ಐಪಿಎಲ್ ಜನಪ್ರಿಯತೆ | ಮನರಂಜನೆ, ಬಹುಕೋಟಿ ಆದಾಯ ಹಾಗೂ ಕರಾಳ ಮುಖ

Date:

Advertisements
ಟಿ20 ಬಂದ ಮೇಲಂತೂ ಅಭಿಮಾನಿಗಳು ಮತ್ತಷ್ಟು ರೋಮಾಂಚಿತರಾದರು. ಇವೆಲ್ಲದರ ನಂತರ ಐಪಿಎಲ್ ಶುರುವಾದಾಗ ಕ್ರಿಕೆಟ್ ಮಗದಷ್ಟು ವಾಣಿಜ್ಯಮಯವಾಯಿತು. ಸಾವಿರ, ಲಕ್ಷ ಆದಾಯ ಗಳಿಸುತ್ತಿದ್ದ ಆಟಗಾರರು ಹಲವು ಕೋಟಿ ರೂ.ಗಳ ಒಡೆಯರಾದರು. ಸಿನಿಮಾ ನಟರಿಗೆ, ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ, ಮಾಧ್ಯಮಗಳಿಗೆ ಹಣ ಗಳಿಕೆಯ ಉದ್ಯಮವಾಗಿ ಮಾರ್ಪಾಡಾಯಿತು. ಐಪಿಎಲ್‌ ಸಂಸ್ಥೆ ಕಳೆದ ಆವೃತ್ತಿಯಲ್ಲಿ ಗಳಿಸಿದ ಲಾಭ ಉತ್ತರಾಖಂಡ ರಾಜ್ಯದ 2 ವರ್ಷದ ಬಜೆಟ್‌ನಷ್ಟು ಹಣವಾಗಿದೆ. ಈಶಾನ್ಯದ ಒಟ್ಟು 7 ರಾಜ್ಯಗಳ ಒಟ್ಟು ಬಜೆಟ್‌ ಸೇರಿಸಿದರೆ ಐಪಿಎಲ್‌ನ ಒಂದು ವರ್ಷದ ಲಾಭಕ್ಕೆ ಸಮನಾಗುತ್ತದೆ. ಸಾವಿರಾರು ಕೋಟಿ ಆದಾಯ ಗಳಿಸುತ್ತಿದ್ದರೂ ಐಪಿಎಲ್‌ ಆಗಲಿ ಅದರ ಮಾತೃಸಂಸ್ಥೆ ಬಿಸಿಸಿಐ ಆಗಲಿ ಒಂದಿಷ್ಟು ಆದಾಯ ತೆರಿಗೆಯನ್ನು ಪಾವತಿಸುತ್ತಿಲ್ಲ.

ಮುಂದಿನ ವರ್ಷ ಮಾರ್ಚ್ 14ರಂದು ಆರಂಭಗೊಳ್ಳಲಿರುವ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಗೆ ಹರಾಜು ಪ್ರಕ್ರಿಯೆ ಅಂತಿಮಗೊಂಡಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 10 ಪ್ರಾಂಚೈಸಿಗಳು ಬರೋಬ್ಬರಿ 639.15 ಕೋಟಿ ರೂ. ವೆಚ್ಚ ಮಾಡಿ 62 ವಿದೇಶಿ ಆಟಗಾರರನ್ನು ಒಳಗೊಂಡು 182 ಆಟಗಾರರನ್ನು ಖರೀದಿಸಿವೆ. ಶ್ರೇಯಸ್‌ ಅಯ್ಯರ್, ರಿಷಬ್‌ ಪಂತ್‌, ವೆಂಕಟೇಶ್ ಅಯ್ಯರ್‌, ಕೆ ಎಲ್‌ ರಾಹುಲ್, ಜಾಸ್‌ ಬಟ್ಲರ್‌, ಟ್ರೆಂಟ್‌ ಬೋಲ್ಟ್‌ ಒಳಗೊಂಡ ಕೆಲವು ಸ್ಟಾರ್‌ ಆಟಗಾರರನ್ನು ಬಹು ಕೋಟಿ ನೀಡಿ ಖರೀದಿಸಲಾಗಿದೆ. ಟೆಸ್ಟ್‌ ಹಾಗೂ ದೇಶೀಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಒಂದಷ್ಟು ಆಟಗಾರರನ್ನು ಕಡೆಗಣಿಸಲಾಗಿದೆ. 2024ರ ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್ ಸಂಸ್ಥೆ ಜಾಹೀರಾತು ಹಾಗೂ ಮಾಧ್ಯಮ ಪ್ರಸಾರದ ಹಕ್ಕುಗಳಿಂದ 16.4 ಬಿಲಿಯನ್ ಡಾಲರ್ (1.35 ಲಕ್ಷ ಕೋಟಿ ರೂ.) ಲಾಭ ಗಳಿಸಿತ್ತು. ಈ ಹಣ ಐಪಿಎಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಲಾಭವಾಗಿತ್ತು.

ಐಪಿಎಲ್‌ ಸಂಸ್ಥೆ ಕಳೆದ ಆವೃತ್ತಿಯಲ್ಲಿ ಗಳಿಸಿದ ಲಾಭ ಉತ್ತರಾಖಂಡ ರಾಜ್ಯದ 2 ವರ್ಷದ ಬಜೆಟ್‌ನಷ್ಟು ಹಣವಾಗಿದೆ. ಈಶಾನ್ಯದ ಒಟ್ಟು 7 ರಾಜ್ಯಗಳ ಒಟ್ಟು ಬಜೆಟ್‌ ಸೇರಿಸಿದರೆ ಐಪಿಎಲ್‌ನ ಒಂದು ವರ್ಷದ ಲಾಭಕ್ಕೆ ಸಮನಾಗುತ್ತದೆ. ಸಾವಿರಾರು ಕೋಟಿ ಆದಾಯ ಗಳಿಸುತ್ತಿದ್ದರೂ ಐಪಿಎಲ್‌ ಆಗಲಿ ಅದರ ಮಾತೃಸಂಸ್ಥೆ ಬಿಸಿಸಿಐ ಆಗಲಿ ಒಂದಿಷ್ಟು ಆದಾಯ ತೆರಿಗೆಯನ್ನು ಪಾವತಿಸುತ್ತಿಲ್ಲ. ಜಿಎಸ್‌ಟಿ ರೂಪದಲ್ಲಿ ಒಂದಿಷ್ಟು(ಒಂದೆರಡು ಸಾವಿರ ಕೋಟಿ) ಮಾತ್ರ ಪಾವತಿಸುತ್ತಿದೆ. ಬಿಸಿಸಿಐ ಶುರುವಾದ ದಿನಗಳಲ್ಲಿ ಲಾಭದಾಯಕ ಸಂಸ್ಥೆಯಾಗಿರಲಿಲ್ಲ. ಕ್ರಿಕೆಟ್‌ ಜನಪ್ರಿಯತೆಯೂ ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ಆದ ಕಾರಣ ಬಿಸಿಸಿಐ ತಾನೊಂದು ದತ್ತಿ ಸಂಸ್ಥೆ ಎಂದು ನೋಂದಣಿ ಮಾಡಿಸಿತ್ತು. ಭಾರತದ ಕಾನೂನಿನಲ್ಲಿ ದತ್ತಿ ಸಂಸ್ಥೆಗಳು ಯಾವುದೇ ತೆರಿಗೆಯನ್ನು ಪಾವತಿಸುವಂತಿಲ್ಲ. ಇತ್ತೀಚಿಗೆ ಆದಾಯ ತೆರಿಗೆ ಮೇಲ್ಮನವಿ ಮಂಡಳಿಗೆ(ಐಟಿಎಟಿ) ತಾನು ಚಾರಿಟಿ ಸಂಸ್ಥೆಯಾಗಿದ್ದು, ತೆರಿಗೆ ಪಾವತಿಸುವುದಿಲ್ಲ ಎಂದು ಅರ್ಜಿ ಸಲ್ಲಿಸಿತ್ತು. ಸಾವಿರಾರು ಕೋಟಿ ವರಮಾನ ಪಡೆಯುವ ಉದ್ಯಮವಾಗಿ ಬೆಳೆದರೂ ತಾನೊಂದು ಲಾಭದಾಯಕ ಸಂಸ್ಥೆ ಎಂದು ಬಿಸಿಸಿಐ ಅಥವಾ ಐಪಿಎಲ್ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸದಿರುವುದು ನಿಜವಾಗಿಯೂ ಅಪಮಾನಕರ ಸಂಗತಿ.

