ಬೃಹತ್ ಭೂ ಹಗರಣ | ಒತ್ತಾಯದ ಲೋಕಾಯುಕ್ತ ದಾಳಿ; ತನಿಖೆಗೆ ಸಿಪಿಐಎಂ ಆಗ್ರಹ

Date:

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡುಪು ಗ್ರಾಮದಲ್ಲಿ 10.08 ಎಕರೆ ಜಮೀನು ಟಿಡಿಆರ್‌ ಅಡಿ ಖರೀದಿಸುವ ಮಂಗಳೂರು ಪಾಲಿಕೆಯ ಒಪ್ಪಂದ ರದ್ದುಗೊಳಿಸಲು ಆಗ್ರಹಿಸಿ ಸಿಪಿಐಎಂ ಜಿಲ್ಲಾಧಿಕಾರಿಗೆ ಮನವಿ ನೀಡಿತು.

ಈ ಒಪ್ಪಂದದ ಹಿಂದೆ ಭಾರೀ ಹಗರಣ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿಯವರು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಸಿಪಿಐಎಂ ಚುನಾವಣಾ ಅಧಿಕಾರಿ ತಹಶೀಲ್ದಾರ್ ಶಿವಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

“ಕುಡುಪು ಗ್ರಾಮದ ಸರ್ವೆ ನಂ. 57/P ಯಲ್ಲಿರುವ 10.08 ಎಕರೆ ಜಮೀನು ಟಿಡಿಆರ್ ಅಡಿ ಖರೀದಿಸುವ ಮಂಗಳೂರು ಪಾಲಿಕೆಯು ಒಪ್ಪಂದ ಮಾಡಿಕೊಂಡಿದೆ. ಇದೇ ಮಾರ್ಚ್ 23ರಂದು ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಸ್ಧ ಹಾಗೂ ಬಿಲ್ಡರ್ ಆಗಿರುವ ಗಿರಿಧರ್ ಶೆಟ್ಟಿ ಎಂಬವರ ದೂರಿನ ಆಧಾರದಲ್ಲಿ ₹25 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆಂಬ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡ) ಆಯುಕ್ತ ಮನ್ಸೂರ್ ಅಲಿ ಅವರನ್ನು ಬಂಧಿಸಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸದರಿ ಮುಡಾ ಆಯುಕ್ತ ಮನ್ಸೂರ್ ಅಲಿರವರ ಬಂಧನವು ಕುಡುಪು ಗ್ರಾಮದ ಸರ್ವೆ ನಂ. 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನನ್ನು ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಿರುವ ಜಮೀನಿನ ಮೌಲ್ಯದ ಬದಲಾಗಿ ಅದರ ಮೌಲ್ಯವನ್ನು ಟಿಡಿಆರ್ ಸರ್ಟಿಫಿಕೇಟ್ ಮೂಲಕ ನೀಡಲು ಮಹಾನಗರ ಪಾಲಿಕೆ ಒಪ್ಪಿಕೊಂಡಿದ್ದು, ಅದರಂತೆ ಟಿಡಿಆರ್ ಸರ್ಟಿಫಿಕೆಟನ್ನು ನೀಡಲು ಮುಡಾ ಆಯುಕ್ತರಿಗೆ ನಿರ್ದೇಶಿಸಿ ಅದರ ಕಡತವನ್ನು ವರ್ಗಾವಣೆ ಮಾಡಿದ್ದಾಗಿಯೂ ಆ ಕಡತವು ಫೆಬ್ರವರಿ ತಿಂಗಳಿಂದ ಮುಡಾ ಆಯುಕ್ತರ ಕಚೇರಿಯಲ್ಲಿ ಇರುವುದಾಗಿಯೂ ಸದರಿ ಕಡತಕ್ಕೆ ಸಹಿ ಮಾಡಲು ಮುಡಾ ಆಯುಕ್ತ ಮನ್ಸೂರ್ ಅಲಿರವರು ₹25 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆಂಬ ದೂರಿನ ಬಗ್ಗೆ ಲೋಕಾಯುಕ್ತ ದಾಳಿ ನಡೆಸಿತ್ತು.‌

ಟಿಡಿಆರ್ ವಿಚಾರವಾಗಿ ಈಗಾಗಲೇ ಭೂ ವ್ಯವಹಾರ ಮಾಡುವ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಹಲವು ದೂರುಗಳು ಕೇಳಿಬಂದಿವೆ. ಸಾಮಾನ್ಯವಾಗಿ ಸ್ಧಳೀಯ ಸರ್ಕಾರಿ ಸಂಸ್ಥೆಗಳು ಸಾರ್ವಜನಿಕರಿಗೆ ಅತಿ ಅವಶ್ಯಕವಾಗಿ ಮಾಡಬೇಕಾಗಿರುವ ಕೆಲಸ ರಸ್ತೆ, ಚರಂಡಿ ಮುಂತಾದ ಮೂಲ ಸೌಕರ್ಯಗಳಿಗೆ ಸಂಬಂಧಪಟ್ಟ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಸರ್ಕಾರದ ಯೋಜನೆಗಳು ವಿಳಂಬವಾಗಬಾರದೆಂಬ ಕಾರಣಕ್ಕೆ ಮತ್ತು ಯೋಜನೆಗಳಿಗೆ ಅಗತ್ಯವಾದ ಸಣ್ಣಪುಟ್ಟ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಭೂಮಾಲೀಕರಿಗೆ ತೊಂದರೆಯಾಗಬಾರದೆನ್ನುವ ಕಾರಣಗಳಿಂದ ಟಿಡಿಆರ್ ನೀಡಿ ಭೂಸ್ವಾಧೀನ ನಡೆಸುತ್ತವೆ.

ಈ ವೇಳೆ ಸಂತ್ರಸ್ತರು ಭೂಮಿಯನ್ನು ಅಭಿವೃದ್ಧಿಪಡಿಸುವ ಸಮಯ ಅನುಕೂಲ ಒದಗಿಸಿ ಕೊಡುವ ಸಲುವಾಗಿ ಅವರಿಗೆ ಟಿಡಿಆರ್ ನೀಡಿ, ಅವರಿಂದ ಸ್ವಾಧೀನ ಪಡಿಸಿಕೊಂಡ ಜಮೀನಿನ ಮೌಲ್ಯಕ್ಕೆ ನಷ್ಟವಾಗದಂತೆ ನ್ಯಾಯವನ್ನು ಒದಗಿಸಿಕೊಡಲು ಆ ಮೂಲಕ ಪ್ರಯತ್ನಿಸಲಾಗುತ್ತದೆ. ಆದರೆ ಕುಡುಪು ಗ್ರಾಮದ ಸರ್ವೆ ನಂ. 57/ಪಿಯಲ್ಲಿರುವ 10.8 ಎಕರೆ ವಿಸ್ತೀರ್ಣದ ಜಮೀನನ್ನು ಮಂಗಳೂರು ಮಹಾನಗರ ಪಾಲಿಕೆ ಸ್ವಾಧೀನಪಡಿಸಿಕೊಂಡು ಆ ಭೂಮಿಯ ಹಣದ ಮೌಲ್ಯದ ಬದಲಾಗಿ ಭೂಮಾಲೀಕರಿಗೆ ಟಿಡಿಆರ್ ಸರ್ಟಿಫಿಕೇಟ್ ಕೊಡಲು ಮಾಡಿಕೊಂಡ ಒಪ್ಪಂದ ಮತ್ತು ನಿರ್ಧಾರಗಳು ಟಿಡಿಆರ್ ನಿಯಮಾವಳಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ ಮತ್ತು ಇದು ಮಂಗಳೂರು ಮಹಾನಗರ ಪಾಲಿಕೆಯ ಕಾನೂನುಬಾಹಿರ ನಡೆಯಾಗಿರುತ್ತದೆ” ಎಂದು ಸಿಪಿಐಎಂ ಮನವಿಯಲ್ಲಿ ತಿಳಿಸಿದೆ.

