ಪ್ರಜಾಪ್ರಭುತ್ವದ ಮನೆಗಳಲ್ಲಿ ಮೂಕವೇದನೆ: ಕುಸಿಯುತ್ತಿವೆ ಅಧಿವೇಶನದ ದಿನಗಳು

Date:

ಕರ್ನಾಟಕ ಶಾಸಕಾಂಗದ ನಿಯಮಗಳ ಪ್ರಕಾರ, ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕು. ಆದರೆ, ಕರ್ನಾಟಕದಲ್ಲಿ ಕೇವಲ 34 ದಿನಗಳು ಮಾತ್ರವೇ ಕಲಾಪಗಳು ನಡೆದಿವೆ. ಆದಾಗ್ಯೂ, ದೇಶದಲ್ಲೇ ಅತ್ಯಂತ ಗರಿಷ್ಠ ಸಂಖ್ಯೆಯ ಅಂದರೆ ಒಟ್ಟು 84 ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗಕ್ಕೆ – ಕೇಂದ್ರದಲ್ಲಿ ಲೋಕಸಭೆ/ರಾಜ್ಯಸಭೆ, ರಾಜ್ಯದಲ್ಲಿ ವಿಧಾನಸಭೆ/ವಿಧಾನಪರಿಷತ್ – ಅತ್ಯುನ್ನತ ಸ್ಥಾನವಿದೆ. ಜನರ ಆಶೋತ್ತರಗಳನ್ನು ಈಡೇರಿಸಲು, ಜನಪರ ಕಾನೂನುಗಳನ್ನು ರೂಪಿಸಲು ಹಾಗೂ ಸರ್ಕಾರದ ನೀತಿ-ನಿಯಮಗಳನ್ನು ಕೂಲಂಕಷವಾಗಿ ಚರ್ಚಿಸಲು ಸಂವಿಧಾನವು ಈ ವೇದಿಕೆಯನ್ನು ಕಲ್ಪಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇಶದ ರಾಜ್ಯ ವಿಧಾನಸಭೆಗಳ ಕಾರ್ಯವೈಖರಿ ಮತ್ತು ಗಂಭೀರತೆಯು ಆತಂಕಕಾರಿ ಮಟ್ಟದಲ್ಲಿ ಕುಸಿಯುತ್ತಿದೆ. ಪ್ರಮುಖ ಶಾಸನಗಳು ಯಾವುದೇ ಗಂಭೀರ ಚರ್ಚೆಗಳಿಲ್ಲದೆ ಕ್ಷಣಾರ್ಧದಲ್ಲಿ ಅಂಗೀಕಾರಗೊಳ್ಳುತ್ತಿರುವುದು ಮತ್ತು ಅಧಿವೇಶನಗಳ ದಿನಗಳು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ.

- Advertisement -

ಇತ್ತೀಚೆಗೆ, ಪ್ರಸಿದ್ಧ ಸಂಶೋಧನಾ ಸಂಸ್ಥೆಯಾದ ‘ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್’ ಬಿಡುಗಡೆ ಮಾಡಿರುವ ‘ಆನ್ಯುಯಲ್ ರಿವ್ಯೂ ಆಫ್ ಸ್ಟೇಟ್ ಲಾಸ್ 2025’ (ರಾಜ್ಯ ಕಾಯ್ದೆಗಳ ವಾರ್ಷಿಕ ಪರಾಮರ್ಶೆ) ವರದಿಯು ಕಹಿ ಸತ್ಯವನ್ನು ಅಂಕಿ-ಅಂಶಗಳ ಸಮೇತ ಬಿಚ್ಚಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಇತಿಹಾಸವನ್ನು ನೋಡಿದರೆ, 1950ರ ದಶಕದಲ್ಲಿ, ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ದೇಶದ ರಾಜ್ಯ ವಿಧಾನಸಭೆಗಳು ಅತ್ಯಂತ ಸಕ್ರಿಯವಾಗಿ ಮತ್ತು ದೀರ್ಘಾವಧಿಯವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಆ ಅವಧಿಯಲ್ಲಿ ದೇಶದ ಬಹುತೇಕ ರಾಜ್ಯಗಳ ಶಾಸಕಾಂಗಗಳು ವರ್ಷಕ್ಕೆ ಸರಾಸರಿ 60 ರಿಂದ 70 ದಿನಗಳ ಕಾಲ ಸದನ ಸೇರುತ್ತಿದ್ದವು.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮದ್ರಾಸ್ (ಈಗಿನ ತಮಿಳುನಾಡು) ನಂತಹ ದೊಡ್ಡ ರಾಜ್ಯಗಳಲ್ಲಿ ವರ್ಷಕ್ಕೆ 90 ರಿಂದ 120 ದಿನಗಳಿಗೂ ಹೆಚ್ಚು ಕಾಲ ವಿಧಾನಸಭೆಗಳ ಕಾರ್ಯಕಲಾಪಗಳು ಜರುಗುತ್ತಿದ್ದವು. ಜನಪ್ರತಿನಿಧಿಗಳಿಗೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಮುಕ್ತ ಅವಕಾಶವಿತ್ತು.

ಆದರೆ, 2025ರ ಸಾಲಿನ ಪಿಆರ್‌ಎಸ್ ವರದಿಯನ್ನು ಗಮನಿಸಿದರೆ ಈ ಇತಿಹಾಸ ಕನಸಿನಂತೆ ಭಾಸವಾಗುತ್ತದೆ.

2025ರಲ್ಲಿ ರಾಜ್ಯಗಳ ವಿಧಾನಸಭೆ ಕಲಾಪಗಳು ನಡೆದಿರುವುದು ಸರಾಸರಿ ಕೇವಲ 24 ದಿನಗಳು ಮಾತ್ರ! ಇದು 2024ರ (21 ದಿನಗಳು) ಮತ್ತು 2023ರ (23 ದಿನಗಳು) ಅವಧಿಗೆ ಹೋಲಿಸಿದರೆ ಅಲ್ಪ ಸುಧಾರಣೆಯಾಗಿದ್ದರೂ, ಒಟ್ಟಾರೆ ಪ್ರವೃತ್ತಿ ತೀರಾ ನಿರಾಶಾದಾಯಕವಾಗಿದೆ.

ಅದರಲ್ಲೂ, ಈಶಾನ್ಯ ರಾಜ್ಯಗಳಲ್ಲಿ ಒಂದಾದ ‘ನಾಗಾಲ್ಯಾಂಡ್’ನಲ್ಲಿ ಇಡೀ ವರ್ಷದಲ್ಲಿ ಕೇವಲ 7 ದಿನಗಳು  ಮಾತ್ರ ವಿಧಾನಸಭಾ ಅಧಿವೇಶನ ನಡೆದಿದೆ. ಕರಾವಳಿ ರಾಜ್ಯ ‘ಒಡಿಶಾ’ ಗರಿಷ್ಠ ಅಂದರೆ 43 ದಿನಗಳ ಕಾಲ ಕಲಾಪವನ್ನು ನಡೆಸಿದೆ.

ಹಲವು ರಾಜ್ಯಗಳು ತಮ್ಮ ನಿಯಮಾವಳಿಗಳಲ್ಲಿ ವರ್ಷಕ್ಕೆ ಇಂತಿಷ್ಟು ದಿನ ಕಡ್ಡಾಯವಾಗಿ ಸಭೆ ಸೇರಬೇಕೆಂಬ ಕನಿಷ್ಠ ಗುರಿಯನ್ನು ಹೊಂದಿವೆಯಾದರೂ, ‘ಹಿಮಾಚಲ ಪ್ರದೇಶ’ವನ್ನು ಹೊರತುಪಡಿಸಿ ದೇಶದ ಬೇರೆ ಯಾವುದೇ ರಾಜ್ಯವೂ ಈ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ.

ಕರ್ನಾಟಕ ಶಾಸಕಾಂಗದ ನಿಯಮಗಳ ಪ್ರಕಾರ, ವರ್ಷದಲ್ಲಿ ಕಡ್ಡಾಯವಾಗಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕು. ಆದರೆ, ಕರ್ನಾಟಕದಲ್ಲಿ ಕೇವಲ 34 ದಿನಗಳು ಮಾತ್ರವೇ ಕಲಾಪಗಳು ನಡೆದಿವೆ. ಆದಾಗ್ಯೂ, ದೇಶದಲ್ಲೇ ಅತ್ಯಂತ ಗರಿಷ್ಠ ಸಂಖ್ಯೆಯ ಅಂದರೆ ಒಟ್ಟು 84 ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಇನ್ನು, ನಮ್ಮ ಸಂವಿಧಾನ ಹೇಳುವಂತೆ; ಶಾಸಕಾಂಗದ ಎರಡು ಅಧಿವೇಶನಗಳ ನಡುವೆ 6 ತಿಂಗಳಿಗಿಂತ ಹೆಚ್ಚಿನ ಅವಧಿಯ ಅಂತರ ಇರಬಾರದು. 2025ರಲ್ಲಿ ಎಲ್ಲ ರಾಜ್ಯಗಳು ಈ ತಾಂತ್ರಿಕ ನಿಯಮವನ್ನು ಪಾಲಿಸಿವೆ. ಆದರೆ, ಇದನ್ನು ಕೇವಲ ‘ನಿಯಮ ಪಾಲನೆ’ ಎಂಬಂತೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ನಿರ್ವಹಿಸಲಾಗಿದೆ. ಆರು ತಿಂಗಳ ಅವಧಿಯಲ್ಲಿ ಅಧಿವೇಶನಗಳು ನಡೆದರೂ, ಅವುಗಳು ತೀರಾ ಕಡಿಮೆ ದಿನಗಳಲ್ಲಿ ಮುಗಿದುಹೋಗಿವೆ.

ಬಿಜೆಪಿ ಅಧಿಕಾರದಲ್ಲಿರುವ ಅಸ್ಸಾಂನಲ್ಲಿ ಸರ್ಕಾರವು ಮಾರ್ಚ್ ಮತ್ತು ನವೆಂಬರ್ ಅಧಿವೇಶನಗಳ ನಡುವಿನ 6 ತಿಂಗಳ ಅಂತರ ನಿಯಮವನ್ನು ಸರಿಹೊಂದಿಸಲು ಜೂನ್ ತಿಂಗಳಿನಲ್ಲಿ ಕೇವಲ ‘ಒಂದೇ ಒಂದು ದಿನ’ದ ಅಧಿವೇಶನವನ್ನು ಕರೆದು ಕೈತೊಳೆದುಕೊಂಡಿದೆ.

ಅದೇ ರೀತಿ, ಪ್ರಧಾನಿ ಮೋದಿ ಅವರ ತವರು ರಾಜ್ಯ, ಅವರ ಪಕ್ಷ ಬಿಜೆಪಿಯೇ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಮಾರ್ಚ್‌ನಲ್ಲಿ ಅಧಿವೇಶನ ಮುಗಿದ ನಂತರ ಸೆಪ್ಟೆಂಬರ್‌ನಲ್ಲಿ ಕೇವಲ 3 ದಿನಗಳ ಕಾಲ ಕಲಾಪ ನಡೆಸಿದೆ.

ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?

ಹೆಚ್ಚಿನ ರಾಜ್ಯಗಳು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಮಾತ್ರ ಬಜೆಟ್ ಮಂಡನೆ ಮತ್ತು ಅನುಮೋದನೆಗಾಗಿ ಸಭೆ ಸೇರುತ್ತವೆ. ಉಳಿದ ತಿಂಗಳುಗಳಲ್ಲಿ ಶಾಸಕಾಂಗಗಳು ನಿಷ್ಕ್ರಿಯವಾಗಿರುತ್ತವೆ ಎಂಬುದನ್ನು ಪಿಅರ್‌ಎಸ್‌ ವರದಿ ಗಮನಿಸಿದೆ.

