ನೇಪಾಳ ಪ್ರವಾಹದೊಂದಿಗೆ ಬಿಹಾರಕ್ಕೆ ಬಂದ ದೈತ್ಯ ಮೀನುಗಳು; ತಿನ್ನದಂತೆ ಸರ್ಕಾರ ಎಚ್ಚರಿಸಿರುವುದು ಏಕೆ?

Date:

ನೇಪಾಳದ ಭಾರೀ ಪ್ರವಾಹದ ನೀರಿನೊಂದಿಗೆ ಸುಮಾರು 150 ಕೆಜಿಗೂ ಅಧಿಕ ತೂಕದ ಹಲವು ಜಾತಿಯ ಅಪರೂಪದ ಮೀನುಗಳು ಬಿಹಾರದ ಗಂಡಕ್‌ ನದಿಗೆ ಬಂದು ಬಿದ್ದಿವೆ. ಗೂಂಚ್‌, ವಾಲ್ಲಾಗೋ, ಗ್ರಾಸ್‌ ಕಾರ್ಪ್‌, ರೋಹು ಸೇರಿ ಹಲವು ಮೀನುಗಳು ಪತ್ತೆಯಾಗಿವೆ. ಆದರೆ ಇವುಗಳನ್ನು ಸೇವಿಸದಂತೆ ಮೀನುಗಾರಿಕಾ ಇಲಾಖೆ ಎಚ್ಚರಿಕೆ ನೀಡಿರುವುದು ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.

- Advertisement -

ನೇಪಾಳದಲ್ಲಿ ಉಂಟಾಗಿದ್ದ ಭಾರಿ ಪ್ರವಾಹದ ಪರಿಣಾಮ ಗಂಡಕ್‌ ನದಿಯ ನೀರಿನ ಹರಿವು ಏಕಾಏಕಿ ಹೆಚ್ಚಿದೆ. ಇದರೊಂದಿಗೆ ನೇಪಾಳದ ಮೇಲ್ಭಾಗದ ಜಲಮೂಲಗಳಲ್ಲಿದ್ದ ಮೀನುಗಳು ಪ್ರವಾಹದ ರಭಸಕ್ಕೆ ಸಿಲುಕಿ ಬಿಹಾರದ ಗಂಡಕ್‌ ನದಿ ಹಾಗೂ ಸುತ್ತಮುತ್ತಲಿನ ಜಲಮೂಲಗಳಿಗೆ ಕೊಚ್ಚಿಕೊಂಡು ಬಂದಿವೆ. ಸಾಮಾನ್ಯವಾಗಿ ಕಾಣಸಿಗದಷ್ಟು ದೊಡ್ಡ ಗಾತ್ರದ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿರುವುದು ಇದೀಗ ಸ್ಥಳೀಯರ ಗಮನ ಸೆಳೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಂಡಕ್‌ ನದಿಯ ವಿವಿಧ ಘಾಟ್‌ಗಳಲ್ಲಿ 15ರಿಂದ 50 ಕೆಜಿ ತೂಕದ ಮೀನುಗಳು ಸಿಕ್ಕಿರುವ ವರದಿಗಳಿವೆ. ಕೆಲವು ಮೀನುಗಳು 100-150 ಕೆಜಿಗೂ ಹೆಚ್ಚು ತೂಕ ಹೊಂದಿವೆ ಎಂಬ ಸ್ಥಳೀಯ ವರದಿಗಳೂ ಬಂದಿದೆ. ಗೂಂಚ್‌, ಬಘಾರ್‌, ವಾಲ್ಲಾಗೋ, ಗ್ರಾಸ್‌ ಕಾರ್ಪ್‌ ಹಾಗೂ ರೋಹು ಸೇರಿದಂತೆ ಹಲವು ಜಾತಿಯ ಮೀನುಗಳು ಪ್ರವಾಹದ ನೀರಿನೊಂದಿಗೆ ಬಂದಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

