ಖೇಲೋ ಇಂಡಿಯಾ ಯೋಜನೆಯಡಿ ಅತೀ ಹೆಚ್ಚು ಅನುದಾನ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಗುಜರಾತ್ ರಾಜ್ಯದ ಯಾವ ಕ್ರೀಡಾಪಟುವು ಕೂಡ ಒಂದೂ ಪದಕವನ್ನು ಪಡೆದಿಲ್ಲ. ಈ ಸಂಗತಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಸಾರ್ವಜನಿಕರು ಕೇಂದ್ರ ಸರ್ಕಾರದ ನಡೆಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಕ್ರೀಡಕೂಟದಲ್ಲಿ ಭಾರತ 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನೊಂದಿಗೆ ಒಟ್ಟು 107 ಪದಕ ಗಳಿಸಿ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. 107 ಪದಕ ಪಡೆದವರಲ್ಲಿ 75 ಕ್ಕೂ ಹೆಚ್ಚು ಕ್ರೀಡಾಳುಗಳು ಪಂಜಾಬ್ ಹಾಗೂ ಹರ್ಯಾಣ ರಾಜ್ಯದವರಾಗಿದ್ದಾರೆ.
ಇವೆರಡು ರಾಜ್ಯಗಳಿಗೆ ಕ್ರೀಡಾಳುಗಳಿಗೆ ನೆರವು ನೀಡುವ ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ಅತ್ಯಲ್ಪ ಅನುದಾನ ನೀಡಿತ್ತು. ಹರ್ಯಾಣಕ್ಕೆ 88.89 ಕೋಟಿ ರೂ. ನೀಡಿದ್ದರೆ, ಪಂಜಾಬ್‌ಗೆ 93.71 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ದೇಶದಲ್ಲೇ 608 ಕೋಟಿ ರೂ. ಅನುದಾನದೊಂದಿಗೆ ಅತಿ ಹೆಚ್ಚು ಅನುದಾನ ಪಡೆದಿರುವ ಗುಜರಾತ್ ಒಂದೂ ಪದಕವನ್ನು ಗೆದ್ದಿಲ್ಲ. 503.02 ಕೋಟಿಯೊಂದಿಗೆ ಎರಡನೇ ಅತಿ ಹೆಚ್ಚು ಅನುದಾನ ಪಡೆದಿರುವ ಉತ್ತರ ಪ್ರದೇಶ ಗೆದ್ದಿರುವುದು 10ಕ್ಕೂ ಹೆಚ್ಚು ಪದಕಗಳಷ್ಟೆ.
ಈ ದಿನ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಹರಿಸಿರುವ ಪ್ಯಾಲೆಸ್ತೀನ್‌ನನ್ನು ಮರಳಿಸಲಿ ಇಸ್ರೇಲ್
ಅನುದಾನ ಬಿಡುಗಡೆಯಲ್ಲೂ ನರೇಂದ್ರ ಮೋದಿ ಸರ್ಕಾರ ತಾರತಮ್ಯವೆಸಗಿದೆ. ಪ್ರಧಾನಿ ತವರು ಹಾಗೂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ರಾಜ್ಯಗಳಿಗೆ ಅತೀ ಹೆಚ್ಚು ಅನುದಾನ ಬಿಡುಗಡೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ಪ್ರತಿಭಟನೆ ವ್ಯಕ್ತವಾಗಿದೆ. ಕ್ರೀಡೆಯಲ್ಲಿ ಪಕ್ಷಪಾತ ಸಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖೇಲೋ ಇಂಡಿಯಾ ಯೋಜನೆಯಡಿ 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 2754.28 ಕೋಟಿ ಅನುದಾನ ನೀಡಲಾಗಿತ್ತು. ಗುಜರಾತ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ಅರ್ಧದಷ್ಟು ಅನುದಾನ ನೀಡಲಾಗಿತ್ತು.
ಈ ದಿನ ಸುದ್ದಿ ಓದಿದ್ದೀರಾ? ಇಷ್ಟು ಚೆನ್ನಾಗಿದ್ದೀರಾ, ಯಾಕಿನ್ನೂ ಮದುವೆಯಾಗಿಲ್ಲ ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ರಾಹುಲ್ ಸ್ಮಾರ್ಟ್ ಉತ್ತರ