ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟು

Date:

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ ಇಳಿದರೆ ಮಾತ್ರ ಈ ಚಳವಳಿಗೆ ಶಕ್ತಿ ಬರುತ್ತದೆ.

ಭಾರತದಲ್ಲಿ ಜನಚಳವಳಿಗಳು ಸರ್ಕಾರದೊಂದಿಗೆ ಮುಖಾಮುಖಿಯಾಗುವುದು ಹೊಸದೇನಲ್ಲ. ಆದರೆ ‘ಕಾಕ್ರೋಚ್ ಜನತಾ ಪಾರ್ಟಿ’ ಅಕ್ಟೋಬರ್ 10ರಂದು ಕರೆ ನೀಡಿರುವ ಪ್ರತಿಭಟನೆ ಮತ್ತು ವಿರೋಧ ಪಕ್ಷಗಳ ನಿರಂತರ ಹೋರಾಟಗಳು ಒಂದು ಅಪರೂಪದ ಬಿಕ್ಕಟ್ಟನ್ನು ಸೃಷ್ಟಿಸಿವೆ. ಪರೀಕ್ಷೆಗಳ ಗೊಂದಲ ಮತ್ತು ಎಸ್‌ಐಆರ್ ನಡಾವಳಿಯ ವಿರುದ್ಧದ ಸಾರ್ವಜನಿಕ ಆಕ್ರೋಶವನ್ನು ಒಟ್ಟಿಗೆ ತಂದು, ಅದನ್ನು ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟನ್ನಾಗಿ ಪರಿವರ್ತಿಸುವಲ್ಲಿ ಸಿಜೆಪಿ ಯಶಸ್ವಿಯಾಗಿದೆ.
ಕೇವಲ ಮೇಲ್ನೋಟದ ನೀತಿಗಳಿಂದ ಈಗ ಕಾಣಿಸಿಕೊಂಡಿರುವ ವಿಶ್ವಾಸದ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ. ಈ ಬಿಕ್ಕಟ್ಟು ಕೇವಲ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಸ್ವತಂತ್ರ ಸಂಸ್ಥೆಗಳನ್ನೂ ಆವರಿಸಿದೆ. ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳನ್ನು ರಕ್ಷಿಸುವಲ್ಲಿ ನ್ಯಾಯಾಲಯ ವಿಫಲವಾಗಿರುವುದೂ ಈ ಪ್ರತಿಭಟನೆಗೆ ಒಂದು ಕಾರಣ.