ಚರ್ಚೆಯಿಲ್ಲದ ಮಸೂದೆಗಳ ಅಂಗೀಕಾರ – ‘ರಬ್ಬರ್ ಸ್ಟ್ಯಾಂಪ್’ಗಳಾದ ಕಲಾಪಗಳು

ಶಾಸಕಾಂಗದ ಪ್ರಮುಖ ಕೆಲಸ ಕಾನೂನುಗಳನ್ನು ರೂಪಿಸುವುದು. ಯಾವುದೇ ಒಂದು ಮಸೂದೆಯನ್ನು ತಂದಾಗ ಅದರ ಒಳಿತು-ಕೆಡುಕುಗಳು, ಸಾರ್ವಜನಿಕರ ಮೇಲಾಗುವ ಪರಿಣಾಮಗಳು ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸುದೀರ್ಘ ಚರ್ಚೆ ನಡೆಯಬೇಕು. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಸೂದೆಗಳ ಮೇಲಿನ ಗಂಭೀರ ಚರ್ಚೆಗಳು ಮಾಯವಾಗಿವೆ. ಇಂದಿನ ದಿನಗಳಲ್ಲಿ ವಿಧಾನಸಭೆಗಳು ಕೇವಲ ಸರ್ಕಾರದ ನಿರ್ಧಾರಗಳಿಗೆ ಮುದ್ರೆ ಒತ್ತುವ ‘ರಬ್ಬರ್ ಸ್ಟ್ಯಾಂಪ್’ಗಳಾಗಿ ಮಾರ್ಪಡುತ್ತಿವೆ ಎಂಬ ಆಘಾತಕಾರಿ ಅಂಶವನ್ನು ಪಿಆರ್‌ಎಸ್ ವರದಿ ಸ್ಪಷ್ಟಪಡಿಸಿದೆ.

2025ರ ಒಂದೇ ವರ್ಷದಲ್ಲಿ ದೇಶದ ವಿವಿಧ ವಿಧಾನಸಭೆಗಳು ಒಟ್ಟು 600ಕ್ಕೂ ಹೆಚ್ಚು ಮಸೂದೆಗಳನ್ನು ಅಂಗೀಕರಿಸಿವೆ. ಇದು 2024ರ 500 ಮಸೂದೆಗಳಿಗೆ ಹೋಲಿಸಿದರೆ ಹೆಚ್ಚಾಗಿದೆ. ಕಡಿಮೆ ಅವಧಿಯ ಕಲಾಪಗಳು ನಡೆದರೂ, ಹೆಚ್ಚಿನ ಸಂಖ್ಯೆಯ ಮಸೂದೆಗಳ ಅಂಗೀಕಾರವು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಆತಂಕಕಾರಿಯಾಗಿ ಕಾಣುತ್ತಿದೆ.

2025ರಲ್ಲಿ ಅಂಗೀಕಾರಗೊಂಡ ಒಟ್ಟು ಮಸೂದೆಗಳಲ್ಲಿ ಬರೋಬ್ಬರಿ 30%ರಷ್ಟು ಮಸೂದೆಗಳನ್ನು ಅವು ಮಂಡನೆಯಾದ ದಿನವೇ, ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ. ಆಂಧ್ರಪ್ರದೇಶ, ಬಿಹಾರ, ಗುಜರಾತ್, ಜಾರ್ಖಂಡ್, ಮಿಜೋರಾಂ, ಪುದುಚೇರಿ ಹಾಗೂ ಪಂಜಾಬ್ — ಈ ಏಳು ರಾಜ್ಯಗಳ ವಿಧಾನಸಭೆಗಳು ಸರ್ಕಾರವು ಮಂಡಿಸಿದ ಎಲ್ಲ ಮಸೂದೆಗಳನ್ನು ಒಂದೋ ಮಂಡಿಸಿದ ದಿನವೇ ಅಥವಾ ಅದರ ಮರುದಿನವೇ ಅಂಗೀಕರಿಸಿವೆ.

ಇದು, ಶಾಸನಗಳನ್ನು ಆತುರಾತುರವಾಗಿ ಅಂಗೀಕರಿಸುವಲ್ಲಿ ರಾಜ್ಯಗಳು ಪೈಪೋಟಿಗೆ ಬಿದ್ದಂತಿವೆ ಎಂಬುದನ್ನು ಸೂಚಿಸುತ್ತದೆ. ಕರ್ನಾಟಕವು ಕೇವಲ 34 ದಿನಗಳ ಅಧಿವೇಶನದಲ್ಲಿ ದೇಶದಲ್ಲೇ ಗರಿಷ್ಠ ಅಂದರೆ 84 ಮಸೂದೆಗಳನ್ನು ಅಂಗೀಕರಿಸಿದೆ. ಈ ಪೈಕಿ ಒಂದು ಅಧಿವೇಶನದಲ್ಲಿ 17 ಮತ್ತು ಮತ್ತೊಂದು ಅಧಿವೇಶನದಲ್ಲಿ 12 ಮಸೂದೆಗಳನ್ನು ಚರ್ಚೆಯಿಲ್ಲದೆ ಒಟ್ಟೊಟ್ಟಿಗೆ ಅಂಗೀಕಾರಗೊಂಡಿವೆ.

ಇನ್ನು ಅಸ್ಸಾಂ ವಿಧಾನಸಭೆಯಲ್ಲಿ ಕಲಾಪ ನಡೆದ 21 ದಿನಗಳಲ್ಲಿ 60 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ, 14 ಮಸೂದೆಗಳನ್ನು ಒಂದೇ ದಿನದಲ್ಲಿ ಪಾಸ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಬಜೆಟ್ ಚರ್ಚೆಗೂ ಇಲ್ಲ ಸಮಯ

ರಾಜ್ಯದ ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣದ ವ್ಯಯ ಮತ್ತು ತೆರಿಗೆ ನೀತಿಗಳನ್ನು ನಿರ್ಧರಿಸುವ ‘ಬಜೆಟ್’ ಮೇಲಿನ ಚರ್ಚೆಯೂ ಕೂಡ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. 2025ರಲ್ಲಿ ರಾಜ್ಯ ಶಾಸಕಾಂಗಗಳು ತಮ್ಮ ಬಜೆಟ್ ಚರ್ಚೆಗಾಗಿ ಮುಡುಪಾಗಿಟ್ಟಿದ್ದು ಸರಾಸರಿ ಕೇವಲ 8 ದಿನಗಳನ್ನು ಮಾತ್ರ ಎಂಬುದನ್ನು ವರದಿ ವಿವರಿಸಿದೆ.

ತಮಿಳುನಾಡು ಬಜೆಟ್ ಕುರಿತು ಅತ್ಯಂತ ಜವಾಬ್ದಾರಿಯುತವಾಗಿ 27 ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಿದೆ. ಇದಕ್ಕೆ ತದ್ವಿರುದ್ಧವಾಗಿ, ಪಂಜಾಬ್‌ನಲ್ಲಿ ಇಡೀ ರಾಜ್ಯದ ಆಯವ್ಯಯದ ಚರ್ಚೆಯನ್ನು ಕೇವಲ 2 ದಿನಗಳಲ್ಲಿ ಮುಗಿಸಿ ಮತ್ತೊಂದು ಇತಿಹಾಸ ಬರೆಯಲಾಗಿದೆ. ಕೇವಲ ಎರಡೇ ದಿನಗಳಲ್ಲಿ ಇಡೀ ರಾಜ್ಯದ ಹಣಕಾಸು ನೀತಿಯನ್ನು ಹೇಗೆ ಚರ್ಚಿಸಲು ಸಾಧ್ಯ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ವರದಿ ಗಮನ ಸೆಳೆದಿದೆ.

ಪಿಆರ್‌ಎಸ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯು ಭಾರತದ ಶಾಸಕಾಂಗ ವ್ಯವಸ್ಥೆ ಎದುರಿಸುತ್ತಿರುವ ಸಾಂಸ್ಥಿಕ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ. ಅಧಿವೇಶನಗಳನ್ನು ಕೇವಲ ತಾಂತ್ರಿಕ ಕಾರಣಗಳಿಗಾಗಿ ನಡೆಸುವುದು, ವಿರೋಧ ಪಕ್ಷಗಳ ಗದ್ದಲ, ಸರ್ಕಾರದ ಏಕಪಕ್ಷೀಯ ಧೋರಣೆ ಹಾಗೂ ಕಾನೂನುಗಳ ಮೇಲಿನ ಗಂಭೀರತೆಯ ಕೊರತೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತರುತ್ತಿದೆ ಎಂಬುದನ್ನು ಒತ್ತಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್...