ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬವಾಗಿರುವ ಐಪಿಎಲ್ 2024ಕ್ಕೆ ವರ್ಣರಂಜಿತ ಚಾಲನೆ ದೊರಕಿದ್ದು, ಇಂದು ಚೆನ್ನೈನ ಎಂ.ಚಿದಂಬರಂ ಅಂಗಳದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯುತ್ತಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳು ಕಾದಾಟ ನಡೆಸುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರೂ ಅನುಜ್ ರಾವತ್-ದಿನೇಶ್ ಕಾರ್ತಿಕ್ ಜೋಡಿ ಉತ್ತಮ ಜೊತೆಯಾಟದ ಪರಿಣಾಮ ಸವಾಲಿನ ಗುರಿ ನೀಡುವಲ್ಲಿ ಸಫಲವಾಯಿತು. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ದಾಖಲಿಸಿತು.
TAKE A BOW, ANUJ RAWAT AND DINESH KARTHIK…!!!
RCB were 78/5 after 11.4 overs – both of them added 95 in just 50 balls with some lusty blows. This is an incredible finish by DK and Anuj, RCB back in the game. 👊👏 pic.twitter.com/VqQljOUusL
— Mufaddal Vohra (@mufaddal_vohra) March 22, 2024
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸುವ ಮೂಲಕ ನಿಗದಿತ ಓವರ್‌ಗಳಲ್ಲಿ ಬೃಹತ್ ಮೊತ್ತ ಕಲೆ ಹಾಕುವ ಸೂಚನೆ ನೀಡಿದ್ದರು. ಮೊದಲ ನಾಲ್ಕು ಓವರ್‌ಗಳಲ್ಲಿ ಉತ್ತಮ ರನ್ ಪೇರಿಸಿದ ಈ ಜೋಡಿ, 4.3 ಓವರ್‌ಗಳಲ್ಲಿ 41 ರನ್ ಕಲೆ ಹಾಕಿತು. ಈ ವೇಳೆ ಚೆನ್ನೈ ಪರವಾಗಿ ದಾಳಿಗಿಳಿದ ಬಾಂಗ್ಲಾದ ಬೌಲರ್ ಮುಸ್ತಫಿಝ್ ರಹ್ಮಾನ್, ಫಾಫ್ ಡು ಪ್ಲೆಸಿಸ್ ಅವರನ್ನು ಔಟ್ ಮಾಡುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ವಿಕೆಟ್ ಒಪ್ಪಿಸುವುದಕ್ಕೂ ಮುನ್ನ 23 ಎಸೆತಗಳನ್ನು ಎದುರಿಸಿದ್ದ ಆರ್‌ಸಿಬಿ ನಾಯಕ 23 ಎಸೆತಗಳಲ್ಲಿ 8 ಭರ್ಜರಿ ಬೌಂಡರಿಗಳ ನೆರವಿನೊಂದಿಗೆ 35 ರನ್ ಗಳಿಸಿದರು.
File this under ‘Comeback > Setback’
Take a bow, you have shown what it means to #PlayForTheBadge 🥹#PlayBold #ನಮ್ಮRCB #IPL2024 #CSKvRCB pic.twitter.com/X2dqVaNlwM
— Royal Challengers Bengaluru (@RCBTweets) March 22, 2024
ಬಳಿಕ ಕ್ರೀಸ್‌ಗೆ ಬಂದ ರಜತ್ ಪಾಟೀದಾರ್ ಹಾಗೂ ಆರ್‌ಸಿಬಿಯ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟಾಗುವ ಮೂಲಕ ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದರು. ರಜತ್ ಪಾಟೀದಾರ್ ಮುಸ್ತಫಿಝ್ ರಹ್ಮಾನ್ ಅವರಿಗೆ ವಿಕೆಟ್ ಒಪ್ಪಿಸಿದರೆ, ಮ್ಯಾಕ್ಸ್‌ವೆಲ್ ದೀಪಕ್ ಚಾಹರ್ ಎಸೆತದಲ್ಲಿ ವಿಕೆಟ್ ಕೀಪರ್ ಎಂ ಎಸ್ ಧೋನಿಗೆ ಕ್ಯಾಚಿತ್ತು, ಪೆವಿಲಿಯನ್‌ಗೆ ಮರಳಿದರು.
Having a field day out there! 💪🏻🦁#CSKvRCB #WhistlePodu #Yellove 🦁💛 pic.twitter.com/ch6fZLgHsT
— Chennai Super Kings (@ChennaiIPL) March 22, 2024
ಆ ಬಳಿಕ ಉತ್ತಮ ಜೊತೆಯಾಟ ನಡೆಸುವ ಭರವಸೆ ಮೂಡಿಸಿದ ವಿರಾಟ್ ಕೊಹ್ಲಿ ಹಾಗೂ ಕ್ಯಾಮರೂನ್ ಗ್ರೀನ್ ಅವರನ್ನು ಕೂಡ ಮುಸ್ತಫಿಝ್ ರಹ್ಮಾನ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 1 ಸಿಕ್ಸ್‌ನ ನೆರವಿನಿಂದ 21 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ 22 ಎಸೆತಗಳಲ್ಲಿ 18 ರನ್(1 ಬೌಂಡರಿ) ಗಳಿಸಿದರು.
ಸಾವಧಾನದ ಆಟವಾಡಿದ ಅನುಜ್ ರಾವತ್-ದಿನೇಶ್ ಕಾರ್ತಿಕ್ ಜೋಡಿ
ಬೆಂಗಳೂರು ತಂಡವು ಮುಸ್ತಫಿಝ್ ರಹ್ಮಾನ್ ಬೌಲಿಂಗ್‌ಗೆ ಕುಸಿದ ಪರಿಣಾಮ 78 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಯಾದ ಎಡಗೈ ಬ್ಯಾಟರ್ ಅನುಜ್ ರಾವತ್ ಹಾಗೂ ದಿನೇಶ್ ಕಾರ್ತಿಕ್ ಜೋಡಿಯು ಉತ್ತಮ ಜೊತೆಯಾಟ ನಡೆಸಿದ ಪರಿಣಾಮ ಚೆನ್ನೈಗೆ 174 ರನ್‌ಗಳ ಸವಾಲಿನ ಗುರಿ ನೀಡುವಲ್ಲಿ ಸಫಲವಾಯಿತು. ಈ ಜೋಡಿಯು 57 ಎಸೆತಗಳಲ್ಲಿ 97 ರನ್‌ಗಳನ್ನು ಕಲೆ ಹಾಕಿತು.
First Over – 0️⃣4️⃣W0️⃣0️⃣W
Second Over – 1️⃣W1️⃣W0️⃣1️⃣ 🦁🔥#CSKvRCB #WhistlePodu #Yellove🦁💛 pic.twitter.com/KfSfd03YDR— Chennai Super Kings (@ChennaiIPL) March 22, 2024
ಆರ್‌ಸಿಬಿ ಪರವಾಗಿ ಕೊನೆಯವರೆಗೂ ಹೋರಾಟ ನಡೆಸಿದ ಅನುಜ್ ರಾವತ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸ್‌ನ ನೆರವಿನಿಂದ 48 ರನ್ ಗಳಿಸಿ, ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ರನೌಟ್ ಆದರು. 26 ಎಸೆತಗಳನ್ನು ಎದುರಿಸಿದ ದಿನೇಶ್ ಕಾರ್ತಿಕ್, 3 ಬೌಂಡರಿ ಹಾಗೂ 2 ಸಿಕ್ಸರ್‌ನ ನೆರವಿನಿಂದ 38 ರನ್ ಗಳಿಸಿ, ಔಟಾಗದೆ ಉಳಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಬೌಲಿಂಗ್‌ನಲ್ಲಿ ಮುಸ್ತಫಿಝ್ ರಹ್ಮಾನ್ 29 ರನ್‌ಗಳಿಗೆ 4 ವಿಕೆಟ್ ಗಳಿಸಿ ಮಿಂಚಿದರೆ, ದೀಪಕ್ ಚಾಹರ್ 37 ರನ್ ನೀಡಿ, ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
Brilliant relay catch 👌
Timber strike 🎯Mustafizur Rahman is making merry & so are @ChennaiIPL 🙌
Head to @JioCinema and @StarSportsIndia to watch the match LIVE
Follow the match ▶️ https://t.co/4j6FaLF15Y #TATAIPL | #CSKvRCB | @ChennaiIPL | @ajinkyarahane88 pic.twitter.com/0GKADcZleM
— IndianPremierLeague (@IPL) March 22, 2024
