ಗುಜರಾತ್‌ನ ಅಹ್ಮದಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನದ ಗೆಲುವಿಗೆ 173 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ರಾಜಸ್ಥಾನ ತಂಡದ ಸಂಘಟಿತ ಬೌಲಿಂಗ್‌ಗೆ ರನ್ ಗಳಿಸಲು ಪರದಾಡಿದ ಆರ್‌ಸಿಬಿಯ ಬ್ಯಾಟರ್‌ಗಳು, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ದಾಖಲಿಸಿದರು.
ಟಾಸ್ ಸೋತಿದ್ದ ಫಾಫ್ ಡು ಪ್ಲೆಸಿ ನೇತೃತ್ವದ ಬೆಂಗಳೂರು ತಂಡದ ಆರಂಭ ಉತ್ತಮವಾಗಿತ್ತು. ಕೊಹ್ಲಿ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ, ಮೊದಲ ವಿಕೆಟ್‌ಗೆ 37 ರನ್‌ಗಳ ಜೊತೆಯಾಟ ನಡೆಸಿದರು. 17 ರನ್ ಗಳಿಸಿದ್ದಾಗ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ರೋವ್‌ಮೆನ್ ಪೊವೆಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
They took the pace off and made things a little difficult for us. But we’ve still managed to score 96 runs off the last 10 overs. 👊
Manifesting a very special performance from our bowling unit tonight. 🤞#PlayBold #ನಮ್ಮRCB #IPL2024 #RRvRCB pic.twitter.com/tWunqpdgPk
— Royal Challengers Bengaluru (@RCBTweets) May 22, 2024
ರಜತ್ ಪಾಟೀದಾರ್ 34 ಹಾಗೂ ವಿರಾಟ್ ಕೊಹ್ಲಿ 33, ಲೋಮ್‌ರೋರ್ 32 ರನ್ ಗಳಿಸುವ ಮೂಲಕ ಆರ್‌ಸಿಬಿ ಪರ ಹೆಚ್ಚು ಸ್ಕೋರ್ ಗಳಿಸಿದ ಆಟಗಾರರೆನಿಸಿದರು. ಕ್ಯಾಮರೂನ್ ಗ್ರೀನ್ 27 ರನ್ ಗಳಿಸಿ ಔಟಾದರು.
ಫಾರ್ಮ್ ಕಳೆದುಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಇಂದಿನ ನಿರ್ಣಾಯಕ ಪಂದ್ಯದಲ್ಲೂ ರನ್ ಗಳಿಸಲು ವಿಫಲರಾದರು. ಆರ್ ಅಶ್ವಿನ್ ಬೌಲಿಂಗ್ ವೇಳೆ ಕ್ರೀಸ್‌ಗೆ ಬಂದು ನಿಂತ ಮ್ಯಾಕ್ಸ್‌ವೆಲ್, ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಯತ್ನಿಸಿ, ಕ್ಯಾಚಿತ್ತು ನಿರ್ಗಮಿಸಿದರು.
ಉಳಿದಂತೆ ದಿನೇಶ್ ಕಾರ್ತಿಕ್ 11 ರನ್ ಗಳಿಸಿ ಔಟಾದರು. ಸ್ವಪ್ನಿಲ್ ಸಿಂಗ್ 9 ರನ್ ಹಾಗೂ ಕರನ್ ಶರ್ಮಾ 5 ರನ್ ಗಳಿಸಿ, ಔಟಾಗದೇ ಉಳಿದರು. ಕೊನೆಯಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಲಷ್ಟೇ ಶಕ್ತವಾಯಿತು. ಫೀಲ್ಡಿಂಗ್‌ನಲ್ಲಿ ನಾಲ್ಕು ಉತ್ತಮ ಕ್ಯಾಚ್ ಪಡೆಯುವ ಮೂಲಕ ರೋವ್‌ಮೆನ್ ಪೊವೆಲ್ ಮಿಂಚಿದರು.
173 to keep the dream alive! pic.twitter.com/dSXF87Zp2A
— Rajasthan Royals (@rajasthanroyals) May 22, 2024
ರಾಜಸ್ಥಾನ ಪರ ಉತ್ತಮ ಬೌಲಿಂಗ್ ನಡೆಸಿದ ಆವೇಶ್ ಖಾನ್ 4 ಓವರ್‌ಗಳಲ್ಲಿ 44 ರನ್ ನೀಡಿದರೂ ಪ್ರಮುಖ 3 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಗಳಿಸಿದರು. ಉಳಿದಂತೆ ಸಂಘಟಿತ ಬೌಲಿಂಗ್ ನಡೆಸಿದ ಟ್ರೆಂಟ್ ಬೌಲ್ಟ್, ಯುಜುವೇಂದ್ರ ಚಾಹಲ್, ಸಂದೀಪ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿಯ ರನ್‌ದಾಹಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