ಮೇಲಿನ ಪ್ರಕರಣದಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ವಿಚಾರವೇನೆಂದರೆ ಸದರಿ ಭೂಮಿಯ ಟಿಡಿಆರ್‌ಗಾಗಿ ಮತ್ತು ಆ ಕಡತದ ವಿಲೇವಾರಿಗಾಗಿ ಮುಡಾ ಆಯುಕ್ತರನ್ನು ವಿನಂತಿಸಿರುವ ವ್ಯಕ್ತಿ ಗಿರಿಧರ ಶೆಟ್ಟಿ ಎಂಬವರಾಗಿದ್ದು, ಈತನು ಮಂಗಳೂರಿನಲ್ಲಿ ಭೂ ವ್ಯವಹಾರವನ್ನು ವೃತ್ತಿಪರವಾಗಿ ನಡೆಸುವ ವ್ಯಕ್ತಿಯಾಗಿರುತ್ತಾರೆ.

“ಸದರಿ ಗಿರಿಧರ್ ಶೆಟ್ಟಿ ತಾನು ʼಈ ಮೇಲ್ಕಂಡ ಜಮೀನಿನ ಮೂಲ ಮಾಲೀಕರಿಂದ ಭೂ ವ್ಯವಹಾರದ ಬಗ್ಗೆ ಒಪ್ಪಂದ ಮಾಡಿಕೊಂಡಿರುತ್ತೇನೆ. ಸದರಿ ಭೂಮಿಯ ಟಿಡಿಆರ್ ಅನ್ನು ತನ್ನ ಪರವಾಗಿ ನೀಡಬೇಕುʼ ಎಂದು ಬೇಡಿಕೆ ಇಟ್ಟಿರುವುದು ನಿಯಮಬದ್ಧವಾಗಿರುವುದಿಲ್ಲ. ಟಿಡಿಆರ್ ನಿಯಮದಲ್ಲಿ ಮೂಲ ಮಾಲೀಕನ ಬದಲಿಗೆ ಮಧ್ಯವರ್ತಿ, ಜಮೀನಿನ ಅಗ್ರಿಮೆಂಟ್ ಹೋಲ್ಡರ್‌ನೊಂದಿಗೆ ವ್ಯವಹಾರ ಕುದುರಿಸಲು ಅವಕಾಶವಿರುವುದಿಲ್ಲ. ನಿಯಮಗಳು ಇದನ್ನು ಒಪ್ಪುವುದಿಲ್ಲ” ಎಂದು ಸಿಪಿಐಎಂ ದೂರಿನಲ್ಲಿ ಉಲ್ಲೇಖಿಸಿದೆ.

“ಲ್ಯಾಂಡ್ ಡೀಲರ್ ಗಿರಿಧರ್ ಶೆಟ್ಟಿ ಮೂಲ ಮಾಲೀಕರೊಂದಿಗೆ 7 ಕೋಟಿ ರೂಪಾಯಿ ಮೌಲ್ಯಕ್ಕೆ ಜಮೀನು ಖರೀದಿಸುವ ಕುರಿತು ಮಾತುಕತೆ ನಡೆಸಿ 1 ಕೋಟಿ ರೂಪಾಯಿ ಮುಂಗಡ ನೀಡಿ ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಈಗ ಮಂಗಳೂರು ನಗರ ಪಾಲಿಕೆ ಗಿರಿಧರ್ ಶೆಟ್ಟಿಗೆ ನೀಡಲು ಒಪ್ಪಿಕೊಂಡಿರುವ ಟಿಡಿಆರ್‌ನ ಮಾರುಕಟ್ಟೆ ಮೌಲ್ಯ ಸುಮಾರು 50 ಕೋಟಿ ರೂ. ಎನ್ನಲಾಗಿದೆ. ಈ ಟಿಡಿಆರ್‌ಅನ್ನು ರಾಜಕೀಯ ವ್ಯಕಿಗಳು, ಪ್ರಭಾವಿ ಬಿಲ್ಡರ್‌ಗಳು ಮಾಡಿಕೊಂಡಿರುವ ಬೇನಾಮಿ ಹೂಡಿಕೆಯ ಕಟ್ಟಡಗಳಿಗೆ ಬಳಸಲು ಯೋಜನೆ ಹಾಕಿಕೊಂಡಿದ್ದಾರೆಂಬ ಅನುಮಾನವಿದೆ” ಎಂದು ಸಿಪಿಐಎಂ ಆರೋಪಿಸಿದೆ.

“ಗಿರಿಧರ್ ಶೆಟ್ಟಿಗೆ ಬಹಳಷ್ಟು ಪ್ರಭಾವಿ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಒಡನಾಟ ಇದೆ.
ಇವರು ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಸದರಿ ಜಮೀನಿನಲ್ಲಿ ಅಂತಹ ರಾಜಕೀಯ ನಾಯಕರುಗಳ ಹೂಡಿಕೆ ಇರುವ ಸಾಧ್ಯತೆಗಳಿವೆ. ಈ ಎಲ್ಲ ಪ್ರಭಾವಗಳು ಮೇಲ್ಕಂಡ 10.08 ಎಕರೆ ಜಮೀನಿನ ಟಿಡಿಆರ್ ಮೌಲ್ಯದಲ್ಲಿ ವ್ಯವಹಾರ ನಡೆಸಲು ಬಳಕೆಯಾಗಿರುವುದು ಕಂಡುಬರುತ್ತದೆ. ಸದರಿ ಕಡುಪು ಗ್ರಾಮದ 57/ಪಿ ಸರ್ವೆ ನಂಬರಿನ 10.8 ಎಕರೆ ಜಮೀನು ಈಗ ನಿಗದಿ ಪಡಿಸಿರುವ ಟಿಡಿಆರ್ ಅಡಿ ಪ್ರಕಾರ ಖರೀದಿಸಿದಲ್ಲಿ ನಗರ ಪಾಲಿಕೆಗೆ ಸುಮಾರು ನೂರು ಕೋಟಿ ರೂಪಾಯಿ ಮೌಲ್ಯದಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಲವು ಬಹುಮಹಡಿ ಕಟ್ಟಡಗಳ ಅನಧಿಕೃತ ನಿರ್ಮಾಣಗಳು ಸಕ್ರಮಗೊಳ್ಳಲೂ ಇದು ದುರ್ಬಳಕೆ ಆಗಲಿದೆ” ಎಂದು ಸಿಪಿಎಂ ಆತಂಕ ವ್ಯಕ್ತಪಡಿಸಿದೆ.

“ಈ ಪ್ರಕರಣದಲ್ಲಿ ಒಟ್ಟು ಟಿಡಿಆರ್ ಬಗ್ಗೆ ಕೈಗೊಂಡ ನಿರ್ಣಯವೇ ಕಾನೂನು ಬಾಹಿರ ಆಗಿರುತ್ತದೆ. ಸದರಿ ಕಾನೂನು ಬಾಹಿರ ಕಡತಕ್ಕೆ ಸಹಿ ಮಾಡಲು ಹಣದ ಬೇಡಿಕೆ ಇಟ್ಟಿದ್ದರೆ ಅಂತಹ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಾಗುತ್ತದೆ. ಸಾಮಾನ್ಯವಾಗಿ ಕಡತಕ್ಕೆ ಸಹಿ ಮಾಡಲು ವಿಳಂಬ ಮಾಡಿದ, ಹಣದ ಬೇಡಿಕೆ ಇಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ನೀಡಿದಾಗ ಸದರಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ತನ್ನ ಮೇಲಿನ ಆರೋಪದ ಕಾರಣಕ್ಕೆ ಬೆದರಿ ನಿಯಮಗಳಿಗೆ ವಿರುದ್ಧವಾದ ಅಂಶವನ್ನು ಪರಿಗಣಿಸದೆ ಕಡತಕ್ಕೆ ಸಹಿ ಹಾಕುವ ಸಂಭವವಿರುತ್ತದೆ. ಅದಲ್ಲದೆ ಲೋಕಾಯುಕ್ತ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ಅಧಿಕಾರಿಯನ್ನು ಬಂಧನಕ್ಕೊಳಪಡಿಸಿದ ಸಂದರ್ಭ ಸದರಿ ಕಡತವು ಆ ಕಾರಣಕ್ಕೆ ಸುಲಭವಾಗಿ ದೂರುದಾರರ ಪರವಾಗಿ ಮಂಜೂರುಗೊಳ್ಳುವ ಸಾಧ್ಯತೆ ಇರುತ್ತದೆ” ಎಂದು ಹೇಳಿದೆ.

“ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾದ ಗಿರಿಧರ್ ಶೆಟ್ಟಿಯೂ ಕೂಡ ತಮ್ಮ ಕಾನೂನುಬಾಹಿರ ಕಡತಕ್ಕೆ ಸುಲಭವಾಗಿ ಸಹಿ ಮಾಡಿಕೊಳ್ಳಲು ಲೋಕಾಯುಕ್ತ ಇಲಾಖೆಯನ್ನು ಬಳಸಿಕೊಂಡಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಅನುಮಾನ ಹುಟ್ಟುಹಾಕಿದೆ” ಎಂದು ಸಿಪಿಎಂ ಆರೋಪಿಸಿದೆ.

“ಈ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪಕ್ಕೆ ಒಳಗಾಗಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾದ ಮುಡಾ ಆಯುಕ್ತ ಮನ್ಸೂರ್ ಅಲಿ ಪರವಾಗಿ ದೂರುದಾರ ಗಿರಿಧರ್ ಶೆಟ್ಟಿಯಿಂದ ಲಂಚದ ಹಣ ಪಡೆಯಲು ಬಂದು ಬಂಧಿತನಾದ ಬ್ರೋಕರ್ ಸಲೀಂ ತನ್ನ ಪರವಾದ ವ್ಯಕ್ತಿ, ತನ್ನ ಪರವಾಗಿ ಸಲೀಂ ಆಯುಕ್ತರೊಂದಿಗೆ ವ್ಯವಹಾರ ಕುದುರಿಸಲು ನಿಯೋಜನೆಗೊಂಡಿದ್ದ ಎಂದು ಖುದ್ದು ಗಿರಿಧರ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಈ ಪ್ರಕರಣದಲ್ಲಿ ನಿಯಮಗಳ ಉಲಂಘನೆ ನಡೆದಿರುವುದು, ಫೈಲ್ ಕ್ಲಿಯರೆನ್ಸ್‌ಗೆ ಅಡ್ಡ ದಾರಿ ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ” ಎಂದು ಸಿಪಿಐಎಂ ಆರೋಪಿಸಿದೆ.

“ಮಂಗಳೂರು ಮಹಾನಗರ ಪಾಲಿಕೆ ಕುಡುಪು ಗ್ರಾಮದ ಸರ್ವೆ ನಂ. 57/ಪಿರಲ್ಲಿರುವ 10.8 ಎಕರೆ ಜಾಗಕ್ಕೆ ಟಿಡಿಆರ್ ನೀಡಲು ಮಹಾನಗರ ಪಾಲಿಕೆಯ ನಿರ್ಣಯವೇ ಕಾನೂನು ಬಾಹಿರವಾಗಿರುವುದರಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಯಾವುದೇ ಕಾರಣಕ್ಕೂ ಸದರಿ ಟಿಡಿಆರ್ ನೀಡಿಕೆ ಕಡತಕ್ಕೆ ಸಹಿ ಹಾಕದಂತೆ ತಡೆಯಬೇಕು. ಬದಲಿಗೆ ಈ ಕಡತದಲ್ಲಿರುವ ಕಾನೂನು, ನಿಯಮಗಳ ಉಲ್ಲಂಘನೆ, ರಿಯಲ್ ಎಸ್ಟೇಟ್ ಲಾಭಿಗಳ ಹಿತಾಸಕ್ತಿ, ನಗರ ಪಾಲಿಕೆಗೆ ಆಗುವ ನಷ್ಟಗಳನ್ನು ಪರಿಗಣಿಸಿ ಮಂಗಳೂರು ನಗರ ಪಾಲಿಕೆ ನಡೆಸಿರುವ ಖರೀದಿ ಒಪ್ಪಂದವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು” ಎಂದು ಸಿಪಿಐಎಂ ಆಗ್ರಹಿಸಿದೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಅಪಪ್ರಚಾರ ಮಾಡಲು ಕ್ಷುಲ್ಲಕ ಕಾರಣ ಹುಡುಕುವುದು ತರವಲ್ಲ: ಮುದ್ದಹನುಮೇಗೌಡ

“ಈ ಪ್ರಕರಣದಲ್ಲಿ ಹಲವು ನಿಗೂಢ ಅಂಶಗಳೂ, ಟಿಡಿಆರ್ ದುರ್ಬಳಕೆಗಾಗಿ ನಡೆಯುತ್ತಿರುವ ಷಡ್ಯಂತ್ರಗಳನ್ನು ಬಯಲುಗೊಳಿಸಲು, ಭವಿಷ್ಯದಲ್ಲಿ ಇಂತಹ ಅವ್ಯವಹಾರಗಳು ನಡೆಯದಂತೆ ತಡೆಯಲು ಈ ಪ್ರಕರಣವನ್ನು ರಾಜ್ಯ ಸರ್ಕಾರ ತನ್ನ ಯಾವುದಾದರೂ ವಿಶ್ವಾಸಾರ್ಹ ತನಿಖಾ ಏಜನ್ಸಿ ಮೂಲಕ ಸಮಗ್ರ ತನಿಖೆ ನಡೆಸುವಂತೆ ತಾವು ಶಿಫಾರಸು ಮಾಡಬೇಕು. ಈ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟ ರೂಪಿಸಲಾಗುವುದು” ಎಂದು ಸಿಪಿಐಎಂ ನಿಯೋಗ ಎಚ್ಚರಿಕೆ ನೀಡಿದೆ.

ನಿಯೋಗದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಸಮಿತಿ ಸದಸ್ಯ ಭಾರತೀ ಬೋಳಾರ, ಅಸುಂತ ಡಿಸೋಜ, ಮುಸ್ತಫ ಕಲ್ಲಕಟ್ಟೆ, ಯೋಗಿತಾ ಉಳ್ಳಾಲ, ಸೈಫರ್ ಆಲಿ ಸೇರಿದಂತೆ ಬಹುತೇಕರು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...

ಗೈರು ಹಾಜರಾದ ಮತಗಟ್ಟೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ: ಬಿಬಿಎಂಪಿ ಮುಖ್ಯ ಆಯುಕ್ತ

ಲೋಕಸಭಾ ಚುನಾವಣೆ ಹಿನ್ನೆಲೆ, ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕ್ಕೊಂಡಿರುವ ತರಬೇತಿಗೆ ಗೈರು ಹಾಜರಾದವರ...

ರಾಯಚೂರು | ಎಸ್‌ಯುಸಿಐ ಅಭ್ಯರ್ಥಿ ರಾಮಲಿಂಗಪ್ಪ ನಾಮಪತ್ರ ಸಲ್ಲಿಕೆ

ರಾಯಚೂರು-ಯಾದಗಿರಿ ಒಳಗೊಂಡ ರಾಯಚೂರು ಲೋಕಸಭಾ (ಪ.ಪಂ) ಕ್ಷೇತ್ರದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ...

ಗದಗ | ತಾಲೂಕು ಆಡಳಿತದಿಂದ ‘ಮೇವು ಬ್ಯಾಂಕ್’ ಆರಂಭ; ಕೆ.ಜಿಗೆ 2 ರೂ. ದರ ನಿಗದಿ

ಕೊಣ್ಣೂರು : ಜಾನುವಾರುಗಳಿಗೆ ಮೇವು ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವು...