ಆರಂಭಿಕ ಫಿಲ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಡೆಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮುಂದಿಟ್ಟಿದ್ದ 182 ರನ್‌ಗಳ ಗುರಿಯನ್ನು ಡೆಲ್ಲಿ, ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ಚೇಸ್ ಮಾಡಿತು.
ಫಿಲ್ ಸಾಲ್ಟ್ 87 ರನ್ [ 45 ಎಸೆತ, 8 ಬೌಂಡರಿ 6 ಸಿಕ್ಸರ್], ಡೇವಿಡ್ ವಾರ್ನರ್ 22 ಮತ್ತು ರಿಲೇ ರೂಸ್ಸೊ ಅಜೇಯ 35 ರನ್ ಗಳಿಸಿದರು.