ಆದರೆ ಈ ದೈತ್ಯ ಮೀನುಗಳ ಆಗಮನಕ್ಕಿಂತಲೂ ಅವುಗಳ ಸುರಕ್ಷತೆ ಹಾಗೂ ಜನರು ಆ ಮೀನುಗಳನ್ನ ತಿನ್ನದಂತೆ ಎಚ್ಚರಿಕೆ ವಹಿಸುವುದೇ ಈಗ ಅಧಿಕಾರಿಗಳಿಗೆ ತಲೆಬಿಸಿ ತಂದಿದೆ. ಪ್ರವಾಹದ ನೀರು ಚರಂಡಿ, ತ್ಯಾಜ್ಯ, ಸತ್ತ ಪ್ರಾಣಿಗಳು ಹಾಗೂ ಇತರ ಜೈವಿಕ ಅವಶೇಷಗಳೊಂದಿಗೆ ಬೆರೆತಿರುವ ಸಾಧ್ಯತೆಯಿರುವುದರಿಂದ, ಅದರೊಂದಿಗೆ ಬಂದ ಮೀನುಗಳು ಕೂಡ ಕಲುಷಿತಗೊಂಡಿರುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಬಿಹಾರದ ಮೀನುಗಾರಿಕಾ ಇಲಾಖೆ ಪ್ರವಾಹದ ನೀರಿನಿಂದ ನೇರವಾಗಿ ಹಿಡಿದ ಮೀನುಗಳನ್ನು ಸದ್ಯ ಸೇವಿಸದಂತೆ ಜನರಿಗೆ ಎಚ್ಚರಿಕೆ ನೀಡಿದೆ.

image 191

ಪ್ರವಾಹದ ನೀರಿನಲ್ಲಿ ಮೀನುಗಳೇಕೆ ಕೊಚ್ಚಿಕೊಂಡು ಬರುತ್ತವೆ?

ಭಾರಿ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ನದಿಗಳು, ಅಣೆಕಟ್ಟುಗಳು, ಕೆರೆಗಳು ಹಾಗೂ ಮೀನು ಸಾಕಾಣಿಕೆ ಕೊಳಗಳು ತುಂಬಿ ತುಳುಕುತ್ತವೆ. ನೀರಿನ ಮಟ್ಟ ಅಪಾಯಕಾರಿ ಮಟ್ಟ ಮೀರಿ ಹರಿಯುವಾಗ ಜಲಮೂಲಗಳ ನಡುವಿನ ನೈಸರ್ಗಿಕ ಹಾಗೂ ಕೃತಕ ಗಡಿಗಳು ಅಳಿದುಹೋಗುತ್ತವೆ. ರಭಸವಾಗಿ ಹರಿಯುವ ಪ್ರವಾಹದ ಒತ್ತಡವನ್ನು ತಡೆಯಲಾರದೆ ಆಳ ನೀರಿನಲ್ಲಿರುವ ದೊಡ್ಡ ಗಾತ್ರದ ಮೀನುಗಳು ತಮ್ಮ ಸಹಜ ಆವಾಸಸ್ಥಾನದಿಂದ ಬೇರ್ಪಟ್ಟು ನೂರಾರು ಕಿಲೋಮೀಟರ್ ದೂರಕ್ಕೆ ಕೊಚ್ಚಿಕೊಂಡು ಬರುತ್ತವೆ. ನೇಪಾಳದಿಂದ ಬಿಹಾರದತ್ತ ಹರಿಯುವ ಗಂಡಕ್‌ ನದಿಯಲ್ಲೂ ಇದೇ ರೀತಿಯ ವಿದ್ಯಮಾನ ಸಂಭವಿಸಿರುವ ಸಾಧ್ಯತೆಯಿದೆ.

ಸಿಕ್ಕಿರುವ ಪ್ರಮುಖ ಮೀನುಗಳ ಜಾತಿ ಮತ್ತು ವೈಶಿಷ್ಟ್ಯ

  • ಗೂಂಚ್ (Goonch): ಹಿಮಾಲಯನ್ ಕ್ಯಾಟ್‌ಫಿಶ್ ಎಂದು ಕರೆಯಲ್ಪಡುವ ಈ ಗೂಂಚ್‌ (Bagarius ಜಾತಿಯ ದೊಡ್ಡ ಕ್ಯಾಟ್‌ಫಿಶ್‌) ದೊಡ್ಡ ನದಿಗಳಲ್ಲಿ ವಾಸಿಸುವ ಬಲಿಷ್ಠ ಪರಭಕ್ಷಕ ಮೀನು. ಇದು ಮೀನುಗಳು ಸೇರಿದಂತೆ ಜಲಚರಗಳನ್ನು ತಿನ್ನುತ್ತದೆ. FishBaseನಲ್ಲಿ ಇದರ ʼThreat to humans: Harmlessʼ ಎಂದು ದಾಖಲಿಸಲಾಗಿದೆ. ಗರಿಷ್ಠ ಉದ್ದ ಸುಮಾರು 2.3 ಮೀಟರ್‌. ಆದರೆ ಭಾರತ-ನೇಪಾಳ ಗಡಿಯ ಕಾಳಿ ನದಿಯಲ್ಲಿ ಗೂಂಚ್‌ ಮನುಷ್ಯರ ಮೇಲೆ ದಾಳಿ ಮಾಡಿದೆ ಎಂಬ ಜನಪ್ರಿಯ ದಂತಕಥೆಗಳಿವೆ. 1998ರಿಂದ 2007ರ ನಡುವೆ ಕೆಲವು ಜನರು ನದಿಯಲ್ಲಿ ಮುಳುಗಿ ನಾಪತ್ತೆಯಾದ ಘಟನೆಗಳಿಗೆ ದೊಡ್ಡ ಗೂಂಚ್‌ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು. ನದಿಯಲ್ಲಿ ಅಂತ್ಯಕ್ರಿಯೆಯ ಅವಶೇಷಗಳನ್ನು (ಶವ) ಹಾಕುತ್ತಿದ್ದುದರಿಂದ ಆ ಮೀನುಗಳು ಮಾನವ ಮಾಂಸಕ್ಕೆ ಒಗ್ಗಿಕೊಂಡಿರಬಹುದು ಎಂಬ ಇನ್ನೊಂದು ಸಿದ್ಧಾಂತವೂ ಇತ್ತು. ಆದರೆ ಇದಾವುದಕ್ಕೂ ಅಧಿಕೃತ ಪುರಾವೆ ಸಿಕ್ಕಿಲ್ಲ.
  • ಬಘಾರ್ ಮತ್ತು ವಾಲ್ಲಾಗೋ: ಇವು ಕೂಡ ದೊಡ್ಡ ಗಾತ್ರದ ಪರಭಕ್ಷಕ ಕ್ಯಾಟ್‌ಫಿಶ್ ಜಾತಿಗಳಿಗೆ ಸೇರಿದ್ದು, ಅತ್ಯಂತ ವೇಗವಾಗಿ ಬೆಳೆಯುವ ಮತ್ತು ಭಾರವಾದ ಶರೀರವನ್ನು ಹೊಂದಿವೆ.
  • ಗ್ರಾಸ್ ಕಾರ್ಪ್ ಮತ್ತು ರೋಹು: ಸಾಮಾನ್ಯವಾಗಿ ಮೀನುಗಾರಿಕಾ ಕೊಳಗಳು ಮತ್ತು ನಿಧಾನವಾಗಿ ಹರಿಯುವ ನದಿಗಳಲ್ಲಿ ಕಂಡುಬರುವ ಈ ಮೀನುಗಳು ಪ್ರವಾಹದ ರಭಸಕ್ಕೆ ಸಿಲುಕಿ ನದಿಯ ಮುಖ್ಯವಾಹನೆಗೆ ಬಂದಿವೆ.
  • ತೂಕದ ವಿವರ: ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿರುವ ಮೀನುಗಳು ಸಾಮಾನ್ಯವಾಗಿ 15ರಿಂದ 50 ಕೆಜಿ ತೂಕವಿವೆ. ಆದರೆ ಕೆಲವು ದೈತ್ಯ ಮೀನುಗಳು 100 ರಿಂದ 150 ಕೆಜಿಗೂ ಅಧಿಕ ತೂಕವನ್ನು ಹೊಂದಿವೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ. 4-5 ಮಂದಿ ಆ ಮೀನನ್ನು ಸಮುದ್ರದಿಂದ ಹೊತ್ತು ತರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ ದೊಡ್ಡ ಗಾತ್ರ ಹೊಂದಿರುವುದೇ ಒಂದು ಮೀನು ಮನುಷ್ಯರಿಗೆ ಅಪಾಯಕಾರಿ ಅಥವಾ ವಿಷಕಾರಿ ಎಂಬುದಕ್ಕೆ ಸಾಕ್ಷಿಯಲ್ಲ. ಗಂಡಕ್‌ಗೆ ಬಂದಿರುವ ಎಲ್ಲ ದೊಡ್ಡ ಮೀನುಗಳೂ ಒಂದೇ ಜಾತಿಗೆ ಸೇರಿದವುಗಳಲ್ಲ. ಸ್ಥಳೀಯ ವರದಿಗಳಲ್ಲಿ ಹಲವು ಜಾತಿಗಳ ಉಲ್ಲೇಖವಿದ್ದು, ಪ್ರತಿಯೊಂದು ಮೀನಿನ ಜಾತಿ ಹಾಗೂ ತೂಕವನ್ನು ಅಧಿಕೃತವಾಗಿ ಗುರುತಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ.

