ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 34ನೇ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವು, ಕೆ ಎಲ್ ರಾಹುಲ್-ಡಿ ಕಾಕ್ ಶತಕದ ಜೊತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಅವರ ಅದ್ಭುತ ಫಿನಿಶಿಂಗ್ ಆಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿ, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 177 ರನ್ಗಳ ಗುರಿ ನೀಡಿತ್ತು.
This result’s got us flying tonight 😍 pic.twitter.com/SvvjRSthDb
— Lucknow Super Giants (@LucknowIPL) April 19, 2024
ಈ ಗುರಿಯನ್ನು ಬೆನ್ನಟ್ಟಿದ ಕೆ ಎಲ್ ರಾಹುಲ್ ನೇತೃತ್ವದ ತಂಡವು 19 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 180 ರನ್ ದಾಖಲಿಸುವ ಮೂಲಕ ಬಲಿಷ್ಠ ಚೆನ್ನೈ ವಿರುದ್ಧ ಗೆದ್ದು ಬೀಗಿದೆ.
ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್ಗೆ 134 ರನ್ಗಳ ಜೊತೆಯಾಟ ನಡೆಸುವ ಮೂಲಕ ಚೆನ್ನೈ ಬೌಲರ್ಗಳನ್ನು ಕಾಡಿದರು. ಕ್ವಿಂಟನ್ ಡಿಕಾಕ್ ತಾನು ಆಡಿದ 43 ಎಸೆತದಲ್ಲಿ 1 ಸಿಕ್ಸರ್, 5 ಬೌಂಡರಿ ಸಮೇತ ಅರ್ಧಶತಕ ಸಿಡಿಸಿ. ಮಿಂಚಿದರು. ಮುಸ್ತಫೀಝ್ ರಹ್ಮಾನ್ ಎಸೆತದಲ್ಲಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚಿತ್ತು ಔಟಾದರು.
You cannot do that Ravindra Jadeja! 🤐#LSGvCSK #TATAIPL #IPLonJioCinema | @ChennaiIPL pic.twitter.com/3KjaacpDwH
— JioCinema (@JioCinema) April 19, 2024
ಆ ಬಳಿಕ ಬ್ಯಾಟಿಂಗ್ ಮುಂದುವರಿಸಿದ ಕೆ ಎಲ್ ರಾಹುಲ್, 52 ಎಸೆತದಲ್ಲಿ ಭರ್ಜರಿ 3 ಸಿಕ್ಸರ್, 9 ಬೌಂಡರಿಯ ನೆರವಿನಿಂದ 82 ರನ್ ಬಾರಿಸಿದರು. ಥರ್ಡ್ ಮೆನ್ನಲ್ಲಿದ್ದ ರವೀಂದ್ರ ಜಡೇಜಾ ಹಿಡಿದ ಅಧ್ಭುತ ಕ್ಯಾಚ್ನಿಂದಾಗಿ ರಾಹುಲ್ ಔಟಾದರು.
ಆ ಬಳಿಕ ಬಂದ ನಿಕೊಲಸ್ ಪೂರನ್ ಕೇವಲ 12 ಬಾಲ್ನಲ್ಲಿ 23 ರನ್ ಬಾರಿಸಿದರೆ, ಸ್ಟೋಯ್ನಿಸ್ 8 ರನ್ ಗಳಿಸಿ, ಔಟಾಗದೆ ಉಳಿಯುವ ಮೂಲಕ ಲಕ್ನೋ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
Huddling through hurdles! 💪🏽 #Believe #LSGvCSK pic.twitter.com/cvfQmLtTKT
— Chennai Super Kings (@ChennaiIPL) April 19, 2024
ಚೆನ್ನೈ ಪರ ಬೌಲಿಂಗ್ನಲ್ಲಿ ಮುಸ್ತಫೀಝ್ ರಹ್ಮಾನ್ ಹಾಗೂ ಪತಿರಾನ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
Nicholas Pooran with the winning runs as #LSG register their 4️⃣th win of the season 🙌
They get past #CSK by 8 wickets with a comprehensive performance in Lucknow!
Recap the match on @StarSportsIndia and @JioCinema 💻📱#TATAIPL | #LSGvCSK pic.twitter.com/rxsCoKaDaR
— IndianPremierLeague (@IPL) April 19, 2024
