ಅರುಣಾಚಲ ಗಡಿ ಸಮೀಪ ಚೀನಾದ ಬೃಹತ್ ಅಣೆಕಟ್ಟು ನಿರ್ಮಾಣ ಚುರುಕು: ಉಪಗ್ರಹ ದತ್ತಾಂಶದಿಂದ ಬಹಿರಂಗ

Date:

ದೆಹಲಿ ಐಐಟಿಯ ಎಫ್‌ಐಟಿಟಿ (FITT) ಕೇಂದ್ರದಲ್ಲಿ ರೂಪುಗೊಂಡಿರುವ ಭಾರತದ ‘ಅರ್ಥ್‌ಸೆನ್ಸ್ ಲ್ಯಾಬ್ಸ್’ ಎಂಬ ಜಿಯೋಸ್ಪೇಷಿಯಲ್ ಎಐ ನವೋದ್ಯಮದ ಉಪಗ್ರಹ ಚಿತ್ರಗಳ ವಿಶ್ಲೇಷಣೆಯು, ಯಾರ್ಲುಂಗ್ ತ್ಸಾಂಗ್ಪೊ (ಭಾರತದಲ್ಲಿ ಸಿಯಾಂಗ್) ನದಿಗೆ ಚೀನಾ ನಿರ್ಮಿಸುತ್ತಿರುವ 60 ಗಿಗಾವಾಟ್ ಸಾಮರ್ಥ್ಯದ ಮೆಡೋಗ್ ಜಲವಿದ್ಯುತ್ ಯೋಜನೆಯ ಕಾಮಗಾರಿ ವ್ಯಾಪಕವಾಗಿ ಹಾಗೂ ವೇಗವಾಗಿ ಸಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. ಮುಖ್ಯ ಅಣೆಕಟ್ಟು ಪ್ರದೇಶದಲ್ಲಿನ ಇಡೀ ಗ್ರಾಮಗಳನ್ನು ತೆರವುಗೊಳಿಸಲಾಗಿದ್ದು, ನದಿ ತಿರುಗಿಸುವ ಕಾಮಗಾರಿಗಳು ಗೋಚರಿಸುತ್ತಿವೆ ಮತ್ತು ಅರುಣಾಚಲ ಪ್ರದೇಶದ ಗಡಿ ಸಮೀಪ ಬೃಹತ್ ಕೈಗಾರಿಕಾ ಮೂಲಸೌಕರ್ಯ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.

- Advertisement -

​ಆಗ್ನೇಯ ಟಿಬೆಟ್‌ನಲ್ಲಿ ಅರುಣಾಚಲ ಪ್ರದೇಶದ ಉತ್ತರಕ್ಕೆ ಸುಮಾರು 40ರಿಂದ 50 ಕಿ.ಮೀ ದೂರದಲ್ಲಿ ಮೆಕ್‌ಮಹೋನ್ ರೇಖೆಯ ಸಮೀಪ ಈ ಬಹು-ರಚನೆಯ ಅಣೆಕಟ್ಟು ವ್ಯವಸ್ಥೆ ರೂಪುಗೊಳ್ಳುತ್ತಿದೆ. ನದಿಯ ಪ್ರಸಿದ್ಧ ‘ಗ್ರೇಟ್ ಯು-ಬೆಂಡ್’ ಭಾಗದಲ್ಲಿ ಸುರಂಗ ಮಾರ್ಗ ಹಾಗೂ ಹಲವು ವಿದ್ಯುತ್ ಕೇಂದ್ರಗಳನ್ನು ಇದು ಒಳಗೊಂಡಿರಲಿದೆ. ಅಂದಾಜು 1.2 ಟ್ರಿಲಿಯನ್ ಯುವಾನ್ (ಸುಮಾರು 15.60 ಲಕ್ಷ ಕೋಟಿ ರೂಪಾಯಿ- ಭಾರತದ ಬಜೆಟ್ ನಲ್ಲಿ ಅರ್ಧದಷ್ಟು) ವೆಚ್ಚದಲ್ಲಿ ಐದು ಹಂತದ ವಿದ್ಯುತ್ ಕೇಂದ್ರಗಳನ್ನು ಯೋಜಿಸಲಾಗಿದ್ದು, ಸುಮಾರು 50 ಕಿ.ಮೀ ವ್ಯಾಪ್ತಿಯಲ್ಲಿ 2,000 ಮೀಟರ್‌ಗಿಂತ ಹೆಚ್ಚು ಎತ್ತರದ ಇಳಿಜಾರನ್ನು ಬಳಸಿಕೊಳ್ಳಲು ಸುಮಾರು 40 ಕಿ.ಮೀ ಉದ್ದದ ಸುರಂಗಗಳನ್ನು ನಿರ್ಮಿಸಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

​ಮೇನ್ಲಿಂಗ್ ಪಟ್ಟಣದ ಬಳಿಯ ದೊಡ್ಡ ಅಣೆಕಟ್ಟು, ಪೈ ಪಟ್ಟಣದ ಸಮೀಪದ ಕೆಳಹಂತದ ಅಣೆಕಟ್ಟು, ನಮ್ಚಾ ಬರ್ವಾ ಪರ್ವತದ ಮೂಲಕ ಹಾದುಹೋಗುವ ಸುರಂಗ ಮತ್ತು ಭಾರತ–ಚೀನಾ ಗಡಿ ಸಮೀಪದ ಮೆಡೋಗ್ ಕೌಂಟಿಯ ಕೆಳಭಾಗದಲ್ಲಿರುವ ಸುರಂಗದ ಹೊರದ್ವಾರ—ಈ ನಾಲ್ಕು ಪ್ರಮುಖ ನೆಲೆಗಳನ್ನು ವರದಿ ಗುರುತಿಸಿದೆ. ಮೇನ್ಲಿಂಗ್ ಅಣೆಕಟ್ಟು ಪ್ರದೇಶದಲ್ಲಿ 2025ರ ಜುಲೈನಲ್ಲಿ ಗ್ರಾಮಗಳು ಹಾಗೂ ಕೃಷಿ ಭೂಮಿ ಇದ್ದರೆ, ಡಿಸೆಂಬರ್ ವೇಳೆಗೆ ಅವುಗಳನ್ನು ತೆರವುಗೊಳಿಸಿ ಭೂಕಾಮಗಾರಿ ಆರಂಭಿಸಲಾಗಿತ್ತು. 2026ರ ಆಗಸ್ಟ್ ಚಿತ್ರಗಳಲ್ಲಿ ನದಿ ತಿರುಗಿಸುವ ಕಾರ್ಯ, ಗ್ರಾಮಗಳ ಸ್ಥಳಾಂತರ ಹಾಗೂ ಉತ್ತರ ದಂಡೆಯಲ್ಲಿ ಹೊಸ ರಸ್ತೆಗಳು, ತಾತ್ಕಾಲಿಕ ವಸತಿ ಮತ್ತು ಕಚೇರಿ ಕಟ್ಟಡಗಳು ಕಂಡುಬಂದಿವೆ.

​ಮೆಡೋಗ್ ಸುರಂಗದ ಹೊರದ್ವಾರದ ಬಳಿ 2025ರ ಜುಲೈನ ಅಧಿಕೃತ ಭೂಮಿಪೂಜೆಗೂ ಮುನ್ನವೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿತ್ತು ಎಂದು ವರದಿ ಉಲ್ಲೇಖಿಸಿದೆ. 2018ರಲ್ಲಿ ನದಿ ದಂಡೆಯ ರಸ್ತೆ ನಿರ್ಮಾಣ ಶುರುವಾಗಿ, 2019–2021ರಲ್ಲಿ ಸೇತುವೆ ಹಾಗೂ ಪ್ರಾಥಮಿಕ ಕಾಮಗಾರಿ, 2023–2024ರಲ್ಲಿ 30–35 ವಸತಿ–ಕೈಗಾರಿಕಾ ಕಟ್ಟಡಗಳು ಮತ್ತು 2024ರಲ್ಲಿ ಕಾಂಕ್ರೀಟ್ ಬ್ಯಾಚಿಂಗ್ ಘಟಕ ಸ್ಥಾಪನೆಯಾಗಿದೆ. ಇತ್ತ ಪೈ ಪಟ್ಟಣದ ಕೆಳಹಂತದ ಅಣೆಕಟ್ಟು ಸ್ಥಳದಲ್ಲಿ 2026ರ ಅಕ್ಟೋಬರ್‌ವರೆಗೆ ಸ್ಪಷ್ಟ ನಿರ್ಮಾಣ ಕಾಮಗಾರಿ ಕಂಡುಬಂದಿಲ್ಲ.

​ಚೀನಾದ ಯೋಜನೆಯಿಂದ ಕೆಳಭಾಗದ ಪ್ರದೇಶಗಳ ಮೇಲಾಗುವ ಪರಿಣಾಮ ತಗ್ಗಿಸಲು ಭಾರತವು ಅರುಣಾಚಲ ಪ್ರದೇಶದಲ್ಲಿ 11,200 ಮೆಗಾವಾಟ್ ಸಾಮರ್ಥ್ಯದ ಸಿಯಾಂಗ್ ಮೇಲ್ಭಾಗದ ಬಹುಪಯೋಗಿ ಯೋಜನೆ (ಎಸ್‌ಯುಎಂಪಿ) ಪ್ರಸ್ತಾಪಿಸಿರುವುದರಿಂದ ಈ ವರದಿ ಮಹತ್ವ ಪಡೆದಿದೆ. ಸಿಯಾಂಗ್, ಅಪ್ಪರ್ ಸಿಯಾಂಗ್ ಮತ್ತು ಈಸ್ಟ್ ಸಿಯಾಂಗ್ ಜಿಲ್ಲೆಗಳಲ್ಲಿ ವ್ಯಾಪಿಸಲಿರುವ ಈ ಯೋಜನೆಯ ಜಲಾಶಯವು ಸುಮಾರು 9.2 ಬಿಲಿಯನ್ ಕ್ಯೂಬಿಕ್ ಮೀಟರ್ (ಸುಮಾರು 325 ಟಿಎಂಸಿ ಅಡಿ ಅಥವಾ 9.2 ಲಕ್ಷ ಕೋಟಿ ಲೀಟರ್) (ಬಿಸಿಎಂ) ನೀರು ಸಂಗ್ರಹ ಸಾಮರ್ಥ್ಯ ಹೊಂದಿರಲಿದೆ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ತಿಳಿಸಿದ್ದಾರೆ.