ಹಾಗಾದರೆ ಮೀನು ತಿನ್ನದಂತೆ ಏಕೆ ಸೂಚನೆ?

ಇಲ್ಲಿ ಮುಖ್ಯವಾಗುವುದು ಮೀನಿನ ಗಾತ್ರವಲ್ಲ, ಅದು ಬಂದಿರುವ ನೀರಿನ ಗುಣಮಟ್ಟ. ಪ್ರವಾಹದ ನೀರಿನಲ್ಲಿ ಕೊಳಚೆ, ತ್ಯಾಜ್ಯ ಮತ್ತು ಸತ್ತ ಜೀವಿಗಳ ಅವಶೇಷಗಳು ಬೆರೆತಿದ್ದರೆ ರೋಗಕಾರಕ ಸೂಕ್ಷ್ಮಜೀವಿಗಳಿಂದ ನೀರು ಕಲುಷಿತಗೊಳ್ಳಬಹುದು. ಅಂತಹ ನೀರಿನಲ್ಲಿ ಕೆಲಕಾಲ ಇದ್ದ ಮೀನುಗಳೂ ಮಾಲಿನ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ.

ಈ ಕಾರಣದಿಂದಲೇ ಬಿಹಾರದ ಮೀನುಗಾರಿಕಾ ಇಲಾಖೆ ಪ್ರವಾಹದ ನೀರಿನಿಂದ ನೇರವಾಗಿ ಹಿಡಿದ ಮೀನುಗಳ ಸೇವನೆಯ ಬಗ್ಗೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಅಪರಿಚಿತವಾಗಿ ಕಾಣುವ ಮೀನುಗಳನ್ನು ಹಿಡಿಯುವುದು, ಖರೀದಿಸುವುದು ಅಥವಾ ಸೇವಿಸುವುದನ್ನು ಸದ್ಯಕ್ಕೆ ತಪ್ಪಿಸುವಂತೆ ಜನರಿಗೆ ಸೂಚಿಸಿದೆ.

