ಈ ಬಾರಿಯ ಐಪಿಎಲ್ನಲ್ಲಿ ಒಂದು ಕಡೆ ಆರ್ಸಿಬಿ ತಂಡ ಸತತ ಐದು ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶಿಸಲು ಹೋರಾಟ ನಡೆಸುತ್ತಿದ್ದರೆ, ಪ್ಲೇ-ಆಫ್ ಪ್ರವೇಶಿಸಿದ್ದರೂ ಕೂಡ ರಾಜಸ್ಥಾನ್ ರಾಯಲ್ಸ್ ತಂಡ ಸೋಲಿನ ಸುಳಿಯಿಂದ ಇನ್ನೂ ಹೊರಬಂದಿಲ್ಲ.
ಹೌದು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ತಂಡವು ಸತತವಾಗಿ ನಾಲ್ಕನೇ ಪಂದ್ಯದಲ್ಲೂ ಕೂಡ ಸೋಲು ಅನುಭವಿಸಿದೆ. ರಾಜಸ್ಥಾನ್ ರಾಯಲ್ಸ್ ಕೆಕೆಆರ್ ವಿರುದ್ಧ ಕೊನೆಯ ಪಂದ್ಯವನ್ನು ಮೇ 19ರಂದು ಆಡಲಿದೆ.
4TH CONSECUTIVE DEFEAT FOR RAJASTHAN ROYALS. pic.twitter.com/z14biRS5hY
— Mufaddal Vohra (@mufaddal_vohra) May 15, 2024
ಮೇ 15ರಂದು ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 65ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಸತತ 4ನೇ ಸೋಲು ಅನುಭವಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2024ರ ಪ್ಲೇಆಫ್ಗೆ ಪ್ರವೇಶ ಪಡೆದಿದ್ದರೂ, ಅಗ್ರ 2ರಲ್ಲಿ ಲೀಗ್ ಹಂತ ಮುಗಿಸಲು ಅವಕಾಶವನ್ನು ಕೈ ಚೆಲ್ಲಿಕೊಂಡಿದೆ. ಇನ್ನು ಐಪಿಎಲ್ 2024ರ ಪ್ಲೇಆಫ್ನಿಂದ ಹೊರಬಿದ್ದಿರುವ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.
Fourth consecutive away victory for Punjab, and they win with 7 balls to spare!https://t.co/A4vnb8SXXg #IPL2024 #RRvPBKS pic.twitter.com/fTcUfnojE6
— ESPNcricinfo (@ESPNcricinfo) May 15, 2024
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡವು, ರಿಯಾನ್ ಪರಾಗ್ ಅವರ 48 ರನ್ಗಳ ಸ್ಕೋರ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 144 ರನ್ ಕಲೆಹಾಕಲಷ್ಟೇ ಶಕ್ತವಾಗಿತ್ತು.
145 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ಹಂಗಾಮಿ ನಾಯಕ ಸ್ಯಾಮ್ ಕರ್ರಾನ್ ಅವರ ಅಮೋಘ ಅರ್ಧಶತಕದ ಸಾಹಸದಿಂದ 18.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
A successful outing in Guwahati thanks to a successful chase from the Punjab Kings ❤️
Captain Sam Curran remains unbeaten to complete a 5-wicket win 👏👏
Scorecard ▶️ https://t.co/IKSsmcpSsa#TATAIPL | #RRvPBKS pic.twitter.com/MArpGY4ELY
— IndianPremierLeague (@IPL) May 15, 2024
ಸ್ಯಾಮ್ ಕರನ್, 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಮೇತ ಅಜೇಯ 63 ರನ್ ಬಾರಿಸಿದರೆ, ಜಿತೇಶ್ ಶರ್ಮಾ 20 ಎಸೆತಗಳಲ್ಲಿ 2 ಸಿಕ್ಸರ್ಗಳ ಮೂಲಕ 22 ರನ್ ಗಳಿಸಿದರು. ಇನ್ನು ಅಶುತೋಷ್ ಶರ್ಮಾ 11 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 17 ರನ್ ಗಳಿಸಿದರು.
ಬೌಲಿಂಗ್ನಲ್ಲಿ ರಾಜಸ್ಥಾನ ಪರ ಅವೇಶ್ ಖಾನ್ 28 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಯಜುವೇಂದ್ರ ಚಹಾಲ್ 31 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದರು.
