ಆ್ಯಷಸ್‌ ಸರಣಿ | ಬೆನ್‌ ಸ್ಟೋಕ್ಸ್ ಸ್ಫೋಟಕ ಆಟ ವ್ಯರ್ಥ; ಎರಡನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯ

Date:

Advertisements

ಆ್ಯಷಸ್‌ ಸರಣಿಯ ಎರಡನೇ ಟಸ್ಟ್‌ನ ಕೊನೆಯ ದಿನ 2019ರ ಪಂದ್ಯದಂತೆ ಯಾವುದೇ ಪವಾಡ ನಡೆಯಲಿಲ್ಲ. ಸ್ಫೋಟಕ ಆಟಗಾರ ಬೆನ್‌ ಸ್ಟೋಕ್ಸ್‌ ಬೌಂಡರಿ, ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರೂ ಇಂಗ್ಲೆಂಡ್‌ಗೆ ಗೆಲುವು ದಕ್ಕಲಿಲ್ಲ. ಆದರೆ ಸ್ಟೋಕ್ಸ್‌ ಆಟ ಮಾತ್ರ ನೆನಪಿನಲ್ಲಿ ಉಳಿಯಿತು.

ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ನೀಡಿದ್ದ 371 ರನ್‌ಗಳ ಸವಾಲನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ ನಾಲ್ಕನೇ ಇನ್ನಿಂಗ್ಸ್‌ನಲ್ಲಿ81.3 ಓವರ್‌ಗಳಲ್ಲಿ 327 ರನ್‌ಗಳಿಗೆ ಆಲೌಟ್‌ ಆಗಿ 43 ರನ್‌ಗಳ ಸೋಲನ್ನು ಅನುಭವಿಸಿತು. ಇದರೊಂದಿಗೆ ಐದು ಟೆಸ್ಟ್‌ಗಳ ಆ್ಯಷಸ್‌ ಸರಣಿಯಲ್ಲಿ ಆಸಿಸ್ 2-0 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್‌ 4ನೇ ದಿನದಾಟದ ಅಂತ್ಯಕ್ಕೆ 114ಕ್ಕೆ 4 ವಿಕೆಟ್‌ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಐದನೇ ದಿನವಾದ ಇಂದು ಕಣಕ್ಕಿಳಿದ ತಂಡಕ್ಕೆ 257 ರನ್‌ಗಳ ಅಗತ್ಯವಿತ್ತು. 5ನೇ ವಿಕೆಟ್‌ಗೆ ಬೆನ್‌ ಡಕೆಟ್‌ (83) ಮತ್ತು ಬೆನ್‌ ಸ್ಟೋಕ್ಸ್, 198 ಎಸೆತಗಳಲ್ಲಿ 132 ರನ್‌ಗಳ ಮನಮೋಹಕ ಜೊತೆಯಾಟ ಕಟ್ಟಿ ತಂಡವನ್ನು ಜಯದ ಹೊಸ್ತಿಲಿಗೆ ಕೊಂಡೊಯ್ದರು.

Advertisements

46ನೇ ಓವರ್‌ನಲ್ಲಿ ಜಾಶ್‌ ಹೇಝಲ್‌ವುಡ್‌ ಎಸೆದ ಬೌನ್ಸರ್‌ನಲ್ಲಿ ವಿಕೆಟ್‌ಕೀಪರ್‌ ಅಲೆಕ್ಸ್‌ ಕೇರಿಗೆ ಕ್ಯಾಚಿತ್ತ ಬೆನ್‌ ಡಕೆಟ್‌, ಎರಡನೇ ಇನಿಂಗ್ಸ್‌ನಲ್ಲೂ ಶತಕ ವಂಚಿತರಾದರು. 112 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 83 ರನ್‌ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕಾನಿ ಬೈರ್‌ಸ್ಟೋವ್‌ 2 ಬೌಂಡರಿಗಳೊಂದಿಗೆ ಸ್ಪೋಟಕ ಬ್ಯಾಟಿಂಗ್‌ ನಡೆಸಲು ಶುರು ಮಾಡಿದರು. ಆದರೆ, ಓವರ್‌ ಅಂತ್ಯದ ವೇಳೆ ಬಾಲ್‌ ಡೆಡ್‌ ಆಗುವ ಮುನ್ನ ಕ್ರೀಸ್‌ ಬಿಟ್ಟಿದ್ದ ಬೈರ್‌ಸ್ಟೋವ್‌ ಅವರನ್ನು ಕೀಪರ್‌ ಅಲೆಕ್ಸ್‌ ಕೇರಿ ರನ್‌ಔಟ್‌ ಮಾಡಿದರು. ಇದು ಭಾರಿ ವಿವಾದಕ್ಕೆ ಕಾರಣವಾಯಿತು.

