ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್

Date:

Advertisements

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ 2023ರ ಟೂರ್ನಿಯು ಹಲವು ವೈಶಿಷ್ಟ್ಯಗಳಿಗೆ ಹೆಸರಾಗುತ್ತಿದೆ. ಇಂದು (ನ.6) ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧದ 38ನೇ ಪಂದ್ಯದಲ್ಲಿ ಲಂಕಾದ ಆಟಗಾರ ಎಂಜೆಲೋ ಮ್ಯಾಥ್ಯೂಸ್ ವಿಶಿಷ್ಟ ರೀತಿಯ ‘ಟೈಮ್ಡ್‌ ಔಟ್’ಗೆ ಔಟಾಗಿದ್ದಾರೆ.

‘ಟೈಮ್ಡ್‌ ಔಟ್’ ಕೂಡ ಬ್ಯಾಟ್ಸ್‌ಮನ್‌ಗಳು ಔಟಾಗುವ ಬೌಲ್ಡ್‌, ಕ್ಯಾಚ್, ರನ್ಔಟ್, ಎಲ್‌ಬಿ ರೀತಿಯ ಮತ್ತೊಂದು ಔಟಾಗಿದೆ. 100 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ‘ಟೈಮ್ಡ್‌ ಔಟ್’ಗೆ ಯಾವ ದೇಶದ ಆಟಗಾರರು ಔಟಾಗಿರಲಿಲ್ಲ. ಆದರೆ ಇಂದು ಶ್ರೀಲಂಕಾದ ಆಟಗಾರ ಎಂಜೆಲೋ ಮ್ಯಾಥ್ಯೂಸ್ ‘ಟೈಮ್ಡ್‌ ಔಟ್’ಗೆ ಮೊದಲ ಬಾರಿಗೆ ಔಟಾಗಿದ್ದಾರೆ.

ವಿಶ್ವಕಪ್‌ ಟೂರ್ನಿಯ ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್‌ ಗೆದ್ದು ಶ್ರೀಲಂಕಾವನ್ನು ಬ್ಯಾಟಿಂಗ್‌ ಆಹ್ವಾನಿಸಿತ್ತು. 24.2ನೇ ಓವರ್‌ನಲ್ಲಿ ಸದೀರ ಸಮರವಿಕ್ರಮ ಶಕೀಬ್‌ ಅಲ್‌ ಹಸನ್‌ ಬೌಲಿಂಗ್‌ನಲ್ಲಿ 41 ರನ್‌ ಗಳಿಸಿ ಔಟಾಗಿದ್ದರು.

Advertisements

ಟೈಮ್ಡ್‌ ಔಟ್

ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮದ (ಎಂಸಿಸಿ) ಪ್ರಕಾರ ಒಬ್ಬ ಬ್ಯಾಟ್ಸ್‌ಮನ್‌ ಔಟಾದ ಮೂರು ನಿಮಿಷಗಳೊಳಗೆ ಮತ್ತೊಬ್ಬ ಬ್ಯಾಟ್ಸ್‌ಮನ್ ಆಟವಾಡಲು ಕ್ರೀಸಿಗೆ ಬರಬೇಕು. ಒಂದು ವೇಳೆ ಮೂರು ನಿಮಿಷಗಳಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ ಬರದಿದ್ದರೆ ಔಟ್‌ ಎಂದು ಘೋಷಿಸಲಾಗುತ್ತದೆ.

ಆದರೆ ಐಸಿಸಿ ವಿಶ್ವ ಕಪ್‌ 2023 ನಿಯಮಗಳ ಪ್ರಕಾರ ಕ್ರೀಸಿಗೆ ಬರಲು ಬ್ಯಾಟರ್ ಗೆ ಇರುವ ಸಮಯಾವಕಾಶ 2 ನಿಮಿಷಗಳಾಗಿವೆ. ಒಬ್ಬ ಬ್ಯಾಟರ್ ಔಟ್‌ ಆದರೆ ಅಥವಾ ಆಟದಿಂದ ನಿವೃತ್ತರಾಗಿ ಹೊರಹೋದಎರಡು ನಿಮಿಷಗಳಲ್ಲಿ ಹೊಸ ಬ್ಯಾಟರ್ ಕ್ರೀಸಿಗೆ ಬಂದು ಬಾಲ್‌ ಎದುರಿಸಬೇಕು ಎಂದು ವಿಶ್ವಕಪ್‌ ನಿಯಮಗಳು ತಿಳಿಸುತ್ತವೆ.ಆದರೆ ನಿಯಮಗಳ ಪ್ರಕಾರ ಈ ರೀತಿ ಟೈಮ್ಡ್‌ ಔಟ್‌ ಆದಾಗ ಅದರ ಶ್ರೇಯ ಬೌಲರ್‌ಗೆ ಹೋಗುವುದಿಲ್ಲ.

ಈ ವೇಳೆ ಕ್ರೀಸ್‌ಗೆ ಬಂದ ಏಂಜೆಲೊ ಮ್ಯಾಥ್ಯೂಸ್‌ ಮೊದಲನೇ ಎಸೆತ ಎದುರಿಸಲು ಸಜ್ಜಾಗುತ್ತಿದ್ದರು. ಆದರೆ ಹೆಲ್ಮೆಟ್‌ನೊಂದಿಗೆ ಸ್ವಲ್ಪ ಸಮಸ್ಯೆ ಇದ್ದ ಕಾರಣ ಈ ವೇಳೆ ಅವರ ಹೆಲ್ಮೆಟ್‌ನಲ್ಲಿ ಸಮಸ್ಯೆ ಇರುವುದನ್ನು ಅರಿತು ಬೇರೆ ಹೆಲ್ಮೆಟ್‌ ಕೊಡುವಂತೆ ಡಗೌಟ್‌ನಲ್ಲಿ ಕುಳಿತಿದ್ದ ಸಹ ಆಟಗಾರರಿಗೆ ಸಿಗ್ನಲ್ ಮಾಡಿದರು. ಅಂದ ಹಾಗೆ ಮ್ಯಾಥ್ಯೂಸ್‌ ಅವರ ಹೆಲ್ಮೆಟ್‌ನಲ್ಲಿ ಸ್ಟ್ರಾಪ್ ಇರಲಿಲ್ಲ ಎಂಬುದು ವಿಡಿಯೋದಲ್ಲಿ ಕಾಣಿಸುತ್ತಿತ್ತು. ಹಾಗಾಗಿ ಹೆಲ್ಮೆಟ್‌ ಬದಲಿಸಲು ಅವರು ಬಯಸಿದ್ದರು.

ಎಂಜೆಲೋ ಮ್ಯಾಥ್ಯೂಸ್ ಕ್ರೀಸಿಗೆ ಬರಲು ಮೂರು ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರು. ಇದೇ ಸಮಯದಲ್ಲಿ ಶಕೀಬ್‌ ಅಲ್‌ ಹಸನ್‌ ಅಂಪೈರ್‌ಗೆ ಟೈಮ್ಡ್‌ ಔಟ್ ಮಾದರಿಯ ಮನವಿಯನ್ನು ಸಲ್ಲಿಸಿದರು. ಮೂರು ನಿಮಿಷ ಸಮಯ ಮೀರದ ಕಾರಣ ಎಂಜೆಲೋ ಮ್ಯಾಥ್ಯೂಸ್ ಅವರನ್ನು ಔಟ್‌ ಎಂದು ತೀರ್ಪು ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಔಟ್ ಮೊದಲ ಬಾರಿಯಾಗಿದೆ. ಅಲ್ಲದೆ ಒಂದೇ ಎಸೆತಕ್ಕೆ ಎರಡು ವಿಕೆಟ್‌ ಪತನವಾದಂತಾಯಿತು.

1919 ರಲ್ಲಿ ಇಂಗ್ಲೆಂಡ್‌ನ ಟೌಂಟನ್‌ನಲ್ಲಿ ನಡೆದ ಪ್ರಥಮ ದರ್ಜೆ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸಸೆಕ್ಸ್ ಕ್ರಿಕೆಟಿಗ ಹೆರಾಲ್ಡ್ ಹೆಗೇಟ್ ಅವರನ್ನು ಅಂಪೈರ್ ಆಲ್ಫ್ರೆಡ್ ಸ್ಟ್ರೀಟ್ ಅವರನ್ನು “ಟೈಮ್ ಔಟ್” ಎಂದು ನೀಡಿದ್ದರು. ಸೋಮರ್‌ಸೆಟ್‌ನೊಂದಿಗೆ ಸಸೆಕ್ಸ್ ಆ ಪಂದ್ಯ ಆಡುತ್ತಿತ್ತು. ಈ ಪಂದ್ಯ ಬಿಟ್ಟರೆ ಇನ್ನೆಲ್ಲೂ ಈ ರೀತಿಯ ನಿರ್ಣಯವಾಗಿರಲಿಲ್ಲ. ಅಲ್ಲದೆ ಇದು ಪ್ರಥಮ ದರ್ಜೆ ಪಂದ್ಯವಾಗಿತ್ತು.

ಈ ಸುದ್ದಿ ಓದಿದ್ದೀರಾ?  ಅಮಾಯಕ ಕಂದಮ್ಮಗಳು ಸಾಯುತ್ತಿವೆ, ಜಗತ್ತು ಮೌನವಾಗಿದೆ: ಕ್ರಿಕೆಟಿಗ ಇರ್ಫಾನ್ ಪಠಾಣ್ ನೋವಿನ ನುಡಿ

ಭಾರತ – ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಮನವಿ ಮಾಡಿರಲಿಲ್ಲ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2006-2007 ಸರಣಿಯ ಮೂರನೇ ಟೆಸ್ಟ್ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿತ್ತು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು. ಸಚಿನ್ ತೆಂಡೂಲ್ಕರ್ ಅವರನ್ನು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ಪಟ್ಟಿ ಮಾಡಲಾಗಿತ್ತು.

ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ ಕೊನೆಯಲ್ಲಿ ಹದಿನೆಂಟು ನಿಮಿಷಗಳ ಕಾಲ ಅವರನ್ನು ಫೀಲ್ಡರ್ ಆಗಿ ಬದಲಾಯಿಸಲಾಗಿತ್ತು. ಅವರು ಭಾರತದ ಎರಡನೇ ಇನ್ನಿಂಗ್ಸ್‌ನ ಪ್ರಾರಂಭದಿಂದ ಇನ್ನೂ ಹದಿನೆಂಟು ನಿಮಿಷಗಳ ಅವಧಿ ಮುಗಿಯುವವರೆಗೆ ಬ್ಯಾಟಿಂಗ್ ಮಾಡಲು ಅನರ್ಹರಾಗಿದ್ದರು. ಆರು ನಿಮಿಷಗಳ ವಿಳಂಬದ ನಂತರ, ಸೌರವ್ ಗಂಗೂಲಿ ಮುಂದಿನ ಬ್ಯಾಟ್ಸ್‌ಮನ್ ಆಗಿ ಬಂದರು. ಆದಾಗ್ಯೂ, ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ “ಸಮಯ ಮೀರಿದ” (ಟೈಮ್ಡ್‌ ಔಟ್)ವಜಾಗೊಳಿಸುವಿಕೆಗೆ ಮನವಿ ಮಾಡಲಿಲ್ಲ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X