ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸವಾಲಿನ ಮೊತ್ತವನ್ನು ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ಗಳನ್ನು ಕಲೆಹಾಕಿದ್ದು, ಆರ್ಸಿಬಿ ತಂಡಕ್ಕೆ 182 ರನ್ಗಳ ಗುರಿ ನೀಡಿದೆ.
Innings Break!
A solid innings from Quinton de Kock & a fine finish from Nicholas Pooran 👏👏#LSG set a target of 1️⃣8️⃣2️⃣ for #RCB
Will be chased or will #LSG get their 2nd win on the trot? 🤔
Scorecard ▶️ https://t.co/ZZ42YW8tPz#TATAIPL | #RCBvLSG pic.twitter.com/6uJZpYxFOb
— IndianPremierLeague (@IPL) April 2, 2024
ಲಕ್ನೋ ಪರ ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 5.3 ಓವರ್ಗಳಲ್ಲಿ 53 ರನ್ಗಳ ಜೊತೆಯಾಟ ನಿರ್ಮಿಸಿತು. ಈ ವೇಳೆ 14 ಎಸೆತಗಳಲ್ಲಿ 2 ಸಿಕ್ಸರ್ಗಳೊಂದಿಗೆ 20 ರನ್ ಗಳಿಸಿದ್ದ ಕೆಎಲ್ ರಾಹುಲ್ ಮ್ಯಾಕ್ಸ್ವೆಲ್ಗೆ ವಿಕೆಟ್ ನೀಡಿದರು.
The boys definitely fed off the energy from the stands. 🔥
Absolutely Electric on the field tonight ⚡#PlayBold #ನಮ್ಮRCB #IPL2024 #RCBvLSG pic.twitter.com/9lDam5SBKP
— Royal Challengers Bengaluru (@RCBTweets) April 2, 2024
ನಂತರ ಬಂದ ದೇವದತ್ ಪಡಿಕ್ಕಲ್ ಕೇವಲ 6 ರನ್ ಗಳಿಸಿ ಔಟಾದರು. ಆ ಬಳಿಕ ಮಾರ್ಕಸ್ ಸ್ಟೊಯಿನಿಸ್ 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ 56 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 5 ಸಿಕ್ಸರ್ಗಳ ಮೂಲಕ 81 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.
106m monstrous six! 🤯
Nicholas Pooran smashes one out of the park 💥
💯 sixes in #TATAIPL for the @LucknowIPL batter 💪
Head to @JioCinema and @StarSportsIndia to watch the match LIVE #RCBvLSG pic.twitter.com/7X0Yg4VbTn
— IndianPremierLeague (@IPL) April 2, 2024
ನಂತರ ಕ್ರೀಸ್ಗೆ ಬಂದ ನಿಕೋಲಸ್ ಪೂರನ್ ಕೊನೆಯವರೆಗೂ ಆಡಿ, ಕೇವಲ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ನ ನೆರವಿನಿಂದ ಅಜೇಯ 40 ರನ್ ಬಾರಿಸಿ ತಂಡದ ಮೊತ್ತವನ್ನು 180ರ ಗಡಿ ಮುಟ್ಟಿಸಿದರು. ಕೊನೆಗೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ಗಳನ್ನು ಕಲೆಹಾಕಿತು.
ಬೌಲಿಂಗ್ನಲ್ಲಿ ಆರ್ಸಿಬಿ ತಂಡದ ಪರ ಗ್ಲೆನ್ ಮ್ಯಾಕ್ಸ್ವೆಲ್ 4 ಓವರ್ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರೆ, ಉಳಿದಂತೆ ರೀಸ್ ಟೋಪ್ಲೆ, ಯಶ್ ದಯಾಳ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
We’ve done it before, we’re gonna have to do it again! 👊
We have the firepower! Let’s go all guns blazing 💪#PlayBold #ನಮ್ಮRCB #IPL2024 #RCBvLSG pic.twitter.com/02yRN6Ifxy
— Royal Challengers Bengaluru (@RCBTweets) April 2, 2024