ಬೈರ್‌ಸ್ಟೋವ್‌ ವಿಕೆಟ್‌ ಪತನದ ಬಳಿಕ ಬೆನ್‌ ಸ್ಟೋಕ್ಸ್‌ ಬಿರುಸಾಗಿ ರನ್‌ ಕಲೆಹಾಕಿದರು. 7ನೇ ವಿಕೆಟ್‌ಗೆ ಸ್ಟೋಕ್ಸ್ ಮತ್ತು ಸ್ಟುವರ್ಡ್ ಬ್ರಾಡ್ ಜೋಡಿ 93 ಎಸೆತಗಳಲ್ಲಿ 100 ರನ್‌ಗಳ ಮುರಿಯದ ಜೊತೆಯಾಟವಾಡಿ ಇಂಗ್ಲೆಂಡ್ ತಂಡವನ್ನು ಜಯದ ದಡದತ್ತ ಸೇರಿಸಲು ಸಜ್ಜಾಗಿದ್ದರು. ಆದರೆ 73ನೇ ಓವರ್‌ನ ಜಾಶ್‌ ಹೇಝಲ್‌ವುಡ್‌ ಬೌಲಿಂಗ್‌ನಲ್ಲಿ ಬ್ಯಾಟ್‌ ಬೀಸಲು ಹೋಗಿ ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿಗೆ ಕ್ಯಾಚ್‌ ನೀಡಿದರು. ಇದರೊಂದಿಗೆ ಇಂಗ್ಲೆಂಡ್‌ನ ಗೆಲುವಿನ ಕನಸು ಕಮರಿ ಹೋಯಿತು. 214 ಚೆಂಡುಗಳಲ್ಲಿ 155 ರನ್‌ ಬಾರಿಸಿದ ಸ್ಟೋಕ್ಸ್ ಅವರ ಆಟದಲ್ಲಿ 9 ಭರ್ಜರಿ ಬೌಂಡರಿ ಹಾಗೂ 9 ಅದ್ಭುತ ಸಿಕ್ಸರ್‌ಗಳಿದ್ದವು.

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ ಟೂರ್ನಿ ; ಅರ್ಹತಾ ಸುತ್ತಿನಲ್ಲೇ ವೆಸ್ಟ್ ಇಂಡೀಸ್ ಔಟ್!

ಇವರ ನಂತರ ಬಂದ ಬ್ಯಾಟ್ಸ್‌ಮೆನ್‌ಗಳೆಲ್ಲ ಒಂದಷ್ಟು ಹೊತ್ತು ಆಟವಾಡಿ ಪೆವಿಲಿಯನ್‌ಗೆ ತೆರಳಿದರು. ಅಂತಿಮವಾಗಿ 82ನೇ ಓವರ್‌ನಲ್ಲಿ ಜೋಶ್‌ ಟಾಂಗ್‌ ಔಟಾಗುವುದರೊಂದಿಗೆ ಇಂಗ್ಲೆಂಡ್‌ ಇನ್ನಿಂಗ್ಸ್‌ ಮುಕ್ತಾಯವಾಯಿತು.

ಆಸ್ಟ್ರೇಲಿಯ ಪರ ಮಿಚೆಲ್ ಸ್ಟಾರ್ಕ್ 79/3, ಪ್ಯಾಟ್ ಕಮ್ಮಿನ್ಸ್ 69/3 ಹಾಗೂ ಜಾಶ್‌ ಹೇಝಲ್‌ವುಡ್‌ 80/3 ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X