ಇಂದು ಹೈಬ್ರಿಡ್ ಸೂರ್ಯ ಗ್ರಹಣ; ಶತಮಾನಗಳಿಗೊಮ್ಮೆ ಸಂಭವಿಸುವ ಅಪರೂಪದ ವಿದ್ಯಮಾನ!

Date:

ಈ ವರ್ಷದ ಮೊದಲ ಸೂರ್ಯ ಗ್ರಹಣ ಇಂದು (ಏಪ್ರಿಲ್ 20) ಸಂಭವಿಸಲಿದೆ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರನ ಆಗಮನದ ಹಿನ್ನೆಲೆ ಭೂಮಿ ಮೇಲೆ ಚಂದ್ರನ ನೆರಳು ಹಾದುಹೋಗುವುದರಿಂದ ಉಂಗುರ ಆಕಾರ ಏರ್ಪಡಲಿದೆ. ಆದ ಕಾರಣ ಇದನ್ನು ಬೆಂಕಿಯ ಉಂಗುರ ಅಥವಾ ಹೈಬ್ರಿಡ್ ಸೂರ್ಯಗ್ರಹಣ ಎಂದೂ ಕರೆಯಲಾಗುತ್ತದೆ.

ಇದು ಶತಮಾನಗಳಿಗೊಮ್ಮೆ ನಭೋಮಂಡಲದಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನ ಎಂದು ಹೇಳಲಾಗುತ್ತದೆ. ಮಾಧ್ಯಮಗಳ ವರದಿ ಪ್ರಕಾರ, 2013ರಲ್ಲಿ ಹೈಬ್ರಿಡ್ ಸೂರ್ಯಗ್ರಹಣ ಸಂಭವಿಸಿತ್ತು. ಮುಂದೆ 2031ರಲ್ಲಿ ಸಂಭವಿಸಲಿದೆ. ಅದಾದ ಬಳಿಕ, 2164ರವರೆಗೆ ಈ ವಿಶಿಷ್ಟ ವಿದ್ಯಮಾನಕ್ಕೆ ಕಾಯಬೇಕಾಗಿದೆ.

ಅಪರೂಪದ ಹೈಬ್ರಿಡ್ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ದಕ್ಷಿಣ ಫೆಸಿಫಿಕ್‌ನಲ್ಲಿ ಗ್ರಹಣ ಗೋಚರಿಸಲಿದೆ. ಚಂದ್ರನ ನೆರಳು ಪಶ್ಚಿಮ ಆಸ್ಟ್ರೇ ಲಿಯಾ, ಪೂರ್ವ ತಿಮೋರ್, ಇಂಡೋನೇಷ್ಯಾ ಮೂಲಕ ಹಾದುಹೋಗಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತೀಯ ಕಾಲಮಾನ ಬೆಳಿಗ್ಗೆ 7:04ಕ್ಕೆ ಸೂರ್ಯ ಗ್ರಹಣ ಆರಂಭವಾಗಲಿದ್ದು, ಸಂಪೂರ್ಣ ಸೂರ್ಯಗ್ರಹಣ 08:07ಕ್ಕೆ ಸಂಭವಿಸುತ್ತದೆ. ರಾತ್ರಿ 9:46ಕ್ಕೆ ಉತ್ತುಂಗಕ್ಕೆ ತಲುಪುತ್ತದೆ. 11:26ರಿಂದ ಗ್ರಹಣ ಅಂತ್ಯಕಾಲ ಆರಂಭವಾಗುತ್ತದೆ. ಭಾಗಶಃ ಸೂರ್ಯಗ್ರಹಣ ಮಧ್ಯಾಹ್ನ 12:29ಕ್ಕೆ ಅಂತ್ಯವಾಗುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲ್ಡೀವ್ಸ್ ಸಂಸತ್ ಚುನಾವಣೆ | ಚೀನಾ ಬೆಂಬಲಿತ ಅಧ್ಯಕ್ಷ ಮುಯಿಝ್ಜು ಮತ್ತೆ ಅಧಿಕಾರಕ್ಕೆ; ಭಾರತದ ಪರ MDPಗೆ ಹೀನಾಯ ಸೋಲು

ಮಾಲ್ಡೀವ್ಸ್‌ನ ಸಂಸತ್ತಿನ ಮಜ್ಲಿಸ್‌ಗೆ ನಡೆದ ಚುನಾವಣೆಯಲ್ಲಿ ಚೀನಾ ಪರ ಅಧ್ಯಕ್ಷ ಮೊಹಮ್ಮದ್...

ಗಾಜಾದಲ್ಲಿ ಇಸ್ರೇಲ್ ಪಡೆಗಳ ದಾಳಿ: 9 ಮಕ್ಕಳು ಸೇರಿ 13 ಸಾವು

ದಕ್ಷಿಣ ಗಾಜಾ ಪಟ್ಟಣದ ರಾಫಾದಲ್ಲಿ ಕಳೆದ ರಾತ್ರಿ ಇಸ್ರೇಲ್‌ ಪಡೆಗಳು ದಾಳಿ...

ಟೆಸ್ಲಾ ಕಾರಣ; ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್!

ಟೆಸ್ಲಾ ಸಿಇಒ, ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್...

ಇಸ್ರೇಲ್‌ ಜೊತೆ ಗೂಗಲ್ ಒಪ್ಪಂದ ವಿರೋಧಿಸಿ ಪ್ರತಿಭಟನೆ; ಗೂಗಲ್‌ ಉದ್ಯೋಗಿಗಳ ಬಂಧನ

ಇಸ್ರೇಲ್‌ ಸರ್ಕಾರದೊಂದಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆಯ ನಡೆ...