ಪಾಕಿಸ್ತಾನ ವಿರುದ್ಧದ ತಮ್ಮ ವಿದಾಯ ಟೆಸ್ಟ್ ಪಂದ್ಯ ಆಡಲು ಸಜ್ಜಾಗುತ್ತಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಏಕದಿನ ಕ್ರಿಕೆಟ್ಗೆ ಹಠಾತ್ ವಿದಾಯ ಘೋಷಿಸಿದ್ದಾರೆ. ಆ ಮೂಲಕ ವರ್ಷದ ಆರಂಭದ ದಿನವೇ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಟ್ರೋಫಿ ಜಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಾರ್ನರ್, ಆಗಲೇ ಏಕದಿನ ಕ್ರಿಕೆಟ್ ನಿವೃತ್ತಿ ಘೋಷಿಸುವ ಬಗ್ಗೆ ನಿರ್ಧರಿಸಿದ್ದರು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 535 ರನ್ ಗಳಿಸಿದ್ದ ವಾರ್ನರ್ ಆಸ್ಟ್ರೇಲಿಯಾ ಪರ ಹೆಚ್ಚು ರನ್ ಗಳಿಸಿದ್ದ ಬ್ಯಾಟರ್ ಕೂಡ ಆಗಿದ್ದರು.161 ಏಕದಿನ ಪಂದ್ಯಗಳಿಂದ ಆಸ್ಟ್ರೇಲಿಯಾದ ಮಾಜಿ ನಾಯಕ 6932 ರನ್ ಗಳಿಸಿದ್ದಾರೆ.
🏅🏅Aussies Opener Southpaw David Warner announced retirement in ODI Cricket. 🇦🇺
🏏Second-most runs for Australia in ODIs
🏏Second-most centuries for Australia in ODIs
🏏Most centuries as an opener for Australia in ODIs
🏏Most runs for Australia in ODI World Cups
🏏Second… pic.twitter.com/l0ThoqAQOa— South One (@SouthOneNews) January 1, 2024
ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ದೃಷ್ಟಿಯಿಂದ ವಾರ್ನರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರೂ 2025 ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಹೇಳಿದ್ದಾರೆ.
ಸಿಡ್ನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಏಕದಿನ ನಿವೃತ್ತಿಯ ಬಗ್ಗೆ ಘೋಷಿಸಿದ್ದಾರೆ.
“ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಏಕದಿನ ವಿಶ್ವಕಪ್ ಟೂರ್ನಿಯ ಸಮಯದಲ್ಲೇ ನಾನು ಈ ಬಗ್ಗೆ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದೆ. ಭಾರತದ ವಿರುದ್ಧ ಅದರ ನೆಲದಲ್ಲೇ ವಿಶ್ವಕಪ್ ಗೆದ್ದಿರುವುದು ದೊಡ್ಡ ಸಾಧನೆಯಾಗಿದೆ,” ಎಂದು ಹೇಳಿದ್ದಾರೆ.
ಏಕದಿನ ಕ್ರಿಕೆಟ್ಗೆ ಡೇವಿಡ್ ವಾರ್ನರ್ ವಿದಾಯ ಹೇಳಿದ್ದರೂ ಕೂಡ, “2025ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಟಗಾರರ ಅವಶ್ಯಕತೆ ಕಂಡುಬಂದರೆ ನಿವೃತ್ತಿ ನಿರ್ಧಾರದಿಂದ ವಾಪಸ್ ಬಂದು ಆಡುತ್ತೇನೆ” ಎಂದೂ ತಿಳಿಸಿದ್ದಾರೆ.
“ಮುಂದಿನ ದಿನಗಳಲ್ಲಿ ಏಕದಿನ ರೂಪದ ಚಾಂಪಿಯನ್ಸ್ ಟ್ರೋಫಿ ಬರುತ್ತದೆ ಎಂಬುದು ನನಗೆ ತಿಳಿದಿದೆ. ಈ ಎರಡು ವರ್ಷಗಳಲ್ಲಿ ನಾನು ಉತ್ತಮ ಕ್ರಿಕೆಟ್ (ಫ್ರಾಂಚೈಸಿ ಲೀಗ್) ಆಡಿದರೆ ಮತ್ತು ಆಸ್ಟ್ರೇಲಿಯಾಕ್ಕೆ ಆರಂಭಿಕ ಆಟಗಾರನ ಸಮಸ್ಯೆ ಕಂಡುಬಂದರೆ ತಂಡಕ್ಕೆ ನಾನು ಲಭ್ಯವಾಗುತ್ತೇನೆ” ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.
2009 ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೊಬರ್ಟ್ನಲ್ಲಿ ನಡೆದಿದ್ದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಡೇವಿಡ್ ವಾರ್ನರ್ 97.26ರ ಸ್ಟ್ರೆಕ್ ರೇಟ್ನಲ್ಲಿ 161 ಪಂದ್ಯಗಳಿಂದ 6932 ರನ್ ಗಳಿಸಿದ್ದು, 22 ಶತಕ ಹಾಗೂ 33 ಅರ್ಧಶತಕ ಸಿಡಿಸಿದ್ದಾರೆ.