ನಿನ್ನೆ(ಡಿ 6)ರಂದು ಸೂರತ್‌ನಲ್ಲಿ ನಡೆದ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (ಎಲ್‌ಎಲ್‌ಸಿ) ಇಂಡಿಯಾ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಭಾರತದ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಗೌತಮ್ ಗಂಭೀರ್ ಹಾಗೂ ಎಸ್ ಶ್ರೀಶಾಂತ್ ಮೈದಾನದಲ್ಲೇ ಜಗಳಾಡಿಕೊಂಡಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
Heated conversation between Gautam Gambhir and S Sreesanth in the LLC. pic.twitter.com/Cjl99SWAWK
— Mufaddal Vohra (@mufaddal_vohra) December 7, 2023
ಇಂಡಿಯಾ ಗುಜರಾತ್ ಜೈಂಟ್ಸ್ ಪರವಾಗಿ ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಆಟವಾಡುತ್ತಿದ್ದರೆ ಮತ್ತು ಇಂಡಿಯಾ ಕ್ಯಾಪಿಟಲ್ಸ್ ಪರವಾಗಿ ಮಾಜಿ ವೇಗಿ ಎಸ್ ಶ್ರೀಶಾಂತ್ ಆಡುತ್ತಿದ್ದಾರೆ.
ಗಂಭೀರ್ ಅವರ ಕೆಟ್ಟ ನಡವಳಿಕೆಯಿಂದ ಈ ಜಗಳ ಆರಂಭವಾಯಿತು ಎಂದು ಪಂದ್ಯ ಮುಗಿದ ಬಳಿಕ ಶ್ರೀಶಾಂತ್ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದಾರೆ.
ಜಗಳ ಆರಂಭವಾಗಿದ್ದೇಗೆ?
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ನಾಯಕ ಗೌತಮ್ ಗಂಭೀರ್ ಅವರು ಎಸ್ ಶ್ರೀಶಾಂತ್ ಬೌಲಿಂಗ್‌ನಲ್ಲಿ ಕೆಲವು ಬೌಂಡರಿಗಳಿಗೆ ಬಾರಿಸಿದರು. ಇದರಿಂದ ಎಸ್ ಶ್ರೀಶಾಂತ್ ಹತಾಶೆಯಿಂದ ಗಂಭೀರ್‌ಗೆ ಕೆಲವು ಮಾತುಗಳನ್ನು ರವಾನಿಸಿದರು. ಇದಕ್ಕೆ ಪ್ರತಿಯಾಗಿ ಗೌತಮ್ ಗಂಭೀರ್, ಗುಜರಾತ್ ಜೈಂಟ್ಸ್ ವೇಗಿಗಳ ವಿರುದ್ಧ ದೊಡ್ಡ ಶಾಟ್ ಮೂಲಕ ಚೆಂಡನ್ನು ಬೌಂಡರಿಗಟ್ಟಿದರು.
6… 4… Showdown! Watch till the end for Gambhir 👀 Sreesanth.
.
.#LegendsOnFanCode @llct20 pic.twitter.com/SDaIw1LXZP— FanCode (@FanCode) December 6, 2023
ಇದು ಅಲ್ಲಿಗೇ ನಿಲ್ಲದೆ, ಇಂಡಿಯಾ ಕ್ಯಾಪಿಟಲ್ಸ್ ಬ್ಯಾಟರ್ ಒಬ್ಬ ಔಟಾದ ನಂತರ ಅಭಿಮಾನಿಯೊಬ್ಬರು ಸ್ಟ್ಯಾಂಡ್‌ನಿಂದ ವಿಡಿಯೋ ರೆಕಾರ್ಡ್ ಮಾಡಿದರು. ಈ ವಿರಾಮದಲ್ಲಿ ಗೌತಮ್ ಗಂಭೀರ್ ಮತ್ತು ಎಸ್ ಶ್ರೀಶಾಂತ್ ಮತ್ತೆ ಅತಿರೇಕದ ಮಾತುಗಳನ್ನು ವಿನಿಮಯ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಕ್ವಾಲಿಫೈಯರ್ 2ನಲ್ಲಿ ಸ್ಥಾನವನ್ನು ಕಾಯ್ದಿರಿಸಲು ಇಂಡಿಯಾ ಕ್ಯಾಪಿಟಲ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸುವುದರೊಂದಿಗೆ ಪಂದ್ಯ ಮುಗಿಸಿತು. ‘ಫ್ಯಾನ್ ಕೋಡ್’ ಹಂಚಿಕೊಂಡಿರುವ ವಿಡಿಯೋದಲ್ಲಿ ಗಂಭೀರ್ ಅವರು ಶ್ರೀಶಾಂತ್ ಅವರನ್ನು ‘ಫಿಕ್ಸರ್’ ಎಂದು ಕರೆದಿರುವುದು ಸ್ಟಂಪ್ ಬಳಿ ಇದ್ದ ಮೈಕ್‌ನಲ್ಲಿ ದಾಖಲಾಗಿದೆ.
Jab issue Gambhir ho, Shant rahiye 😉#LegendsOnFanCode pic.twitter.com/0Y6ypYXbD6
— FanCode (@FanCode) December 7, 2023
ಪಂದ್ಯದ ಬಳಿಕ ಎಸ್ ಶ್ರೀಶಾಂತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಗೌತಮ್ ಗಂಭೀರ್ ಕೆಲವು ಅವಹೇಳನಕಾರಿ ಮಾತುಗಳನ್ನು ಹೇಳಿರುವುದಾಗಿ ಆರೋಪಿಸಿದ್ದಾರೆ.
“ಯಾವುದೇ ಕಾರಣವಿಲ್ಲದೆ ತನ್ನ ಎಲ್ಲ ಸಹ ಆಟಗಾರರೊಂದಿಗೆ ಜಗಳವಾಡುವ ಮಿಸ್ಟರ್ ಗೌತಮ್ ಗಂಭಿರ್, ಜಗಳದ ವೇಳೆ ಏನಾಯಿತು ಎಂಬುದರ ಕುರಿತು ನಾನು ಸ್ವಲ್ಪ ಸ್ಪಷ್ಟಪಡಿಸಲು ಬಯಸುತ್ತೇನೆ. ಗಂಭೀರ್ ಅವರು ವೀರೂ ಭಾಯಿ (ವೀರೇಂದ್ರ ಸೆಹ್ವಾಗ್) ಮತ್ತು ಬಹಳಷ್ಟು ಆಟಗಾರರನ್ನು ಮತ್ತು ತಮ್ಮದೇ ಆದ ಹಿರಿಯ ಆಟಗಾರರನ್ನು ಸಹ ಗೌರವಿಸುವುದಿಲ್ಲ” ಎಂದು ಶ್ರೀಶಾಂತ್ ತಿಳಿಸಿದ್ದಾರೆ.
Huge allegations on Gautam Gambhir by Sreesanth🔥 Shame on you Gautam Gambhir🤮 Sreesanth exposed Gambhir #LegendsLeagueCricket pic.twitter.com/SR7beI64LC
— Rohit bottled rigged home wc👁️🗨️🚩 (@AvengerReturns_) December 7, 2023
“ಯಾವುದೇ ಪ್ರಚೋದನೆ ಇಲ್ಲದೆ, ಅವರು ನನ್ನನ್ನು ತುಂಬಾ ಅಸಭ್ಯವಾಗಿ ಕರೆಯುತ್ತಲೇ ಇದ್ದರು. ಗೌತಮ್ ಗಂಭೀರ್ ಇದನ್ನು ಎಂದಿಗೂ ಹೇಳಬಾರದಿತ್ತು” ಎಂದಿದ್ದಾರೆ.
ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್ ಈ ಹಿಂದೆ ಐಪಿಎಲ್ ಪಂದ್ಯದ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದರು ಮತ್ತು ನಂತರ ಯಾವುದೇ ರೀತಿಯ ಕ್ರಿಕೆಟ್ ಆಡದಂತೆ ನಿಷೇಧಿಸಲಾಯಿತು. ಆದಾಗ್ಯೂ, ಕೆಲವು ವರ್ಷಗಳ ಹಿಂದೆ ಕೋರ್ಟ್ ಅವರ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿತ್ತು. ಆ ಬಳಿಕ ಶ್ರೀಶಾಂತ್ ನಂತರ ವಿವಿಧ ಲೀಗ್‌ಗಳನ್ನು ಆಡುತ್ತಿದ್ದಾರೆ.
