17ನೇ ಆವೃತ್ತಿಯ ಫೈನಲ್ ತಲುಪುವ ಭರವಸೆ ಮೂಡಿಸಿದ್ದ ಅಭಿಮಾನಿಗಳ ಫೇವರೀಟ್ ತಂಡ ಆರ್ಸಿಬಿ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಾಲ್ಕು ವಿಕೆಟ್ಗಳಿಂದ ಸೋಲುವ ಮೂಲಕ ಮುಗ್ಗರಿಸಿದೆ. ಇದರಿಂದ ಕೋಟ್ಯಂತರ ಅಭಿಮಾನಿಗಳ ಆರ್ಸಿಬಿ ಈ ಸಲವಾದರೂ ಕಪ್ ಗೆಲ್ಲಲೇಬೇಕೆಂಬ ಕನಸು ಭಗ್ನವಾಗಿದೆ.
ರಾಜಸ್ಥಾನ ವಿರುದ್ಧದ ಸೋಲಿನೊಂದಿಗೆ ಆರ್ಸಿಬಿಯ ಫಿನಿಶರ್ ದಿನೇಶ್ ಕಾರ್ತಿಕ್ ವಿದಾಯ ಹೇಳಿದ್ದಾರೆ. 2024ರ ಐಪಿಎಲ್ನಲ್ಲಿ ಅಬ್ಬರಿಸುವ ಮೂಲಕ ಆರ್ಸಿಬಿಗೆ ಗೆಲುವಿನ ಗಿಫ್ಟ್ ನೀಡುತ್ತಿದ್ದ ಮ್ಯಾಚ್ ಫಿನಿಶರ್ ಡಿಕೆ, ಎಲಿಮಿನೇಟರ್ ಪಂದ್ಯದಲ್ಲೂ ಇಂತಹದ್ದೇ ಪ್ರದರ್ಶನ ನೀಡಲಿ ಎಂದು ಅಭಿಮಾನಿಗಳು ಹಾರೈಸಿದ್ದರು.ಆದರೆ, ಅದು ಸಾಧ್ಯವಾಗಲಿಲ್ಲ.
From #RCB to Dinesh Karthik ❤️ #TATAIPL | #RRvRCB | #TheFinalCall | #Eliminator | @RCBTweets | @DineshKarthik pic.twitter.com/p2XI7A1Ta6
— IndianPremierLeague (@IPL) May 22, 2024
ಕಳೆದ 16 ವರ್ಷದಲ್ಲಿ ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಒಟ್ಟು ಆರು ಫ್ರಾಂಚೈಸಿಗಳಲ್ಲಿ ಆಡಿದ್ದ ದಿನೇಶ್ ಕಾರ್ತಿಕ್ ಐಪಿಎಲ್ಗೆ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ.
DINESH KARTHIK HAS RETIRED FROM THE IPL…!!! 💔
– RCB and RCB fans will never forget the heroics of DK. 🫡 pic.twitter.com/HIndEBJEmm
— Mufaddal Vohra (@mufaddal_vohra) May 22, 2024
ಎಲಿಮಿನೇಟರ್ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಶೂನ್ಯಕ್ಕೆ ಔಟಾದರು. ನಂತರ ಕ್ರಿಸ್ಗೆ ಬಂದ ದಿನೇಶ್ ಕಾರ್ತಿಕ್ 15ನೇ ಓವರ್ನಲ್ಲಿ ಆವೇಶ್ ಖಾನ್ ಅವರ ಎಸೆತದಲ್ಲಿ ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ಪ್ಯಾಡ್ ಮೇಲೆ ಹಾಕಿಕೊಂಡರು. ಅದರಂತೆ ಫೀಲ್ಡ್ ಅಂಪೈರ್ ಔಟ್ ಕೊಟ್ಟರು. ಆದರೆ, ಅಂಪೈರ್ ನಿರ್ಧಾರದ ವಿರುದ್ಧ ಬ್ಯಾಟರ್ ದಿನೇಶ್ ಕಾರ್ತಿಕ್ ಡಿಆರ್ಎಸ್ ತೆಗೆದುಕೊಂಡರು.
That was clear out. Even Dinesh Karthik new it 😂🤣 pic.twitter.com/fcktOT10lf
— Yash Godara(KKR KA PARIVAR) (@105of70Mumbai) May 22, 2024
ಅದರಂತೆ ವಿಡಿಯೋವನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಅನಿಲ್ ಚೌಧರಿ ಅಂತಿಮ ನಿರ್ಧಾರವನ್ನು ಪ್ರಕಟಿಸಲು ಕೆಲವು ನಿಮಿಷಗಳನ್ನು ತೆಗೆದುಕೊಂಡರು. ವಿಡಿಯೋ ರೀಪ್ಲೆನಲ್ಲಿ ಬ್ಯಾಟ್ಗೆ ಚೆಂಡು ತಗಲುವುದಕ್ಕೂ ಮುನ್ನ ಅಲ್ಟ್ರಾ ಎಡ್ಜ್ನ ಸ್ಪೈಕ್ ಆಗುತ್ತಿತ್ತು. ಇದನ್ನು ಗಮನಿಸಿದ ಮೂರನೇ ಅಂಪೈರ್ ಬ್ಯಾಟ್ಗೆ ಚೆಂಡು ತಗುಲಿದೆ ಎಂದು ಎಲ್ಬಿಡಬ್ಲ್ಯು ನಿರಾಕರಿಸುವಂತೆ ಫೀಲ್ಡ್ ಅಂಪೈರ್ಗೆ ಸೂಚಿಸಿದರು.
ಫೀಲ್ಡ್ ಅಂಪೈರ್ ನೀಡಿದ್ದ ಎಲ್ಬಿಡಬ್ಲ್ಯು ನಿರ್ಧಾರವನ್ನು ನಿರಾಕರಿಸಿದ ಮೂರನೇ ಅಂಪೈರ್ ‘ನಾಟ್ಔಟ್’ ಕೊಟ್ಟರು. ಈ ಹಿನ್ನೆಲೆಯಲ್ಲಿ ಈ ವಿವಾದಾತ್ಮಕ ಎಲ್ಬಿಡಬ್ಲ್ಯು ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
Dinesh Karthik getting guard of honour from RCB and the crowd chanting ‘DK, DK’.
– The most emotional video. 🥹💔 pic.twitter.com/XZ3WmbO5Ne
— Mufaddal Vohra (@mufaddal_vohra) May 22, 2024
ಆ ಬಳಿಕ 13 ಎಸೆತಗಳನ್ನು ಎದುರಿಸಿದ ದಿನೇಶ್ ಕಾರ್ತಿಕ್, ಕೇವಲ 1 ಬೌಂಡರಿಯ ನೆರವಿನಿಂದ 11 ರನ್ ಗಳಿಸಿದ್ದಾಗ ಆವೇಶ್ ಖಾನ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ಗೆ ಕ್ಯಾಚಿತ್ತು ಔಟಾದರು.
#19 🫂 #18 ❤️🩹 pic.twitter.com/oT4uJ6RX1x
— Royal Challengers Bengaluru (@RCBTweets) May 22, 2024
ಇಂದಿನ ಪಂದ್ಯದಲ್ಲಿ ಆರ್ಸಿಬಿ ಸೋತು ಹೊರಬಿದ್ದ ಬಳಿಕ, ಮೈದಾನದ ಸುತ್ತ ನೆರೆದಿದ್ದ ಅಭಿಮಾನಿಗಳಿಗೆ ದಿನೇಶ್ ಕಾರ್ತಿಕ್, ಧನ್ಯವಾದ ಸಲ್ಲಿಸಿದರೆ. ಭಾವುಕರಾಗಿದ್ದ ದಿನೇಶ್ ಕಾರ್ತಿಕ್ ಅವರನ್ನು ತಬ್ಬಿಕೊಳ್ಳುವ ಮೂಲಕ ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಂತೈಸಿದರು.
Virat Kohli consoling Dinesh Karthik. 🥹💔
– Dinesh Karthik has been brilliant for RCB, he gave his best. pic.twitter.com/pveIGvra6Z
— Mufaddal Vohra (@mufaddal_vohra) May 22, 2024
2022ರ ಐಪಿಎಲ್ನಲ್ಲಿ ನಂಬರ್ 1 ಫಿನಿಷರ್ ಆಗಿದ್ದ ಕಾರ್ತಿಕ್, 2023ರ ಸೀಸನ್ನಲ್ಲಿ ಸತತ ವೈಫಲ್ಯಕ್ಕೆ ಒಳಗಾಗಿ 13 ಪಂದ್ಯಗಳಲ್ಲಿ ಕೇವಲ 140 ರನ್. ಇದರಿಂದ ಸಾಕಷ್ಟು ಟೀಕೆ ಮತ್ತು ಟ್ರೋಲ್ಗೆ ಗುರಿಯಾಗಿದ್ದರು. ಆತನನ್ನು ಕೈಬಿಟ್ಟು ಯುವಕರಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಮಿನಿ ಹರಾಜಿಗೆ ಡಿಕೆ ಕೈಬಿಡದ ಕಾರಣಕ್ಕೆ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ ತಂಡಕ್ಕೆ ಬೇಡವಾಗಿದ್ದ ಆಟಗಾರ, ಈ ಬಾರಿ ಆರ್ಸಿಬಿ ಅತ್ಯುತ್ತಮ ಫಿನಿಷರ್ ಆಗಿ ಗುರುತಿಸಿಕೊಂಡಿದ್ದರು.
ಇದನ್ನು ಓದಿದ್ದೀರಾ? ಐಪಿಎಲ್ | ರಾಜಸ್ಥಾನಕ್ಕೆ ಜಯ: ಆರ್ಸಿಬಿ ಕಪ್ ಕನಸು ಮತ್ತೆ ಭಗ್ನ
17ನೇ ಸೀಸನ್ ಆರಂಭದಿಂದಲೇ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಡಿಕೆ, ಅಭಿಮಾನಿಗಳು ಹಾಗೂ ಟೀಕಿಸಿದವರಿಂದ ಶಹಬ್ಬಾಷ್ಗಿರಿ ಪಡೆದುಕೊಂಡಿದ್ದರು.
You can never rule Dinesh Karthik out of the game 🙌
What a knock, What a player 🔝#RCBvSRH #TATAIPL #IPLonJioCinema | @RCBTweets | @DineshKarthik pic.twitter.com/UHnsbtFheP
— JioCinema (@JioCinema) April 15, 2024
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರ ಪರಿಣಾಮವೇ, ಈ ಬಾರಿಯ ಐಪಿಎಲ್ನಲ್ಲಿ ಮೇ 18ರಂದು ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈಯನ್ನು ಮಣಿಸಿದ್ದಲ್ಲದೇ, ರನ್ರೇಟ್ ಆಧಾರದಲ್ಲಿ ಪ್ಲೇ ಆಫ್ಗೆ ಪ್ರವೇಶಿಸಲು ಪ್ರಮುಖ ಕಾರಣವಾಗಿತ್ತು. ಆದರೆ, ಸೋಲಿನೊಂದಿಗೆ ಐಪಿಎಲ್ಗೆ ವಿದಾಯ ಹೇಳಿದ್ದು ಮಾತ್ರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.
1⃣ #TATAIPL 🏆
2⃣nd – most dismissals by a WK in #IPL 💪
3⃣rd – most appearances in the league’s history! 🤯#IPLonJioCinema #RRvRCB #DineshKarthik #TATAIPLPlayoffs pic.twitter.com/dXYJz6skOi— JioCinema (@JioCinema) May 22, 2024
