ಐಪಿಎಲ್ 16ನೇ ಆವೃತ್ತಿಯ ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್ ತವರಿನಲ್ಲೇ ಮುಗ್ಗರಿಸಿದೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ , ಬೌಲರ್‌ಗಳು ಮೇಲುಗೈ ಸಾಧಿಸಿದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 10 ರನ್‌ಗಳ ಗೆಲುವು ದಾಖಲಿಸಿದೆ.
ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ಮುಂದಿಟ್ಟಿದ್ದ 155 ರನ್‌ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಲು ವಿಫಲವಾದ ರಾಯಲ್ಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 144 ರನ್‌ಗಳಿಸಲಷ್ಟೇ ಶಕ್ತವಾಯಿತು.
ರಾಯಲ್ಸ್ ತಂಡದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ 44 ರನ್, ಜಾಸ್ ಬಟ್ಲರ್ 40 ರನ್, ನಾಯಕ ಸಂಜು ಸ್ಯಾಮ್ಸನ್ 2 , ದೇವದತ್ ಪಡಿಕ್ಕಲ್ 26, ಹೆಟ್ಮಾಯರ್ 2 ರನ್, ರಿಯಾನ್ ಪರಾಗ್ 15 ರನ್ ಗಳಿಸಿದರು.
ರಾಜಸ್ಥಾನ ತಂಡವನ್ನು ತವರಿನಲ್ಲಿ ಕಟ್ಟಿಹಾಕುವಲ್ಲಿ ಲಕ್ನೋ ತಂಡದ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಿದರು. ಆವೇಶ್ ಖಾನ್ 4 ಓವರ್‌ಗಳ ದಾಳಿಯಲ್ಲಿ 25 ರನ್ ನೀಡಿ 3 ವಿಕೆಟ್ ಮತ್ತು ಮಾರ್ಕೋಸ್ ಸ್ಟೋಯ್ನಿಸ್ 2 ವಿಕೆಟ್ ಪಡೆದರು. ವಿಕೆಟ್ ಪಡೆಯಲಾಗದಿದ್ದರೂ ರನ್ ನಿಯಂತ್ರಿಸುವ ಮೂಲಕ ವೇಗಿ ನವೀನ್ ಉಲ್ ಹಖ್ ನೆರವಾದರು.