ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಪಂದ್ಯದಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 176 ರನ್‌ಗಳ ಸವಾಲಿನ ಗುರಿ ನೀಡಿದೆ.
ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು.
ರಾಯಲ್ಸ್ ಪರವಾಗಿ ಓಪನರ್ ಆಗಿ ಬಂದು ನಿರೀಕ್ಷೆ ಹುಟ್ಟಿಸಿದ್ದ ಜೈಸ್ವಾಲ್ ಕೇವಲ 10 ರನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ನಲ್ಲಿ ಸುಮಾರು 15 ಓವರ್‍ವರೆಗೂ ನಿಂತ ಜೋಸ್ ಬಟ್ಲರ್, 36 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿಯ ನೆರವಿನೊಂದಿಗೆ 52 ರನ್ ಸಿಡಿಸಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು.
ಬಳಿಕ ಬಂದ ದೇವದತ್ ಪಡಿಕ್ಕಲ್ 38, ಅಶ್ವಿನ್ 30, ಶಿಮ್ರಾನ್ ಹೆಟ್ಮಾಯರ್ ಕೂಡ 30 ರನ್ ಸಿಡಿಸಿದರು. ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟ್ ಆದರು. ರಾಜಸ್ಥಾನ್ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಚೆನ್ನೈ ಪರ ರವೀಂದ್ರ ಜಡೇಜ, ಆಕಾಶ್ ಸಿಂಗ್ ಹಾಗೂ ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದರೆ, ಮೊಯಿನ್ ಅಲಿ ಒಂದು ವಿಕೆಟ್ ಕಬಳಿಸಿದರು.