IPL Betting 1

2008ರಲ್ಲಿ ಲಲಿತ್‌ ಮೋದಿ ಆರಂಭಿಸಿದ್ದ ಐಪಿಎಲ್ ಈಗ ಕಾರ್ಪೊರೇಟ್ ಸಂಸ್ಥೆಗಳಿಗೆ ಅತ್ಯಂತ ಪ್ರಿಯವಾದ ಆಟವಾದರೆ, ಬೆಟ್ಟಿಂಗ್‌ ನಡೆಸುವವರನ್ನು ಒಳಗೊಂಡು ಬಹುತೇಕ ಎಲ್ಲರನ್ನೂ ಆಕರ್ಷಿಸುವ ಪ್ರತಿ ವರ್ಷ ಆದಾಯವನ್ನು ದ್ವಿಗುಣಗಳಿಸುವ ಕ್ರೀಡೆಯಾಗಿ ಮಾರ್ಪಟ್ಟಿದೆ. ವರ್ಷದಿಂದ ವರ್ಷಕ್ಕೆ ಐಪಿಎಲ್‌ನ ಆದಾಯ ಮಟ್ಟ ಏರಿಕೆಯಾಗುತ್ತಿರುವುದರಿಂದ ಜಗತ್ತಿನ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಐಪಿಎಲ್‌ ಎಷ್ಟು ಜನಪ್ರಿಯತೆ ಪಡೆದಿದೆಯಂದರೆ ಕೋವಿಡ್‌ ಸಂದರ್ಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಕ್ರಿಕೆಟ್ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟಿನಿಂದ ಪರದಾಡಿದ್ದವು. ಆದರೆ, ಬಿಸಿಸಿಐಗೆ ಮಾತ್ರ ನಷ್ಟವುಂಟಾಗಿರಲಿಲ್ಲ.

Advertisements

1983ರಲ್ಲಿ ಕಪಿಲ್ ದೇವ್ ನೇತೃತ್ವದ ತಂಡ ಮೊಟ್ಟ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಏಕದಿನ ವಿಶ್ವಕಪ್ ಜಯಿಸಿದ ನಂತರ ಭಾರತದಲ್ಲಿ ಕ್ರಿಕೆಟ್‌ ಚಹರೆಯೇ ಬದಲಾಯಿತು. ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡರು. ಕ್ರಿಕೆಟ್ ಪ್ರಭಾವ ಬಿರುಗಾಳಿಯಂತೆ ದೇಶಾದ್ಯಂತ ಹರಡಿತು. ಎಲ್ಲರ ಮನೆಯಲ್ಲಿ ಟಿವಿ, ಕೇಬಲ್‌ ಬಂದ ಮೇಲಂತೂ ಕ್ರಿಕೆಟ್ ಮತ್ತಷ್ಟು ರಂಗಾಯಿತು. ಹಾಗೆಯೇ 1992ರಲ್ಲಿ ಜಾಗತೀಕರಣ ಕೂಡ ಕ್ರಿಕೆಟ್‌ಗೆ ವರದಾನವಾಯಿತು. ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಕಾಲಿಟ್ಟವು. ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಕ್ರಿಕೆಟ್ ದೊಡ್ಡ ವೇದಿಕೆಯಾಯಿತು.

ಈ ಸುದ್ದಿ ಓದಿದ್ದೀರಾ? ಡೆಲ್ಲಿ ಕ್ಯಾಪಿಟಲ್ಸ್‌ ಮುನ್ನಡೆಸುವ ಆಟಗಾರರ ಹೆಸರು ಘೋಷಣೆ

ಉಪಗ್ರಹ ತಂತ್ರಜ್ಞಾನದಲ್ಲಾದ ಬೆಳವಣಿಗೆಯಿಂದ ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿತು. ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೊಕ್ ತನ್ನ ಸ್ಟಾರ್ ವಾಹಿನಿಗಳ ಮೂಲಕ ಭಾರತಕ್ಕೆ ಕಾಲಿಟ್ಟ. ಕ್ರಿಕೆಟ್‌ ಮಾಧ್ಯಮದ ಹಕ್ಕುಗಳಿಗೆ ದೂರದರ್ಶನಕ್ಕೆ ಪೈಪೋಟಿ ಎದುರಾಯಿತು. ಕೇವಲ ಕ್ರಿಕೆಟ್‌ಗಾಗಿಯೇ ಹತ್ತಾರು ಚಾನೆಲ್‌ಗಳು ಹುಟ್ಟಿಕೊಂಡು ದಿನವಿಡಿ ವಿಶ್ವದ ಮೂಲೆಮೂಲೆಯಲ್ಲಿ ನಡೆಯುವ ಕ್ರಿಕೆಟ್‌ಅನ್ನು ಪ್ರಸಾರ ಮಾಡಲಾಗುತ್ತಿದೆ. ಸಾಮಾಜಿಕ ಮಾಧ್ಯಮ ಮತ್ತಷ್ಟು ಜನಪ್ರಿಯವಾಗುತ್ತಿದ್ದಂತೆ ಪತ್ರಿಕೆ, ಟಿವಿ ಚಾನಲ್‌ಗಳ ಜೊತೆಗೆ ನೂರಾರು ವೆಬ್‌ಸೈಟ್‌ಗಳು, ಯೂಟ್ಯೂಬ್‌ ಚಾನಲ್‌ಗಳು ಕೂಡ ಹುಟ್ಟಿಕೊಂಡಿವೆ.

1990, 2000 ದಶಕದಲ್ಲಿ ಸಚಿನ್‌ ಯುವಕರಿಗೆ ಆರಾಧ್ಯ ದೈವವಾದರೆ, 2010ರ ದಶಕದ ನಂತರ ಧೋನಿ, ವಿರಾಟ್ ಕೊಹ್ಲಿ ಜನಪ್ರಿಯ ಸ್ಟಾರ್‌ ಕ್ರಿಕೆಟಿಗರಾದರು. ಬೌಂಡರಿಯಾಚೆ ರನ್‌ಗಳ ಹೊಳೆ ಹರಿಸುವ, ಮೋಡಿಯ ರೀತಿಯಲ್ಲಿ ವಿಕೆಟ್ ಉರುಳಿಸುವ, ಕ್ಷಣಕ್ಷಣಕ್ಕೂ ರೋಚಕ ಅನುಭವವನ್ನು ಕಟ್ಟಿಕೊಡುವ ಕ್ರಿಕೆಟ್‌ಗೆ ಯುವಕರು ಮಾರು ಹೋಗಿ ತನ್ನ ನೆಚ್ಚಿನ ಕ್ರೀಡೆಯನ್ನಾಗಿಸಿಕೊಂಡರು. ನಗರಗಳ ಗಲ್ಲಿಗಳಲ್ಲಿ ಮಾತ್ರವಲ್ಲದೆ, ಕುಗ್ರಾಮಗಳಲ್ಲೂ ಜನಪ್ರಿಯವಾಯಿತು.

ಟಿ20 ಬಂದ ಮೇಲಂತೂ ಅಭಿಮಾನಿಗಳು ಮತ್ತಷ್ಟು ರೋಮಾಂಚಿತರಾದರು. ಇವೆಲ್ಲದರ ನಂತರ ಐಪಿಎಲ್ ಶುರುವಾದಾಗ ಕ್ರಿಕೆಟ್ ಮಗದಷ್ಟು ವಾಣಿಜ್ಯಮಯವಾಯಿತು. ಸಾವಿರ, ಲಕ್ಷ ಆದಾಯ ಗಳಿಸುತ್ತಿದ್ದ ಆಟಗಾರರು ಹಲವು ಕೋಟಿ ರೂ.ಗಳ ಒಡೆಯರಾದರು. ಸಿನಿಮಾ ನಟರಿಗೆ, ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ, ಮಾಧ್ಯಮಗಳಿಗೆ ಹಣ ಗಳಿಕೆಯ ಉದ್ಯಮವಾಗಿ ಮಾರ್ಪಾಡಾಯಿತು. ಹೆಚ್ಚು ಜನಪ್ರಿಯವಾಗುತ್ತಾ ಹೋದಂತೆ ಎಲ್ಲ ವಲಯಗಳಂತೆ ಕ್ರಿಕೆಟ್‌ನಲ್ಲಿಯೂ ಕರಾಳ ದಂಧೆಗಳು ಶುರುವಾದವು. ಮ್ಯಾಚ್‌ ಫಿಕ್ಸಿಂಗ್‌ ಜೊತೆಗೆ ಬೆಟ್ಟಿಂಗ್‌ ಜಾಲವು ಹೆಮ್ಮರವಾಗಿ ಬೆಳೆಯಿತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್‌, ಫಿಕ್ಸಿಂಗ್‌ ಹೆಸರೇ ಕೇಳದಿದ್ದ ಜನರು ಸಭ್ಯ ಕ್ರೀಡೆಯಲ್ಲಿಯೂ ಭ್ರಷ್ಟಾಚಾರವನ್ನು ನೋಡಿ ರೋಸಿ ಹೋದರು.

ಆಟಗಾರರನ್ನು ಬಿಡದ ಮ್ಯಾಚ್‌ ಫಿಕ್ಸಿಂಗ್‌, ಬೆಟ್ಟಿಂಗ್‌

ಸ್ವತಃ ತಂಡಗಳ ಆಟಗಾರರೆ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದರು. 2000ರಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಹರಿಣಗಳ ತಂಡದ ನಾಯಕ ಹ್ಯಾನ್ಸಿ ಕ್ರೊನಿಯೆ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿ ನಿಷೇಧ ಶಿಕ್ಷೆಯನ್ನು ಅನುಭವಿಸಿದರು. ನಂತರದಲ್ಲಿ ಭಾರತದ ಖ್ಯಾತ ಆಟಗಾರರಾದ ಮೊಹಮ್ಮದ್ ಅಜರುದ್ದೀನ್‌, ಮನೋಜ್‌ ಪ್ರಭಾಕರ್, ಅಜಯ್‌ ಜಡೇಜಾ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿಕೊಂಡು ಕ್ರಿಕೆಟನ್ನು ಮತ್ತಷ್ಟು ಅಧ್ವಾನಗೊಳಿಸಿದರು. ನಂತರದ ವರ್ಷಗಳಲ್ಲಿ ಶೇನ್‌ ವಾರ್ನ್‌, ಮಾರ್ಕ್ ವಾ, ಶ್ರೀಶಾಂತ್‌ ಸೇರಿದಂತೆ ಹಲವು ಆಟಗಾರರು ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಹಣ ಗಳಿಸಲು ಶುರು ಮಾಡಿದರು. ಬೇರೊಂದು ದೇಶದಲ್ಲಿ ಕುಳಿತು ಫೋನ್‌ ಮೂಲಕ ಕ್ರಿಕೆಟ್ ಅಭಿಮಾನಿಗಳಿಂದ ಬಾಜಿ ಕಟ್ಟಿಸುವ ಮಾಫಿಯಾ ಕಿಂಗ್‌ಪಿನ್‌ಗಳು, ಇನ್ನೊಂದು ಹಾದಿಯಿಂದ ತಮಗೆ ಲಾಭ ಬರುವಂತಹ ಫಲಿತಾಂಶಕ್ಕಾಗಿ ಕ್ರಿಕೆಟ್ ಆಟಗಾರರನ್ನು ಬುಕ್ಕಿಗಳ ಮೂಲಕ ತಮ್ಮ ಕಡೆಗೆ ಸೆಳೆದುಕೊಳ್ಳುವ ತಂತ್ರ ಅನುಸರಿಸಿದರು.

IPL Betting 1 1

2013ರಲ್ಲಿ ಐಪಿಎಲ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಅಂದಿನ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಸಿಕ್ಕಿಬಿದ್ದಿದ್ದರು. ಎನ್‌ ಶ್ರೀನಿವಾಸನ್‌ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಗುರುನಾಥ್ ಮೇಯಪ್ಪನ್ ಪ್ರಮುಖ ಹುದ್ದೆಯಲ್ಲಿದ್ದರು. ಇದೇ ಹಗರಣದಲ್ಲಿ ಎಸ್. ಶ್ರೀಶಾಂತ್, ಅಜಿತ್ ಚಾಂಡೆಲಾ ಮತ್ತು ಅಂಕಿತ್ ಚವ್ಹಾಣ್ ಕೂಡ ಸಿಕ್ಕಿ ಬಿದ್ದಿದ್ದರು. ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಭಾಗಿಯಾದ ಕಾರಣದಿಂದಾಗಿ ಸಿಎಸ್‌ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಆ ನಂತರದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌ ಎಸ್‌ ಲೋಧಾ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ನೀಡಿರುವ ನಿಯಮಗಳಲ್ಲಿ ಬೆಟ್ಟಿಂಗ್ ಕಾನೂನುಬದ್ಧ ಮಾಡುವುದು ಕೂಡ ಪ್ರಮುಖವಾಗಿತ್ತು.

ಬಿಸಿಸಿಐ ಮತ್ತು ಐಸಿಸಿಯಲ್ಲಿ ಭ್ರಷ್ಟಾಚಾರ ತಡೆ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಸಿಕ್ಕಿಬಿದ್ದ ಆಟಗಾರರ ಬಂಧನ ಮತ್ತು ತನಿಖೆಗಳು ಪೊಲೀಸ್ ವ್ಯಾಪ್ತಿಗೆ ಬರುತ್ತವೆ. ಆದರೆ, ಶಿಕ್ಷೆ ನೀಡುವ ಪ್ರತ್ಯೇಕವಾದ ಕಾನೂನು ಇಲ್ಲಿಲ್ಲ. ಈ ಲೋಪವನ್ನು ಬಳಸಿಕೊಂಡು ಆರೋಪಿಗಳು ತಪ್ಪಿಸಿಕೊಳ್ಳುತ್ತಾರೆ.

ಬೆಟ್ಟಿಂಗ್‌ ದಂಧೆಯನ್ನು ತಡೆಯಲು ಅಲ್ಲೊಂದು ಇಲ್ಲೊಂದು ದಾಳಿಗಳು ನಡೆದರೂ ಸಂಪೂರ್ಣವಾಗಿ ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ. ಶ್ರೀಮಂತರ ಮಟ್ಟದಲ್ಲಿದ್ದ ಬೆಟ್ಟಿಂಗ್‌ ದಂಧೆ ಬಡವರ ಜೇಬಿಗೂ ಕೈಹಾಕಿದೆ. ಕ್ರಿಕೆಟ್‌ಗಾಗಿ ಆನ್‌ಲೈನ್‌ ಗೇಮಿಂಗ್‌ಗಳು ಹುಟ್ಟಿಕೊಂಡವು. ಈ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳು ಕ್ರಿಕೆಟ್‌ನ ಹೆಸರಿನಲ್ಲಿ ಬಡವರ ಉಳಿತಾಯದ ಹಣವನ್ನು ದೋಚುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರ ಮಾತ್ರವಲ್ಲ ಹಲವು ರಾಜ್ಯ ಸರ್ಕಾರಗಳು ಕುಮ್ಮಕ್ಕು ನೀಡುತ್ತಿವೆ. ಈ ಪಿಡುಗು ಬೇರೆ ಬೇರೆ ರೂಪ ಪಡೆದು ಅಟ್ಟಹಾಸ ಮೆರೆಯುತ್ತಿದೆ. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಪಾಲಾದವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕ್ರಿಕೆಟ್ ಐಪಿಎಲ್‌ನಲ್ಲಿ ಜನಪ್ರಿಯವಾದ ಮೇಲಂತೂ ಬಾಜಿ ಲೋಕವು ತನ್ನ ಕಬಂಧಬಾಹುಗಳನ್ನು ಹಲವು ಕಡೆ ವಿಸ್ತರಿಸಿದೆ.

ಬೆಟ್ಟಿಂಗ್‌ನಿಂದ ಬೀದಿ ಪಾಲಾಗುತ್ತಿರುವ ಬಡವರು

ಶಾಲಾ ವಿದ್ಯಾರ್ಥಿಗಳಿಂದ ಹಿರಿಯ ನಾಗರಿಕರವರೆಗೂ ಬೆಟ್ಟಿಂಗ್ ಮಾರುಕಟ್ಟೆ ವಿಸ್ತರಣೆಯಾಗಿದೆ. ಐಪಿಎಲ್‌ ಬಂದ ನಂತರ ಬೆಟ್ಟಿಂಗ್‌ ಸಾಮಾನ್ಯರ ಜೇಬಿಗೂ ಕೈಹಾಕಿದೆ. ಎಲ್ಲ ರಾಜ್ಯಗಳು ಮಾತ್ರವಲ್ಲದೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಬೆಟ್ಟಿಂಗ್‌ಅನ್ನು ನಿಯಂತ್ರಿಸುವ ಏಜೆಂಟರಿದ್ದಾರೆ. ದುಪ್ಪಟ್ಟು ಹಣದ ಆಮಿಷವೊಡ್ಡುವ ಈ ಪಾತಕಿಗಳು ಸಾಮಾನ್ಯರನ್ನು ಬೆಟ್ಟಿಂಗ್‌ ಜಾಲಕ್ಕೆ ಬೀಳಿಸಿ ಅವರ ಹಣ ಕಸಿದುಕೊಳ್ಳುತ್ತಿದ್ದಾರೆ. ದಿನಗೂಲಿ ಮಾಡುವವರು, ಮಧ್ಯಮ ವರ್ಗದವರು ಅಷ್ಟೆ ಯಾಕೆ ಹಳ್ಳಿಗಳಲ್ಲಿನ ರೈತರು ಕೂಡ ಈ ದುಷ್ಟ ಪಾಶಕ್ಕೆ ಬಿದ್ದು, ತಾವು ಕೂಡಿಟ್ಟ, ದುಡಿಯುವ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮೊದಲೆಲ್ಲ ಪಂದ್ಯಗಳ ಮೇಲೆ ಬಾಜಿ ನಡೆಯುತ್ತಿತ್ತು ಈಗ, ಓವರ್‌, ಪ್ರತಿ ಎಸೆತದ ಮೇಲೂ ಬೆಟ್ಟಿಂಗ್‌ ನಡೆಸಲಾಗುತ್ತದೆ. ಐಪಿಎಲ್‌ ಶುರುವಾದ ಮುನ್ನವೇ ಇದಕ್ಕಾಗಿ ವಾಟ್ಸಾಪ್‌, ಟೆಲಿಗ್ರಾಮ್‌ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಟ್ಟಿಂಗ್‌ ದಂಧೆ ನಡೆಯುತ್ತಿದೆ.  

 

IPL Betting 2

ಇದರಿಂದಾಗಬಹುದಾದ ಅನಾಹುತ ತಡೆಗೆ ಕಾನೂನಿನ ಕಟ್ಟುನಿಟ್ಟಿನ ಚೌಕಟ್ಟು ಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಬೇಕು. ಅವುಗಳನ್ನು ಕಾನೂನಿನಡಿಯಲ್ಲಿ ತರಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕಾನೂನು ತಜ್ಞರು ಹಲವು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ಅಧಿಕಾರದಲ್ಲಿರುವ ದೊಡ್ಡ ಕುಳಗಳೆ ಕ್ರಿಕೆಟ್‌ನ ಚುಕ್ಕಾಣಿ ಹಿಡಿದಿರುವ ಕಾರಣ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಣ ಹಾಗೂ ಅಧಿಕಾರ ಬಲದಲ್ಲಿ ಮುಂಚೂಣಿಯಲ್ಲಿರುವ ಬಿಸಿಸಿಐ ಈ ಬಗ್ಗೆ ಎಚ್ಚೆತ್ತುಕೊಂಡು ಬೆಟ್ಟಿಂಗ್‌, ಮ್ಯಾಚ್‌ ಫಿಕ್ಸಿಂಗ್‌ನಂಥ ಅನಿಷ್ಟಗಳನ್ನು ತೊಡೆದು ಹಾಕಿದರೆ ಕ್ರಿಕೆಟ್ ಕಳಂಕರಹಿತ ಕ್ರೀಡೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ರಾರಾಜಿಸಬಹುದು.  

ಹಲವು ದೇಶಗಳಲ್ಲಿ ಬೆಟ್ಟಿಂಗ್‌ ಕಾನೂನುಬದ್ಧ

ಜಗತ್ತಿನ ಹಲವು ದೇಶಗಳಲ್ಲಿ ದೊಡ್ಡ ಉದ್ಯಮ ಕ್ರೀಡೆಗಳಲ್ಲಿ ಬೆಟ್ಟಿಂಗ್ ನಡೆಸಲು ಜಗತ್ತಿನ ಹಲವು ರಾಷ್ಟ್ರಗಳು ಅವಕಾಶಮಾಡಿಕೊಟ್ಟಿವೆ. ಬೆಟ್ಟಿಂಗ್ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಸಾಕಷ್ಟು ಉದ್ಯೋಗ ಸೃಷ್ಟಿಸಿವೆ. ಕೆಲವು ರಾಷ್ಟ್ರಗಳಲ್ಲಿ ಎಲ್ಲ ಕ್ರೀಡೆಗಳನ್ನೂ ಬೆಟ್ಟಿಂಗ್‌ನ ವ್ಯಾಪ್ತಿಗೆ ತರಲಾಗಿದೆ. ಇನ್ನೂ ಕೆಲವು ರಾಷ್ಟ್ರಗಳು ಒಂದೆರಡು ಕ್ರೀಡೆಗಳಲ್ಲಿ ಮಾತ್ರ ಬೆಟ್ಟಿಂಗ್‌ಗೆ ಅವಕಾಶ ನೀಡಿವೆ.

ಇಂಗ್ಲೆಂಡ್ ಮತ್ತು ವೇಲ್ಸ್‌ ಸಂಸ್ಥೆ ಕ್ರಿಕೆಟ್‌ಗೆಂದೇ ಪ್ರತ್ಯೇಕ ಬೆಟ್ಟಂಗ್ ನಿಯಮಗಳನ್ನು ಹೊಂದಿವೆ. ಚೀನಾದಲ್ಲಿ ಕ್ರೀಡಾ ಬೆಟ್ಟಿಂಗ್‌ಗೆ ಬಹಳ ಹಿಂದಿನಿಂದಲೂ ಅವಕಾಶವಿದೆ. ಕೆಲವು ಕ್ರೀಡೆಗಳ ಮೇಲೆ ಬೆಟ್ಟಿಂಗ್ ನಡೆಯುತ್ತದೆ. ಆದರೆ ವಿದೇಶಗಳಲ್ಲಿನ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವುದು ಹೆಚ್ಚು ಜನಪ್ರಿಯತೆ ಪಡೆದಿದೆ. ಚೀನಾದಲ್ಲಿ ಬೆಟ್ಟಿಂಗ್ ಕಂಪನಿಗಳ ಸ್ಥಾಪನೆಗೆ ಅವಕಾಶವಿಲ್ಲ. ಆದರೆ ಬೆಟ್ಟಿಂಗ್ ಬುಕ್ಕಿಂಗ್ ಕಂಪನಿಗಳು ಅಸ್ತಿತ್ವದಲ್ಲಿ ಇವೆ. ಕೆನಡಾದಲ್ಲಿ ಎಲ್ಲ ಕ್ರೀಡೆಗಳ ಮೇಲೆ ಬೆಟ್ಟಿಂಗ್‌ಗೆ ಅವಕಾಶವಿದೆ. ಆಸ್ಟ್ರೇಲಿಯಾದಲ್ಲಿ 1989ರಿಂದ ಬಹುತೇಕ ಎಲ್ಲ ಕ್ರೀಡೆಗಳ ಮೇಲೆ ಬೆಟ್ಟಿಂಗ್‌ಗೆ ಅವಕಾಶವಿದೆ. 2001ರಲ್ಲಿ ಎಲ್ಲ ಕ್ರೀಡೆಗಳಲ್ಲಿ ಬೆಟ್ಟಿಂಗ್‌ಗೆ ಅವಕಾಶ ನೀಡಲಾಯಿತು. ಆದರೆ ಕ್ರಿಕೆಟ್‌ಗೆ ನಿಯಮಗಳನ್ನು ರೂಪಿಸಲಾಗಿಲ್ಲ.

ಶ್ರೀಲಂಕಾದಲ್ಲಿ 2010ರಲ್ಲಿ ಕ್ರೀಡೆಗಳಲ್ಲಿ ಬೆಟ್ಟಂಗ್‌ಗೆ ಅವಕಾಶ ನೀಡಲಾಯಿತು. ಇಲ್ಲಿ ಕುದುರೆ ರೇಸ್ ಮತ್ತು ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಹೆಚ್ಚು ಜನಪ್ರಿಯತೆ ಪಡೆದಿದೆ. ಭಾರತದ ಐಪಿಎಲ್ ಪಂದ್ಯಗಳ ಮೇಲೂ ಬೆಟ್ಟಿಂಗ್ ನಡೆಯುತ್ತದೆ. ದಕ್ಷಿಣ ಆಫ್ರಿಕಾದಲ್ಲಿ 1994ರಿಂದ ಎಲ್ಲ ಕ್ರೀಡೆಗಳ ಮೇಲೆ ಬೆಟ್ಟಿಂಗ್‌ಗೆ ಅವಕಾಶವಿದೆ. ಅರ್ಜೆಂಟೀನಾದಲ್ಲಿ ಕುದುರೆ ರೇಸ್ ಬೆಟ್ಟಿಂಗ್‌ಗೆ ಅವಕಾಶವಿದೆ. ಆದರೆ ಅತ್ಯಂತ ಜನಪ್ರಿಯವಾದ ಫುಟ್‌ಬಾಲ್‌ನಲ್ಲಿ ಬೆಟ್ಟಿಂಗ್‌ಗೆ ನಿಷೇಧವಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X