ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 40ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟನ್ಸ್ ತಂಡದ ವಿರುದ್ಧ 4 ರನ್‌ಗಳ ರೋಚಕ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಕ್ಷರ್ ಪಟೇಲ್ ಮತ್ತು ನಾಯಕ ರಿಷಭ್ ಪಂತ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿ, ಗುಜರಾತ್ ಟೈಟನ್ಸ್ ತಂಡಕ್ಕೆ 225 ರನ್‌ಗಳ ಗುರಿ ನೀಡಿತ್ತು.
So which side do you relate to after that fascinating finish- 😁 or 😕?
What a game THAT in Delhi! 👏👏
Scorecard ▶️ https://t.co/48M4ajbLuk#TATAIPL | #DCvGT pic.twitter.com/SuO21S3DWF
— IndianPremierLeague (@IPL) April 24, 2024
ಈ ಗುರಿಯನ್ನು ಬೆನ್ನತ್ತಿದ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಜೈಂಟ್ಸ್, ಕೊನೆಯ ಎಸೆತದವರೆಗೂ ಹೋರಾಟ ನಡೆಸಿದರೂ, ಕೇವಲ 4 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡರು.
ಗುಜರಾತ್‌ಗೆ ಕೊನೆಯ ಓವರ್‌ನಲ್ಲಿ ಗೆಲ್ಲಲು 19 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ಡೆಲ್ಲಿ ಪರ ಬೌಲಿಂಗ್ ಮಾಡಿದ ಮುಕೇಶ್ ಅವರ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಬ್ಯಾಟರ್ ರಶೀದ್ ಖಾನ್ ಗುಜರಾತ್‌ಗೆ ಗೆಲುವಿನ ಆಸೆ ಚಿಗುರಿಸಿದರು. ಆದರೆ ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ರನ್ ಬಾರಿಸಲಾಗದೆ 4 ರನ್‌ನಿಂದ ಸೋಲೊಪ್ಪಿಕೊಂಡರು.
Tristan Stubbs saved 5 runs.
Delhi Capitals won by 4 runs. pic.twitter.com/IeQCezlmS9
— Mufaddal Vohra (@mufaddal_vohra) April 24, 2024
18.2 ನೇ ಓವರ್ ವೇಳೆ ರಶೀದ್ ಖಾನ್ ಬಾರಿಸಿದ ಸಿಕ್ಸರ್ ಹೊಡೆತವನ್ನು ಬೌಂಡರಿ ಲೈನ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ ಅದ್ಬುತವಾಗಿ ಫೀಲ್ಡಿಂಗ್ ಮಾಡಿ, ತಡೆದಿದ್ದೇ, ಕೊನೆಯ ಓವರ್‌ನಲ್ಲಿ ಗುಜರಾತ್ ತಂಡಕ್ಕೆ ಮುಳುವಾಯಿತು.
225 ರನ್‌ಗಳ ಸ್ಕೋರ್ ಅನ್ನು ತಲುಪಲು ವಿಫಲವಾದ ಗುಜರಾತ್, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತು.
ಗುಜರಾತ್ ಪರವಾಗಿ ಡೇವಿಡ್ ಮಿಲ್ಲರ್ ಒಂದು ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರಾದರೂ ಅನಿವಾರ್ಯವಾದ ಹೊಸ್ತಿಲಲ್ಲಿ ಕ್ಯಾಚ್ ನೀಡಿ, ಔಟಾದರು. ಮಿಲ್ಲರ್ 23 ಎಸೆತಗಳಲ್ಲಿ 55 ರನ್ ಗಳಿಸಿದರು. ಉಳಿದಂತೆ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ 39 ಎಸೆತಗಳಲ್ಲಿ 65 ರನ್ ಗಳಿಸಿದರು. ಉಳಿದಂತೆ ರಶೀದ್ ಖಾನ್ 21, ವೃದ್ಧಿಮಾನ್ ಸಹಾ 39 ರನ್ ಗಳಿಸಿದರು.
Saans toh len de be 🔥🥵 pic.twitter.com/FEgIUT7NRd
— Delhi Capitals (@DelhiCapitals) April 24, 2024
ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಬೌಲಿಂಗ್‌ನಲ್ಲಿ ರಾಝಿಕ್ ಸಲಾಂ ಮೂರು ವಿಕೆಟ್ ಪಡೆದು ಮಿಂಚಿದರೆ, ಕುಲ್‌ದೀಪ್ ಯಾದವ್ ಎರಡು ವಿಕೆಟ್ ಗಳಿಸಿದರು. ಉಳಿದಂತೆ ಅಕ್ಷರ್ ಪಟೇಲ್, ನೋರ್ಜೆ ಹಾಗೂ ಮುಕೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಗಳಿಸಿದರು.
