‘ಬಿಡದಿ ಟೌನ್‌ಶಿಪ್ ವಿರೋಧಿಸಿ ವಿಧಾನಸೌಧ ಮುತ್ತಿಗೆಗೂ ಸಿದ್ಧ’: ಡಿಕೆಶಿಗೆ ರೈತರ ವಾರ್ನಿಂಗ್!

Date:

“ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಬಿಡದಿ ರೈತರ ಭೂಮಿ ತಂಟೆಗೆ ಬರಬೇಡಿ. ನಿಮಗೆ ಸಿಕ್ಕಿರುವ ಅಧಿಕಾರವನ್ನು ಕಳೆದುಕೊಳ್ಳಬೇಡಿ. ಇಲ್ಲಿನ ಭೂಮಿಯ ಮೇಲೆ ಕಣ್ಣು ಹಾಕಿದಾಗ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು, ಯಡಿಯೂರಪ್ಪ ಕುರ್ಚಿಯಿಂದ ಇಳಿದರು, ಬಿಡದಿ ಟೌನ್‌ಶಿಪ್‌ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಸಿದ್ದರಾಮಯ್ಯ ಅಧಿಕಾರದಿಂದ ಹೊರ ನಡೆದರು. ಈಗ ನಿಮ್ಮ ಸರದಿ. ಇಲ್ಲಿನ ಭೂಮಿಯಲ್ಲಿ ಯಾವುದೋ ಶಕ್ತಿ ಇದೆ. ಇದರ ಮೇಲೆ ಕಣ್ಣು ಹಾಕಿದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದನ್ನು ಮರೆಯದಿರಿ” ಎನ್ನುತ್ತಾರೆ ಬಿಡದಿ ಟೌನ್ ಶಿಪ್ ವಿರೋಧಿ ರೈತ ಮುಖಂಡ ಅರಳಾಳುಸಂದ್ರ ಅಶ್ವತ್ಥ್.

- Advertisement -

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮಗಳ ಸುಮಾರು 9640 ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ಹೋರಾಟ 444 ದಿನಕ್ಕೆ ಕಾಲಿಟ್ಟಿದೆ. ರೈತರ ಭೂಮಿ ಸ್ವಾಧೀನಕ್ಕೆ ಪಡೆಯಲು ಯತ್ನಿಸುತ್ತಿರುವವರಲ್ಲಿ ಪ್ರಮುಖರಾಗಿರುವ ಡಿಕೆಶಿ ಅವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ. ಪಟ್ಟುಬಿಡದ ರೈತರನ್ನು ಒಕ್ಕಲೆಬ್ಬಿಸುವುದು ಅಷ್ಟು ಸುಲಭವಲ್ಲ. ಡಿಕೆಶಿಯವರು ಈಗ ಯಾವ ಹೆಜ್ಜೆ ಇಡುತ್ತಾರೆಂಬುದು ಅಸ್ಪಷ್ಟವಾಗಿದ್ದರೂ, ರೈತರಂತೂ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ತೆಂಗು, ಅಡಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು, ಜೋಳ, ರಾಗಿ ಸೇರಿದಂತೆ ವಿವಿಧ ರೀತಿಯ ಹಣ್ಣು, ತರಕಾರಿಗಳನ್ನು ನೀಡುವ ಫಲವತ್ತಾದ ನೆಲದ ಮೇಲೆ ಸರ್ಕಾರದ ಹಿಡಿತ ಸಾಧಿಸುವುದು ಸುಲಭವಲ್ಲ. ರೇಷ್ಮೆ ಕೃಷಿ, ಹೈನುಗಾರಿಕೆಗೆ ಬೆನ್ನೆಲುಬಾಗಿರುವ ಈ ಸಮೃದ್ಧ ಹಸಿರು ಪ್ರದೇಶವನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಗಟ್ಟಿಯಾಗಿ ನಿಂತಿದ್ದಾರೆ ರೈತರು.

ನಾವು ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ತಲುಪುತ್ತೇವೆ ಎನ್ನುವ ಅಶ್ವತ್ಥ್, “ಅಧಿಕಾರ ಬದಲಾದರೂ ನಮ್ಮ ಹೋರಾಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಲ್ಲಿನ ಫಲವತ್ತಾದ ಹಸಿರು ಭೂಮಿಯನ್ನು ಉಳಿಸಿಕೊಳ್ಳಲು ನಾವು ಮತ್ತಷ್ಟು ತೀವ್ರತರನಾದ ಹೋರಾಟವನ್ನು ನಡೆಸುತ್ತೇವೆ. ಯಾವುದೇ ಪಕ್ಷದ, ಯಾವುದೇ ಸಂಘಟನೆಯ ಬೆಂಬಲ ಸಿಕ್ಕರೂ ಪಡೆಯುತ್ತೇವೆ. ಈಗ ಕೆಆರ್‌ಎಸ್ ಪಕ್ಷವು ಬೈಕ್ ರ್ಯಾಲಿ ಮೂಲಕ ಹೋರಾಟಕ್ಕೆ ಬೆಂಬಲಿಸಿದೆ. ಬಿಜೆಪಿಯ ಕೆಲವು ನಾಯಕರೂ ಹೋರಾಟಕ್ಕೆ ಬರುತ್ತಿದ್ದಾರೆ. ರೈತ, ಕಾರ್ಮಿಕ, ದಲಿತ, ಕನ್ನಡ ಪರ, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡುತ್ತಿವೆ. ಸಂಯುಕ್ತ ಹೋರಾಟ ಕರ್ನಾಟಕದ ಹೋರಾಟಗಾರರು ಚಳವಳಿಯ ಜೊತೆಗಿದ್ದಾರೆ” ಎಂದಿದ್ದಾರೆ.

ಮುಂದುವರಿದು, “ದೊಡ್ಡ ಮಟ್ಟದ ಭೂಮಿ ಇರುವ ಕೆಲವರು ಅಧಿಕಾರಶಾಹಿಗಳ ಜೊತೆಗೆ ಗುರುತಿಸಿಕೊಂಡಿರಬಹುದು. ಬ್ರಿಟಿಷರು ದೇಶದ ಒಳಗೆ ನುಗ್ಗಿದಾಗ ನಮ್ಮಲ್ಲೇ ಕೆಲವರು ಬ್ರಿಟಿಷರಿಗೆ ಸಹಾಯ ಮಾಡಿದ್ದು ಕಂಡಿದ್ದೇವೆ. ಆದರೆ ಸಣ್ಣಪುಟ್ಟ ರೈತರು ಹೋರಾಟದ ಜೊತೆಗಿದ್ದಾರೆ. ಭೂಮಿ ಬಿಟ್ಟುಕೊಡುವಂತೆ ಬೆದರಿಸಿರುವ ಘಟನೆಗಳೂ ಆಗಿವೆ. ಕೇಸ್‌ಗಳನ್ನು ಹಾಕಿಸುವುದಾಗಿ ಹೆದರಿಸಿ ಕೆಲವರ ಮೇಲೆ ಒತ್ತಡ ಹಾಕುವ ಕುತಂತ್ರವು ನಡೆದಿದೆ. ಆದರೆ ರೈತರೆಲ್ಲ ಒಗ್ಗಟ್ಟಲ್ಲಿ ಇದ್ದೇವೆ. ಡಿಕೆಶಿಯವರಿಗೆ ಅಧಿಕಾರ ಸಿಕ್ಕಿರುವ ಕಾರಣ, ಕೆಲವರು ಅವರ ಹಿಂದೆ ಸುತ್ತಬಹುದು. ಆದರೆ ಅಧಿಕಾರ ಹೊರಟು ಹೋದರೆ, ಅವರೊಂದಿಗೆ ಯಾರೂ ಇರುವುದಿಲ್ಲ ಎಂಬ ಎಚ್ಚರಿಕೆ ಅವರಿಗೆ ಇರಬೇಕು” ಎಂದು ಕಿವಿಮಾತು ಹೇಳುತ್ತಾರೆ.