ಮಾರುಕಟ್ಟೆಗೆ ತಲುಪಿದರೆ ಮತ್ತಷ್ಟು ಆತಂಕ

ಪ್ರವಾಹದ ನೀರಿನಲ್ಲಿ ಸಿಕ್ಕ ಮೀನುಗಳು ಸ್ಥಳೀಯ ಮಾರುಕಟ್ಟೆಗಳಿಗೆ ತಲುಪಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ಮೀನು ಎಲ್ಲಿಂದ ಬಂದಿದೆ, ಯಾವ ನೀರಿನಲ್ಲಿ ಇತ್ತು ಮತ್ತು ಅದು ಕಲುಷಿತ ನೀರಿನ ಸಂಪರ್ಕಕ್ಕೆ ಬಂದಿದೆಯೇ ಎಂಬ ಮಾಹಿತಿ ಇಲ್ಲದೆ ಗ್ರಾಹಕರು ಅದರ ಸುರಕ್ಷತೆಯನ್ನು ನಿರ್ಧರಿಸುವುದು ಕಷ್ಟ. ಹಾಗಾಗಿ ಮೀನುಗಾರರು ಮತ್ತು ವ್ಯಾಪಾರಿಗಳು ಕೂಡ ಪ್ರವಾಹದ ನೀರಿನಿಂದ ನೇರವಾಗಿ ಸಿಕ್ಕ ಮೀನುಗಳ ಮಾರಾಟದಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅನುಮಾನಾಸ್ಪದ ಅಥವಾ ಅಪರಿಚಿತ ಜಾತಿಯ ಮೀನುಗಳು ಕಂಡುಬಂದರೆ ಅವುಗಳ ಬಗ್ಗೆ ಸಂಬಂಧಪಟ್ಟ ಮೀನುಗಾರಿಕಾ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

image 2026 09 01T165748.734

ನೇಪಾಳದ ಪ್ರವಾಹದ ನೀರಿನೊಂದಿಗೆ ಬಿಹಾರದ ಗಂಡಕ್‌ ಪ್ರದೇಶಕ್ಕೆ ಬಂದಿರುವ ದೊಡ್ಡ ಮೀನುಗಳು ಜನರಲ್ಲಿ ಕುತೂಹಲ ಮೂಡಿಸಿರುವುದು ನಿಜ. ಆದರೆ ಈ ಬೆಳವಣಿಗೆಯ ಹಿಂದೆ ಇರುವ ದೊಡ್ಡ ಸಂಗತಿ ಪ್ರವಾಹದ ರಭಸ ಮತ್ತು ಅದರೊಂದಿಗೆ ಬದಲಾಗುತ್ತಿರುವ ಜಲಪರಿಸರ. ಹೀಗಾಗಿ ಪ್ರವಾಹದ ನೀರಿನಿಂದ ನೇರವಾಗಿ ಸಿಕ್ಕ ಮೀನುಗಳ ಸುರಕ್ಷತೆ ಖಚಿತವಾಗುವವರೆಗೆ ಅವುಗಳ ಸೇವನೆಯಿಂದ ದೂರವಿರುವುದೇ ಸೂಕ್ತ ಎಂದು ಸರ್ಕಾರ ಸಲಹೆ ಇತ್ತಿದೆ.

ಪ್ರವಾಹಗಳಲ್ಲಿ ಮೀನು ಕೊಚ್ಚಿಕೊಂಡು ಬರುವುದು ಇದೇ ಮೊದಲಲ್ಲ. 2008ರಲ್ಲಿ ಬಿಹಾರದ ಕೋಸಿ ಪ್ರವಾಹದ ಸಂದರ್ಭದಲ್ಲಿ ಪ್ರವಾಹದಿಂದ ಸುತ್ತುವರಿದ ಮಧೇಪುರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರಿಗೆ ಆಹಾರದ ಕೊರತೆ ಎದುರಾಗಿತ್ತು. ಆಗ ಕಲುಷಿತ ಕೋಸಿ ನದಿಯಿಂದ ಹಿಡಿದ ಮೀನುಗಳೇ ಕೆಲವು ಗ್ರಾಮಗಳ ಜನರ ಪ್ರಮುಖ ಆಹಾರವಾಗಿದ್ದವು. ಅಗ್ಗವಾಗಿ ಸಿಗುತ್ತಿದ್ದ ಕಾರಣ ಜನರು ಅವುಗಳನ್ನು ಹಿಡಿದುಕೊಂಡು ತಿನ್ನುವುದಲ್ಲದೆ, ಮಾರುಕಟ್ಟೆಯಲ್ಲೂ ಮಾರಾಟ ಮಾಡುತ್ತಿದ್ದರು.

ಆ ಸಮಯದಲ್ಲಿ ಕಲುಷಿತ ಮೀನು ಸೇವನೆಯಿಂದ ಅತಿಸಾರ, ಹೊಟ್ಟೆಯ ಸಮಸ್ಯೆಗಳು ಮತ್ತು ಗ್ಯಾಸ್ಟ್ರೋಎಂಟರೈಟಿಸ್‌ ಪ್ರಕರಣಗಳು ಹೆಚ್ಚಾಗಿದ್ದವು ಎಂದು Hindustan Times ವರದಿ ಮಾಡಿತ್ತು. ಮಧೇಪುರಾ ಮತ್ತು ಪೂರ್ಣಿಯಾ ಪ್ರದೇಶಗಳಲ್ಲಿ ಮೀನು ಸೇವನೆಯೊಂದಿಗೆ ಅನಾರೋಗ್ಯದ ಪ್ರಕರಣಗಳು ವರದಿಯಾಗಿದ್ದವು. ವೈದ್ಯರು ಆ ಮೀನುಗಳು ಕಲುಷಿತಗೊಂಡಿರುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದರು.

ಇದನ್ನೂ ಓದಿ: ಬೋಸ್ನಿಯಾದ ʼನರಹಂತಕʼ ರಾಟ್ಕೊ ಮ್ಲಾಡಿಚ್‌ ಅಂತ್ಯ; ಮುಗಿದದ್ದು ಕರಾಳ ಅಧ್ಯಾಯ ಮಾತ್ರ!…

2024ರ ಮೇನಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ಒಣಗಿದ್ದ ಕೆರೆಯಿಂದ ಹಿಡಿದ ಮೀನು ತಿಂದ ಬಳಿಕ 15 ಜನ ಅಸ್ವಸ್ಥರಾಗಿದ್ದು, ಇಬ್ಬರು ಮೃತಪಟ್ಟಿದ್ದರು. ಅಸ್ವಸ್ಥರಾದವರಿಗೆ ವಾಂತಿ ಮತ್ತು ಅತಿಸಾರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆರಂಭಿಕ ತನಿಖೆಯಲ್ಲಿ ಮೀನಿನಲ್ಲಿ ಸಮಸ್ಯೆ ಇಲ್ಲ ಎಂಬ ಸೂಚನೆ ಬಂದಿದ್ದು, ಕೆರೆಯ ನೀರು ಕಲುಷಿತವಾಗಿರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಶಂಕಿಸಿದ್ದರು.

ಈ ಹಿನ್ನೆಲೆಯಲ್ಲಿಯೇ ಬಿಹಾರ ಸರ್ಕಾರ ಪ್ರವಾಹದ ನೀರಿನಲ್ಲಿ ಸಿಕ್ಕ ಮೀನುಗಳನ್ನು ಸೇವಿಸದಂತೆ ಅಲ್ಲಿನ ಜನರಿಗೆ ಎಚ್ಚರಿಕೆ ನೀಡಿದೆ. ಗಂಡಕ್‌ ನದಿಯಲ್ಲಿ ಕಾಣಿಸಿಕೊಂಡಿರುವ ಬೃಹತ್‌ ಮೀನುಗಳು ಪ್ರವಾಹ ಎಷ್ಟು ದೂರದ ಜಲಪರಿಸರವನ್ನು ಬದಲಾಯಿಸಬಲ್ಲದು ಎಂಬುದಕ್ಕೆ ಒಂದು ಕುತೂಹಲಕಾರಿ ಉದಾಹರಣೆ. ಆದರೆ ಈ ಬೆಳವಣಿಗೆಯಿಂದ ಭಯಪಡುವ ಅಗತ್ಯವಿಲ್ಲ. ಮೀನಿನ ಜಾತಿ ಮತ್ತು ಗಾತ್ರದ ಬಗ್ಗೆ ಹರಿದಾಡುವ ಮಾಹಿತಿಗಿಂತ, ಅವು ಬಂದಿರುವ ನೀರು ಕಲುಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಹೀಗಾಗಿ ಅಧಿಕಾರಿಗಳಿಂದ ಸುರಕ್ಷತೆ ಖಚಿತವಾಗುವವರೆಗೆ ಇಂತಹ ಮೀನುಗಳನ್ನು ಆಹಾರವಾಗಿ ಬಳಸದೆ ಇರುವುದು ಸೂಕ್ತ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...