ಏಕದಿನ ವಿಶ್ವಕಪ್ ಟ್ರೋಫಿಯೊಂದಿಗೆ ಕಾಣಿಸಿಕೊಂಡ ನಟ ಶಾರುಖ್ ಖಾನ್

Date:

  • ವಿಶ್ವಕಪ್​ ಪ್ರಚಾರ ವಿಡಿಯೋದಲ್ಲಿ ಕಾಣಿಸಿಕೊಂಡ ​ ‘ಕಿಂಗ್‌ ಖಾನ್’
  • ಅಕ್ಟೋಬರ್​ 5ರಂದು ಭಾರತದಲ್ಲಿ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್

ಬಾಲಿವುಡ್‌ನಲ್ಲಿ​ ‘ಕಿಂಗ್‌ ಖಾನ್’ ಎಂದೇ ಗುರುತಿಸಿಕೊಂಡಿರುವ ಶಾರುಖ್​ ಖಾನ್, ಭಾರತದಲ್ಲಿ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.

ಐಸಿಸಿ ಗುರುವಾರ ಬಿಡುಗಡೆ ಮಾಡಿರುವ 2 ನಿಮಿಷ, 13 ಸೆಕೆಂಡ್​ಗಳ ವಿಶ್ವಕಪ್​ ಪ್ರಚಾರ ವಿಡಿಯೋದಲ್ಲಿ ಶಾರುಖ್​ ಖಾನ್​ ಕಾಣಿಸಿಕೊಂಡಿದ್ದು, ಟ್ರೋಫಿಯೊಂದಿಗೂ ಫೋಸ್‌ ಕೊಟ್ಟಿದ್ದಾರೆ.

1975ರಿಂದ ನಡೆದಿರುವ ಏಕದಿನ ವಿಶ್ವಕಪ್​ ಟೂರ್ನಿಗಳ ಪ್ರಮುಖ ಕ್ಷಣಗಳ ಝಲಕ್​ ಒಳಗೊಂಡ ಐಸಿಸಿಯ ವಿಡಿಯೋಗೆ ಶಾರುಖ್​ ಖಾನ್​ ಹಿನ್ನೆಲೆ ಧ್ವನಿಯನ್ನೂ ನೀಡಿದ್ದಾರೆ. ಕ್ರಿಕೆಟ್ ಹಾಗೂ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಉಂಟು ಮಾಡಿದ್ದರೆ, ಕೆಲವರು ಕ್ರಿಕೆಟ್‌ನ ಪ್ರಚಾರದಲ್ಲಿ ನಟನೇ? ಎಂದು ವ್ಯಂಗ್ಯವಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಶ್ವಕಪ್​ ಪ್ರಚಾರ ವಿಡಿಯೋದಲ್ಲಿ ಕ್ರಿಕೆಟಿಗರಾದ ದಿನೇಶ್​ ಕಾರ್ತಿಕ್​, ಜಾಂಟಿ ರೋಡ್ಸ್​, ಮುತ್ತಯ್ಯ ಮುರಳೀಧರನ್​ ಮತ್ತು ಶುಭಮಾನ್​ ಗಿಲ್​ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋವನ್ನು 52 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಅಕ್ಟೋಬರ್​ 5ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ನಡುವಿನ ಪಂದ್ಯದೊಂದಿಗೆ ಏಕದಿನ ವಿಶ್ವಕಪ್​ ಟೂರ್ನಿಗೆ ಚಾಲನೆ ಸಿಗಲಿದೆ.

ಆತಿಥೇಯ ಭಾರತ ತಂಡ ಅಕ್ಟೋಬರ್​ 8ರಂದು ಚೆನ್ನೈನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

ಒಟ್ಟು 48 ಪಂದ್ಯಗಳನ್ನು ಒಳಗೊಂಡ ಟೂರ್ನಿಯ ಪಂದ್ಯಗಳು ದೇಶದ 10 ತಾಣಗಳಲ್ಲಿ ನಡೆಯಲಿವೆ. ನವೆಂಬರ್​ 19ರಂದು ಅಹಮದಾಬಾದ್​ನಲ್ಲಿ ಫೈನಲ್​ ಪಂದ್ಯ ನಿಗದಿಯಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಲ್ಕನೇ ಟೆಸ್ಟ್ | ಚೊಚ್ಚಲ ಪಂದ್ಯದಲ್ಲೇ ಆಕಾಶ್‌ ದೀಪ್‌ಗೆ 3 ವಿಕೆಟ್: ಇಂಗ್ಲೆಂಡ್‌ನ 5 ವಿಕೆಟ್ ಪತನ

ಭಾರತ - ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ರಾಂಚಿಯ ಜೆಎಸ್‌ಸಿಎ...

ಐಪಿಎಲ್ 2024 | ಪಂದ್ಯಗಳ ವೇಳಾಪಟ್ಟಿ ಪ್ರಕಟ: ಚೆನ್ನೈ-ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ

ಹಲವು ವಿವಾದಗಳ ನಡುವೆಯೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ ಎಂದೇ ಪರಿಗಣಿತವಾಗಿರುವ...

ಹಿಮ್ಮಡಿ ಶಸ್ತ್ರಚಿಕಿತ್ಸೆ: ಐಪಿಎಲ್ ಟೂರ್ನಿಯಿಂದ ಶಮಿ ಹೊರಗೆ

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಂ...

ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಮಂಡ್ಯದಲ್ಲಿ ನಡೆದ ಸಮಾರಂಭವೊಂದರಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತುಗಳನ್ನು ಆಡಿರುವ ಆರೋಪದ...