“ಬಿಡದಿ ಭಾಗದ ಭೂಮಿಯಿಂದ 30,000 ಕೋಟಿ ರೂ. ಬರುತ್ತದೆ ಎಂದು ಸರ್ಕಾರ ಯೋಚಿಸುತ್ತಿದೆ. ರೈತರ ಭೂಮಿ ಕಬಳಿಸಿ ಈ ಸರ್ಕಾರ ನಡೆಯಬೇಕಾ?” ಎಂದು ಪ್ರಶ್ನಿಸುವ ಅವರು, “ಡಿಕೆಶಿಯವರೇ ನೀವು ಅಧಿಕಾರ ನಡೆಸಿರಿ. ನೀವು ಒಕ್ಕಲಿಗ ನಾಯಕರಿದ್ದೀರಿ. ನೀವು ಮುಖ್ಯಮಂತ್ರಿಯಾಗಿರುವುದು ನಮಗೇನೂ ತೊಂದರೆ ಇಲ್ಲ. ಆದರೆ ನಿಮ್ಮ ಪಟಾಲಂನ ಮಾತು ಕೇಳಿ ಈ ಭೂಮಿಗೆ ಕೈ ಹಾಕಿದರೆ, ನಿಮ್ಮ ಅಧಿಕಾರ ಉಳಿಯುವುದಿಲ್ಲ. ನಮ್ಮ ಹಕ್ಕು ಕೇಳುತ್ತಿದ್ದೇವೆ ಅಷ್ಟೇ. ನಾವು ರಾಜಕೀಯ ಮಾಡುತ್ತಿಲ್ಲ. ಇಲ್ಲಿನ ಜನ ಯಾರನ್ನಾದರೂ ಬೆಂಬಲಿಸಿಕೊಳ್ಳಲಿ. ಆದರೆ ಇಲ್ಲಿನ ಭೂಮಿ, ತೋಟ, ತರಕಾರಿ, ಗೋವುಗಳು, ಪರಿಸರ ಉಳಿಯಬೇಕು. ರೇಷ್ಮೆ ಬೆಳೆದು ಬದುಕುತ್ತಿರುವ ರೈತರು ಉಸಿರಾಡಬೇಕು” ಎಂದು ಹೇಳುತ್ತಾರೆ.

ಈ ಲೇಖನ ಓದಿದ್ದೀರಾ?: ನಿಜವಾದ ಶಿಸ್ತಿನ ಪಕ್ಷ ಕಾಂಗ್ರೆಸ್ಸೋ? ಬಿಜೆಪಿಯೋ?

“ಡಿಕೆಶಿಯವರೇ ಉಪಮುಖ್ಯಮಂತ್ರಿ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಜಿಗಿದಿದ್ದೀರಿ. ಡಿಸಿಎಂ ಹುದ್ದೆಯಲ್ಲಿದ್ದು ಹೇಳಿಕೆ ಕೊಡುವುದಕ್ಕೂ ಸಿಎಂ ಆಗಿ ಹೇಳಿಕೆ ಕೊಡುವುದಕ್ಕೂ ಬಹಳ ವ್ಯತ್ಯಾಸಗಳಿವೆ. ರೈತರ ಬಗ್ಗೆ ಕಾಳಜಿ ಇಟ್ಟುಕೊಂಡು ಸರ್ಕಾರ ನಡೆಸಿದರೆ ಮುಂದೆ ನಿಮಗೆ ಭವಿಷ್ಯವಿದೆ. ರಾಮನಗರ ಜಿಲ್ಲೆಯವರಾದ ನೀವು ಮುಖ್ಯಮಂತ್ರಿ ಪದವಿಗೇರಿರುವುದು ನಮಗೂ ಹೆಮ್ಮೆಯ ವಿಷಯ. ನೀವು ಹಿಂದಿನದನ್ನೆಲ್ಲ ಮರೆತು, ರೈತರ ಪರವಾಗಿ ನಿಲ್ಲುತ್ತೀರೆಂಬ ವಿಶ್ವಾಸವಿದೆ” ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ.

‘ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಪಂ ಸುತ್ತಮುತ್ತಲಿನ ರೈತರ ಭೂ ಹಿತರಕ್ಷಣಾ ಸಮಿತಿ’ಯ ಖಜಾಂಚಿ ನಾಗರಾಜ್ ಮಂಡಲಹಳ್ಳಿ ಅವರು ‘ಈದಿನ’ದ ಜೊತೆ ಮಾತನಾಡಿ, “ಭೂಮಿ ಕೊಡಲು ರೈತರು ಸಿದ್ದರಿದ್ದಾರೆ ಎಂದು ಈ ಹಿಂದೆ ಡಿಕೆಶಿ ಹೇಳಿಕೆ ನೀಡಿದ್ದರು. ಆದರೆ ತಾವಾಗಿಯೇ ಈ ಹೇಳಿಕೆ ನೀಡಿದ್ದರೆಂದು ನನಗೆ ಅನಿಸುವುದಿಲ್ಲ. ಸ್ಥಳೀಯವಾಗಿ ಸಕ್ರಿಯರಾಗಿರುವ ರಾಜಕೀಯ ಕುತಂತ್ರಿಗಳ ಸುಳ್ಳುಗಳನ್ನು ನಂಬಿ ಡಿಕೆಶಿ ಹೇಳಿಕೆ ಕೊಟ್ಟಂತೆ ಕಾಣುತ್ತಿತ್ತು” ಎಂದು ಅಭಿಪ್ರಾಯಪಟ್ಟರು.

