ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯ 32ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ 358 ರನ್ ಗುರಿ ನೀಡಿದೆ.
ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಟೆಂಬಾ ಬವುಮಾ ಹಾಗೂ ಸ್ಪೋಟಕ ಆಟಗಾರ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡಿದರು.
ಆದರೆ 9 ನೇ ಓವರ್‌ನಲ್ಲಿ ಬೋಲ್ಟ್ ಬೌಲಿಂಗ್‌ನಲ್ಲಿ ಕೆಟ್ಟ ಹೊಡೆತಕ್ಕೆ ಮುಂದಾದ ನಾಯಕ ಟೆಂಬಾ ಬವುಮಾ (24) ಮಿಚೆಲ್‌ಗೆ ಕ್ಯಾಚಿತ್ತು ಔಟಾದರು.
ನಂತರ ಶುರುವಾದದ್ದು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿ ಕಾಕ್ ಸೊಗಸಾದ ಆಟ. ಆಗಾಗ ಸಿಕ್ಸರ್, ಬೌಂಡರಿಗಳನ್ನು ಬಾರಿಸುತ್ತ ಉಳಿದ ಸಮಯದಲ್ಲಿ ರಕ್ಷಣಾತ್ಮಕವಾಗಿ ಆಡಿದ ಡಸ್ಸೆನ್ ಹಾಗೂ ಡಿ ಕಾಕ್ ಜೋಡಿ ಎರಡನೇ ವಿಕೆಟ್ ನಷ್ಟಕ್ಕೆ ಅದ್ಭುತ 200 ರನ್‌ಗಳ ಜೊತೆಯಾಟವಾಡಿದರು.
They lost the toss, but South Africa go past 350 once again in the World Cup after batting first!
New Zealand need 358 to win in Pune 🎯 https://t.co/mrENWOl73e #NZvSA #CWC23 pic.twitter.com/lpcSku1zbL
— ESPNcricinfo (@ESPNcricinfo) November 1, 2023
ವಿಶ್ವಕಪ್‌ನಲ್ಲಿ ಡಿ ಕಾಕ್ 4ನೇ ಶತಕ
ಶತಕ ಬಾರಿಸಿದ ನಂತರ 40 ನೇ ಓವರ್‌ನಲ್ಲಿ ತಂಡದ ಮೊತ್ತ 238 ರನ್ ಇದ್ದಾಗ 114(116 ಚೆಂಡು) ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಸೌಥಿ ಬೌಲಿಂಗ್‌ನಲ್ಲಿ ಫಿಲಿಪ್ಸ್‌ಗೆ ಕ್ಯಾಚಿತ್ತು ಔಟಾದರು. ಅವರ ಅದ್ಭುತ ಆಟದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿದ್ದವು.
ಡಿ ಕಾಕ್ 2023ರ ವಿಶ್ವಕಪ್ ಟೂರ್ನಿಯಲ್ಲಿ 4ನೇ ಶತಕವಾಗಿದೆ. ರೋಹಿತ್ ಶರ್ಮಾ ಅವರ ಒಂದೇ ವಿಶ್ವಕಪ್‌ನಲ್ಲಿ ಪೇರಿಸಿರುವ 5 ಶತಕ ಸರಿಗಟ್ಟಲು ಒಂದು ಶತಕ ಬಾಕಿಯಿದೆ. ಅಲ್ಲದೆ ಈ ಟೂರ್ನಿಯಲ್ಲಿ 545 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ: 2034ರ ವಿಶ್ವಕಪ್ ಫುಟ್‌ಬಾಲ್ ಆತಿಥ್ಯ ವಹಿಸುವ ಸೌದಿ ಅರೇಬಿಯಾ
ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಉತ್ತಮ ಬ್ಯಾಟಿಂಗ್
ಡಿ ಕಾಕ್‌ಗೆ ಉತ್ತಮ ಜೊತೆ ನೀಡಿದ ಡೆರ್ ಡಸ್ಸೆನ್ 48ನೇ ಓವರ್‌ಗಳವರೆಗೂ ಉತ್ತಮ ಆಟವಾಡಿ ಶತಕವನ್ನು ಬಾರಿಸಿದರು. 118 ಚೆಂಡುಗಳಲ್ಲಿ 133 ರನ್ ಗಳಿಸಿದ ಡಸ್ಸೆನ್ ಅಟದಲ್ಲಿ 9 ಬೌಂಡರಿ, 5 ಭರ್ಜರಿ ಸಿಕ್ಸರ್‌ಗಳಿದ್ದವು.
ಡಸ್ಸೆನ್ ಔಟಾದ ನಂತರ ಮಿಲ್ಲರ್ ತಮ್ಮ ಸ್ಫೋಟಕ ಆಟವನ್ನು ಮುಂದುವರೆಸಿ 30 ಚೆಂಡುಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 53 ರನ್ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 357 ರನ್‌ಗಳ ಭರ್ಜರಿ ಮೊತ್ತ ಪೇರಿಸಿತು.
ದಕ್ಷಿಣ ಈ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಲ್ಲ ಪಂದ್ಯಗಳಲ್ಲಿಯೂ 300 ಮೇಲ್ಪಟ್ಟು ರನ್ ಪೇರಿಸಿರುವುದು ದಾಖಲೆಯೇ ಸರಿ.
ದಕ್ಷಿಣ ಆಫ್ರಿಕಾದ ಗುರಿಯನ್ನು ಬೆನ್ನಟ್ಟಿರುವ ನ್ಯೂಜಿಲೆಂಡ್ ಆರಂಭಿಕ ಆಘಾತ ಅನುಭವಿಸಿದ್ದು, 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ.