಾಬಲವಿಲ್ಲ, ಮತ್ತೊಂದೆಡೆ ವಿರೋಧ ಪಕ್ಷಗಳ ಬಳಿ ಅಗತ್ಯ ಸಂಖ್ಯಾಬಲವಿದ್ದರೂ ಸೈದ್ಧಾಂತಿಕ ಹಾಗೂ ಜನಾಂಗೀಯ ಭಿನ್ನಾಭಿಪ್ರಾಯಗಳಿಂದಾಗಿ ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಈ ಬಿಕ್ಕಟ್ಟನ್ನು ಶಮನಗೊಳಿಸಲು ಮುಖ್ಯವಾಗಿ ನಾಲ್ಕು ಸಾಧ್ಯತೆಗಳಿವೆ. ಮೊದಲನೆಯದಾಗಿ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನೆತನ್ಯಾಹು ಅವರ ‘ಲಿಕುಡ್’ ಪಕ್ಷವು ಗಾಡಿ ಐಸೆನ್‌ಕೋಟ್ ಅವರ ‘ಯಾಶರ್’, ಅವಿಗ್ಡೋರ್ ಲಿಬರ್‌ಮ್ಯಾನ್ ಹಾಗೂ ನಫ್ತಾಲಿ ಬೆನೆಟ್ ಅವರ ಮೈತ್ರಿಕೂಟವನ್ನು ಸೇರಿಸಿಕೊಂಡು 66 ಸೀಟುಗಳ ಬಹುಮತದೊಂದಿಗೆ ‘ರಾಷ್ಟ್ರೀಯ ಐಕ್ಯತಾ ಸರ್ಕಾರ’ ರಚಿಸುವುದು. ಆದರೆ ಇದಕ್ಕೆ ನೆತನ್ಯಾಹು ತಮ್ಮ ಸಾಂಪ್ರದಾಯಿಕ ತೀವ್ರ ಬಲಪಂಥೀಯ ಮಿತ್ರರನ್ನು ತೊರೆಯಬೇಕಾಗಿರುವುದರಿಂದ ಇದು ಕಷ್ಟಕರವಾಗಿದೆ.

ಎರಡನೇ ಸನ್ನಿವೇಶದಲ್ಲಿ, ವಿರೋಧ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ತಮ್ಮ ಮಿತ್ರಪಕ್ಷಗಳು ಹಾಗೂ ಅರಬ್ ಪಕ್ಷಗಳ (Ra’am ಮತ್ತು Joint List) ಹೊರಗಿನ ಬೆಂಬಲದೊಂದಿಗೆ (48 + 19 = 67 ಸೀಟುಗಳು) ‘ಅಲ್ಪಸಂಖ್ಯಾತ ರಚಿಸುವುದು. ಆದರೆ ಅಕ್ಟೋಬರ್ 7 ರ ಹಮಾಸ್ ದಾಳಿಯ ನಂತರ ಯಹೂದಿಗಳಲ್ಲಿ ಅರಬ್ ಪಕ್ಷಗಳ ಬಗ್ಗೆ ತೀವ್ರ ಆಕ್ರೋಶವಿರುವುದರಿಂದ ಇದು ಸುಲಭವಲ್ಲ. ಮೂರನೇ ಸಾಧ್ಯತೆಯಾಗಿ, ಸದ್ಯ 53 ಸೀಟುಗಳನ್ನು ಹೊಂದಿರುವ ನೆತನ್ಯಾಹು, ವಿರೋಧ ಪಕ್ಷಗಳ ಕೆಲ ಶಾಸಕರನ್ನು ತಮ್ಮತ್ತ ಸೆಳೆದು ಬಹುಮತ ಸಾಧಿಸಲು ಪ್ರಯತ್ನಿಸಬಹುದು. ಈ ಮೂರೂ ಮಾರ್ಗಗಳು ವಿಫಲವಾಗಿ, ನಿಗದಿತ ಗಡುವಿನಲ್ಲಿ ಯಾರಿಗೂ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ಇಸ್ರೇಲ್ ಮುಂಬರುವ ಮಾರ್ಚ್‌ನಲ್ಲಿ ಮತ್ತೊಂದು ಸುತ್ತಿನ ಸಾರ್ವತ್ರಿಕ ಚುನಾವಣೆಗೆ ಹೋಗುವುದು ಅನಿವಾರ್ಯವಾಗಲಿದೆ.

ಇದನ್ನೂ ಓದಿ: ಇಸ್ರೇಲ್ ಚುನಾವಣೆ- ಅರಬ್ ಪಕ್ಷಗಳೇ ಈಗ ಕಿಂಗ್ ಮೇಕರ್

ಅರಬ್ ನಾಯಕ ಐಮನ್ ಓಡೆ ಹೇಳಿದಂತೆ ಅರಬ್ ನಾಗರಿಕರ ಬೆಂಬಲವಿಲ್ಲದೆ ನೆತನ್ಯಾಹು ಒಕ್ಕೂಟವನ್ನು ಸೋಲಿಸುವುದು ಯಹೂದಿ ವಿರೋಧ ಪಕ್ಷಗಳಿಗೆ ಅಸಾಧ್ಯ. ಆದರೆ, ನೆತನ್ಯಾಹು ಅವರನ್ನು “ಪ್ರಜಾಪ್ರಭುತ್ವಕ್ಕೆ ಅಪಾಯ” ಎಂದು ಕರೆಯುವ ಇಸ್ರೇಲಿ ಯಹೂದಿ ವಿರೋಧ ಪಕ್ಷಗಳು (ಝಿಯೋನಿಸ್ಟ್ ವಿರೋಧ ಪಕ್ಷಗಳು), ಅಧಿಕಾರ ಹಿಡಿಯಲು ದೇಶದ ಶೇ. 20ರಷ್ಟಿರುವ ಅರಬ್ ಪಕ್ಷಗಳೊಂದಿಗೆ ಕೈಜೋಡಿಸಲು ತಮ್ಮ ಜನಾಂಗೀಯ-ರಾಷ್ಟ್ರೀಯತಾವಾದಿ ಸಿದ್ಧಾಂತದಿಂದಾಗಿ ಹಿಂಜರಿಯುತ್ತಿವೆ. ಈ ದ್ವಂದ್ವ ನೀತಿಯು ಪರೋಕ್ಷವಾಗಿ ನೆತನ್ಯಾಹು ಅಧಿಕಾರದಲ್ಲಿ ಮುಂದುವರಿಯಲು ಸಹಾಯ ಮಾಡುತ್ತಿದೆ. ಮತ್ತೊಂದೆಡೆ, ಅರಬ್ ನಾಯಕರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಮೊದಲು ಬೆನ್-ಗ್ವಿರ್ ಮತ್ತು ಸ್ಮೊಟ್ರಿಚ್‌ರಂತಹ ತೀವ್ರ ಬಲಪಂಥೀಯ ಜನಾಂಗೀಯವಾದಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಹಾಗೂ ತಮ್ಮ ಸಮುದಾಯದ ಮೂಲಭೂತ ಹಕ್ಕುಗಳು ಮತ್ತು ಭದ್ರತೆಗಾಗಿ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಲು ಸಿದ್ಧರಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಇಸ್ರೇಲ್‌ನ ಅರಬ್-ಪ್ಯಾಲೆಸ್ಟೀನಿಯನ್ ಸಮುದಾಯದ ಈ ಚುನಾವಣಾ ಪಾಲ್ಗೊಳ್ಳುವಿಕೆ, ದಶಕಗಳ ನಿರ್ಲಕ್ಷ್ಯ, ತಾರತಮ್ಯ ಮತ್ತು ಅಭದ್ರತೆಯ ವಿರುದ್ಧ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವ ಪ್ರಯತ್ನವಾಗಿದೆ. 19 ಸ್ಥಾನಗಳ ಬಲವು ಅರಬ್ ಪಕ್ಷಗಳಿಗೆ ಅಧಿಕಾರದ ಲೆಕ್ಕಾಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅವಕಾಶ ನೀಡಿದೆ. ಆದರೆ ಈ ರಾಜಕೀಯ ಶಕ್ತಿಯನ್ನು ತಮ್ಮ ಸಮುದಾಯದ ಭದ್ರತೆ, ಸಮಾನ ಹಕ್ಕುಗಳು ಮತ್ತು ಅಭಿವೃದ್ಧಿಗಾಗಿ ಎಷ್ಟರ ಮಟ್ಟಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದೇ ಮುಂದಿನ ಸವಾಲು. ನೆತನ್ಯಾಹು ಅವರ ರಾಜಕೀಯ ಭವಿಷ್ಯ ಮಾತ್ರವಲ್ಲದೆ, ಇಸ್ರೇಲ್‌ನ ಮುಂದಿನ ಆಡಳಿತದ ಸ್ವರೂಪವೂ ಅರಬ್ ಜನಪ್ರತಿನಿಧಿಗಳ ನಿಲುವು ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಅವಲಂಬಿತವಾಗುವ ಸಾಧ್ಯತೆಯಿದೆ. ಮತದಾನದ ಮೂಲಕ ವ್ಯಕ್ತವಾದ ಈ ಜನಶಕ್ತಿಯು ನೈಜ ಬದಲಾವಣೆಗೆ ದಾರಿಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

WhatsApp Image 2025 05 16 at 6.54.26 PM
Sub Editor at Eedina.com | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ ಭವಿಷ್ಯ

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ...