ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 106 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. 399 ರನ್‌ಗಳ ಗುರಿಯೊಂದಿಗೆ 2ನೇ ಇನಿಂಗ್ಸ್ ಬೆನ್ನಟ್ಟಿದ ಆಂಗ್ಲ ಪಡೆ ಭಾರತದ ಬೌಲರ್‌ಗಳ ಸಾಂಘಿಕ ಹೋರಾಟದಿಂದ 69.2 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟ್ ಆಯಿತು.
ವಿಶಾಖ ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನದಲ್ಲಿ ಬೂಮ್ರಾ 43/3, ಆರ್ ಅಶ್ವಿನ್ 72/3, ಮುಖೇಶ್. ಕುಲ್‌ದೀಪ್ ಹಾಗೂ ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಜಾಕ್ ಕ್ರಾಲಿ 74, ಟಾಮ್ ಹಾರ್ಟ್ಲಿ 36, ಬೆನ್ ಫೋಕ್ಸ್ 36 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದವರು ಹೆಚ್ಚಿನ ಪ್ರತಿರೋಧ ತೋರಲಿಲ್ಲ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಪಂದ್ಯ ಗೆಲುವು ಸಾಧಿಸಿದ್ದು, ಸರಣಿ ಸಮಬಲಗೊಂಡಿದೆ.
ಎರಡನೇ ಇನಿಂಗ್ಸ್‌ನಲ್ಲಿ ಗಿಲ್ ಅಮೋಘ ಶತಕದ ನೆರವಿಂದ ಭಾರತವು ಆಂಗ್ಲರಿಗೆ 399 ರನ್‌ಗಳ ಬೃಹತ್ ಗುರಿ ನೀಡಿತು. ಮೂರನೇ ದಿನದಾಟದ ಅಂತ್ಯಕ್ಕೆ ಆರಂಭಿಕ ಜೋಡಿಯಾದ ಜಾಕ್ ಕ್ರಾಲೆ ಮತ್ತು ಬೆನ್ ಡಕೆಟ್ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದ್ದರು. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ 332 ರನ್ ಗುರಿ ಪಡೆಯಿತು. ಭಾರತದ ಸಂಘಟಿದ ಪ್ರದರ್ಶನಕ್ಕೆ ಮಣಿದ ಆಂಗ್ಲರು ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಪರದಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
ಮೂರನೇ ದಿನದಾಟದಲ್ಲೇ ಬೆನ್ ಡಕೆಟ್ 28 ರನ್ ಗಳಿಸಿ ಔಟಾಗಿದ್ದರು. ನಾಲ್ಕನೇ ದಿನದ ಮೊದಲ ಅವಧಿಯಲ್ಲಿ, 23 ರನ್ ಗಳಿಸಿದ್ದ ರೆಹಾನ್ ಅಹ್ಮದ್ ಎಲ್ ಬಲೆಗೆ ಬಿದ್ದರು. ಅಕ್ಸರ್ ಪಟೇಲ್ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಓಲಿ ಪೋಪ್ ಆಟ 23 ರನ್‌ಗೆ ಅಂತ್ಯವಾಯಿತು. ಅಶ್ವಿನ್ ಎಸೆತದಲ್ಲಿ ಸ್ಲಿಪ್‌ನಲ್ಲಿ ರೋಹಿತ್ ಶರ್ಮಾ ಕ್ಯಾಚ್ ಹಿಡಿದರು. ವೇಗದ ಆಟಕ್ಕೆ ಮುಂದಾಗಿದ್ದ ಜೋ ರೂಟ್ ದೊಡ್ಡ ಹೊಡೆತಕ್ಕೆ ಕೈ ಹಾಕಿ 16 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್‌ಗೆ ಕ್ಯಾಚ್ ನೀಡಿದರು. ಇಂಗ್ಲೆಂಡ್ ಬಳಗದ ದೊಡ್ಡ ವಿಕೆಟ್ ಬುಮ್ರಾ ಕೈಸೇರಿತು.
ಆರಂಭಿಕನಾಗಿ ಬಂದು 73 ರನ್ ಗಳಿಸಿ ಅಪಾಯಕಾರಿಯಾಗಿ ಆಡುತ್ತಿದ್ದ ಝಾಕ್ ಕ್ರಾಲಿಗೆ ಕುಲ್ದೀಪ್ ಸ್ಪಿನ್ ಕಂಟಕವಾಯಿತು. ಅವರ ಬೆನ್ನಲ್ಲೇ ಜಾನಿ ಬೇರ್‌ಸ್ಟೋ ಕೂಡ್ 26 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ಲೆಗ್ ಬೈ ವಿಕೆಟ್ ಆಗಿ ಔಟಾದರು.
ಆಂಗ್ಲ ನಾಯಕ ಬೆನ್ ಸ್ಟೋಕ್ಸ್ ಕೂಡ 11 ರನ್ ಗಳಿಸಿ ರನೌಟ್ ಆದರು. ಶ್ರೇಯಸ್ ಅಯ್ಯರ್ ಚುರುಕಿನ ಕ್ಷೇತ್ರ ರಕ್ಷಣೆ ಮಾಡಿದರು. ಈ ವೇಳೆ ಒಂದಾದ ಬೆನ್ ಫೋಕ್ಸ್ ಮತ್ತು ಟಾಮ್ ಹಾರ್ಟ್ಲೆ ಅರ್ಧಶತಕದ ಜೊತೆಯಾಟವಾಡಿದರು. ಇಬ್ಬರೂ ತಲಾ 36 ರನ್ ಗಳಿಸಿ ಔಟಾದರು. ಬುಮ್ರಾ ಎಸೆತದಲ್ಲಿ ಟಾಮ್ ಹಾರ್ಟ್ಲೆ ಔಟಾಗುವುದರೊಂದಿಗೆ ಇಂಗ್ಲೆಂಡ್ ಇನಿಂಗ್ಸ್ ಮುಕ್ತಾಯವಾಯಿತು.
India have levelled the five-match series 1-1 🔥#WTC25 | #INDvENG 📝: https://t.co/gA12xVUZjT pic.twitter.com/jbe4Tj8i2L
— ICC (@ICC) February 5, 2024