ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಖಾತೆಗೆ ಟೆನಿಸ್‌ನಿಂದಲೂ ಚಿನ್ನದ ಪದಕ ದೊರಕಿದೆ.
ಶನಿವಾರ ನಡೆದ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಜೋಡಿಯು ಚೈನೀಸ್ ತೈಪೆ ಜೋಡಿಯನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
ಭಾರತದ ಈ ಜೋಡಿಯು ಫೈನಲ್‌ನಲ್ಲಿ ಆನ್ ಶುವೊ ಲಿಯಾಂಗ್ ಮತ್ತು ತ್ಸುಂಗ್ ಹಾವೊ ಹುವಾಂಗ್ ಜೋಡಿಯನ್ನು 2-6, 6-3, (10-4) ಅಂತರದಲ್ಲಿ ಮಣಿಸಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಚೈನೀಸ್ ತೈಪೆ ಜೋಡಿ ಭಾರತದ ಜೋಡಿಗೆ ತೀವ್ರ ಪೈಪೋಟಿ ನೀಡಿತ್ತಾದರೂ ಟೈ ಬ್ರೇಕರ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಚಿನ್ನದ ಪದಕಕ್ಕೆ ಕೊರಳೊಡ್ಡಿವೆ.
ಈ ಮೂಲಕ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು ಒಂಭತ್ತು ಚಿನ್ನದ ಪದಕವನ್ನು ಗಳಿಸಿದೆ. ಒಂಭತ್ತು ಚಿನ್ನದ ಪದಕದ ಜೊತೆಗೆ 13 ಬೆಳ್ಳಿ ಹಾಗೂ 13 ಕಂಚಿನ ಪದಕವನ್ನು ಗೆದ್ದು ಒಟ್ಟು 35 ಪದಕವನ್ನು ತನ್ನದಾಗಿಸಿಕೊಂಡಿದೆ.