ಏಕದಿನ ವಿಶ್ವಕಪ್ 2023 | ಬೆಂಗಳೂರಿನಲ್ಲಿ ವಾರ್ನರ್ – ಮಾರ್ಷ್ ಶತಕದ ಅಬ್ಬರ; ಪಾಕ್‌ಗೆ ಸೋಲಿನ ರುಚಿ ತೋರಿಸಿದ ಆಸೀಸ್

Date:

Advertisements

ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅವರ ಬ್ಯಾಟಿಂಗ್‌ ಅಬ್ಬರದೊಂದಿಗೆ ಐಸಿಸಿ ಏಕದಿನ ವಿಶ್ವಕಪ್‌ 2023ರ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ತಂಡವನ್ನು 62 ರನ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.

ಉದ್ಯಾನ ನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 368 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಅಂತಿಮ15 ಓವರ್‌ಗಳಲ್ಲಿ ಕುಸಿತ ಕಂಡು 45.3 ಓವರ್‌ಗಳಲ್ಲಿ 305 ರನ್‌ಗಳಿಗೆ ಆಲೌಟ್‌ ಆಗಿ ಸೋಲಿಗೆ ಶರಣಾಯಿತು.

ಕೊನೆಯ ಬೌಲರ್‌ಗಳನ್ನು ಹೊರತುಪಡಿಸಿದರೆ ಮಧ್ಯಮ ಕ್ರಮಾಂಕದವರೆಗೂ ಎಲ್ಲ ಬ್ಯಾಟ್ಸಮನ್‌ಗಳು ಗುರಿಯನ್ನು ತಲುಪಲು ಸಾಕಷ್ಟು ಪ್ರಯತ್ನ ಮಾಡಿದರು.

Advertisements

ಅಬ್ದುಲ್ಲಾ ಶಫೀಕ್ (64) ,ಇಮಾಮ್-ಉಲ್-ಹಕ್(70) ,ಮೊಹಮ್ಮದ್ ರಿಜ್ವಾನ್(46),ಸೌದ್ ಶಕೀಲ್(30),ಇಫ್ತಿಕರ್ ಅಹಮದ್(26) ಅವರ ಹೋರಾಟ ಪಾಕಿಸ್ತಾನಕ್ಕೆ ಗೆಲುವಿನ ಭರವಸೆ ನೀಡಿತ್ತು. ಇಫ್ತಿಕರ್ ಅಹಮದ್, ಝಂಪಾ ಬೌಲಿಂಗ್‌ನಲ್ಲಿ ಔಟಾದ ನಂತರ ಪಂದ್ಯದ ಗತಿ ಬದಲಾಯಿತು.

53/4 ವಿಕೆಟ್ ಪಡೆದ ಆಡಂ ಝಂಪಾ, ಮಾರ್ಕಸ್ ಸ್ಟೊಯಿನಿಸ್ 40/2 ಹಾಗೂ ಪ್ಯಾಟ್ ಕಮ್ಮಿನ್ಸ್ 62/2 ವಿಕೆಟ್ ಪಡೆದು ಪಾಕಿಸ್ತಾನದ ಪತನಕ್ಕೆ ಕಾರಣರಾದರು.

ಈ ಸುದ್ದಿ ಓದಿದ್ದೀರಾ? ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್        

ಬ್ಯಾಟ್ಸ್​​​ಮನ್​ಗಳ ಸ್ವರ್ಗವೆಂದೇ ಕರೆಸಿಕೊಳ್ಳುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ  ರನ್‌ಗಳ ಮಳೆ ಹರಿಯಿತು. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್​ ಪಾಕಿಸ್ತಾನ ಬೌಲರ್​​ಗಳಿಗೆ ನೀರಿಳಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾಕ್ಕೆ ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಮತ್ತು ಮಾರ್ಷ್ ದಾಖಲೆಗಳ ಶತಕ ಸಿಡಿಸಿದರು. ಇವರ ವಿಶ್ವದಾಖಲೆಯ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ 50 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್​ಗಳ ಬೃಹತ್ ಮೊತ್ತ ಪೇರಿಸಿತು.

10 ರನ್ ಗಳಿಸಿದ್ದಾಗ ಜೀವದಾನ ಪಡೆದ ವಾರ್ನರ್‌ ಮಿಚೆಲ್ ಮಾರ್ಷ್ ಜೊತೆ ಸೇರಿ ಬೌಂಡರಿ-ಸಿಕ್ಸರ್​​ಗಳ ಸುರಿಮಳೆ ಸುರಿಸಿದರು. ಕೇವಲ 85 ಎಸೆತಗಳಲ್ಲಿ ಶತಕ ಸಿಡಿಸಿದರು. ಏಕದಿನ ಕ್ರಿಕೆಟ್​ನಲ್ಲಿ 21ನೇ ಶತಕ ಹಾಗೂ ವಿಶ್ವಕಪ್​​ನಲ್ಲಿ 5ನೇ ಶತಕ ಸಿಡಿಸಿ ರಿಕಿ ಪಾಂಟಿಂಗ್ ದಾಖಲೆ ಮುರಿದರು.

ಅಂತಿಮವಾಗಿ ವಾರ್ನರ್, 124 ಎಸೆತಗಳಲ್ಲಿ 14 ಬೌಂಡರಿ, 9 ಸಿಕ್ಸರ್​​ ಸಹಿತ 163 ರನ್‌ ಗಳಿಸಿ ಹ್ಯಾರಿಸ್‌ ರೌಫ್‌ಗೆ ವಿಕೆಟ್‌ ಒಪ್ಪಿಸಿದರು.

ವಾರ್ನರ್​ಗೆ ಅದ್ಭುತವಾಗಿ ಜೊತೆ ನೀಡಿದ ಮಿಚೆಲ್ ಮಾರ್ಷ್​ ಕೂಡ ಅತಿ ಕಡಿಮೆ ಎಸೆತಗಳಲ್ಲಿ 100 ದಾಟಿದರು. ಪಾಕ್ ಬೌಲರ್​​​ಗಳಿಗೆ ಬೆಂಡೆತ್ತಿದ ಮಾರ್ಷ್, ಏಕದಿನ ಕ್ರಿಕೆಟ್​ನಲ್ಲಿ ತಮ್ಮ 2ನೇ ಏಕದಿನ ಶತಕ ಸಿಡಿಸಿ ಮಿಂಚಿದರು. ತಮ್ಮ 32ನೇ ಜನ್ಮ ದಿನವೇ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 108 ಎಸೆತಗಳಲ್ಲಿ 10 ಬೌಂಡರಿ, 9 ಸಿಕ್ಸರ್​​ಗಳ ಸಹಿತ 121 ರನ್ ಬಾರಿಸಿ ಶಾಹೀನ್ ಬೌಲಿಂಗ್​ನಲ್ಲಿ ಔಟಾದರು.

ಈ ಜೋಡಿ ಮೊದಲ ವಿಕೆಟ್​ಗೆ 203 ಎಸೆತಗಳಲ್ಲಿ 259 ರನ್ ಗಳಿಸಿತು. ಇದು ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಪರ ಮೊದಲ ವಿಕೆಟ್​ಗೆ ದಾಖಲಾದ ಅಧಿಕ ರನ್​ಗಳ ಆರಂಭಿಕ ಜೊತೆಯಾಟವಾಗಿದೆ.

ಇವರಿಬ್ಬರು ಔಟಾದ ನಂತರ ಆಸ್ಟ್ರೇಲಿಯಾ ಕುಸಿತ ಕಂಡಿತು. ಉಳಿದ ಆಟಗಾರರಿಂದ ಬಂದಿದ್ದು 58 ರನ್​ಗಳು ಮಾತ್ರ. ಅಂತಿಮವಾಗಿ ಆಸೀಸ್ ಪಡೆ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 367 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.

ಪಾಕ್‌ ಪರ ಶಾಹೀನ್ ಶಾ ಆಫ್ರಿದಿ 54/5 ಹಾಗೂ ಹಾರಿಸ್ ರೌಫ್ 83/3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ಗಳೆನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X