​ಚೀನಾದ ಯೋಜನೆಯ 5.2 ಬಿಸಿಎಂ ಸಾಮರ್ಥ್ಯಕ್ಕಿಂತ ದೊಡ್ಡದಾಗಿರುವ ಸಿಯಾಂಗ್ ಜಲಾಶಯವು ನದಿಯ ಹರಿವನ್ನು ನಿಯಂತ್ರಿಸಲು, ಮೇಲ್ಭಾಗದಿಂದ ದಿಢೀರ್ ನೀರು ಬಿಡುಗಡೆಯಾದಾಗ ಎದುರಿಸಲು ಹಾಗೂ ಕೊರತೆಯ ಅವಧಿಯಲ್ಲಿ ನೀರಿನ ಲಭ್ಯತೆ ಕಾಯ್ದುಕೊಳ್ಳಲು ನೆರವಾಗಲಿದೆ ಎಂದು ಖಂಡು ಪ್ರತಿಪಾದಿಸಿದ್ದಾರೆ. ಚೀನಾದೊಂದಿಗೆ ಬದ್ಧತೆಯುಳ್ಳ ಜಲಹಂಚಿಕೆ ಒಪ್ಪಂದ ಮತ್ತು ಪಾರದರ್ಶಕ ದತ್ತಾಂಶ ಹಂಚಿಕೆ ವ್ಯವಸ್ಥೆ ಇಲ್ಲದಿರುವುದು ದೊಡ್ಡ ದೌರ್ಬಲ್ಯ ಎಂದು ಅವರು ಪದೇ ಪದೇ ಎಚ್ಚರಿಸಿದ್ದಾರೆ.

​ಇನ್ನೊಂದೆಡೆ, ಎಸ್‌ಯುಎಂಪಿ ಯೋಜನೆಗೆ ಸ್ಥಳೀಯವಾಗಿ ವಿರೋಧ ತೀವ್ರಗೊಂಡಿದ್ದು, ಸ್ಥಳಾಂತರ, ಭೂಮಿ ಮತ್ತು ಜೀವನೋಪಾಯದ ಆತಂಕ ವ್ಯಕ್ತಪಡಿಸಿ ಆದಿ ಸಮುದಾಯಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿವೆ. ಪೂರ್ವ-ಸಾಧ್ಯತಾ ಸಮೀಕ್ಷೆ ವಿರೋಧಿಸಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು ಹಾಗೂ ಅಕ್ಟೋಬರ್‌ನಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರವೂ ನಡೆದಿತ್ತು. ಈ ವರದಿಯು ಉಪಗ್ರಹ ಚಿತ್ರಗಳನ್ನು ಆಧರಿಸಿ ಕಾಮಗಾರಿಯ ವ್ಯಾಪ್ತಿ ಮತ್ತು ವೇಗವನ್ನು ದಾಖಲಿಸಿದ್ದು, ಪರಿಸರ ಹಾನಿ ಅಥವಾ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೇಲಿನ ಪರಿಣಾಮಗಳನ್ನು ಅಳೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ಚುನಾವಣೆ ವಿಳಂಬ ಖಂಡಿಸಿ ನ. 26ರಂದು ಕರಾಳ ಸಂವಿಧಾನ ದಿನಾಚರಣೆ

ರಾಜ್ಯದಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ವಿಳಂಬ ಮಾಡುತ್ತಿರುವುದನ್ನು...

ಬೀದರ್‌ | ಟನ್‌ ಕಬ್ಬಿಗೆ ₹3,500 ದರ ಘೋಷಿಸಿದ ಡಿಸಿ, ಧರಣಿ ಹಿಂಪಡೆದ ರೈತರು

ಬೀದರ್‌ ನಗರದ ಉಸ್ತುವಾರಿ ಸಚಿವರ ಕಚೇರಿ ಎದುರುಗಡೆ ಕಳೆದ 12ದಿನಳಿಂದ ಕಬ್ಬಿನ...

ಭಾಲ್ಕಿ | ಬಸವಣ್ಣನವರ ಅವಹೇಳನ: ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹ

ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ...

ದೆಹಲಿಯಲ್ಲಿ 6 ವರ್ಷಗಳಲ್ಲಿ 6,500ಕ್ಕೂ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು; ಪ್ರತಿ 3 ದಿನಕ್ಕೊಬ್ಬರು ಬಲಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ತೀವ್ರತೆಯ ನಡುವೆಯೇ ಶ್ವಾಸಕೋಶದ ಕ್ಯಾನ್ಸರ್ (Lung...