S Sreesanth on Gautam Gambhir:
“He kept calling me a fixer”.pic.twitter.com/qPtSdEXTjp
— Mufaddal Vohra (@mufaddal_vohra) December 7, 2023
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯದ ವೇಳೆ ಗೌತಮ್ ಗಂಭೀರ್ ತನಗೆ ನಿಖರವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸುವುದಾಗಿ ಹೇಳಿದ ಎಸ್ ಶ್ರೀಶಾಂತ್, ಈ ಮಾತುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ನೋವುಂಟು ಮಾಡಿದೆ ಎಂದಿದ್ದಾರೆ.
“ನನ್ನ ತಪ್ಪೇನೂ ಇಲ್ಲ, ಅವರು ಬಳಸಿದ ಪದಗಳು ಮತ್ತು ಕ್ರಿಕೆಟ್ ಮೈದಾನದಲ್ಲಿ ಅವರು ಹೇಳಿದ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಶೀಘ್ರದಲ್ಲೇ ನಿಮಗೆ ತಿಳಿಯುತ್ತದೆ. ನಿಮ್ಮ ಸಹ ಆಟಗಾರರನ್ನು ಗೌರವಿಸದಿದ್ದರೆ ತಂಡವನ್ನು ಪ್ರತಿನಿಧಿಸುವುದರಲ್ಲಿ ಅರ್ಥವಿಲ್ಲ” ಎಂದು ಶ್ರೀಶಾಂತ್ ಹೇಳಿದ್ದಾರೆ.
Gautam Gambhir who smiles and plays with people like Shahid Afridi for money kept abusing Sreesanth and calling him a fixer in a #LegendsLeagueCricket match.
Gautam Gambhir is a vile human being, a sadist and an absolute Jerk.pic.twitter.com/VcwQS8gHHt
— Roshan Rai (@RoshanKrRaii) December 7, 2023
“ನಿಮ್ಮ ಸ್ವಂತ ಸಹ ಆಟಗಾರರನ್ನು ಗೌರವಿಸದಿದ್ದರೆ ಜನರನ್ನು ಪ್ರತಿನಿಧಿಸುವುದರಲ್ಲಿ ಏನು ಪ್ರಯೋಜನ, ಕಾಮೆಂಟರಿ ಸಮಯದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಕೇಳಿದಾಗ, ಅವರು ಎಂದಿಗೂ ಮಾತನಾಡುವುದಿಲ್ಲ, ಅವರು ಬೇರೆ ಯಾವುದನ್ನಾದರೂ ಮಾತನಾಡುತ್ತಾರೆ. ನಾನು ಹೆಚ್ಚು ವಿವರವಾಗಿ ಹೋಗಲು ಬಯಸುವುದಿಲ್ಲ. ನನಗೆ ತುಂಬಾ ನೋವಾಗಿದೆ ಎಂದು ಹೇಳಲು ಬಯಸುತ್ತೇನೆ. ನನ್ನ ಕುಟುಂಬಕ್ಕೆ ನೋವಾಗಿದೆ. ನಾನು ಯಾವುದೇ ಕೆಟ್ಟ ಪದ ಬಳಸಿಲ್ಲ,” ಎಂದು ಶ್ರೀಶಾಂತ್ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
ಎಸ್ ಶ್ರೀಶಾಂತ್ ಮಾಡಿದ ಆರೋಪಗಳಿಗೆ ಗೌತಮ್ ಗಂಭೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಅನುಭವಿ ಕ್ರಿಕೆಟಿಗರು 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಸಹ ಆಟಗಾರರಾಗಿದ್ದರು. ಗೌತಮ್ ಗಂಭೀರ್ ಅವರು, ಸದ್ಯ ಬಿಜೆಪಿಯ ಸಂಸದರೂ ಆಗಿದ್ದಾರೆ. ಇವರು ಪೂರ್ವ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ.