ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು; ಎಸ್‌ಪಿ–ಕಾಂಗ್ರೆಸ್‌ ಮೈತ್ರಿ ಮಾತುಕತೆ ತೀವ್ರ; ಆಜಂ ಖಾನ್–ಓವೈಸಿ ಸಂಘರ್ಷ!

Date:

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ ಪಕ್ಷ–ಕಾಂಗ್ರೆಸ್‌ ಮೈತ್ರಿ ಮಾತುಕತೆ ಚುರುಕುಗೊಂಡಿದ್ದು, ಬಿಎಸ್‌ಪಿ ಮೊದಲ 9 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ನಡುವೆ ಆಜಂ ಖಾನ್ ಮತ್ತು ಅಸಾದುದ್ದೀನ್ ಓವೈಸಿ ನಡುವಿನ ವಾಗ್ವಾದವು ಮುಸ್ಲಿಂ ಮತಗಳ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ದೇಶದಲ್ಲೇ ಅತ್ಯಧಿಕ 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 2027ರ ಚುನಾವಣೆಯ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ಸಮಾಜವಾದಿ ಪಕ್ಷ–ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟಗಳು ಸ್ಥಾನ ಹಂಚಿಕೆಯ ಮಾತುಕತೆ ಆರಂಭಿಸಿವೆ. ಮತ್ತೊಂದೆಡೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಭ್ಯರ್ಥಿಗಳ ಘೋಷಣೆಗೆ ಮುಂದಾಗಿದೆ.

- Advertisement -

ಎನ್‌ಡಿಎಯಲ್ಲಿ ಬಿಜೆಪಿಗೆ ಕ್ಷೇತ್ರ ಹಂಚಿಕೆಯ ಸವಾಲು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ಕೇಂದ್ರ ಸಚಿವೆ, ಅಪ್ನಾ ದಳ (ಸೋನೇಲಾಲ್) ಅಧ್ಯಕ್ಷೆ ಅನುಪ್ರಿಯಾ ಪಟೇಲ್ ಅವರು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಸ್ಥಾನ ಹಂಚಿಕೆ ಕುರಿತು ಚರ್ಚಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಅಪ್ನಾ ದಳ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 12 ಸ್ಥಾನಗಳನ್ನು ಗೆದ್ದಿತ್ತು. ಈ ಸಾಧನೆಯನ್ನು ಆಧರಿಸಿ 2027ರಲ್ಲಿ 25 ಕ್ಷೇತ್ರಗಳನ್ನು ನೀಡುವಂತೆ ಅನುಪ್ರಿಯಾ ಪಟೇಲ್ ಬೇಡಿಕೆ ಇಟ್ಟಿದ್ದಾರೆ.

ಮತ್ತೊಂದು ಮಿತ್ರಪಕ್ಷವಾದ ‘ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ’ದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂಪ್ರಕಾಶ್ ರಾಜ್‌ಭರ್ 33 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಜೆಪಿ ನಾಯಕತ್ವಕ್ಕೆ ಸಲ್ಲಿಸಿದ್ದಾರೆ. ಅಂದಹಾಗೆ, ಎಸ್‌ಬಿಎಸ್‌ಪಿ 2022ರಲ್ಲಿ ಸಮಾಜವಾದಿ ಪಕ್ಷದ ಮೈತ್ರಿಯ ಭಾಗವಾಗಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 6 ಸ್ಥಾನಗಳನ್ನು ಗೆದ್ದಿತ್ತು. ನಂತರ, ಎನ್‌ಡಿಎ ಮೈತ್ರಿಕೂಟ ಸೇರಿ, ಸರ್ಕಾರದ ಭಾಗವಾಯಿತು. ಇದೀಗ, ಪಕ್ಷವು ಬಿಜೆಪಿ ಎದುರು ಹೆಚ್ಚಿನ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ.

ಅಂತೆಯೇ, ಈ ಹಿಂದೆ ಸಮಾಜವಾದಿ ಪಕ್ಷದ ಜೊತೆ ಮೈತ್ರಿಯಲ್ಲಿದ್ದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಕೂಡ ಎನ್‌ಡಿಎ ಸೇರಿದ್ದು, ಸುಮಾರು 30 ಕ್ಷೇತ್ರಗಳನ್ನು ಕೇಳುತ್ತಿದೆ. ಇನ್ನು, ಎನ್‌ಡಿಎ ಭಾಗವೇ ಆಗಿರುವ ನಿಷಾದ್ ಪಕ್ಷ 30ರಿಂದ 36 ಕ್ಷೇತ್ರಗಳನ್ನೂ ನಿರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಮಿತ್ರಪಕ್ಷಗಳ ಈ ಬೇಡಿಕೆಗಳನ್ನು ಸಮನ್ವಯಗೊಳಿಸುವುದು ಬಿಜೆಪಿಯ ಮುಂದಿರುವ ಪ್ರಮುಖ ಸವಾಲಾಗಿದೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಪಕ್ಷಗಳ ಸಾಧನೆ

ಪಕ್ಷಸ್ಪರ್ಧಿಸಿದ ಕ್ಷೇತ್ರಗಳುಗೆದ್ದ ಸ್ಥಾನಗಳುಗೆಲುವಿನ ಪ್ರಮಾಣ
ಬಿಜೆಪಿ37625567.8%
ಆರ್‌ಎಲ್‌ಡಿ (SP ಜೊತೆ ಇತ್ತು)33824.2%
ಅಪ್ನಾ ದಳ (S)171270.6%
ನಿಷಾದ್ ಪಕ್ಷ10660.0%
ಎಸ್‌ಬಿಎಸ್‌ಪಿ (SP ಜೊತೆ ಇತ್ತು)19631.6%

ಗಮನಾರ್ಹವಾಗಿ, ಮುಂದಿನ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ತಲುಪಲು ಬಿಜೆಪಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ 403 ಮಹಿಳಾ ನಾಯಕರನ್ನು ನಿಯೋಜಿಸಿದೆ. ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ದೆಹಲಿ, ಬಿಹಾರ, ಜಾರ್ಖಂಡ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದಿಂದ ಈ ಮಹಿಳಾ ನಾಯಕರನ್ನು ಆಯ್ಕೆ ಮಾಡಲಾಗಿದೆ.

ಅವರು ಮನೆಮನೆಗೆ ತೆರಳಿ ಮಹಿಳಾ ಮತದಾರರನ್ನು ಸಂಪರ್ಕಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದಾರೆ.

ಎಸ್‌ಪಿ–ಕಾಂಗ್ರೆಸ್‌ ಮೈತ್ರಿಯಲ್ಲಿ ಮಾತುಕತೆ

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಕೂಡ 2027ರ ಚುನಾವಣೆಗೆ ಸ್ಥಾನ ಹಂಚಿಕೆಯ ಮಾತುಕತೆ ಆರಂಭಿಸಿವೆ. ನವದೆಹಲಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರ ನಿವಾಸದಲ್ಲಿ ಸುಮಾರು 20 ನಿಮಿಷಗಳ ಕಾಲ ಮೊದಲ ಸುತ್ತಿನ ಮಾತುಕತೆ ನಡೆದಿದೆ. ಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಮ್‌ಗೋಪಾಲ್ ಯಾದವ್, ಕಾಂಗ್ರೆಸ್‌ನ ಉತ್ತರ ಪ್ರದೇಶ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಆರಾಧನಾ ಮಿಶ್ರಾ ಹಾಗೂ ಶಾಸಕಾಂಗ ನಾಯಕ ವೀರೇಂದ್ರ ಚೌಧರಿ ಭಾಗವಹಿಸಿದ್ದರು.

ಸಭೆಯ ನಂತರ ರಾಮ್‌ಗೋಪಾಲ್ ಯಾದವ್, ಎರಡೂ ಪಕ್ಷಗಳು ಮೈತ್ರಿಯಾಗಿ ಚುನಾವಣೆ ಎದುರಿಸಲು ನಿರ್ಧರಿಸಿವೆ. ಆದರೆ, ಸ್ಥಾನ ಹಂಚಿಕೆ ಅಂತಿಮಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಎಸ್‌ಪಿ ಎದುರು ಕಾಂಗ್ರೆಸ್‌ 181 ಕ್ಷೇತ್ರಗಳ ಪಟ್ಟಿಯನ್ನು ಮುಂದಿಟ್ಟಿದೆ. ಈ ಪ್ರಸ್ತಾವನೆಯನ್ನು ಸಮಾಜವಾದಿ ಪಕ್ಷ ಪರಿಶೀಲಿಸಲಿದ್ದು, ಮುಂದಿನ ಸುತ್ತಿನ ಮಾತುಕತೆಯಲ್ಲಿ ಸ್ಥಾನ ಹಂಚಿಕೆಯ ಕುರಿತು ಹೆಚ್ಚಿನ ಚರ್ಚೆ ನಡೆಯಲಿದೆ. ಮಂಗಳವಾರವೂ ಕಾಂಗ್ರೆಸ್‌—ಸ್‌ಪಿ ನಡುವೆ ಸೀಟು ಹಂಚಿಕೆ ಕುರಿತ ಮಾತುಕತೆಗಳು ನಡೆಯಲಿದ್ದು, ಪಕ್ಷಗಳು ಒಮ್ಮತಕ್ಕೆ ಬರುವ ಸಾಧ್ಯತೆ ಇದೆ.

