ಇಂದು ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೈದರಾಬಾದ್ ನೀಡಿದ್ದ ಬೃಹತ್ ಟಾರ್ಗೆಟ್ ಮುಟ್ಟಲಾಗದೆ ಸೋಲೊಪ್ಪಿಕೊಂಡಿದೆ.
ಹೈದರಾಬಾದ್ ನೀಡಿದ್ದ 267 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, 19.1 ಓವರ್‌ಗಳಲ್ಲಿ 199 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 67 ರನ್‌ಗಳಿಂದ ಸೋತಿತು.
Celebrations in the @SunRisers camp as they wrap 🆙 a massive win with that wicket of the #DC skipper 🙌
With that, they move to the 2️⃣nd spot on the Points Table 🧡
Recap the match on @StarSportsIndia and @JioCinema 💻📱#TATAIPL | #DCvSRH pic.twitter.com/Ou5g1Tgi55
— IndianPremierLeague (@IPL) April 20, 2024
ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಜೇಕ್ ಫ್ರೇಸರ್-ಮೆಗರ್ಕ್ ಕೇವಲ 18 ಬಾಲ್ನಲ್ಲಿ 65 ರನ್ ಸಿಡಿಸಿ, ಮಿಂಚಿದರು. ಅದರಲ್ಲೂ ವಾಷಿಂಗ್ಟನ್ ಸುಂದರ್ ಎಸೆದ ಒಂದೇ ಓವರ್ನಲ್ಲಿ 3 ಸಿಕ್ಸರ್, ಮೂರು ಬೌಂಡರಿ ಸಿಡಿಸಿ 30 ರನ್ ಚಚ್ಚಿದರು.
ಹೈದರಾಬಾದ್ ಬೌಲರ್ಗಳ ಬೆಂಡೆತ್ತಿದ ಜೇಕ್ ಫ್ರೇಸರ್-ಮೆಗರ್ಕ್ ಬರೋಬ್ಬರಿ 7 ಸಿಕ್ಸರ್, 5 ಬೌಂಡರಿ ಸಿಡಿಸಿ ಸಿಡಿಸಿ, ಮಾರ್ಕಾಂಡೆಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ಅಭಿಷೇಕ್ ಕೇವಲ 22 ಬಾಲ್ನಲ್ಲಿ 44 ರನ್ ಸಿಡಿಸಿ, ಸ್ಟಂಪ್ ಔಟ್ ಆದರು.
ಪಂತ್ ಏಕಾಂಗಿ ಹೋರಾಟ ಮಾಡಲು ಯತ್ನಿಸಿದರು. ಆದರೆ, ಸ್ಫೋಟಕ ಬ್ಯಾಟಿಂಗ್ ಮಾಡಲು ಅವರಿಂದ ಆಗಲಿಲ್ಲ. 35 ಎಸೆತಗಳಲ್ಲಿ ಕೇವಲ 44 ರನ್ ಸಿಡಿಸಿದರಾದರೂ, ಸೋಲಬೇಕಾಯಿತು. ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 199 ರನ್ಗಳಿಗೆ ಆಲೌಟ್ ಆಯಿತು.
ಹೈದರಾಬಾದ್ ಪರ ಬೌಲಿಂಗ್‌ನಲ್ಲಿ ನಟರಾಜನ್ 4, ಮಾರ್ಕಂಡೆ, ನಿತೀಶ್ ರೆಡ್ಡಿ ತಲಾ 2 ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಗಳಿಸಿದರು.
A happy bowler and a happy captain!
T Natarajan finishes with bowling figures of 4-19 including a maiden 🫡
Scorecard ▶️ https://t.co/LZmP9Tevto#TATAIPL | #DCvSRH pic.twitter.com/fdjlubQLsj
— IndianPremierLeague (@IPL) April 20, 2024
ಮೊದಲು ಟಾಸ್ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ರಿಷಬ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ಸನ್ರೈಸರ್ಸ್ ಹೈದರಾಬಾದ್ ಟೀಮ್ ಮೊದಲು ಬ್ಯಾಟಿಂಗ್ ಮಾಡಿತ್ತು.
Another memorable batting innings in #IPL2024 🧡😍
Time to defend 🛡️#PlayWithFire #DCvSRH pic.twitter.com/C1d83UduC4
— SunRisers Hyderabad (@SunRisers) April 20, 2024
ಹೈದರಾಬಾದ್ ಪರ ಓಪನರ್ ಆಗಿ ಬಂದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಹೆಡ್ 89, ಅಭಿಷೇಕ್ 49 ಹಾಗೂ ಆ ಬಳಿಕ ಶಾಬಾಝ್ ಅವರ 59 ರನ್‌ಗಳ ನೆರವಿನಿಂದ ಹೈದರಾಬಾದ್ 20 ಓವರ್ನಲ್ಲಿ 266 ರನ್ ಪೇರಿಸಿತ್ತು.
