ದಕ್ಷಿಣ ಆಫ್ರಿಕಾ ವಿರುದ್ಧ 7ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದ ಭಾರತ ತಂಡ ಎರಡು ಟೆಸ್ಟ್‌ಗಳ ಸರಣಿಯನ್ನು 1-1 ರೊಂದಿಗೆ ಸಮಬಲ ಮಾಡಿಕೊಂಡಿತು.
ಕೇಪ್‌ಟೌಟ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 176 ರನ್‌ಗಳಿಗೆ ಆಲೌಟ್ ಆಗಿ ನೀಡಲಾಗಿದ್ದ 79 ರನ್ ಗುರಿಯನ್ನು ಟೀಂ ಇಂಡಿಯಾ ಕೇವಲ 12 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಭಾರತದ ಪರ ನಾಯಕ ರೋಹಿತ್ ಶರ್ಮಾ ಅಜೇಯ (17), ಯಶಸ್ವಿ ಜೈಸ್ವಾಲ್ (28), ವಿರಾಟ್ ಕೊಹ್ಲಿ (12) ರನ್ ಗಳಿಸಿದರು. ತವರಿನ ಕೇಪ್‌ಟೌನ್ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ಸೋಲು ಕಾಣದಿದ್ದ ಹರಿಣಗಳ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಶರಣಾಯಿತು.
ಐದು ದಿನಗಳ ಪಂದ್ಯವು ಕೇವಲ ಒಂದೂವರೆ ದಿನದಲ್ಲಿ ಸಮಾಪ್ತಿಯಾಯಿತು. ಟಿಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೂವರೆ ದಿನದಲ್ಲಿ ಪಂದ್ಯ ಮುಗಿದಿರುವುದು ಒಂದು ದಾಖಲೆಯಾಗಿದೆ. 642 ಚೆಂಡುಗಳಿಗೆ ಮಾತ್ರ ಆಟವಾಡಲಾಗಿದೆ. ಈ ಮೊದಲು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡ 1932ರಲ್ಲಿ ಮೆಲ್ಬರ್ನ್‌ನಲ್ಲಿ 656 ಚಂಡುಗಳ ಆಟವಾಡಿದ್ದು ಮೊದಲ ದಾಖಲೆಯಾಗಿತ್ತು. ಈ ದಾಖಲೆಯನ್ನು ಟೀಂ ಇಂಡಿಯಾ ಸರಿಗಟ್ಟಿದೆ.
2ನೇ ಇನಿಂಗ್ಸ್‌ನಲ್ಲಿ 62 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಎರಡನೇ ದಿನ ಆರಂಭಿಸಿದ ದಕ್ಷಿಣ ಆಫ್ರಿಕಾ ಜಸ್‌ಪ್ರೀತ್ ಬೂಮ್ರಾ ದಾಳಿಗೆ 176 ರನ್‌ಗಳಿಗೆ ಆಲೌಟ್ ಆಯಿತು. ಸೋಲಿನಲ್ಲಿಯೂ ಏಕಾಂಗಿಯಾಗಿ ಶತಕ ಗಳಿಸಿದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಪ್ರೇಕ್ಷಕರ ಮನದಲ್ಲಿ ಉಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಗೆ ಗುಡಿ ಕಟ್ಟುವ ಮುನ್ನ ದರಿದ್ರ ನಾರಾಯಣರತ್ತ ನೋಡುವರೇ ದೊರೆಗಳು?
103 ಎಸೆತಗಳಲ್ಲಿ 106 ರನ್ ಬಾರಿಸಿದ ಮಾರ್ಕ್ರಾಮ್ ಆಟದಲ್ಲಿ 17 ಆಕರ್ಷಕ ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್‌ಗಳಿದ್ದವು.
ಟೀಂ ಇಂಡಿಯಾ ಪರ ಜಸ್‌ಪ್ರೀತ್ ಬೂಮ್ರಾ 61/6, ಮುಖೇಶ್ ಕುಮಾರ್ 56/2, ಮೊಹಮದ್ ಸಿರಾಜ್ 31/1 ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ 27/1 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಪತನಕ್ಕೆ ಕಾರಣರಾದರು.
ಹರಿಣಗಳ ತಂಡ ಮೊದಲ ಇನಿಂಗ್ಸ್‌ನಲ್ಲಿ ಮೊಹಮದ್ ಸಿರಾಜ್ 15/6 ದಾಳಿಗೆ ಕೇವಲ 55 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 153 ರನ್‌ಗೆ ಸರ್ವಪತನ ಕಂಡು 98 ರನ್ ಮುನ್ನಡೆ ಗಳಿಸಿತ್ತು.
ದಕ್ಷಿಣ ಆಫ್ರಿಕಾದ 20 ವಿಕೆಟ್‌ಗಳನ್ನು ವೇಗದ ಬೌಲರ್‌ಗಳೆ ಕಬಳಿಸಿರುವುದು ದಾಖಲೆಯಾಗಿ ಉಳಿದಿದೆ. ಇದರ ಜೊತೆ ಮೊದಲ ದಿನದಲ್ಲಿ 23 ವಿಕೆಟ್ ಉರುಳಿದ್ದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊಸ ದಾಖಲೆಯಾಗಿದೆ.
India emerge victorious within five sessions of play in the Cape Town Test to level the #SAvIND series 👊#WTC25 | 📝: https://t.co/eiCgIxfJNY pic.twitter.com/XpqaIEBeGk
— ICC (@ICC) January 4, 2024