ಅಂದಹಾಗೆ, 2022ರ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆಯ ಮಾತುಕತೆ ಪೂರ್ಣಗೊಳ್ಳದೆ, ಕಾಂಗ್ರೆಸ್‌ ಹಲವು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಪರಿಣಾಮ, ಎಸ್‌ಪಿ-ಕಾಂಗ್ರೆಸ್‌ ನಡುವೆಯೇ ಮತ ವಿಭಜನೆಯಾಗಿ, ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಾಗಿತ್ತು ಎಂದು ವಿಶ್ಲೇಷಿಸಲಾಗಿದೆ. ಈ ಬಾರಿ, ಅಂತಹ ಎಡವಟ್ಟು ಆಗದಂತೆ ನೋಡಿಕೊಳ್ಳಲು ಎರಡೂ ಪಕ್ಷಗಳು ಮುಂದಾಗಿವೆ.

ನವೆಂಬರ್ 16ರಂದು ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ನಡುವೆ ನಡೆದ ಚರ್ಚೆಯ ಬಳಿಕ ಮೈತ್ರಿಯ ಚುನಾವಣಾ ಸಿದ್ಧತೆ ಚುರುಕುಗೊಂಡಿದೆ. ರಾಹುಲ್‌ ಗಾಂಧಿ ಅವರು ಕ್ಷೇತ್ರ ಹಂಚಿಕೆಯ ನಿರ್ಧಾರ/ಜವಾಬ್ದಾರಿಯನ್ನು ಅಖಿಲೇಶ್‌ ಅವರ ಹೆಗಲಿಗೆ ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆಜಂ ಖಾನ್–ಓವೈಸಿ: ಮುಸ್ಲಿಂ ಮತಗಳ ರಾಜಕೀಯ ಸಂಘರ್ಷ

ಉತ್ತರ ಪ್ರದೇಶದ ಚುನಾವಣಾ ರಾಜಕೀಯದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವಿನ ವಾಗ್ವಾದವೂ ಗಮನ ಸೆಳೆದಿದೆ.

ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ 78 ವರ್ಷದ ಆಜಂ ಖಾನ್, ಓವೈಸಿ ಅವರ ಧಾರ್ಮಿಕ ಗುರುತಿನ ಕುರಿತು ಪರೋಕ್ಷ ಟೀಕೆ ಮಾಡಿದ್ದಾರೆ. “ಕೇವಲ ಗಡ್ಡ ಬೆಳೆಸಿಕೊಂಡ ಮಾತ್ರಕ್ಕೆ ಯಾರೂ ಧರ್ಮಗುರು ಆಗುವುದಿಲ್ಲ; ಅದಕ್ಕೆ ಧಾರ್ಮಿಕ ಅಧ್ಯಯನ ಮತ್ತು ಅರ್ಹತೆ ಅಗತ್ಯ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಓವೈಸಿ, “ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಮೇಲೆ ಯಾವುದೇ ಪಕ್ಷ ಅಥವಾ ನಾಯಕನಿಗೆ ಏಕಸ್ವಾಮ್ಯವಿಲ್ಲ” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ 19%ರಷ್ಟಿರುವ ಮುಸ್ಲಿಮರು, ಆ ರಾಜ್ಯದ ಸುಮಾರು 143 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಗೆಲುವು-ಸೋಲಿನ ಮೇಲೆ ನಿರ್ಣಾಯ ಪ್ರಭಾವ ಬೀರಲಿದ್ದಾರೆ. ಆದ್ದರಿಂದ, ಮುಸ್ಲಿಂ ಮತದಾರರ ಮತಗಳು ಚದುರಿ ಹೋಗದಂತೆ ತಡೆಯುವುದು ಸಮಾಜವಾದಿ ಪಕ್ಷಕ್ಕೆ ಅತ್ಯಗತ್ಯವಾಗಿದೆ. ಮುಸ್ಲಿಂ ಮತಗಳನ್ನು ಒಗ್ಗೂಡಿಸಲು ಆಜಂ ಖಾನ್ ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: “ನಾನು ಬಿಜೆಪಿಯ ಗುಲಾಮನಲ್ಲ, ಅಂಬೇಡ್ಕರ್‌ವಾದಿ”- ರಾಮದಾಸ್‌ ಅಠಾವಳೆ ಹೇಳಿಕೆಯ ಮರ್ಮವೇನು?

ಅಂದಹಾಗೆ, 2022ರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ 95 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಆದರೆ ಸುಲ್ತಾನ್‌ಪುರ, ಶಹಗಂಜ್ ಹಾಗೂ ಕನ್ನೌಜ್ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಪಕ್ಷ ಪಡೆದ ಮತಗಳು ಸಮಾಜವಾದಿ ಪಕ್ಷದ ಚುನಾವಣಾ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ್ದವು.

ರಾಜಕೀಯ ವಿಶ್ಲೇಷಕರ ಪ್ರಕಾರ, 2027ರಲ್ಲಿ ಎಐಎಂಐಎಂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಕೆಲವು ಕ್ಷೇತ್ರಗಳಲ್ಲಿ ಎಸ್‌ಪಿ–ಕಾಂಗ್ರೆಸ್‌ ಮೈತ್ರಿಯ ಮತಗಳ ಹಂಚಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ರಾಂಪುರದಿಂದ ಹತ್ತು ಬಾರಿ ಶಾಸಕರಾಗಿದ್ದ ಆಜಂ ಖಾನ್ ಅವರು ಮುಲಾಯಂ ಸಿಂಗ್ ಯಾದವ್ ಕಾಲದಿಂದಲೂ ಸಮಾಜವಾದಿ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಹಿಂದಿನ ಆಕ್ರಮಣಕಾರಿ ಶೈಲಿಗಿಂತ ಈಗ ಹೆಚ್ಚು ಎಚ್ಚರಿಕೆಯ ರಾಜಕೀಯ ನಿಲುವು ಅನುಸರಿಸುತ್ತಿರುವ ಅವರು, ಮುಸ್ಲಿಂ ಸಮುದಾಯದ ಬೆಂಬಲದ ಜೊತೆಗೆ ಯುವಜನರು, ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳತ್ತಲೂ ಗಮನ ಹರಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಬಿಎಸ್‌ಪಿಯಿಂದ ಒಂಬತ್ತು ಅಭ್ಯರ್ಥಿಗಳ ಘೋಷಣೆ

ಮಾಯಾವತಿ ನೇತೃತ್ವದ ಬಿಎಸ್‌ಪಿ 2027ರ ಚುನಾವಣೆಗೆ ಮೊದಲ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದಲಿತರು, ಹಿಂದುಳಿದ ವರ್ಗಗಳು, ಮುಸ್ಲಿಮರು ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ.

ಅಂಬೇಡ್ಕರ್ ನಗರದ ಎಸ್‌ಸಿ ಮೀಸಲು ಕ್ಷೇತ್ರ ಆಲಾಪುರಕ್ಕೆ ಕೇಶ್ರಾ ದೇವಿ ಗೌತಮ್, ಜಲಾಲಪುರದಿಂದ ದಯಾರಾಮ್ ರಾಜ್‌ಭರ್, ಸುಲ್ತಾನ್‌ಪುರದಿಂದ ಇಮ್ತಿಯಾಜ್ ಅಹ್ಮದ್ ಹಾಗೂ ಬಾರಾಬಂಕಿಯಿಂದ ಮೊಹಮ್ಮದ್ ಮುಬಾಶಿರ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.

ಮಧುಲತಾ ವರ್ಮಾ ಅವರಿಗೂ ಮೊದಲ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಬಿಎಸ್‌ಪಿ ತನ್ನ ಸಾಂಪ್ರದಾಯಿಕ ದಲಿತ ಬೆಂಬಲದ ಜೊತೆಗೆ ಇತರ ಸಮುದಾಯಗಳ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ನಾವಲಗಿ ಕೆಪಿಎಸ್ ಶಾಲೆ ವಿದ್ಯಾರ್ಥಿಗಳ ಪ್ರಥಮ ಸ್ಥಾನ

ತುಳಸಿಗೇರಿಯಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಾವಲಗಿ...

ವಿಜಯಪುರ |ಚುನಾವಣೆ ವಿಳಂಬ ಖಂಡಿಸಿ ನ. 26ರಂದು ಕರಾಳ ಸಂವಿಧಾನ ದಿನಾಚರಣೆ

ರಾಜ್ಯದಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ವಿಳಂಬ ಮಾಡುತ್ತಿರುವುದನ್ನು...

ಬೀದರ್‌ | ಟನ್‌ ಕಬ್ಬಿಗೆ ₹3,500 ದರ ಘೋಷಿಸಿದ ಡಿಸಿ, ಧರಣಿ ಹಿಂಪಡೆದ ರೈತರು

ಬೀದರ್‌ ನಗರದ ಉಸ್ತುವಾರಿ ಸಚಿವರ ಕಚೇರಿ ಎದುರುಗಡೆ ಕಳೆದ 12ದಿನಳಿಂದ ಕಬ್ಬಿನ...

ಭಾಲ್ಕಿ | ಬಸವಣ್ಣನವರ ಅವಹೇಳನ: ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹ

ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ...