ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಅ.5ರ ಗುರುವಾರದಂದು ಚಿನ್ನದ ಪದಕವನ್ನು ಪಡೆಯುವುದರೊಂದಿಗೆ ಶುಭಾರಂಭಗೈದಿದೆ.
ಬಿಲ್ಲುಗಾರಿಕೆ(ಆರ್ಚರಿ) ವಿಭಾಗದಲ್ಲಿ ಮಹಿಳೆಯರ ತಂಡ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು 230-228 ಅಂಕಗಳಿಂದ ಸೋಲಿಸುವ ಮೂಲಕ ಭಾರತಕ್ಕೆ 19ನೇ ಚಿನ್ನ ತಂದುಕೊಟ್ಟಿದ್ದಾರೆ. ಆ ಮೂಲಕ ಭಾರತದ ಪಾಲಿಗೆ ಒಟ್ಟಾರೆ ಪದಕಗಳ ಸಂಖ್ಯೆಯನ್ನು 82ಕ್ಕೇರಿಸಿದ್ದಾರೆ.
GOLD MEDAL NO. 19 🔥🔥🔥
Archery: The trio of Jyothi, Aditi & Parneet beat Chinese Taipei 230-228 in Women’s Compound Team Final.
82nd medal overall#AGwithIAS #IndiaAtAsianGames #AsianGames2022 pic.twitter.com/WLfMBtjtOj
— India_AllSports (@India_AllSports) October 5, 2023
ಆರ್ಚರಿ ಮಹಿಳೆಯರ ತಂಡದಲ್ಲಿ ಜ್ಯೋತಿ, ಅದಿತಿ ಮತ್ತು ಪರ್ನೀತ್ ಭಾಗವಹಿಸಿದ್ದರು. ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ 19 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಕಗಳ ಸಹಿತ ಒಟ್ಟು 82 ಪದಕಗಳನ್ನು ಈವರೆಗೆ ತನ್ನದಾಗಿಸಿದೆ.