ವೆಸ್ಟ್‌ಇಂಡೀಸ್‌ನ ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 172 ರನ್‌ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿತು.
Innings Break!#TeamIndia post 171/7 on the board!
5⃣7⃣ for captain @ImRo45
4⃣7⃣ for @surya_14kumar
Some handy contributions from @hardikpandya7, @imjadeja & @akshar2026Over to our bowlers now! 👍 👍
Scorecard ▶️ https://t.co/1vPO2Y5ALw #T20WorldCup | #INDvENG pic.twitter.com/nOf7WOhLNl
— BCCI (@BCCI) June 27, 2024
ಟೀಮ್ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ಪೈಕಿ ಕೊಹ್ಲಿ ಸ್ಫೋಟಕ ಆರಂಭ ನೀಡುವ ಮುನ್ಸೂಚನೆ ನೀಡಿದರು. ರೀಸ್ ಟಾಪ್ಲಿಯ ಓವರ್‌ನಲ್ಲಿ ಒಂದು ಸಿಕ್ಸರ್ ಬಾರಿಸಿ, ನಂತರದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ ಬಂದ ರಿಷಭ್ ಪಂತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೇವಲ 4 ರನ್ ಬಾರಿಸಿ, ಸ್ಯಾಮ್ ಕರನ್ ಎಸೆತದಲ್ಲಿ ಔಟಾದರು.
ಬಳಿಕ ಕ್ರೀಸ್‌ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ ಉತ್ತಮ ಜೊತೆಯಾಟ ನಡೆಸಿದರು. ನಾಯಕ ರೋಹಿತ್ ಶರ್ಮಾ 39 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಬೌಂಡರಿಯ ನೆರವಿನಿಂದ 57 ರನ್ ಗಳಿಸಿದ್ದಾಗ, ಆದಿಲ್ ರಶೀದ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸೂರ್ಯ ಕುಮಾರ್ ಯಾದವ್ ಹಾಗೂ ರೋಹಿತ್ ಶರ್ಮಾ ಜೋಡಿಯು 73 ರನ್‌ಗಳ ಜೊತೆಯಾಟ ನಡೆಸಿದರು.
ಆ ಬಳಿಕ ಉತ್ತಮವಾಗಿ ಬ್ಯಾಟ್ ನಡೆಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಸೂರ್ಯ ಕುಮಾರ್ ಯಾದವ್ ಅವರನ್ನು ಜೋಫ್ರಾ ಆರ್ಚರ್, ತನ್ನ ಓವರ್‌ನಲ್ಲಿ ವಿಕೆಟ್ ಪಡೆಯುವ ಮೂಲಕ ರನ್‌ಗೆ ಬ್ರೇಕ್ ಹಾಕಿದರು. ಕ್ರಿಸ್ ಜೋರ್ಡಾನ್‌ಗೆ ಕ್ಯಾಚ್ ನೀಡಿ, ಔಟಾಗುವುದಕ್ಕೂ ಮುನ್ನ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಬೌಂಡರಿಯ ನೆರವಿನಿಂದ 47 ರನ್ ಗಳಿಸಿದರು.
Target: 1️⃣7️⃣2️⃣
Boys, you got this 👊#EnglandCricket | #ENGvIND pic.twitter.com/w3Wh8yjk2o
— England Cricket (@englandcricket) June 27, 2024
ಆನಂತರ ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯಾ 13 ಎಸೆತಗಳಲ್ಲಿ 23 ರನ್ ಗಳಿಸಿದರೆ, ರವೀಂದ್ರ ಜಡೇಜಾ 17 ರನ್, ಅಕ್ಷರ್ ಪಟೇಲ್ 10 ರನ್ ಗಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ ಮಹತ್ವದ ಪಂದ್ಯದಲ್ಲೇ ಶೂನ್ಯಕ್ಕೆ ಔಟಾದರು. ತಾನೆದುರಿಸಿದ ಜೋರ್ಡಾನ್ ಅವರ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ ಬಟ್ಲರ್‌ಗೆ ಕ್ಯಾಚಿತ್ತು ಔಟಾಗುವ ಮೂಲಕ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು.
ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 171 ರನ್ ದಾಖಲಿಸುವ ಮೂಲಕ ಸವಾಲಿನ ಗುರಿ ನೀಡಿದೆ. ಇಂಗ್ಲೆಂಡ್ ಪರವಾಗಿ ಕ್ರಿಸ್ ಜೋರ್ಡಾನ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಜೋಫ್ರಾ ಆರ್ಚರ್, ಆದಿಲ್ ರಶೀದ್, ಸ್ಯಾಮ್ ಕರನ್ ಹಾಗೂ ರೀಸ್ ಟಾಪ್ಲಿ ತಲಾ ಒಂದೊಂದು ವಿಕೆಟ್ ಗಳಿಸುವಲ್ಲಿ ಸಫಲರಾದರು.
ಗೆದ್ದವರು ಫೈನಲ್‌ಗೆ
ಇಂದಿನ ಸೆಮಿಫೈನಲ್‌ನಲ್ಲಿ ಗೆದ್ದವರು ಜೂನ್ 29ರಂದು ಬಾರ್ಬಡೋಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ಈಗಾಗಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ.