“ಮುಂದೆ ಅವರು ಇಲ್ಲಿಗೆ ಬಂದು ರೈತರ ವಸ್ತುಸ್ಥಿತಿಯನ್ನು ತಿಳಿದುಕೊಳ್ಳಬೇಕು. ಸೂಕ್ತವಾದ ಸಮಿತಿಯೊಂದನ್ನು ಕಳುಹಿಸಿ ಪರಿಶೀಲನೆ ಮಾಡಬೇಕು. ರೈತರ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ರೈತರನ್ನು ಎದುರು ಹಾಕಿಕೊಂಡು ಯಾವುದೇ ಸರ್ಕಾರ ಉಳಿದ ಇತಿಹಾಸವಿಲ್ಲ. ಸರ್ಕಾರ ನಿಲುವು ಬದಲಿಸದಿದ್ದರೆ, ನಾವು ಯಾವುದೇ ಮಟ್ಟದ ಹೋರಾಟಕ್ಕೂ ಸಿದ್ದವಿದ್ದೇವೆ. ವಿಧಾನಸೌಧ ಮುತ್ತಿಗೆ ಹಾಕಲೂ ಹಿಂಜರೆಯುವುದಿಲ್ಲ” ಎಂದು ಹೇಳಿದರು.

ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್ ಟಿ. ಪ್ರತಿಕ್ರಿಯಿಸಿ, “ಡಿ.ಕೆ. ಶಿವಕುಮಾರ್ ಅವರು ರೂಢಿಗತ ಮನಸ್ಥಿತಿಯನ್ನು ಬಿಡಬೇಕು. ಸ್ವಹಿತಾಸಕ್ತಿಯನ್ನು ಬದಿಗಿರಿಸಿ ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ಬಿಡದಿ ಟೌನ್ ಶಿಪ್ ವಿರೋಧದಲ್ಲಿ ರೈತರೇ ಇಲ್ಲ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ವ್ಯವಸಾಯಗಾರರ ನಿಜಸ್ಥಿತಿಯನ್ನು ತೆರೆದಿಟ್ಟ ಬಳಿಕ, ಶೇ.80ರಷ್ಟು ರೈತರು ಭೂಸ್ವಾಧೀನಕ್ಕೆ ಅನುಮತಿ ನೀಡಿದ್ದಾರೆ ಎಂದು ಸುಳ್ಳು ಹೇಳಿದ್ದರು. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಜನಮತ ನಡೆಸಬೇಕು. ಇಲ್ಲಿನ ನೂರಕ್ಕೆ ನೂರರಷ್ಟು ರೈತರು ಸರ್ಕಾರದ ನಿಲುವಿಗೆ ವಿರುದ್ಧವಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾದ ಫುಡಾರಿಗಳು ಒಬ್ಬರನ್ನೊಬ್ಬರು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಡಿಕೆಶಿಯವರು ಜನರ ಅಹವಾಲು ಕೇಳಿಸಿಕೊಳ್ಳಬೇಕು” ಎಂದು ಆಗ್ರಹಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿಗೆ ಅಣ್ಣಾಮಲೈ ಬೆಂಬಲ: ‘ಬಂಧನವು ಅವರನ್ನು ಮತ್ತಷ್ಟು ಬಲಶಾಲಿಗಳನ್ನಾಗಿಸುತ್ತದೆ’ ಎಂದ ನಾಯಕ

ಚುನಾವಣಾ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮಗಳು ನಡೆದಿವೆ ಎಂದು...

ಆರ್‌ಎಸ್‌ಎಸ್‌ ಕೇವಲ ಪುರುಷರಿರುವ ‘ಸಂವಿಧಾನ ವಿರೋಧಿ’ ಸಂಘಟನೆ: ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ...

ಅಪ್ರಾಪ್ತ ಮಗನ ಕಾರು ಅಪಘಾತದಲ್ಲಿ ಮೂವರ ಸಾವು; ತಂದೆ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಅಪ್ರಾಪ್ತ ವಯಸ್ಸಿನ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ...

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...