ಐಪಿಎಲ್ 2025ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಆಟಗಾರರ ಹೆಸರನ್ನು ಪ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅಂತಿಮಗೊಳಿಸಿದ್ದಾರೆ. 14 ಕೋಟಿ ರೂ.ಗೆ ಹರಾಜಾದ ಕೆ ಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ. ನ.24 ರಂದು ನಡೆದ ಬಿಡ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆ ಎಲ್ ರಾಹುಲ್ ಅವರನ್ನು ಖರೀದಿಸಿತ್ತು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರ್ಥ್ ಜಿಂದಾಲ್, ಇಬ್ಬರೂ ಆಟಗಾರರು ತಂಡದ ಕಿರಿಯ ಸದಸ್ಯರಿಗೆ ಮಾರ್ಗದರ್ಶನ ನೀಡಲಿದ್ದಾರೆ. ನಾಯಕನ ಹೆಸರನ್ನು ಮುಂದಿನ ಋತುವಿನಲ್ಲಿಯೇ ತಿಳಿಸಲಾಗುವುದು. ನಾವು ಆರಂಭಿಕರಾಗಿ ಆಡುವವರ ಸಾಮರ್ಥ್ಯವನ್ನು ಎದುರು ನೋಡುತ್ತಿದ್ದು, ಅನುಭವದೊಂದಿಗೆ ಇನಿಂಗ್ಸ್ ಕಟ್ಟುವ ಕೆಲವರಿದ್ದಾರೆ. ಕೆ ಎಲ್ ರಾಹುಲ್ ಐಪಿಎಲ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇವರು ಕೆಲವು ಆಟಗಾರರಂತೆ ಪ್ರತಿ ಋತುವಿನಲ್ಲಿಯೂ 400ಕ್ಕೂ ಅಧಿಕ ರನ್ ಪೇರಿಸಿದ್ದಾರೆ. ದೆಹಲಿಯ ಪಿಚ್ ಇವರ ಆಟಕ್ಕೆ ಸರಿ ಹೊಂದುತ್ತದೆ ಎಂದು ಭಾವಿಸಿದ್ದೇನೆ. ನಾವು ಅವರನ್ನು ಹೊಂದಿರುವುದಕ್ಕೆ ಹರ್ಷಗೊಂಡಿದ್ದೇನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಾರ್ಚ್ 14 ರಿಂದ 18ನೇ ಆವೃತ್ತಿಯ ಐಪಿಎಲ್ ಹಂಗಾಮ ಆರಂಭ, ಮೂರು ವರ್ಷದ ವೇಳಾಪಟ್ಟಿ ಪ್ರಕಟ
“ನಮ್ಮ ಬ್ಯಾಟಿಂಗ್ ಪಡೆಯಲ್ಲಿ ಯುವ ಆಟಗಾರರಿದ್ದಾರೆ. ಕೆ ಎಲ್ ರಾಹುಲ್ ಹಾಗೂ ಅಕ್ಷರ್ ತಂಡವನ್ನು ಮುನ್ನಡೆಸಲಿದ್ದಾರೆ. ಕೆ ಎಲ್ ರಾಹುಲ್ ಅವರ ಬ್ಯಾಟಿಂಗ್ ಅನುಭವ ಈ ಋತುವಿನಲ್ಲಿ ಪ್ರಮುಖ ಆಕರ್ಷಣೆಯಾಗಿರುತ್ತದೆ. ನಾವು ಎರಡನೇ ದಿನದ ಹಾರಾಜಿನಲ್ಲೂ ಪ್ರಮುಖ ಸಾಮರ್ಥ್ಯವಿರುವ ಬೌಲರ್‌ಗಳನ್ನು ಖರೀದಿಸುತ್ತೇವೆ. ಎಲ್ಲ ವಿಭಾಗಗಳಲ್ಲಿ ನಮ್ಮ ತಂಡ ಅತ್ಯುತ್ತಮವಾಗಿರಲಿದೆ” ಎಂದು ಹೇಳಿದರು.
ದೆಹಲಿ ತಂಡ ಮೊದಲ ದಿನದ ಮೆಗಾ ಹರಾಜಿನಲ್ಲಿ 9 ಆಟಗಾರರನ್ನು ಖರೀದಿಸಿತ್ತು. ಮೆಗಾ ಹರಾಜಿನ ಡಿಸಿ ಸ್ವಾಧೀನಪಡಿಸಿಕೊಂಡ ಆಟಗಾರರು:
1. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – ಬೌಲರ್ – ರೂ 11.75 ಕೋಟಿ
2. ಕೆಎಲ್ ರಾಹುಲ್ (ಭಾರತ) – ಡಬ್ಲ್ಯುಕೆ-ಬ್ಯಾಟರ್ – ರೂ. 14 ಕೋಟಿ
3. ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ) – ಬ್ಯಾಟರ್ – ರೂ. 9 ಕೋಟಿ (ಆರ್‌ಟಿಎಂ – ಖರೀದಿಸಿದ ಆಟಗಾರರನ್ನು ಪುನಃ ಖರೀದಿಸುವುದು)
4. ಹ್ಯಾರಿ ಬ್ರೂಕ್ (ಇಂಗ್ಲೆಂಡ್) – ಬ್ಯಾಟರ್ – ರೂ. 6.25 ಕೋಟಿ
5. ಟಿ ನಟರಾಜನ್ (ಭಾರತ) – ಬೌಲರ್ – ರೂ. 10.75 ಕೋಟಿ
6. ಕರುಣ್ ನಾಯರ್ (ಭಾರತ) – ಬ್ಯಾಟರ್ – ರೂ. 50 ಲಕ್ಷ
7. ಸಮೀರ್ ರಿಜ್ವಿ (ಭಾರತ) – ಆಲ್‌ರೌಂಡರ್- ರೂ 95 ಲಕ್ಷ
8. ಅಶುತೋಷ್ ಶರ್ಮಾ (ಭಾರತ) – ಆಲ್‌ರೌಂಡರ್ – ರೂ 3.80 ಕೋಟಿ
9. ಮೋಹಿತ್ ಶರ್ಮಾ (ಭಾರತ) – ಬೌಲರ್ – ರೂ 2.20 ಕೋಟಿ