ಆರ್ಸಿಬಿ ಪರ ವಿರಾಟ್ ಕೊಹ್ಲಿ ಐಪಿಎಲ್ನ 8ನೇ ಶತಕ ಹಾಗೂ ಸವಾಲಿನ ಮೊತ್ತ ಗಳಿಸಿದ ಹೊರತಾಗಿಯೂ, ಕಳಪೆ ಬೌಲಿಂಗ್ ಪ್ರದರ್ಶನದಿಂದ ಮತ್ತೆ ಮುಖಭಂಗ ಅನುಭವಿಸಿದೆ.
ಐಪಿಎಲ್ನ 19ನೇ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ (ಆರ್ಆರ್) ತಂಡದ ವಿರುದ್ಧ ಪ್ರವಾಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳ ಸೋಲು ಕಂಡಿದೆ.
184 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರ ಅಮೋಘ ಶತಕ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ನೆರವಿನಿಂದ 19.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
A SIX TO REACH 100 IN HIS 100TH IPL MATCH – JOS BUTTLER THE HERO. 🔥pic.twitter.com/stcUviaWTg
— Mufaddal Vohra (@mufaddal_vohra) April 6, 2024
ಇನ್ನಿಂಗ್ಸ್ ಆರಂಭಿಸಿದಾಗ ಯಶಸ್ವಿ ಜೈಸ್ವಾಲ್(0)ವಿಕೆಟನ್ನು ಬೇಗನೆ ಕಳೆದುಕೊಂಡರೂ ಕೂಡ ರಾಜಸ್ಥಾನದ ಪರ 2ನೇ ವಿಕೆಟ್ಗೆ 148 ರನ್ ಗಳಿಸಿದ ಬಟ್ಲರ್ ಹಾಗೂ ಸ್ಯಾಮ್ಪನ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.
ನಾಯಕ ಸ್ಯಾಮ್ಸನ್(69 ರನ್, 42 ಎಸೆತ, 8 ಬೌಂಡರಿ, 2 ಸಿಕ್ಸರ್)ಅರ್ಧಶತಕ ಗಳಿಸಿ ಔಟಾದರು.
ರಿಯಾನ್ ಪರಾಗ್ (4 ರನ್), ಧ್ರುವ್ ಜುರೆಲ್ (2 ರನ್) ಅಲ್ಪ ಮೊತ್ತಕ್ಕೆ ಔಟಾದರು.
4⃣ wins in 4⃣ matches for the @rajasthanroyals 🩷
And with that victory, the move to the 🔝 of the Points Table 😎💪
Scorecard ▶️ https://t.co/IqTifedScU#TATAIPL | #RRvRCB pic.twitter.com/cwrUr2vmJN
— IndianPremierLeague (@IPL) April 6, 2024
ಕೊನೆಯಲ್ಲಿ ಇನ್ನೂ 5 ಎಸೆತ ಇರುವಾಗ 94 ರನ್ ಗಳಿಸಿದ್ದ ಬಟ್ಲರ್ 19.1 ಓವರ್ನಲ್ಲಿ ಸಿಕ್ಸ್ ಬಾರಿಸಿ, ಜಯ ತಂದು ಕೊಟ್ಟದ್ದಲ್ಲದೇ, ಶತಕ ಕೂಡ ಬಾರಿಸಿದರು. ಆಡಿದ 100ನೇ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಬೌಲಿಂಗ್ನಲ್ಲಿ ಆರ್ಸಿಬಿ ತಂಡದ ಪರ ರೀಸ್ ಟೋಪ್ಲೆ 4 ಓವರ್ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು, ಈವರೆಗೆ ಆಡಿದ ನಾಲ್ಕೂ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಆರ್ಸಿಬಿ ತಂಡ ಆಡಿದ 5 ಪಂದ್ಯಗಳಲ್ಲಿ ನಾಲ್ಕು ಸೋಲು ಮತ್ತು ಒಂದು ಗೆಲುವು ಪಡೆದಿದೆ.