- Advertisement -

ಚುನಾವಣಾ ಆಯುಕ್ತರ ಆಯ್ಕೆ ಮತ್ತು ಎಸ್‌ಐಆರ್ ಕುರಿತ ತನ್ನ ಹಿಂದಿನ ತೀರ್ಪುಗಳನ್ನು ಬದಲಾಯಿಸುವ ಮೂಲಕ ಸುಪ್ರೀಂ ಕೋರ್ಟ್ ಈ ಉದ್ವಿಗ್ನತೆಯನ್ನು ಶಮನಗೊಳಿಸಬಹುದು. ಆದರೆ ಇಂತಹ ನಿರ್ಧಾರ ಹಿಂದೆಂದೂ ಆಗಿಲ್ಲ. ನ್ಯಾಯಾಲಯ ಹಾಗೆ ಮಾಡುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಅದು ಸರ್ಕಾರ ಮತ್ತು ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದಂತಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ರಾಜೀನಾಮೆಯಿಂದ ಮಾತ್ರ ಈ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಮರುಗಳಿಸಲು ಸಾಧ್ಯ. ಆದರೆ ಇತಿಹಾಸವನ್ನು ನೋಡಿದರೆ, ಸುಪ್ರೀಂ ಕೋರ್ಟ್ ಸರಿಪಡಿಸುವ ಕ್ರಮಗಳನ್ನು ಕೈಗೊಂಡರೂ, ಅದು ಸರ್ಕಾರದ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಹಿಂಜರಿಯುತ್ತದೆ. ಆದ್ದರಿಂದ, ಹೆಚ್ಚೆಂದರೆ ಕೇವಲ ತಾತ್ಕಾಲಿಕವಾದ ಸಮಾಧಾನಕರ ನಿರ್ಧಾರಗಳನ್ನು ಮಾತ್ರ ನಿರೀಕ್ಷಿಸಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಈ ಪ್ರತಿಭಟನೆಗಳು ಸರ್ಕಾರದ ದರ್ಪವನ್ನು ಕುಗ್ಗಿಸಿವೆ, ಜನರಲ್ಲಿದ್ದ ಭಯವನ್ನು ಹೋಗಲಾಡಿಸಿವೆ ಮತ್ತು ಯುವಜನತೆಯಲ್ಲಿ ಹೊಸ ಉತ್ಸಾಹವನ್ನು ತುಂಬಿವೆ. ಆದರೆ ಅವು ಜಗ್ಗದ, ಕದಲದ ಸರ್ಕಾರಕ್ಕೇ ಮುಖಾಮುಖಿಯಾಗಿ ನಿಂತಿವೆ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಹೇಳುತ್ತಿದ್ದಂತೆ: “ಭಾರತ ಸರ್ಕಾರ ಆನೆ ಇದ್ದ ಹಾಗೆ; ಎಂಥದ್ದೇ ಸಮಸ್ಯೆ ಇರಲಿ, ಅದು ತಣ್ಣಗಾಗುವವರೆಗೂ ಅದರ ಮೇಲೆ ಭಾರ ಹಾಕಿ ಕೂತುಬಿಡುತ್ತದೆ.” ಆ ತೂಕವು ಈಗ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ: ಬಂಧನಗಳು, ಬೆದರಿಕೆಗಳು ಮತ್ತು ರಾಜಧಾನಿಯಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿಯ ನಿಯೋಜನೆ. ಇದು ಶಾಂತಿಯುತ ಬೇಡಿಕೆಗಳನ್ನು ಮುಂದಿಡುತ್ತಿರುವ ಸ್ವದೇಶಿ ಯುವಕರ ವಿರುದ್ಧವೇ ಯುದ್ಧ ಸಾರಿದಂತೆ ಕಾಣುತ್ತಿದೆ. ಈ ಪ್ರತಿಭಟನೆಗಳು ಹಲವು ವಾರಗಳಿಂದ ನಡೆಯುತ್ತಿವೆ; ಜನಚಳವಳಿಗಳು ದೀರ್ಘಕಾಲ ಮುಂದುವರಿಯುವುದು ಕಷ್ಟ, ಕಾಲಕ್ರಮೇಣ ಅವು ತಾವಾಗಿಯೇ ತಣ್ಣಗಾಗುತ್ತವೆ ಎಂಬುದು ಸರ್ಕಾರದ ಲೆಕ್ಕಾಚಾರ.

ರೈತರ ಆಂದೋಲನವು ಮೂರು ಕಾರಣಗಳಿಂದ ಯಶಸ್ವಿಯಾಯಿತು:

ಅದು ನಿರ್ದಿಷ್ಟ ಕಾಯ್ದೆಗಳ ವಿರುದ್ಧದ ಹೋರಾಟವಾಗಿತ್ತೇ ಹೊರತು ಇಡೀ ಆಡಳಿತ ವ್ಯವಸ್ಥೆಯ ಬಿಕ್ಕಟ್ಟಾಗಿರಲಿಲ್ಲ.
ರೈತರು ದೆಹಲಿಯ ಗಡಿಗಳನ್ನು ಬಂದ್ ಮಾಡಿ ಆರ್ಥಿಕ ಒತ್ತಡ ಹೇರಲು ಸಮರ್ಥರಾಗಿದ್ದರು.
ಸುದೀರ್ಘ ಹೋರಾಟದಿಂದ ಚುನಾವಣೆಯಲ್ಲಿ ಹೊಡೆತ ಬೀಳಬಹುದು ಎಂಬ ಆತಂಕ ಸರ್ಕಾರಕ್ಕಿತ್ತು.

ಆದರೆ ಇಂದಿನ ಸಿಜೆಪಿ ಹೋರಾಟದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸಿಜೆಪಿಯ ನಿಜವಾದ ತಾಕತ್ತೇ ಅವರ ನ್ಯಾಯಯುತ ಬೇಡಿಕೆಗಳು ಮತ್ತು ಅವರ ಜೊತೆಗಿರುವ ಯುವಪಡೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ತಮ್ಮದೇ ದನಿಯಲ್ಲಿ ಮಾತನಾಡುತ್ತಿವೆ. ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟು ಎಂಬುದನ್ನು ತೋರಿಸಲು ಇದು ಸಹಕಾರಿಯಾಗಿದೆ.

ಸಿಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ ಇಳಿದರೆ ಮಾತ್ರ ಈ ಚಳವಳಿಗೆ ಶಕ್ತಿ ಬರುತ್ತದೆ.
ಚುನಾವಣಾ ಪರಿಣಾಮದ ವಿಷಯಕ್ಕೆ ಬಂದರೆ, ಉತ್ತರಾಖಂಡದಂತಹ ರಾಜ್ಯಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಆದರೆ ಅಂತಿಮವಾಗಿ ಎಲ್ಲವೂ ಉತ್ತರ ಪ್ರದೇಶದ ಮೇಲೆ ನಿಂತಿದೆ. ಉತ್ತರ ಪ್ರದೇಶವನ್ನು ಉಳಿಸಿಕೊಂಡರೆ ತನ್ನ ಜನಪ್ರಿಯತೆ ಮರಳಿದೆ ಎಂದು ಸರ್ಕಾರ ಪ್ರತಿಪಾದಿಸುತ್ತದೆ. ಸಮಾಜ ಸುಸ್ತಾಗುವವರೆಗೂ ಕಾಯ್ದು, ನಂತರ ತನ್ನ ಚುನಾವಣಾ ಯಂತ್ರದ ಮೂಲಕ ಗೆದ್ದುಬಿಡಬಹುದು ಎಂದು ಸರ್ಕಾರ ಭಾವಿಸಿರಬಹುದು. ಎಸ್‌ಐಆರ್ ಮೇಲಿನ ತಪ್ಪುಗಳನ್ನು ಒಪ್ಪಿಕೊಳ್ಳುವುದು ಕೇವಲ ಒಂದು ನೀತಿಯನ್ನು ಹಿಂಪಡೆದಂತಲ್ಲ; ಅದು ವ್ಯವಸ್ಥೆಯ ವಿಶ್ವಾಸದ್ರೋಹವನ್ನು ಒಪ್ಪಿಕೊಂಡಂತೆ. ಜೊತೆಗೆ ಆಡಳಿತದ ಒಳಗಿನ ನಿಷ್ಠಾವಂತ ಅಧಿಕಾರಿಗಳನ್ನು ಬಲಿಕೊಡಲು ಶುರುಮಾಡಿದರೆ, ಸರ್ಕಾರದ ಆಂತರಿಕ ನಿಷ್ಠೆಯೂ ಕುಸಿಯುತ್ತದೆ.

ಇದನ್ನು ಓದಿದ್ದೀರಾ?: SIR | ಸಿಜೆಪಿ ಪ್ರತಿಭಟನೆಗೂ ಮುನ್ನವೇ ದೆಹಲಿಯಲ್ಲಿ 1,000 ಮಂದಿ ಬಂಧನ

ನೇಪಾಳ ಮತ್ತು ಬಾಂಗ್ಲಾದೇಶಗಳಲ್ಲಿ ನಡೆದಂತೆ ಇದು ‘ವಿದೇಶಿ ಕೈವಾಡ’ ಮತ್ತು ಪಿತೂರಿ ಎಂದು ಬಿಂಬಿಸಿ ಪ್ರತಿಭಟನೆಯನ್ನು ತುಳಿಯಲು ಸರ್ಕಾರ ಯತ್ನಿಸಬಹುದು. ಆದರೆ ಜನರ ನೈಜ ಅಸಮಾಧಾನವನ್ನು ಕಡೆಗಣಿಸಿ, ಸರ್ಕಾರ ತನ್ನದೇ ಪ್ರಚಾರವನ್ನು ತಾನೇ ನಂಬಲು ಪ್ರಾರಂಭಿಸುವುದು ಅತ್ಯಂತ ಅಪಾಯಕಾರಿ.

ಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರಬಹುದು ಎಂಬ ಭಯ ಬಂದಾಗ ಮಾತ್ರ ಸರ್ಕಾರದ ನಿಲುವು ಬದಲಾಗಬಹುದು. ಇಲ್ಲದಿದ್ದರೆ ಮೋದಿ ನಂತರ ಮುಂದೇನು ಎಂದು ಯೋಚಿಸುವ ಸರ್ಕಾರದೊಳಗೇ ಇರುವ ಜನ, ಅಥವಾ ಆರ್‌ಎಸ್‌ಎಸ್‌ನವರು ಧ್ವನಿ ಎತ್ತಬೇಕಷ್ಟೆ. ಆದರೆ ಅವರೂ ಸರ್ಕಾರದ ಎದುರು ನಿಲ್ಲುವಷ್ಟು ಧೈರ್ಯ ತೋರುವುದು ಅನುಮಾನ.

ಇತಿಹಾಸ ಹೇಳುವಂತೆ, ಚಳವಳಿಗಳ ದಿಕ್ಕು ಅನಿರೀಕ್ಷಿತ ಘಟನೆಗಳಿಂದ ಬದಲಾಗುತ್ತದೆ. ಸರ್ಕಾರದ ಹಿಂಸಾಚಾರ ಅಥವಾ ಯುವಕರ ಅಪ್ರತಿಮ ಧೈರ್ಯ ಇಡೀ ದೇಶದ ಗಮನ ಸೆಳೆಯಬಹುದು. ಇಂತಹ ಸಂದರ್ಭದಲ್ಲಿ ಸಮಾಜವು ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಮಾತನಾಡಬೇಕು; ಸರ್ಕಾರಕ್ಕೆ ಜನರ ದನಿಯನ್ನು ಕಡೆಗಣಿಸಲು ಅಥವಾ ಬೇರೆ ದಿಕ್ಕಿಗೆ ತಿರುಗಿಸಲು ಅವಕಾಶ ನೀಡಬಾರದು. ಸದ್ಯಕ್ಕೆ, ಜನರನ್ನು ಹೆದರಿಸಿ ಸುಮ್ಮನಾಗಿಸಬಹುದು ಎಂದು ಸರ್ಕಾರ ನಂಬಿದೆ.

(ಕೃಪೆ: ಇಂಡಿಯನ್‌ ಎಕ್ಸ್ ಪ್ರೆಸ್‌, ಮೂಲ: ಪ್ರತಾಪ್ ಭಾನು ಮೆಹ್ತಾ, ಕನ್ನಡಕ್ಕೆ: ಟಿ.ಎಸ್.‌ ವೇಣುಗೋಪಾಲ್)

    eedina
    ಈ ದಿನ ಡೆಸ್ಕ್‌
    Website |  + posts

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

    ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...

    ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

    ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

    ಕಲಬುರಗಿಯಲ್ಲಿ ಅ.30ರಿಂದ ನ.1ರವರೆಗೆ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

    ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಮ್ಮೇಳನವು...